ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ
ಶಿಕ್ಷಣ ಸಚಿವಾಲಯದ ಉನ್ನತ ಶಿಕ್ಷಣ ಇಲಾಖೆಯಲ್ಲಿ ಸ್ವಚ್ಛತೆ ಕುರಿತು ಪ್ರತಿಜ್ಞೆ
Posted On:
19 SEP 2023 3:37PM by PIB Bengaluru
ಉನ್ನತ ಶಿಕ್ಷಣ ಇಲಾಖೆಯ ಯುಜಿಸಿ ಮತ್ತು ಏಐಸಿಟಿಇಯ 170 ಪ್ರತಿನಿಧಿಗಳು ಭಾಗಿಯಾಗಿದ್ದು, “ಸ್ವಚ್ಛತೆಯೇ ಸೇವೆ” ಅಭಿಯಾನದ ವಿವಿಧ ಆಯಾಮಗಳನ್ನು ಸಂವೇದನಾ ಶೀಲಗೊಳಿಸುವಂತೆ ಕರೆ

“ಸ್ವಚ್ಛತೆಯೇ ಸೇವೆ” [ಎಸ್.ಎಚ್.ಎಸ್] ಅಭಿಯಾನದಡಿ ಉನ್ನತ ಶಿಕ್ಷಣ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಶಿಕ್ಷಣ ಸಚಿವಾಲಯದ ಉನ್ನತ ಶಿಕ್ಷಣ ಇಲಾಖೆಯ ಕಾರ್ಯದರ್ಶಿ ಶ್ರೀ ಕೆ. ಸಂಜಯ್ ಮೂರ್ತಿ ಅವರು ಪ್ರತಿಜ್ಞಾ ವಿಧಿ ಬೋಧಿಸಿದರು.
ಪ್ರಸ್ತುತ ನಡೆಯುತ್ತಿರುವ “ಸ್ವಚ್ಛತೆಯೇ ಸೇವೆ” ಅಭಿಯಾನದಡಿ ಸಕ್ರಿಯವಾಗಿ ಪಾಲ್ಗೊಳ್ಳುವಂತೆ ಅವರು ಪ್ರತಿಯೊಬ್ಬರನ್ನು ಪ್ರೋತ್ಸಾಹಿಸಿದರು ಮತ್ತು ಈ ಸಂದೇಶವನ್ನು ಇತರರಿಗೂ ತಲುಪಿಸುವಂತೆ ಉತ್ತೇಜಿಸಿದರು.
ಶ್ರೀ ಕೆ. ಸಂಜಯ್ ಮೂರ್ತಿ ಅವರು ಇದೇ ಸಂದರ್ಭದಲ್ಲಿ ಕೇಂದ್ರ ಅನುದಾನಿತ ಎಚ್.ಇ.ಐಗಳ ಕುಲಪತಿಗಳು/ನಿರ್ದೇಶಕರೊಂದಿಗೆ ಸಭೆ ನಡೆಸಿ ಪ್ರಸ್ತುತ ನಡೆಯುತ್ತಿರುವ ಸ್ವಚ್ಛತೆಯೇ ಸೇವೆ – ಎಸ್.ಎಚ್.ಎಸ್ ವಿಶೇಷ ಅಭಿಯಾನ 3.0 ಮತ್ತು “ಜೀವನ ಅಭಿಯಾನ”ವನ್ನು ಮುಖ್ಯವಾಹಿನಿಗೆ ತರುವ ನಿಟ್ಟಿನಲ್ಲಿ ಸಂವೇದನಾಶೀಲರಾಗಿ ಕಾರ್ಯನಿರ್ವಹಿಸುವಂತೆ ಕರೆ ನೀಡಿದರು.
ವಿದ್ಯಾರ್ಥಿಗಳು, ಬೋಧಕರು ಮತ್ತು ಸಿಬ್ಬಂದಿಯನ್ನು ಅಭಿಯಾನದಡಿ ಒಟ್ಟುಗೂಡಿಸಬೇಕು ಮತ್ತು ಶೂನ್ಯ ತ್ಯಾಜ್ಯ ಅಭಿಯಾನ, ಪ್ಲಾಸ್ಟಿಕ್ ಮುಕ್ತ ಕ್ಯಾಂಪಸ್ ನಿರ್ಮಾಣ, ಸಮೀಪದ ತ್ಯಾಜ್ಯ ಸಂಸ್ಕರಣಾ ಘಟಕಗಳಿಗೆ ಭೇಟಿ ನೀಡಬೇಕು ಎಂದು ಎಚ್.ಇ.ಐಗಳಿಂದ ಪಾಲ್ಗೊಂಡವರಿಗೆ ಮನವಿ ಮಾಡಲಾಯಿತು. ನೆರೆ ಹೊರೆಯವರನ್ನು ಶ್ರಮದಾನದಲ್ಲಿ ಪಾಲ್ಗೊಳ್ಳುವಂತೆ ಮಾಡುವ ಮತ್ತು ಜೀವನದ ಎಲ್ಲಾ ಆಯಾಮಗಳಲ್ಲಿ ತ್ಯಾಜ್ಯವನ್ನು ಕಡಿಮೆ ಮಾಡುವ, ಮರು ಬಳಕೆ ಮತ್ತು ಮರು ಸಂಸ್ಕರಣೆ ಮಾಡುವ ಸ್ವಚ್ಛತೆಯೇ ಸೇವೆ ಅಭಿಯಾನದ ಸಂದೇಶಗಳನ್ನು ಪ್ರಚಾರ ಮಾಡುವಂತೆ ಈ ಸಂದರ್ಭದಲ್ಲಿ ಮನವಿ ಮಾಡಲಾಯಿತು. ನವದೆಹಲಿಯ ಜಿ-20 ನಾಯಕರ ಸಭೆಯ ಘೋಷಣೆಯಲ್ಲಿ ವಿವರಿಸಿದಂತೆ ತಮ್ಮ ಸಂಸ್ಥೆಗಳಲ್ಲಿ “ಜೀವನ ಅಭಿಯಾನ” ತತ್ವಗಳನ್ನು ಅಳವಡಿಸಿಕೊಳ್ಳುವಂತೆ ಅವರು ಎಚ್ಇಐಗಳಿಗೆ ಉತ್ತೇಜನ ನೀಡಿದರು.
ಉನ್ನತ ಶಿಕ್ಷಣ ಇಲಾಖೆಯ ಯುಜಿಸಿ ಮತ್ತು ಏಐಸಿಟಿಇಯ ಸುಮಾರು 170 ಪ್ರತಿನಿಧಿಗಳು ಸಭೆಯಲ್ಲಿ ವರ್ಚುವಲ್ ಮೂಲಕ ಭಾಗಿಯಾಗಿದ್ದರು.
***
(Release ID: 1958878)
Visitor Counter : 120