ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಸಂಸತ್ತಿನ ವಿಶೇಷ ಅಧಿವೇಶನ ಉದ್ದೇಶಿಸಿ ಲೋಕಸಭೆಯಲ್ಲಿ ಪ್ರಧಾನಿ ಭಾಷಣ


“ಇಂದು ಭಾರತದ ಸಂಸತ್ತಿನ 75 ವರ್ಷದ ಪಯಣವನ್ನು ಮತ್ತೆ ನೆನಪು ಮಾಡಿಕೊಳ್ಳುವ ಮತ್ತು ಸ್ಮರಿಸುವ ದಿನವಾಗಿದೆ’’

“ನಾವು ಸಂಸತ್ತಿನ ಹೊಸ ಕಟ್ಟಡಕ್ಕೆ ಸ್ಥಳಾಂತರಗೊಳ್ಳುತ್ತಿದ್ದೇವೆ, ಆದರೆ ಈ  ಕಟ್ಟಡ ಭಾರತದ ಪ್ರಜಾಪ್ರಭುತ್ವದ ಪಯಣದ ಸುವರ್ಣ ಅಧ್ಯಾಯವಾಗಿದ್ದು, ಅದು ಮುಂದಿನ ಪೀಳಿಗೆಗೆ ಸದಾ ಸ್ಪೂರ್ತಿಯ ಕಟ್ಟಡವಾಗಿ ಮುಂದುವರಿಯಲಿದೆ’’

“ಅಮೃತ ಕಾಲದ ಮೊದಲ ಬೆಳಕಿನಲ್ಲಿ ನವೀಕೃತ ವಿಶ್ವಾಸ, ಸಾಧನೆ ಮತ್ತು ಸಾಮರ್ಥ್ಯಗಳನ್ನು ತುಂಬಲಾಗಿದೆ’’

“ಭಾರತದ ಜಿ-20 ಅಧ್ಯಕ್ಷತೆಯ ಅವಧಿಯಲ್ಲಿ ಆಫ್ರಿಕಾ ಒಕ್ಕೂಟದ ಸೇರ್ಪಡೆ ಸದಾ ಹೆಮ್ಮೆ ಮೂಡಿಸುತ್ತದೆ’’

“ಜಿ-20ರ ವೇಳೆ ಭಾರತ ‘ವಿಶ್ವದ ಮಿತ್ರ’ ನಾಗಿ ಹೊರಹೊಮ್ಮಿದೆ’’

“ಸದನದಲ್ಲಿನ ಎಲ್ಲರನ್ನೂ ಒಳಗೊಳ್ಳುವ ವಾತಾವರಣ ದೇಶದ ಪೂರ್ಣ ಶಕ್ತಿಯೊಂದಿಗೆ ಜನರ ಆಶೋತ್ತರಗಳನ್ನು ವ್ಯಕ್ತಪಡಿಸುತ್ತಿದೆ’’

“75 ವರ್ಷಗಳಲ್ಲಿ  ತಮ್ಮ ಸಂಸತ್ತಿನಲ್ಲಿ ಸಾಮಾನ್ಯ ನಾಗರಿಕರಿಗೆ ನಿರಂತರವಾಗಿ ಬೆಳೆಯುತ್ತಿರುವ ನಂಬಿಕೆಯೇ ದೊಡ್ಡ ಸಾಧನವಾಗಿದೆ’’

“ಸಂಸತ್ತಿನ ಮೇಲೆ ಭಯೋತ್ಪಾದಕರ ದಾಳಿ ಭಾರತ ಆತ್ಮದ ಮೇಲಿನ ದಾಳಿಯಾಗಿದೆ’’

“ಭಾರತೀಯ ಪ್ರಜಾಪ್ರಭುತ್ವದ ಎಲ್ಲ ಏಳು ಬೀಳುಗಳನ್ನು ಕಂಡ ಈ ಸದನವು ಸಾರ್ವಜನಿಕ ನಂಬಿಕೆಯ ಕೇಂದ್ರಬಿಂದುವಾಗಿದೆ’’

Posted On: 18 SEP 2023 1:35PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಲೋಕಸಭೆಯಲ್ಲಿಂದು ಸಂಸತ್ತಿನ ವಿಶೇಷ ಅಧಿವೇಶನವನ್ನು ಉದ್ದೇಶಿಸಿ ಭಾಷಣ ಮಾಡಿದರು, ಈ ವಿಶೇಷ ಅಧಿವೇಶನ 2023ರ ಸೆಪ್ಟಂಬರ್ 18ರಿಂದ 22ರವರೆಗೆ ನಡೆಯಲಿದೆ.

ಸದನವನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿ, ಹೊಸದಾಗಿ ಉದ್ಘಾಟಿಸಲ್ಪಿಟ್ಟಿರುವ ಸಂಸತ್ ಭವನಕ್ಕೆ ಸ್ಥಳಾಂತರಗೊಳ್ಳುವ ಮುನ್ನ ಭಾರತದ 75 ವರ್ಷಗಳ ಸಂಸದೀಯ ಪಯಣವನ್ನು ನೆನಪು ಮಾಡಿಕೊಂಡು ಮತ್ತು ಸ್ಮರಿಸಿಕೊಳ್ಳುವ ಸಂದರ್ಭವಾಗಿದೆ ಎಂದರು. ಹಳೆಯ ಸಂಸತ್ ಕಟ್ಟಡದ ಬಗ್ಗೆ ಮಾತನಾಡುತ್ತಾ, ಪ್ರಧಾನಮಂತ್ರಿ ಅವರು ಭಾರತದ ಸ್ವಾತಂತ್ರ್ಯಕ್ಕೂ ಮುನ್ನ ಈ ಕಟ್ಟಡ ಇಂಪೀರಿಯಲ್ ಶಾಸಕಾಂಗ ಸಭೆಯಾಗಿ ಕಾರ್ಯನಿರ್ವಹಿಸಿತ್ತು ಮತ್ತು ಅದು ಸ್ವಾತಂತ್ರ್ಯ ಪೂರ್ವ ಸಂಸತ್‌ ಕಟ್ಟಡವೆಂದು ಗುರುತಿಸಲ್ಪಟ್ಟಿತ್ತು. ಈ ಕಟ್ಟಡವನ್ನು ನಿರ್ಮಿಸುವ ನಿರ್ಧಾರವನ್ನು ವಿದೇಶಿ ದೊರೆಗಳು ಮಾಡಿದ್ದರೂ, ಅದರ ಅಭಿವೃದ್ಧಿಗೆ ಭಾರತೀಯರ ಶ್ರಮ, ಸಮರ್ಪಣೆ ಮತ್ತು ವ್ಯಯಿಸಿದ ಹಣವೇ ಕಾರಣ ಎಂದು ಅವರು ತಿಳಿಸಿದರು. 75 ವರ್ಷಗಳ ಈ ಪಯಣದಲ್ಲಿ, ಈ ಮನೆಯು ಎಲ್ಲರ ಕೊಡುಗೆಯನ್ನು ಕಂಡ ಮತ್ತು ಎಲ್ಲರೂ ಸಾಕ್ಷಿಯಾಗಿರುವ ಅತ್ಯುತ್ತಮವಾದ ಪದ್ದತಿಗಳು ಮತ್ತು ಸಂಪ್ರದಾಯಗಳನ್ನು ರಚಿಸಿದೆ ಎಂದು ಶ್ರೀ ನರೇಂದ್ರ ಮೋದಿ ಹೇಳಿದರು. "ನಾವು ಹೊಸ ಕಟ್ಟಡಕ್ಕೆ ಸ್ಥಳಾಂತರಗೊಳ್ಳಬಹುದು, ಆದರೆ ಈ ಕಟ್ಟಡವು ಮುಂಬರುವ ಪೀಳಿಗೆಗೆ ಸ್ಫೂರ್ತಿ ನೀಡುತ್ತದೆ. ಇದು ಭಾರತೀಯ ಪ್ರಜಾಪ್ರಭುತ್ವದ ಪಯಣದ ಸುವರ್ಣ ಅಧ್ಯಾಯವಾಗಿದೆ’’  ಎಂದು ಅವರು ಹೇಳಿದರು.

ಅಮೃತ ಕಾಲದ ಮೊದಲ ಬೆಳಕಿನಲ್ಲಿ ನವೀಕೃತ ಆತ್ಮವಿಶ್ವಾಸ, ಸಾಧನೆ ಮತ್ತು ಸಾಮರ್ಥ್ಯಗಳನ್ನು ಮತ್ತು ಭಾರತ ಮತ್ತು ಭಾರತೀಯರ ಸಾಧನೆಗಳನ್ನು ಜಗತ್ತು ಹೇಗೆ ಚರ್ಚಿಸುತ್ತಿದೆ ಎಂಬುದನ್ನು ಪ್ರಧಾನಮಂತ್ರಿ ಅವರು ಉಲ್ಲೇಖಿಸಿದರು. ಇದು ನಮ್ಮ 75 ವರ್ಷಗಳ ಸಂಸದೀಯ ಇತಿಹಾಸದ ಸಾಮೂಹಿಕ ಪ್ರಯತ್ನದ ಫಲವಾಗಿದೆ ಎಂದು ಅವರು ಹೇಳಿದರು.

ಚಂದ್ರಯಾನ 3 ರ ಯಶಸ್ಸನ್ನು ಉಲ್ಲೇಖಿಸಿದ ಶ್ರೀ ನರೇಂದ್ರ ಮೋದಿ, ಇದು ಆಧುನಿಕತೆ, ವಿಜ್ಞಾನ, ತಂತ್ರಜ್ಞಾನ ಮತ್ತು ನಮ್ಮ ವಿಜ್ಞಾನಿಗಳ ಪರಾಕ್ರಮ ಮತ್ತು 140 ಕೋಟಿ ಭಾರತೀಯರ ಶಕ್ತಿಯೊಂದಿಗೆ ಸಂಬಂಧ ಹೊಂದಿರುವ ಭಾರತದ ಸಾಮರ್ಥ್ಯಗಳ ಮತ್ತೊಂದು ಆಯಾಮವನ್ನು ಮುಂದಿಡುತ್ತದೆ ಎಂದು ಹೇಳಿದರು. ವಿಜ್ಞಾನಿಗಳ ಸಾಧನೆಗಾಗಿ ಪ್ರಧಾನಿ ಅವರು ಸದನ ಮತ್ತು ರಾಷ್ಟ್ರದ ಅಭಿನಂದನೆಗಳನ್ನು ತಿಳಿಸಿದರು.

ಪ್ರಧಾನಮಂತ್ರಿ ಅವರು ನ್ಯಾಮ್ ಶೃಂಗಸಭೆಯ ವೇಳೆ ದೇಶದ ಪ್ರಯತ್ನಗಳನ್ನು ಸದನ ಹೇಗೆ ಶ್ಲಾಘಿಸಿತು ಎಂದು ಸ್ಮರಿಸಿಕೊಂಡ ಪ್ರಧಾನಮಂತ್ರಿ ಅವರು, ಜಿ-20 ಅಧ್ಯಕ್ಷತೆಯ ವೇಳೆ ಯಶಸ್ಸನ್ನು ಗುರುತಿಸಿದ್ದಕ್ಕೆ ಕೃತಜ್ಞತೆಗಳನ್ನು ಸಲ್ಲಿಸಿದರು. ಜಿ-20ರ ಯಶಸ್ಸು 140 ಕೋಟಿ ಭಾರತೀಯರ ಯಶಸ್ಸೇ ಹೊರತು ಯಾವುದೇ ಸಾರ್ವಜನಿಕರು ಅಥವಾ ಪಕ್ಷದ್ದಲ್ಲ ಎಂದರು. ಭಾರತದ ವೈವಿಧ್ಯತೆಯ ಯಶಸ್ಸಿನ ಅಭಿವ್ಯಕ್ತಿಯಾಗಿ ಭಾರತದಲ್ಲಿ 60 ಕ್ಕೂ ಹೆಚ್ಚು ಸ್ಥಳಗಳಲ್ಲಿ 200 ಕ್ಕೂ ಹೆಚ್ಚು ಕಾರ್ಯಕ್ರಮಗಳ ಯಶಸ್ಸನ್ನು ಅವರು ಬಲವಾಗಿ ಪ್ರತಿಪಾದಿಸಿದರು. ‘ಭಾರತವು ತನ್ನ ಅಧ್ಯಕ್ಷತೆಯಲ್ಲಿ ಜಿ-20 ರಲ್ಲಿ ಆಫ್ರಿಕನ್ ಒಕ್ಕೂಟವನ್ನು ಸೇರಿಸಲು ಹೆಮ್ಮೆ ಪಡುತ್ತದೆ’ ಎಂದು ಅವರು ಸೇರ್ಪಡೆಯ ಭಾವನಾತ್ಮಕ ಕ್ಷಣವನ್ನು ನೆನಪಿಸಿಕೊಳ್ಳುತ್ತಾರೆ.

ಭಾರತದ ಸಾಮರ್ಥ್ಯಗಳ ಬಗ್ಗೆ ಅನುಮಾನವನ್ನು ಉಂಟುಮಾಡುವ ಕೆಲವು ಜನರ ನಕಾರಾತ್ಮಕ ಪ್ರವೃತ್ತಿಯನ್ನು ಪ್ರಸ್ತಾಪಿಸಿದ ಪ್ರಧಾನಮಂತ್ರಿ, ಜಿ 20 ಘೋಷಣೆಗೆ ಒಮ್ಮತವನ್ನು ಸಾಧಿಸಲಾಗಿದೆ ಮತ್ತು ಭವಿಷ್ಯದ ನೀಲನಕ್ಷೆಯನ್ನು ಇಲ್ಲಿ ರೂಪಿಸಲಾಗಿದೆ ಎಂದು ಹೇಳಿದ್ದಾರೆ. ಭಾರತದ ಜಿ 20 ಅಧ್ಯಕ್ಷತೆ ನವೆಂಬರ್ ಅಂತಿಮ ದಿನದವರೆಗೂ ಇರುತ್ತದೆ ಮತ್ತು ಅದನ್ನು ಪೂರ್ಣವಾಗಿ ಬಳಸಿಕೊಳ್ಳಲು ರಾಷ್ಟ್ರವು ಉದ್ದೇಶಿಸಿದೆ, ಪ್ರಧಾನ ಮಂತ್ರಿ ತಮ್ಮ ಅಧ್ಯಕ್ಷತೆಯಡಿಯಲ್ಲಿ ಪಿ-20 ಶೃಂಗಸಭೆಯನ್ನು (ಪಾರ್ಲಿಮೆಂಟರಿ 20) ನಡೆಸಲು ಸ್ಪೀಕರ್‌ ಅವರ ನಿರ್ಣಯವನ್ನು ಬೆಂಬಲಿಸಿದರು.

“ಭಾರತವು‘ ವಿಶ್ವ ಮಿತ್ರ’ ಎಂದು ತನಗಾಗಿ ಒಂದು ಸ್ಥಾನವನ್ನು ರೂಪಿಸಿದೆ ಮತ್ತು ಇಡೀ ಜಗತ್ತು ಭಾರತದಲ್ಲಿ ಸ್ನೇಹಿತನನ್ನು ನೋಡುತ್ತಿದೆ ಎಂಬುದು ಎಲ್ಲರಿಗೂ ಹೆಮ್ಮೆಯ ವಿಷಯವಾಗಿದೆ, ಇದಕ್ಕೆ ಕಾರಣ ನಾವು ವೇದಗಳಿಂದ ವಿವೇಕಾನಂದಕ್ಕೆ ಒಟ್ಟುಗೂಡಿದ ನಮ್ಮ ‘ಸಂಸ್ಕಾರಗಳು’ ಸಬ್ ಕಾ ಸಾಥ್, ಸಬ್ ಕಾ ವಿಕಾಸ್ ಮಂತ್ರವು ನಮ್ಮೊಂದಿಗೆ ಜಗತ್ತನ್ನು ಒಗ್ಗೂಡಿಸಲು ನಮ್ಮನ್ನು ಒಂದುಗೂಡಿಸುತ್ತದೆ ” ಎಂದು ಅವರು ಹೇಳಿದರು.

ಹೊಸ ಮನೆಗೆ ಬದಲಾಗುವ ಕುಟುಂಬಕ್ಕೆ ಸಾದೃಶ್ಯವನ್ನು ಚಿತ್ರಿಸಿದ ಪ್ರಧಾನಮಂತ್ರಿ, ಹಳೆಯ ಸಂಸತ್ತು ಕಟ್ಟಡಕ್ಕೆ ವಿದಾಯ ಹೇಳುವುದು ಬಹಳ ಭಾವನಾತ್ಮಕ ಕ್ಷಣ ಎಂದು ಹೇಳಿದರು. ಈ ಎಲ್ಲಾ ವರ್ಷಗಳಲ್ಲಿ ಸದನವು ಸಾಕ್ಷಿಯಾಗಿರುವ ವಿವಿಧ ಮನಸ್ಥಿತಿಗಳನ್ನು ಅವರು ಪ್ರತಿಬಿಂಬಿಸಿದರು ಮತ್ತು ನೆನಪುಗಳು ಸದನದ ಎಲ್ಲ ಸದಸ್ಯರ ಸಂರಕ್ಷಿತ ಪರಂಪರೆಯಾಗಿದೆ ಎಂದು ಹೇಳಿದರು. “ಅದರ ವೈಭವವೂ ನಮಗೆ ಸೇರಿದೆ’’ ಎಂದು ಅವರು ಹೇಳಿದರು. ಈ ಸಂಸತ್ ಕಟ್ಟಡವು 75 ವರ್ಷಗಳ ಹಳೆಯ ಇತಿಹಾಸದಲ್ಲಿ ನವ ಭಾರತದ ಸೃಷ್ಟಿಗೆ ಸಂಬಂಧಿಸಿದ ಅಸಂಖ್ಯಾತ ಘಟನೆಗಳಿಗೆ ರಾಷ್ಟ್ರವು ಸಾಕ್ಷಿಯಾಗಿದೆ ಮತ್ತು ಇಂದು ಭಾರತದ ಸಾಮಾನ್ಯ ನಾಗರಿಕರ ಬಗ್ಗೆ ಗೌರವವನ್ನು ವ್ಯಕ್ತಪಡಿಸುವ ಅವಕಾಶವಾಗಿದೆ ಎಂದು ಅವರು ಪ್ರಸ್ತಾಪಿಸಿದರು.

ಮೊದಲ ಬಾರಿಗೆ ಸಂಸದರಾಗಿ ಸಂಸತ್‌ ಭವನ ಪ್ರವೇಶಿಸಿದ್ದನ್ನು ಸ್ಮರಿಸಿಕೊಂಡ ಪ್ರಧಾನಿ, ಕಟ್ಟಡಕ್ಕೆ ನಮಿಸಿ ಗೌರವ ಸಲ್ಲಿಸಿದ್ದನ್ನು ನೆನೆಪಿಸಿಕೊಂಡರು. ಅದೊಂದು ಭಾವನಾತ್ಮಕ ಕ್ಷಣ ಮತ್ತು ಅದನ್ನು ನಾನು ಊಹಿಸಿಕೊಂಡಿರಲಿಲ್ಲ . “ರೈಲು ನಿಲ್ದಾಣದಲ್ಲಿ ಜೀವನೋಪಾಯದ ಗಳಿಕೆಗೆ ಹೋರಾಡುತ್ತಿದ್ದ ಬಡ ಬಾಲಕನೊಬ್ಬ ಪ್ರಜಾಪ್ರಭುತ್ವದ ಶಕ್ತಿಯಿಂದಾಗಿ ಸಂಸತ್‌ ತಲುಪಿದ್ದಾರೆ. ರಾಷ್ಟ್ರ ತಮಗೆ ಇಷ್ಟೊಂದು ಪ್ರೀತಿ, ಗೌರವ ಮತ್ತು ಆಶೀರ್ವಾದ ನೀಡುತ್ತದೆ ಎಂದು ತಾವು ಊಹಿಸಿರಲಿಲ್ಲ’’ ಎಂದು ಅವರು ಹೇಳಿದರು.  

ಉಪನಿಷತ್ ನ ವಾಕ್ಯವನ್ನು ಸಂಸತ್ತಿನ ಕಟ್ಟಡದ ದ್ವಾರದಲ್ಲಿ ಕತ್ತೆನೆ ಮಾಡಿರುವುದನ್ನು ಉಲ್ಲೇಖಿಸಿದ ಅವರು, ಸಂತರು ಅದರ ದ್ವಾರಗಳನ್ನು ಜನರಿಗೆ ತೆರೆಯಿರಿ ಮತ್ತು ಅವರು ಹೇಗೆ ತಮ್ಮ ಹಕ್ಕುಗಳನ್ನು ದೊರಕಿಸಿಕೊಳ್ಳುತ್ತಾರೆಂದು ಹೇಳಿದ್ದರು. ಈ ಪ್ರತಿಪಾದನೆಯು ನಿಖರತೆಗೆ ಹಾಲಿ ಹಾಗೂ ಹಿಂದಿನ ಸದಸ್ಯರು ಹೇಗೆ ಸಾಕ್ಷಿಯಾಗಿದ್ದಾರೆ ಎಂದು ಶ್ರೀ ನರೇಂದ್ರ ಮೋದಿ ಹೇಳಿದರು.

ಸದನದ ಬದಲಾಗುತ್ತಿರುವ ಸಂಯೋಜನೆಯನ್ನು ಪ್ರಮುಖವಾಗಿ ಪ್ರಸ್ತಾಪಿಸಿದ ಪ್ರಧಾನಿ, ಕಾಲನುಕ್ರಮೇಣ ಹೆಚ್ಚು ಅಂತರ್ಗತವಾಗಿ ಬೆಳೆದಿದೆ ಮತ್ತು ಸಮಾಜದ ಎಲ್ಲಾ ವಿಭಾಗಗಳ ಪ್ರತಿನಿಧಿಗಳು ಸದನಕ್ಕೆ ಬರಲಾರಂಭಿಸಿದ್ದಾರೆ ಎಂದರು. "ಅಂತರ್ಗತ ವಾತಾವರಣವು ಪೂರ್ಣ ಶಕ್ತಿಯನ್ನು ಹೊಂದಿರುವ ಜನರ ಆಕಾಂಕ್ಷೆಗಳನ್ನು ಪ್ರಕಟಿಸುತ್ತಿದೆ" ಎಂದು ಅವರು ಹೇಳಿದರು. ಸದನದ ಘನತೆಯನ್ನು ಬೆಳೆಸಲು ಸಹಾಯ ಮಾಡಿದ ಮಹಿಳಾ ಸಂಸದರು ಕೊಡುಗೆಗಳನ್ನು ಪ್ರಧಾನಿ ಉಲ್ಲೇಸಿದರು.

ಉಭಯ ಸದನಗಳಲ್ಲಿ 7500 ಕ್ಕೂ ಅಧಿಕ ಸಾರ್ವಜನಿಕ ಪ್ರತಿನಿಧಿಗಳು ಸೇವೆ ಸಲ್ಲಿಸಿದ್ದಾರೆ, ಆದರಲ್ಲಿ ಮಹಿಳಾ ಪ್ರತಿನಿಧಿಗಳ ಸಂಖ್ಯೆ ಅಂದಾಜು ಸುಮಾರು 600 ಇರಬಹುದು ಎಂದು ಪ್ರಧಾನಿ ಮಾಹಿತಿ ನೀಡಿದರು. ಶ್ರೀ ಇಂದ್ರಜಿತ್ ಗುಪ್ತಾ ಜಿ ಸದನದಲ್ಲಿ ಸುಮಾರು 43 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದಾರೆ ಮತ್ತು ಶ್ರೀ ಶಫಿಕೂರ್ ರಹಮಾನ್ 93 ವರ್ಷ ವಯಸ್ಸಿನಲ್ಲಿ ಸೇವೆ ಸಲ್ಲಿಸಿದರು. 25 ನೇ ವಯಸ್ಸಿನಲ್ಲಿ ಸದನಕ್ಕೆ ಆಯ್ಕೆಯಾದ ಎಂ.ಎಸ್. ಚಂದ್ರನಿ ಮುರ್ಮು ಹೆಸರು ಕೂಡ ಅವರು ಉಲ್ಲೇಖಿಸಿದರು,

ವಾದ-ಪ್ರತಿವಾದಗಳು ಮತ್ತು ವ್ಯಂಗ್ಯದ ಹೊರತಾಗಿಯೂ ಪ್ರಧಾನಿ ಸದನದಲ್ಲಿ ಕುಟುಂಬದ ಪ್ರಜ್ಞೆಯನ್ನು ಉಲ್ಲೇಖಿಸಿದರು ಮತ್ತು ಕಹಿ ಎಂದಿಗೂ ಕಾಲಹರಣ ಮಾಡುತ್ತದೆ, ಇದು ಈ ಸದನದ ಪ್ರಮುಖ ಗುಣ ಎಂದರು. ತೀವ್ರ ಕಾಯಿಲೆಗಳ ಹೊರತಾಗಿಯೂ, ಸದಸ್ಯರು ಸಾಂಕ್ರಾಮಿಕ ರೋಗದ ಕಷ್ಟದ ಸಮಯದಲ್ಲಿ ಸೇರಿದಂತೆ ತಮ್ಮ ಕರ್ತವ್ಯಗಳನ್ನು ನಿರ್ವಹಿಸಲು ಹೇಗೆ ಸದನದ ಕಲಾಪಕ್ಕೆ ಬಂದರು ಎಂಬುದನ್ನು ಅವರು ನೆನಪಿಸಿಕೊಂಡರು.

ನವ ರಾಷ್ಟ್ರದ ಕಾರ್ಯಸಾಧ್ಯತೆಯ ಬಗ್ಗೆ ಸ್ವಾತಂತ್ರ್ಯದ ಆರಂಭಿಕ ವರ್ಷಗಳಲ್ಲಿ ಸಂದೇಹವಾದವನ್ನು ಸ್ಮರಿಸಿಕೊಂಡ ಪ್ರಧಾನ ಮಂತ್ರಿ, ಸಂಸತ್ತಿನ ಶಕ್ತಿ ಎಲ್ಲಾ ಅನುಮಾನಗಳು ಸುಳ್ಳೆಂದು ಸಾಬೀತು ಮಾಡಿತು ಎಂದು ಹೇಳಿದರು.

ಸಂವಿಧಾನಿಕ ಸಭೆ ಎರಡು ವರ್ಷ ಮತ್ತು 11 ತಿಂಗಳು ಇದೇ ಸದನದಲ್ಲಿ ಕಲಾಪ ನಡೆಸಿತ್ತು ಮತ್ತು ಸಂವಿಧಾನವನ್ನು ಇದೇ ಸದನ ಅಳವಡಿಸಿಕೊಂಡು ಎಂದು ಸ್ಮರಿಸಿದ ಪ್ರಧಾನಮಂತ್ರಿ, 75 ವರ್ಷಗಳಲ್ಲಿ ಸಂಸತ್ ಬಗೆಗಿನ ಸಾಮಾನ್ಯ ಜನರ ವಿಶ್ವಾಸ ನಿರಂತರವಾಗಿ ಬೆಳೆಯುತ್ತಿರುವುದು ದೊಡ್ಡ ಸಾಧನೆಯಾಗಿದೆ ಎಂದು ಬಣ್ಣಿಸಿದರು, “ಡಾ. ರಾಜೇಂದ್ರ ಪ್ರಸಾದ್, ಡಾ.ಅಬ್ದುಲ್ ಕಲಾಂ ಅವರಿಂದ ಶ್ರೀ ರಾಮನಾಥ್ ಕೋವಿಂದ್ ರಿಂದ ಶ್ರೀಮತಿ ದ್ರೌಪದಿ ಮುರ್ಮು ಅವರ ಭಾಷಣಗಳಿಂದ ಸದನಕ್ಕೆ ಸಾಕಷ್ಟು ಲಾಭವಾಗಿದೆ’’ ಎಂದರು.

ಪಂಡಿತ ನೆಹರೂ ಮತ್ತು ಲಾಲ್ ಬಹದ್ದೂರ್‌ ಶಾಸ್ತ್ರಿ ಅವರಿಂದ ಅಟಲ್ ಬಿಹಾರಿ ವಾಜಪೇಯಿ ಮತ್ತು ಮನಮೋಹನ್ ಸಿಂಗ್ ಸೇರಿ ಹಲವು ಪ್ರಧಾನಮಂತ್ರಿಗಳ ಕಾಲವನ್ನು ಉಲ್ಲೇಖಿಸಿದ ಪ್ರಧಾನಮಂತ್ರಿ ಅವರು, ಅವರು ತಮ್ಮ ನಾಯಕತ್ವದಲ್ಲಿ ದೇಶಕ್ಕೆ ಹೊಸ ದಿಕ್ಸೂಚಿ ನೀಡಿದರು ಮತ್ತು ಇಂದು ಅವರ ಸಾಧನೆಗಳನ್ನು ಪ್ರಮುಖವಾಗಿ ಪ್ರಸ್ತಾಪಿಸುವ ಸಂದರ್ಭವಾಗಿದೆ ಎಂದರು. ಸರ್ದಾರ್ ವಲ್ಲಭಬಾಯಿ ಪಟೇಲ್, ರಾಮ್ ಮನೋಹರ ಲೋಹಿಯಾ, ಚಂದ್ರಶೇಖರ್ , ಲಾಲ್ ಕೃಷ್ಣ ಅಡ್ವಾಣಿ  ಮತ್ತಿತರ ನಾಯಕರು ಸದನದ ಚರ್ಚೆಯನ್ನು ಶ್ರೀಮಂತಗೊಳಿಸಿದ್ದಾರೆ ಮತ್ತು ಸಾಮಾನ್ಯ ಜನರ ಧ್ವನಿ ಎತ್ತಿದ್ದಾರೆ ಎಂದರು. ಸದನದಲ್ಲಿ ಹಲವು ವಿದೇಶಿ ನಾಯಕರ ಭಾಷಣಗಳನ್ನು ಪ್ರಮುಖವಾಗಿ ಪ್ರಸ್ತಾಪಿಸಿದ ಶ್ರೀ ನರೇಂದ್ರ ಮೋದಿ ಅವರು , ಅವರು ಭಾರತಕ್ಕೆ ಗೌರವ ತಂದಿದ್ದಾರೆ ಎಂದರು.

ಅಧಿಕಾರದಲ್ಲಿದ್ದಾಗಲೇ ಮೂವರು ಪ್ರಧಾನಮಂತ್ರಿಗಳಾದ ನೆಹರೂ ಜಿ, ಶಾಸ್ತ್ರೀ ಜಿ ಮತ್ತು ಇಂದಿರಾ ಜಿ ಅವರನ್ನು ರಾಷ್ಟ್ರ ಕಳೆದುಕೊಂಡ ನೋವಿನ ಕ್ಷಣಗಳನ್ನು ಪ್ರಧಾನಿ ಸ್ಮರಿಸಿದರು.

ಹಲವು ಸವಾಲುಗಳ ನಡುವೆ ಸದನದ ಸ್ಪೀಕರ್ ಅವರು ಪರಿಸ್ಥಿತಿಗಳನ್ನು ನಿಭಾಯಿಸಿದ ರೀತಿಯನ್ನು ಪ್ರಧಾನಮಂತ್ರಿ ಮೆಲುಕು ಹಾಕಿದರು. ಸ್ಪೀಕರ್ ಗಳು ತಮ್ಮ ನಿರ್ಧಾರಗಳಲ್ಲಿ ಉಲ್ಲೇಖಾರ್ಹ ಅಂಶಗಳನ್ನು ಸೃಷ್ಟಿಸಿದ್ದಾರೆ ಎಂದರು. ಶ್ರೀ ಮಾಳ್ವಾಂಕರ್ ಅವರಿಂದ ಹಿಡಿದು, ಶ್ರೀಮತಿ ಸುಮಿತ್ರಾ ಮಹಾಜನ್ ಅವರ ವರೆಗೆ ಹಾಗೂ ಶ್ರೀ ಓಂ ಬಿರ್ಲಾ ಸೇರಿದಂತೆ ಇಬ್ಬರು ಮಹಿಳಾ ಸ್ಪೀಕರ್ ಹಾಗೂ 17 ಸ್ಪೀಕರ್ ಗಳು ಪ್ರತಿಯೊಬ್ಬರೂ ತಮ್ಮದೇ ಆದ ರೀತಿಯಲ್ಲಿ ಕೊಡುಗೆಯನ್ನು ನೀಡಿದ್ದಾರೆ ಮತ್ತು ಎಲ್ಲರನ್ನೂ ಒಟ್ಟಿಗೆ ಕೊಂಡೊಯ್ದಿದ್ದಾರೆ. ಸಂಸತ್ತಿನ ಸಿಬ್ಬಂದಿಯ ಕೊಡುಗೆಯನ್ನೂ ಸಹ ಗುರುತಿಸಬೇಕಾಗಿದೆ ಎಂದು ಪ್ರಧಾನಿ ಹೇಳಿದರು.

ಸಂಸತ್ತಿನ ಮೇಲೆ ನಡೆದ ಭಯೋತ್ಪಾದಕರ ದಾಳಿಯನ್ನು ಸ್ಮರಿಸಿದ ಪ್ರಧಾನಮಂತ್ರಿ ಅವರು, ಅದು ಕಟ್ಟಡದ ಮೇಲಿನ ದಾಳಿಯಲ್ಲ, ಪ್ರಜಾಪ್ರಭುತ್ವದ ಮಾತೆಯ ಮೇಲೆ ನಡೆದ ದಾಳಿಯಾಗಿದೆ ಎಂದರು. “ಉಗ್ರರ ದಾಳಿ ಭಾರತದ ಆತ್ಮದ ಮೇಲಿನ ದಾಳಿಯಾಗಿದೆ” ಎಂದು ಪ್ರಧಾನಿ ಹೇಳಿದರು. ಉಗ್ರರು ಮತ್ತು ಸದನವನ್ನು ರಕ್ಷಿಸಲು ಕೊಡುಗೆ ನೀಡಿದ ಸದಸ್ಯರು ಮತ್ತು ಹುತಾತ್ಮರಾದ ವೀರ ಯೋಧರ ಕೊಡುಗೆಯನ್ನು ಪ್ರಧಾನಿ ಸ್ಮರಿಸಿದರು.

ಅಲ್ಲದೆ ಇತ್ತೀಚಿನ ತಂತ್ರಜ್ಞಾನಗಳನ್ನೂ ಸಹ ಬಳಸದೆ ಸಂಸತ್ತಿನ ಕಲಾಪವನ್ನು ವರದಿ ಮಾಡಲು ತಮ್ಮ ಜೀವನವನ್ನು ಮುಡಿಪಾಗಿಟ್ಟ ಪತ್ರಕರ್ತರನ್ನೂ ಸಹ ಪ್ರಧಾನಿ ಸ್ಮರಿಸಿದರು. ಹಳೆಯ ಸಂಸತ್ ಭವನಕ್ಕೆ ಬೀಳ್ಕೊಡುಗೆಯನ್ನು ನೀಡುತ್ತಿರುವುದು ಅವರಿಗೂ ಸಹ ಕಷ್ಟವಾಗುತ್ತದೆ. ಏಕೆಂದರೆ ಅವರು ಸದಸ್ಯರಿಗಿಂತ ಹೆಚ್ಚಾಗಿ ಸಂಸತ್ ಭವನದ ಜತೆ ಸಂಬಂಧ ಹೊಂದಿದ್ದಾರೆ ಎಂದು ಪ್ರಧಾನಿ ಉಲ್ಲೇಖಿಸಿದರು.

ನಾದಬ್ರಹ್ಮ ಸಂಪ್ರದಾಯದ ಬಗ್ಗೆ ಬೆಳಕು ಚೆಲ್ಲಿದ ಅವರು, ಅದರ ಸುತ್ತಮುತ್ತ ನಿರಂತರ ಭಕ್ತಾದಿಗಳ ಭೇಟಿಯಿಂದ ಆ ಸ್ಥಳ ಪವಿತ್ರವಾಗುತ್ತದೆ ಎಂದ ಅವರು, 2500ಕ್ಕೂ ಅಧಿಕ ಪ್ರತಿನಿಧಿಗಳು ಸಂಸತ್ ಅನ್ನು ಯಾತ್ರಾ ಕೇಂದ್ರವನ್ನಾಗಿ ತಮ್ಮ ಚರ್ಚೆಗಳ ಮೂಲಕ ಬಿಟ್ಟು ಹೋಗಿದ್ದಾರೆ ಎಂದರು.

ತಮ್ಮ ಧೈರ್ಯ ಮತ್ತು ಶೌರ್ಯದಿಂದ ಬ್ರಿಟಿಷರಿಗೆ ಭಯ ಹುಟ್ಟಿಸಿದ ಭಗತ್ ಸಿಂಗ್ ಮತ್ತು ಬಟುಕೇಶ್ವರ ದತ್ ಅವರುಗಳಿದ್ದ ಜಾಗದಲ್ಲಿ ಸಂಸತ್ ಭವನವಿದೆ ಎಂದು ಪ್ರಧಾನಮಂತ್ರಿ ಹೇಳಿದರು. ಪಂಡಿತ್ ಜವಹರಲಾಲ್ ನೆಹರು ಅವರ “ಸ್ಟ್ರೋಕ್ ಆಫ್ ಮಿಡ್ ನೈಟ್” ಗಾಥೆ ಭಾರತದ ಪ್ರತಿಯೊಬ್ಬ ಪ್ರಜೆಗೂ ಸ್ಫೂರ್ತಿ ನೀಡುವುದನ್ನು ಮುಂದುವರಿಸುತ್ತದೆ ಎಂದು ಪ್ರಧಾನಿ ಹೇಳಿದರು. ಅಟಲ್ ಬಿಹಾರಿ ವಾಜಪೇಯಿ ಅವರ ಜನಪ್ರಿಯ ಭಾಷಣದ ಹೇಳಿಕೆ “ಸರ್ಕಾರಗಳು ಬರುತ್ತವೆ ಹೋಗುತ್ತವೆ. ಪಕ್ಷಗಳು ಸೃಷ್ಟಿಯಾಗುತ್ತವೆ, ಕಾಣೆಯಾಗುತ್ತವೆ, ದೇಶ ಉಳಿಯಬೇಕು ಮತ್ತು ಪ್ರಜಾಪ್ರಭುತ್ವ ಉಳಿಯಬೇಕು” ಎಂದು ಹೇಳಿದ್ದನು ಸ್ಮರಿಸಿದರು.

ಕೌನ್ಸಿಲ್ ಆಫ್ ಮಿನಿಸ್ಟರ್ ಗಳ ಮೊದಲ ಸಭೆಯನ್ನು ಸ್ಮರಿಸಿದ ಶ್ರೀ ನರೇಂದ್ರ ಮೋದಿ ಅವರು, ಹೇಗೆ ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಜಗತ್ತಿನ ಎಲ್ಲೆಡೆಯ ಅತ್ಯುತ್ತಮ ವಿಧಾನಗಳನ್ನು ಸೇರ್ಪಡೆಗೊಳಿಸಿದರು ಎಂದು ಸ್ಮರಿಸಿದರು. ಅಲ್ಲದೆ ನೆಹರೂ ಅವರ ಸಂಪುಟದಲ್ಲಿ ಬಾಬಾ ಸಾಹೇಬ್ ಅವರು, ಅದ್ಭುತ ಜಲನೀತಿಯನ್ನು ರೂಪಿಸಿದ್ದರು ಎಂದು ಉಲ್ಲೇಖಿಸಿದರು. ದಲಿತರ ಸಬಲೀಕರಣಕ್ಕೆ ಬಾಬಾ ಸಾಹೇಬ್ ಅವರು ಕೈಗಾರೀಕರಣಕ್ಕೆ ಒತ್ತು ನೀಡಿದ್ದನ್ನು ಉಲ್ಲೇಖಿಸಿದ ಪ್ರಧಾನಮಂತ್ರಿ ಡಾ. ಶ್ಯಾಮ್ ಪ್ರಕಾಶ್ ಮುಖರ್ಜಿ ಅವರು, ಮೊದಲು ಕೈಗಾರಿಕಾ ಸಚಿವರಾಗಿ ಹೇಗೆ ಮೊದಲ ಕೈಗಾರಿಕಾ ನೀತಿಯನ್ನು ಜಾರಿಗೊಳಿಸಿದರು ಎಂದು ಹೇಳಿದರು.

1965ರ ಯುದ್ಧದ ಸಮಯದಲ್ಲಿ ಭಾರತೀಯ ಯೋಧರಿಗೆ ಸ್ಫೂರ್ತಿ ತುಂಬಿದ್ದ ಲಾಲ್ ಬಹದ್ದೂರ್ ಶಾಸ್ತ್ರಿ ಅವರು, ಸದನದಲ್ಲಿ ಆಡಿದ ಮಾತುಗಳನ್ನು ಪ್ರಧಾನಮಂತ್ರಿ ಉಲ್ಲೇಖಿಸಿದರು. ಶಾಸ್ತ್ರೀ ಜಿ ಅವರು ಭದ್ರ ಬುನಾದಿ ಹಾಕಿದ ಹಸಿರು ಕ್ರಾಂತಿಯನ್ನು ಪ್ರಧಾನಿ ಸ್ಮರಿಸಿದರು. ಶ್ರೀಮತಿ ಇಂದಿರಾ ಗಾಂಧಿ ಅವರ ನಾಯಕತ್ವದಲ್ಲಿ ಸದನ ಕೈಗೊಂಡ ನಿರ್ಧಾರದ ಪರಿಣಾಮ ಬಾಂಗ್ಲಾದೇಶದ ಸ್ವಾತಂತ್ರ್ಯದ ಯುದ್ಧ ನಡೆಯಿತು ಎಂದು ಹೇಳಿದರು. ತುರ್ತು ಪರಿಸ್ಥಿತಿಯ ವೇಳೆ ಪ್ರಜಾಪ್ರಭುತ್ವದ ಮೇಲಿನ ದಾಳಿಯನ್ನು ಪ್ರಸ್ತಾಪಿಸಿದ ಅವರು, ತುರ್ತು ಪರಿಸ್ಥಿತಿ ತೆರವುಗೊಳಿಸಿದ ನಂತರ ಜನರ ಶಕ್ತಿ ಮರಳಿತು ಎಂದರು.

ಮಾಜಿ ಪ್ರಧಾನಮಂತ್ರಿ ಚರಣ್ ಸಿಂಗ್ ಅವರ ನಾಯಕತ್ವದಲ್ಲಿ ಗ್ರಾಮೀಣಾಭಿವೃದ್ಧಿ ಸಚಿವಾಲಯ ರಚನೆಯಾಗಿದ್ದನ್ನು ಪ್ರಧಾನಮಂತ್ರಿ ಉಲ್ಲೇಖಿಸಿದರು. “ಮತದಾನದ ವಯಸ್ಸನ್ನು 21 ರಿಂದ 18ಕ್ಕೆ ಇಳಿಕೆ ಮಾಡಿದ್ದು, ಇದೇ ಸದನದಲ್ಲಿ” ಎಂದು ಪ್ರಧಾನಮಂತ್ರಿ ಉಲ್ಲೇಖಿಸಿದರು. ದೇಶ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದ ಸಂದರ್ಭದಲ್ಲಿ ಪಿ.ವಿ. ನರಸಿಂಹರಾವ್ ಅವರ ನಾಯಕತ್ವದಲ್ಲಿ ರಾಷ್ಟ್ರ ಅಳವಡಿಸಿಕೊಂಡ ಹೊಸ ಆರ್ಥಿಕ ನೀತಿ ಮತ್ತು ಕ್ರಮಗಳನ್ನು ಪ್ರಧಾನಿ ಸ್ಮರಿಸಿದರು. ಅಲ್ಲದೆ ಅವರು, ಅಟಲ್ ಜಿ ಅವರ ಸರ್ವ ಶಿಕ್ಷ ಅಭಿಯಾನ, ಬುಡಕಟ್ಟು ವ್ಯವಹಾರಗಳ ಸಚಿವಾಲಯ ಸ್ಥಾಪನೆ ಮತ್ತು ತಮ್ಮ ನಾಯಕತ್ವದಲ್ಲಿ ಅಣು ಯುಗದ ಆವಿಷ್ಕಾರ ಕೈಗೊಂಡಿದ್ದನ್ನು ಪ್ರಧಾನಿ ಉಲ್ಲೇಖಿಸಿದರು. ಸದನ “ಕ್ಯಾಶ್ ಫಾರ್ ವೋಟ್” ಹಗರಣಕ್ಕೆ ಸಾಕ್ಷಿಯಾಗಿದ್ದನ್ನು ಪ್ರಧಾನಿ ಉಲ್ಲೇಖಿಸಿದರು.

ದಶಕಗಳ ಕಾಲ ಬಾಕಿಯಿದ್ದ ಐತಿಹಾಸಿಕ ನಿರ್ಧಾರಗಳನ್ನು ಉಲ್ಲೇಖಿಸಿದ ಪ್ರಧಾನಮಂತ್ರಿ, ಕಲಂ 370, ಜಿಎಸ್ ಟಿ, ಒಆರ್ ಒಪಿ ಮತ್ತು ಬಡವರಿಗೆ 10ರಷ್ಟು ಮೀಸಲು ಅಂಶಗಳನ್ನು ಪ್ರಸ್ತಾಪಿಸಿದರು.

ಈ ಸದನ ಜನರ ವಿಶ್ವಾಸದ ಕೇಂದ್ರವಾಗಿದೆ ಮತ್ತು ಪ್ರಜಾಪ್ರಭುತ್ವದ ಹಲವು ಏಳು ಬೀಳುಗಳ ನಡುವೆಯೂ ಅದು ವಿಶ್ವಾಸ ಕೇಂದ್ರವಾಗಿ ಮುಂದುವರಿದಿದೆ ಎಂದು ಪ್ರಧಾನಮಂತ್ರಿ ಹೇಳಿದರು. ಅಟಲ್ ಬಿಹಾರಿ ವಾಜಪೇಯಿ ಅವರ ಸರ್ಕಾರ ಒಂದು ಮತದಿಂದ ಪಥನವಾದ ಸಮಯವನ್ನು ಪ್ರಧಾನಿ ಸ್ಮರಿಸಿದರು. ಹಲವು ಪ್ರದೇಶಗಳಲ್ಲಿ ಹೊಸ ಪಕ್ಷಗಳು ಉದಯವಾಗಿದ್ದು, ಒಂದು ಸಮಯದಲ್ಲಿ ಆಕರ್ಷಣೆಯಾಗಿತ್ತು ಎಂದು ಪ್ರಧಾನಿ ಪ್ರತಿಪಾದಿಸಿದರು. ಅಟಲ್ ಜಿ ಅವರ ನಾಯಕತ್ವದಲ್ಲಿ ಛತ್ತೀಸ್ ಗಢ, ಉತ್ತರಾಖಂಡ ಮತ್ತು ಜಾರ್ಖಂಡ್ ಸೇರಿದಂತೆ ಮೂರು ಹೊಸ ರಾಜ್ಯಗಳು ಸೃಷ್ಟಿಯಾದವು ಎಂದು ಪ್ರಧಾನಮಂತ್ರಿ ಪ್ರಸ್ತಾಪಿಸಿದರು. ಅಧಿಕಾರಕ್ಕಾಗಿ ತೆಲಂಗಾಣ ರಾಜ್ಯ ಸೃಷ್ಟಿ ಪ್ರಯತ್ನಗಳನ್ನು ಅವರು ಪ್ರಸ್ತಾಪಿಸಿದರು. ದುರುದ್ದೇಶದಿಂದ ರಾಜ್ಯವನ್ನು ವಿಭಜಿಸಿದ್ದರಿಂದ ಎರಡೂ ರಾಜ್ಯಗಳಲ್ಲೂ ಯಾವುದೇ ಸಂಭ್ರಮ ಕಾಣಲಿಲ್ಲ ಎಂದು ಹೇಳಿದರು.

ಸಾಂವಿಧಾನಿಕ ಸಭೆ ಹೇಗೆ ದಿನದ ಭತ್ಯೆಯನ್ನು ಇಳಿಕೆ ಮಾಡಿತು ಮತ್ತು ಸದಸ್ಯರಿಗೆ ನೀಡುವ ಕ್ಯಾಂಟೀನ್ ಸಬ್ಸಿಡಿಯನ್ನು ಸದನ ಹೇಗೆ ತೆಗೆದು ಹಾಕಿತ್ತು ಎಂದು ಪ್ರಧಾನಿ ನರೇಂದ್ರ ಮೋದಿ ಸ್ಮರಿಸಿದರು. ಕೋವಿಡ್ ಸಂಕಷ್ಟದ ಸಮಯದಲ್ಲಿ ಸದಸ್ಯರು ತಮ್ಮ ಎಂಪಿ ಲಾಡ್ – ಸಂಸದರ ನಿಧಿಯಿಂದ ನೆರವು ನೀಡಲು ಮುಂದಾದರು ಮತ್ತು ಶೇಕಡ 30ರಷ್ಟು ಪಾವತಿ ಕಡಿತಗೊಳಿಸಲಾಯಿತು. ಜನಪ್ರತಿನಿಧಿಗಳ ಕಾಯ್ದೆಯಲ್ಲಿ ಬದಲಾವಣೆಗಳನ್ನು ತರಲು ಸದಸ್ಯರು ಹೇಗೆ ಸ್ವಯಂ ಶಿಸ್ತು ಅಳವಡಿಸಿಕೊಂಡರು ಎಂಬುದನ್ನು ಪ್ರಧಾನಮಂತ್ರಿ ಉಲ್ಲೇಖಿಸಿದರು.

ಹಾಲಿ ಸಂಸದರು ಅತ್ಯಂತ ಅದೃಷ್ಟವಂತರು, ಏಕೆಂದರೆ ಅವರು ಹಳೆಯ ಕಟ್ಟಡದಿಂದ ವಿದಾಯ ಹೇಳಿ, ನಾಳೆಯಿಂದ ಹೊಸ ಕಟ್ಟಡಕ್ಕೆ ಸ್ಥಳಾಂತರಗೊಳ್ಳುತ್ತಿದ್ದು, ಇದು ಅವರಿಗೊಂದು ಉತ್ತಮ ಅವಕಾಶವಾಗಿದೆ ಎಂದರು. “ಸಂಸತ್ತಿನ ನಾಲ್ಕು ಗೋಡೆಗಳಿಂದ ಸ್ಫೂರ್ತಿ ಪಡೆದ 7500 ಜನಪ್ರತಿನಿಧಿಗಳಿಗೆ ಇಂದಿನ ಸಂದರ್ಭ ಒಂದು ಅಪರೂಪದ ಹೆಮ್ಮೆಯ ಕ್ಷಣವಾಗಿದೆ” ಎಂದು ಶ್ರೀ ನರೇಂದ್ರ ಮೋದಿ ಹೇಳಿದರು.

ತಮ್ಮ ಸಮಾಪನ ಭಾಷಣದಲ್ಲಿ ಸದಸ್ಯರು ಹೊಸ ಉತ್ಸಾಹ ಮತ್ತು ಚೇತನದೊಂದಿಗೆ ಹೊಸ ಕಟ್ಟಡಕ್ಕೆ ಸ್ಥಾಳಂತರೊಗಳ್ಳಲಿದ್ದಾರೆ. ಈ ಐತಿಹಾಸಿಕ ಸಂದರ್ಭದಲ್ಲಿ ಸದನದಲ್ಲಿ ನೆನಪುಗಳನ್ನು ಹಂಚಿಕೊಳ್ಳಲು ಅವಕಾಶ ನೀಡಿದ್ದಕ್ಕಾಗಿ ಧನ್ಯವಾದಗಳನ್ನು ಸಲ್ಲಿಸಲಾಗುವುದು ಎಂದು ಹೇಳಿದರು.

***


(Release ID: 1958808) Visitor Counter : 328