ರಾಸಾಯನಿಕ ಮತ್ತು ರಸಗೊಬ್ಬರ ಸಚಿವಾಲಯ
ದೇಶದ ವಿವಿಧ ರಾಜ್ಯಗಳ ಸುಮಾರು 1.60 ಲಕ್ಷ ಪ್ರಧಾನ ಮಂತ್ರಿ ಕಿಸಾನ್ ಸಮೃದ್ಧಿ ಕೇಂದ್ರಗಳ 3000 ಕ್ಕೂ ಅಧಿಕ ರೈತರೊಂದಿಗೆ ವರ್ಚುವಲ್ ಸಂವಾದ ನಡೆಸಿದ ಡಾ. ಮನ್ಸುಖ್ ಮಾಂಡವಿಯಾ
ಪಿಎಂಕೆಎಸ್ ಕೆ ಕೃಷಿಯ ಜನಸಂಪರ್ಕ ಚಟುವಟಿಕೆಗಳ ಕೇಂದ್ರ ತಾಣವಾಗಿ ವೇಗವಾಗಿ ಬೆಳೆಯುತ್ತಿದೆ, ಕೃಷಿ ಕ್ಷೇತ್ರದಲ್ಲಿ ಹೊಸ ಮತ್ತು ಅಭಿವೃದ್ಧಿ ಹೊಂದುತ್ತಿರುವ ತಂತ್ರಜ್ಞಾನದ ಬಗ್ಗೆ ಜಾಗೃತಿ ಮೂಡಿಸುವುದು, ರೈತ ಸಮುದಾಯದೊಂದಿಗೆ ಸಂವಾದ ಮತ್ತು ಕೃಷಿ ವಿಶ್ವವಿದ್ಯಾಲಯಗಳ ಮೂಲಕ ವಿಸ್ತರಣಾ ಚಟುವಟಿಕೆ ಕೈಗೊಳ್ಳಲಾಗುವುದು: ಡಾ. ಮನ್ಸುಖ್ ಮಾಂಡವಿಯಾ
"ಪಿಎಂಕೆಎಸ್ ಕೆ ಶೀಘ್ರದಲ್ಲೇ ಒಂದು ಸಂಸ್ಥೆಯಾಗಲಿದೆ ಮತ್ತು ಎಲ್ಲಾ ಕೃಷಿ ಮತ್ತು ಕೃಷಿ ಸಂಬಂಧಿತ ಚಟುವಟಿಕೆಗಳಿಗೆ ಕೇವಲ ಒನ್-ಸ್ಟಾಪ್ ಶಾಪ್ ಆಗಿರುವುದಿಲ್ಲ"
"ಮುಂಬರುವ ಹಿಂಗಾರು ಹಂಗಾಮಿನಲ್ಲಿ ರಾಸಾಯನಿಕ ಗೊಬ್ಬರಗಳ ಬಳಕೆಯನ್ನು ಶೇ. 20ರಷ್ಟು ತಗ್ಗಿಸಲು ಪ್ರಯತ್ನಿಸೋಣ ಮತ್ತು ಇದಕ್ಕೆ ಪರ್ಯಾಯವಾಗಿ ಪರ್ಯಾಯ ರಸಗೊಬ್ಬರ ಬಳಸೋಣ"
"ರೈತರಿಗೆ ಮೀಸಲಾದ ಯೂರಿಯಾವನ್ನು ಕೈಗಾರಿಕೆಗಳಿಗೆ ಬಳಕೆ ಮಾಡುವುದರ ವಿರುದ್ಧ ಶೂನ್ಯ ಸಹಿಷ್ಣುತೆ ಇದೆ"
Posted On:
12 SEP 2023 3:11PM by PIB Bengaluru
“ದೇಶಾದ್ಯಂತ ಸುಮಾರು 1.6 ಲಕ್ಷ ಪ್ರಧಾನಮಂತ್ರಿ ಕಿಸಾನ್ ಸಮೃದ್ಧಿ ಕೇಂದ್ರ (ಪಿಎಂಕೆಎಸ್ ಕೆ) ಗಳು ಕಾರ್ಯ ಚಟುವಟಿಕೆ ನಡೆಸುತ್ತಿವೆ, ಪ್ರತಿಯೊಂದು ಬ್ಲಾಕ್ ನಲ್ಲೂ ಒಂದಕ್ಕಿಂತ ಅಧಿಕ ಕೇಂದ್ರಗಳಿವೆ. ಪಿಎಂಕೆಎಸ್ ಕೆ ಗಳ ಹಿಂದಿನ ಉದ್ದೇಶ, ರೈತರಿಗೆ ಕೃಷಿ ಮತ್ತು ಕೃಷಿ ಪದ್ಧತಿಗಳ ಬಗ್ಗೆ ಜ್ಞಾನ ಹೆಚ್ಚಿಸುವುದು ಮತ್ತು ಅವರಿಗೆ ಗುಣಮಟ್ಟ ಖಾತ್ರಿಯ ವಸ್ತುಗಳು ಲಭ್ಯವಾಗುವುದನ್ನು ಖಾತ್ರಿಪಡಿಸುವ ಸುಮಾರು 2 ಲಕ್ಷಕ್ಕೂ ಅಧಿಕ ಕೇಂದ್ರಗಳು “ಒಂದು ನಿಲುಗಡೆ ಮಳಿಗೆ’’ ಗಳನ್ನಾಗಿ ಮಾಡುವುದು’’. ಕೇಂದ್ರ ಸಚಿವ ಡಾ.ಮನ್ಸೂಖ್ ಮಾಂಡವಿಯಾ ಅವರು ಇಂದು ದೇಶಾದ್ಯಂತ ಸುಮಾರು 7 ರಾಜ್ಯಗಳ 500 ಪ್ರಧಾನ ಮಂತ್ರಿ ಕಿಸಾನ್ ಸಮೃದ್ಧಿ ಕೇಂದ್ರ (ಪಿಎಂಕೆಎಸ್ ಕೆ)ಗಳ ರೈತರೊಂದಿಗೆ ವರ್ಚುವಲ್ ಸಂವಾದ ನಡೆಸಿದಾಗ ಈ ವಿಷಯ ಹೇಳಿದರು. ಆಂಧ್ರಪ್ರದೇಶ, ಬಿಹಾರ, ಗುಜರಾತ್, ಮಧ್ಯಪ್ರದೇಶ, ಕರ್ನಾಟಕ, ರಾಜಸ್ಥಾನ ಮತ್ತು ಉತ್ತರಾಖಂಡ್ ರಾಜ್ಯಗಳ ರೈತರು ಸಂವಾದದಲ್ಲಿ ಭಾಗಿಯಾಗಿದ್ದರು. ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ರಾಜ್ಯ ಸಚಿವ ಭಗವಂತ್ ಖೂಬಾ ಅವರೂ ಸಹ ವರ್ಚುವಲ್ ಸಂವಾದದ ವೇಳೆ ಉಪಸ್ಥಿತರಿದ್ದರು.
ಪಿಎಂಕೆಎಸ್ ಕೆ ಗಳನ್ನು ಕೃಷಿ ಚಟುವಟಿಕೆಗೆ ಸಂಬಂಧಿಸಿದ ಕೇಂದ್ರೀಯ ತಾಣವನ್ನಾಗಿ ಮಾಡಲಾಗುವುದು, ಕೃಷಿ ವಲಯದಲ್ಲಿ ಹೊಸ ಮತ್ತು ಅಭಿವೃದ್ಧಿಶೀಲ ಜ್ಞಾನದ ಅರಿವು ಹೆಚ್ಚಿಸುವುದು, ರೈತ ಸಮುದಾಯದೊಂದಿಗೆ ಸಂವಾದ ಮತ್ತು ಕೃಷಿ ವಿಶ್ವವಿದ್ಯಾಲಯಗಳ ಮೂಲಕ ವಿಸ್ತರಣಾ ಚಟುವಟಿಕೆ ಕೈಗೊಳ್ಳಲಾಗುವುದು ಎಂದು ಡಾ.ಮನ್ಸುಖ್ ಮಾಂಡವಿಯಾ ಹೇಳಿದರು. “ಇವು ಕೇವಲ ರಸಗೊಬ್ಬರ, ಕೃಷಿ ಸಲಕರಣೆಗಳು ಇತ್ಯಾದಿಗಳ ಮಳಿಗೆಗಳಲ್ಲ, ಇದು ರೈತರ ಕಲ್ಯಾಣದ ಸಂಸ್ಥೆಗಳು’’ ಎಂದು ಅವರು ಹೇಳಿದರು. ಪಿಎಂಕೆಎಸ್ ಕೆ ಶೀಘ್ರದಲ್ಲೇ ಒಂದು ಸಂಸ್ಥೆಗಳಾಗಲಿವೆ ಮತ್ತು ಎಲ್ಲಾ ಕೃಷಿ ಮತ್ತು ಕೃಷಿ ಸಂಬಂಧಿತ ಚಟುವಟಿಕೆಗಳಿಗೆ ಕೇವಲ ಒಂದು ನಿಲುಗಡೆ ಕೇಂದ್ರವಲ್ಲ ಎಂದು ಅವರು ಹೇಳಿದರು.
ಉತ್ಸಾಹಿ ರೈತರು ನ್ಯಾನೋ ಯುರಿಯಾ, ನ್ಯಾನೋ ಡಿಎಪಿಗಳನ್ನು ಬಳಕೆ ಮಾಡಬೇಕು ಎಂದು ಪ್ರೋತ್ಸಾಹಿಸಿದ ಕೇಂದ್ರ ಸಚಿವರು, ರಾಸಾಯನಿಕ ರಸಗೊಬ್ಬರಗಳ ಬದಲಿಗೆ ಪರ್ಯಾಯ ಮತ್ತು ಸಾವಯವ ರಸಗೊಬ್ಬರಗಳಿಗೆ ಪ್ರಗತಿಪರವಾಗಿ ಬದಲಾಗಬೇಕು ಎಂದರು. “ಮುಂಬರುವ ಹಿಂಗಾರು ಹಂಗಾಮಿನಲ್ಲಿ ಶೇ.20ರಷ್ಟು ರಾಸಾಯನಿಕ ರಸಗೊಬ್ಬರ ಬಳಕೆಯನ್ನು ತಗ್ಗಿಸೋಣ ಮತ್ತು ಪರ್ಯಾಯ ಗೊಬ್ಬರಗಳನ್ನು ಬಳಸೋಣ’’ಎಂದರು.
ಹೆಚ್ಚಿನ ಪ್ರಮಾಣದ ರಾಸಾಯನಿಕಗಳು, ರಸಗೊಬ್ಬರಗಳು ಮತ್ತು ಕೀಟನಾಶಕ ಇತ್ಯಾದಿಗಳನ್ನು ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ಬಳಕೆ ಮಾಡುವುದರಿಂದ ಮಾನವರ ಆರೋಗ್ಯ ಮತ್ತು ಯೋಗಕ್ಷೇಮದ ಮೇಲೆ ಪ್ರತಿಕೂಲ ಪರಿಣಾಮಗಳಾಗುತ್ತಿರುವುದನ್ನು ನಾವು ಅಧ್ಯಯನಗಳಲ್ಲಿ ಸ್ಪಷ್ಟವಾಗಿ ಕಾಣಬಹುದು ಎಂದರು. ಮಾಂಡವಿಯಾ ಅವರು ಇತ್ತೀಚೆಗೆ ಆರಂಭಿಸಲಾದ ಪಿಎಂ ಪ್ರಣಾಮ್ ( ಭೂ ತಾಯಿಯ ಪುನಃಸ್ಥಾಪನೆ, ಜಾಗೃತಿ, ಪೋಷಣೆ ಮತ್ತು ಸುಧಾರಣೆಗಾಗಿ ಪ್ರಧಾನಮಂತ್ರಿ ಕಾರ್ಯಕ್ರಮ) ಯೋಜನೆಯನ್ನು ಪ್ರಮುಖವಾಗಿ ಉಲ್ಲೇಖಿಸಿದರು. ಈ ಯೋಜನೆಯು ಪರ್ಯಾಯ ರಸಗೊಬ್ಬರಗಳನ್ನು ಅಳವಡಿಸಿಕೊಳ್ಳಲು ರಾಜ್ಯಗಳನ್ನು ಉತ್ತೇಜಿಸುವ ಮೂಲಕ ರಾಸಾಯನಿಕ ಗೊಬ್ಬರಗಳ ಬಳಕೆಯನ್ನು ತಗ್ಗಿಸುವ ಗುರಿಯನ್ನು ಹೊಂದಿದೆ.
ರೈತರಿಗೆ ಮತ್ತು ಕೃಷಿಗೆ ಮೀಸಲಾದ ಯೂರಿಯಾ ಮತ್ತು ರಸಗೊಬ್ಬರಗಳನ್ನು ಕೃಷಿಯೇತರ ಬಳಕೆಗಾಗಿ ಕೈಗಾರಿಕೆಗಳಿಗೆ ಬಳಸುವುದನ್ನು ಬಿಟ್ಟುಬಿಡಬೇಕೆಂದು ಡಾ.ಮಾಂಡವಿಯಾ ರೈತರಿಗೆ ಎಚ್ಚರಿಕೆ ನೀಡಿದರು. “ರೈತರಿಗೆ ಕೈಗಾರಿಕಾ ಬಳಕೆಗೆ ಮೀಸಲಾದ ಯೂರಿಯಾದವನ್ನು ಬಳಕೆ ಮಾಡುವುದರ ವಿರುದ್ಧ ಶೂನ್ಯ ಸಹಿಷ್ಣುತೆ ಇದೆ. ಈ ಚಟುವಟಿಕೆಗಳಿಗೆ ಕಾರಣರಾವರ ವಿರುದ್ಧ ನಾವು ಕಠಿಣ ಕ್ರಮಗಳನ್ನು ಕೈಗೊಂಡಿದ್ದೇವೆ’’ ಎಂದು ಅವರು ಒತ್ತಿ ಹೇಳಿದರು.
ಕೃಷಿ ಸಮೃದ್ಧಿ ಮಹೋತ್ಸವ ಅಕ್ಟೋಬರ್ ನಲ್ಲಿ ಮಿಷನ್ ಮಾದರಿಯಲ್ಲಿ ದೇಶಾದ್ಯಂತ ಬಹು ಪಕ್ಷೀಯ ಮತ್ತು ಬಹು ಸಚಿವಾಲಯಗಳ ಜನಸಂಪರ್ಕದೊಂದಿಗೆ ನಡೆಯಲಿದೆ ಎಂದು ಡಾ.ಮನ್ಸುಖ್ ಮಾಂಡವಿಯಾ’ ಹೇಳಿದರು. ಕೃಷಿ, ರಾಸಾಯನಿಕ ಮತ್ತು ರಸಗೊಬ್ಬರ, ಗ್ರಾಮೀಣಾಭಿವೃದ್ಧಿ ಸೇರಿದಂತೆ ಹಲವು ಕೇಂದ್ರ ಸಚಿವಾಲಯಗಳು ದೇಶಾದ್ಯಂತ ಹಲವು ಚಟುವಟಿಕೆಗಳನ್ನು ಹಮ್ಮಿಕೊಳ್ಳಲಿವೆ.
ಸಚಿವರೊಂದಿಗೆ ಸಂವಾದ ನಡೆಸಿದ ರೈತರು ಪ್ರಧಾನ ಮಂತ್ರಿ ಕಿಸಾನ್ ಸಮೃದ್ಧಿ ಕೇಂದ್ರಗಳು ನೀಡುವ ಸೇವೆಗಳನ್ನು ಬಳಸಿಕೊಂಡು ತಮ್ಮ ಅನುಭವಗಳನ್ನು ಹಂಚಿಕೊಂಡರು. ಗುಜರಾತ್ನ ಪಂಕಜ್ ಭಾಯ್, “ಈ ಹಿಂದೆ ಒಂದೇ ಕೋಣೆಯಡಿಯಲ್ಲಿ ಬೀಜಗಳು, ರಸಗೊಬ್ಬರಗಳು ಮತ್ತು ಕೀಟನಾಶಕಗಳಂತಹ ಸಾಧನಗಳು ನಮಗೆ ಲಭ್ಯವಿರಲಿಲ್ಲ. ಇದೀಗ ಪಿಎಂಕೆಎಸ್ ಕೆ ಗಳು ನಿಜವಾಗಿಯೂ ತಮಗೆ ಪ್ರಯೋಜನವನ್ನು ಒದಗಿಸಿವೆ. ಈ ಮೊದಲು, ಬಹು ದೂರ ಪ್ರಯಾಣಿಸಿ ವಿವಿಧ ಅಂಗಡಿಗಳಿಂದ ಈ ಸೇವೆಗಳು ಮತ್ತು ಸೌಲಭ್ಯಗಳನ್ನು ಪಡೆಯಬೇಕಾಗಿತ್ತು ಎಂದರು. ಇಫ್ಕೋ ಹೊಸ ತಂತ್ರಜ್ಞಾನಗಳನ್ನು ಹೇಗೆ ಬಳಸುವುದು ಎಂಬುದರ ಕುರಿತು ಪ್ರಾತ್ಯಕ್ಷಿಕೆಗಳನ್ನು ನಡೆಸುತ್ತದೆ ಮತ್ತು ನಮ್ಮ ಹೊಲಗಳಲ್ಲಿ ಕೀಟನಾಶಕಗಳನ್ನು ಸಿಂಪಡಿಸಲು ನಮಗೆ ಸಹಾಯ ಮಾಡುತ್ತದೆ. ಕೃಷಿಗಾಗಿ ವೃತ್ತಿಯನ್ನು ತೊರೆದ ಕರ್ನಾಟಕದ ವಿಕಿರಣಶಾಸ್ತ್ರಜ್ಞ ಡಾ.ರಂಗನಾಥ್, “ಪಿಎಂಕೆಎಸ್ ಕೆಗಳು ಮಣ್ಣು ಮತ್ತು ನೀರಿನ ಪರೀಕ್ಷಾ ಸೌಲಭ್ಯಗಳನ್ನು ಒದಗಿಸಲು ಸಹಾಯ ಮಾಡುತ್ತದೆ ಮತ್ತು ಆ ಸೌಲಭ್ಯ ಕೇಂದ್ರಗಳಿಗೆ ರೈತರನ್ನು ಸಂಪರ್ಕಿಸಲು ಸಹಾಯ ಮಾಡುತ್ತದೆ. ಇದು ಉತ್ತಮ ಕೃಷಿ ಪದ್ಧತಿಗಳ ಬಗ್ಗೆ ರೈತರಲ್ಲಿ ಜಾಗೃತಿ ಮೂಡಿಸಲು ಸಹಾಯ ಮಾಡುತ್ತದೆ’’ ಎಂದರು.
ಬಿಹಾರದ ಶ್ರೀ ಶ್ರವಣ್ ಕುಮಾರ್, “ಪಿಎಂಕೆಎಸ್ ಕೆ ಬ್ಲಾಕ್/ಜಿಲ್ಲಾ ಮಟ್ಟದ ಮಳಿಗೆಗಳಲ್ಲಿ ಚಿಲ್ಲರೆ ವ್ಯಾಪಾರಿಗಳ ನಿಗದಿತ ಸಾಮರ್ಥ್ಯ ವೃದ್ಧಿಯನ್ನು ಖಾತ್ರಿಪಡಿಸುತ್ತದೆ. ಇದು ಹತ್ತಿರದ ಪ್ರದೇಶಗಳ ರೈತರಿಗೆ ಸಂವಹನ ನಡೆಸಲು ಮತ್ತು ಅವರ ಅನುಭವಗಳನ್ನು ಹಂಚಿಕೊಳ್ಳಲು ಸಮುದಾಯವಾಗಿ ಕಾರ್ಯನಿರ್ವಹಿಸುತ್ತದೆ’’ ಎಂದರು.
ರಸಗೊಬ್ಬರ ಇಲಾಖೆಯ ಕಾರ್ಯದರ್ಶಿ ಶ್ರೀ ರಜತ್ ಕುಮಾರ್ ಮಿಶ್ರಾ, ಹೆಚ್ಚುವರಿ ಕಾರ್ಯದರ್ಶಿ (ರಾಸಾಯನಿಕ ಮತ್ತು ರಸಗೊಬ್ಬರ) ಶ್ರೀಮತಿ ಎ ನೀರಜಾ ಮತ್ತು ರಾಸಾಯನಿಕ ಮತ್ತು ರಸಗೊಬ್ಬರ ಸಚಿವಾಲಯದ ಹಿರಿಯ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.
****
(Release ID: 1956662)
Visitor Counter : 116