ವಾರ್ತಾ ಮತ್ತು ಪ್ರಸಾರ ಸಚಿವಾಲಯ
azadi ka amrit mahotsav

ಭಾರತ ಮಟ್ಟದ ಎಂಟು ಡೈನಾಮಿಕ್ ರೈಟರ್‌ ಗಳು ಮತ್ತು ಸ್ಕ್ರಿಪ್ಟ್‌ ಗಳನ್ನು ಪ್ರಕಟಿಸಿದ ಎನ್.ಎಫ್.ಡಿ.ಸಿ. ಸ್ಕ್ರೀನ್ ರೈಟರ್ಸ್ ಲ್ಯಾಬ್ 2023

Posted On: 14 SEP 2023 3:09PM by PIB Bengaluru

ಮ್ಯಾಜಿಕ್ ರಿಯಲಿಸಂ, ಫ್ಯಾಂಟಸಿ, ಭಯಾನಕ/ಥ್ರಿಲ್ಲರ್, ಮಹಿಳಾ ಸಬಲೀಕರಣ, ಗಡಿಯಾಚೆಗಿನ ರಾಜಕೀಯ, ಎಲ್.ಜಿ.ಟಿ.ಬಿ.ಕ್ಯೂ+ ಸಮಸ್ಯೆಗಳು ಮತ್ತು ಮಾನಸಿಕ ಅಸ್ವಸ್ಥತೆ ಸೇರಿದಂತೆ ಬಹು ಪ್ರಕಾರಗಳ ವಿಷಯಾಧಾರಿತ ಎಂಟು ಯೋಜನೆಗಳನ್ನು ಎನ್.ಎಫ್.ಡಿ.ಸಿ. ಸ್ಕ್ರೀನ್‌ರೈಟರ್‌ಗಳ ಲ್ಯಾಬ್‌ನ 16 ನೇ ಆವೃತ್ತಿಗೆ ಆಯ್ಕೆ ಮಾಡಲಾಗಿದೆ. ಇದು ಭಾರತದಾದ್ಯಂತ ಮೂಲ ಧ್ವನಿಗಳನ್ನು ಪೋಷಿಸಿ ಮತ್ತು ಪ್ರಚಾರ ಮಾಡಲು ಮತ್ತು ಅಭಿವೃದ್ಧಿಪಡಿಸಲು ನಡೆಯುತ್ತಿರುವ ವಿಶೇಷ ಉಪಕ್ರಮವಾಗಿದೆ. ಜಾಹೀರಾತು ಚಿತ್ರಗಳು, ಕಿರುಚಿತ್ರಗಳು, ಸಾಕ್ಷ್ಯಚಿತ್ರಗಳು ಮತ್ತು ಚಲನಚಿತ್ರಗಳ ಚಲನಚಿತ್ರ ತಯಾರಿಸಿದ, ಹಿಂದಿ, ಮರಾಠಿ, ಇಂಗ್ಲಿಷ್, ಉರ್ದು, ಮಲಯಾಳಂ, ಬೆಂಗಾಲಿ, ಒಡಿಯಾ ಮತ್ತು ಟಿಬೆಟಿಯನ್ ಸೇರಿದಂತೆ ಬಹು ಭಾಷೆಗಳಲ್ಲಿ ಆಯ್ದ ಚಿತ್ರಕಥೆಗಳನ್ನು ಬರೆದಿರುವ ಎಂಟು ಮಂದಿ ಚಲನಚಿತ್ರ ಕತೆ ಬರಹಗಾರರು ತಂಡದಲ್ಲಿದ್ದಾರೆ. ಇವರಲ್ಲಿ ಇಬ್ಬರು ಬರಹಗಾರರು "ಅತ್ಯುತ್ತಮ ಮರಾಠಿ ಚಲನಚಿತ್ರ" ಮತ್ತು "ಅತ್ಯುತ್ತಮ ಛಾಯಾಗ್ರಹಣ" ಗಾಗಿ ರಾಷ್ಟ್ರೀಯ ಪ್ರಶಸ್ತಿ ವಿಜೇತರಾಗಿದ್ದಾರೆ.

" ಎನ್.ಎಫ್.ಡಿ.ಸಿ. ಯಲ್ಲಿ ಚೆನ್ನಾಗಿ ಬರೆಯಲ್ಪಟ್ಟ ಉತ್ತಮ ಸ್ಕ್ರಿಪ್ಟ್ ಮೂಲಕ ಬಲವಾದ ಕಥೆಯ ಅಡಿಪಾಯವನ್ನು ರೂಪಿಸಲಾಗುತ್ತದೆ, ಕಥೆಯಲ್ಲಿ ತೊಡಗಿಸಿಕೊಳ್ಳುವ ಪಾತ್ರಗಳು ಮತ್ತು ಅರ್ಥಪೂರ್ಣ ಸಂಭಾಷಣೆ, ಇವೆಲ್ಲವೂ ಯಶಸ್ವಿ ಚಲನಚಿತ್ರದ ಅಗತ್ಯ ಅಂಶಗಳಾಗಿವೆ." ಎಂದು ಎನ್‌ಎಫ್‌ಡಿಸಿಯ ವ್ಯವಸ್ಥಾಪಕ ನಿರ್ದೇಶಕ ಶ್ರೀ ಪೃಥುಲ್ ಕುಮಾರ್ ಅವರು ಹೇಳಿದರು. “ನಾವು ನಮ್ಮ ಬರಹಗಾರರಿಗೆ ಅವರ ವಿಶಿಷ್ಟ ಕಥೆಗಳನ್ನು ಉತ್ತಮವಾಗಿ ಅಭಿವೃದ್ಧಿಪಡಿಸಲು ತರಬೇತಿ ನೀಡುವುದಲ್ಲದೆ, ಫಿಲ್ಮ್ ಮಾರುಕಟ್ಟೆಯಲ್ಲಿನ ಉದ್ಯಮದ ವೃತ್ತಿಪರತೆ ಮತ್ತು ಅಭ್ಯಾಸಗಳನ್ನು ಮನಸ್ಸಲ್ಲಿಟ್ಟುಕೊಂಡು, ಅವುಗಳನ್ನು ದೇಶೀಯ ಮತ್ತು ಅಂತರರಾಷ್ಟ್ರೀಯ ನಿರ್ಮಾಪಕರು ಮತ್ತು ಹೂಡಿಕೆದಾರರಿಗೆ ಯಶಸ್ವಿಯಾಗಿ ತಲುಪಿಸುವಲ್ಲಿ ಯಶಸ್ಸಾಗಿದ್ದೇವೆ ಮತ್ತು ಮುಂಚೂಣಿಯಲ್ಲಿದ್ದೇವೆ. "

ಮೂರು ಭಾಗಗಳ ಈ ಕಾರ್ಯಾಗಾರವು ವಾರ್ಷಿಕ ಕಾರ್ಯಕ್ರಮವಾಗಿದ್ದು, ಉದಯೋನ್ಮುಖ ಮತ್ತು ಸ್ಥಾಪಿತ ಚಿತ್ರಕಥೆಗಾರರಿಗೆ ಭಾರತ ಮತ್ತು ಪ್ರಪಂಚದಾದ್ಯಂತದ ಮೆಚ್ಚುಗೆ ಪಡೆದ ಸ್ಕ್ರಿಪ್ಟ್ ತಜ್ಞರ ಮಾರ್ಗದರ್ಶನದಲ್ಲಿ ತಮ್ಮ ಚಿತ್ರಕಥೆಗಳನ್ನು ಸಂಪೂರ್ಣವಾಗಿ ಅಭಿವೃದ್ಧಿಪಡಿಸುವ ಅವಕಾಶವನ್ನು ನೀಡುತ್ತದೆ.

ಈ ವರ್ಷದ ಎನ್.ಎಫ್.ಡಿ.ಸಿ. ಸ್ಕ್ರೀನ್ ರೈಟರ್ಸ್ ಲ್ಯಾಬ್ ಮಾರ್ಗದರ್ಶಕರ ತಂಡದಲ್ಲಿ ಶ್ರೀ ಮಾರ್ಟೆನ್ ರಾಬಾರ್ಟ್ಸ್ (ನ್ಯೂಜಿಲೆಂಡ್), ಶ್ರೀ ಕ್ಲೇರ್ ಡೊಬ್ಬಿನ್ (ಆಸ್ಟ್ರೇಲಿಯಾ), ಶ್ರೀ ಬಿಕಾಸ್ ಮಿಶ್ರಾ (ಮುಂಬೈ), ಮತ್ತು ಶ್ರೀಮತಿ ಕೇಟ್ಕಿ ಪಂಡಿತ್ (ಪುಣೆ) ಇದ್ದಾರೆ.

ಮೌಲ್ಯಮಾಪಕರ ತಂಡದಲ್ಲಿ ಭಾರತೀಯ ಮತ್ತು ಅಂತರಾಷ್ಟ್ರೀಯ ಚಲನಚಿತ್ರ ನಿರ್ದೇಶಕರು, ನಿರ್ಮಾಪಕರು ಮತ್ತು ಪತ್ರಕರ್ತರಾದ ಮೆಲಾನಿ ಡಿಕ್ಸ್, ಸಿಂಥಿಯಾ ಕೇನ್, ಗ್ಯಾನ್ ಕೊರಿಯಾ, ಅರ್ಫಿ ಲಂಬಾ, ಸಿದ್ದಾರ್ಥ ಜಟ್ಲಾ, ಉದಿತಾ ಜುಂಜುನ್ವಾಲಾ ಮತ್ತು ಕಚನ್ ಕಲ್ರಾ ಸೇರಿದ್ದಾರೆ.

2023 ಸ್ಕ್ರೀನ್ ರೈಟರ್ಸ್ ಲ್ಯಾಬ್ ಭಾಗವಹಿಸುವವರು ಮತ್ತು ಯೋಜನೆಗಳ ವಿವರ ಈ ಕೆಳಗಿನಂತಿದೆ(ಕೊನೆಯ ಹೆಸರಿನಿಂದ ಪ್ರಾರಂಭಿಸಿ ವರ್ಣಮಾಲೆಯ ಅನುಕ್ರಮದಲ್ಲಿದೆ):

ಅವಿನಾಶ್ ಅರುಣ್ - "ಬೂಮರಾಂಗ್" (ಅತ್ಯುತ್ತಮ ಮರಾಠಿ ಚಲನಚಿತ್ರಕ್ಕಾಗಿ ಕಿಲ್ಲಾಗಾಗಿ ರಾಷ್ಟ್ರೀಯ ಪ್ರಶಸ್ತಿ ವಿಜೇತ)

ಸಂಜು ಕಾಡು - "ಕೋಸ್ಲಾ (ದಿ ಕೋಕೂನ್)"

ರೋಹನ್ ಕೆ. ಮೆಹ್ತಾ - "ಗೈರುಹಾಜರಿ"

ನೇಹಾ ನೇಗಿ - "ಚಾವ್ನಿ (ಕಾಂಟ್)"

ವತ್ಸಲಾ ಪಟೇಲ್ - "ದಾಂತ್ (ಕಚ್ಚುವುದು)"

ಬಿಸ್ವ ರಂಜನ್ ಪ್ರಧಾನ್ - "ಪ್ರಮಾಣ ಪತ್ರ"

ದಿವಾ ಶಾ - "ಚಾಬ್ (ಆಶ್ರಯ)"

ಸವಿತಾ ಸಿಂಗ್ - "ಬಲ್ಲಾಡ್ ಆಫ್ ದಿ ಸರ್ಕಸ್" (ಅತ್ಯುತ್ತಮ ಛಾಯಾಗ್ರಹಣಕ್ಕಾಗಿ ರಾಷ್ಟ್ರೀಯ ಪ್ರಶಸ್ತಿ ವಿಜೇತ)

ಸ್ಕ್ರೀನ್ ರೈಟರ್ಸ್ ಲ್ಯಾಬ್ 2023 ಬ್ಯಾಚ್ (ಎಡದಿಂದ ಬಲಕ್ಕೆ): ರೋಹನ್ ಕೆ. ಮೆಹ್ತಾ, ವತ್ಸಲಾ ಪಟೇಲ್, ಸಂಜು ಕಾಡು, ಸವಿತಾ ಸಿಂಗ್, ಬಿಸ್ವ ರಂಜನ್ ಪ್ರಧಾನ್, ನೇಹಾ ನೇಗಿ, ಅವಿನಾಶ್ ಅರುಣ್, ದಿವಾ ಶಾ

ಚಿತ್ರಕೃಪೆ: ಎನ್.ಎಫ್.ಡಿ.ಸಿ.

ಎನ್.ಎಫ್.ಡಿ.ಸಿ. ಚಿತ್ರಕಥೆಗಾರರ ಲ್ಯಾಬ್‌ನಿಂದ ರೂಪಿತಗೊಂಡ ಈ ಹಿಂದಿನ, ಪ್ರಶಸ್ತಿ-ವಿಜೇತ ಯೋಜನೆಗಳೆಂದರೆ - ಲಂಚ್‌ಬಾಕ್ಸ್ (ರಿತೇಶ್ ಬಾತ್ರಾ), ಲಿಪ್‌ಸ್ಟಿಕ್ ಅಂಡರ್ ಮೈ ಬುರ್ಖಾ (ಅಲಂಕೃತ ಶ್ರೀವಾಸ್ತವ), ದಮ್ ಲಗಾ ಕೆ ಹೈಶಾ (ಶರತ್ ಕಟಾರಿಯಾ), ತಿತ್ಲಿ (ಕಾನು ಬೆಹ್ಲೀರ್) , ಎ ಡೆತ್ ಇನ್ ದಿ ಗುಂಜ್ (ಕೊಂಕಣ ಸೇನ್ ಶರ್ಮಾ), ಐಲ್ಯಾಂಡ್ ಸಿಟಿ (ರುಚಿಕಾ ಒಬೆರಾಯ್), ಬಾಂಬೆ ರೋಸ್ (ಗೀತಾಂಜಲಿ ರಾವ್), ಮತ್ತು ಚುಸ್ಕಿಟ್ (ಪ್ರಿಯಾ ರಾಮಸುಬ್ಬನ್), ಮುಂತಾದ ಕೆಲವನ್ನು ಹೆಸರಿಸಬಹುದು.

 

**** * *


(Release ID: 1957440) Visitor Counter : 107