ಗಣಿ ಸಚಿವಾಲಯ

ವಿಶೇಷ ಅಭಿಯಾನ 2.0: ಗಣಿ ಸಚಿವಾಲಯದಿಂದ ಸ್ವಚ್ಛತೆಯತ್ತ ಹೆಜ್ಜೆ


ಅಭಿಯಾನವು ಮಳೆನೀರು ಕೊಯ್ಲು, ಕಾಂಪೋಸ್ಟ್ ಗುಂಡಿಗಳು, ಸರೋವರಗಳು / ಕೊಳಗಳನ್ನು ಸ್ವಚ್ಛಗೊಳಿಸುವುದು ಮತ್ತು ತ್ಯಾಜ್ಯದ ಪರಿಸರ ವಿಲೇವಾರಿಯನ್ನು ಒಳಗೊಂಡಿತ್ತು

ಸ್ಕ್ರ್ಯಾಪ್ (ರದ್ದಿ) ವಿಲೇವಾರಿಯಿಂದ 17 ಕೋಟಿ ರೂ.ಗೂ ಹೆಚ್ಚು ಆದಾಯ ಗಳಿಕೆ; 34549 ಚದರ ಅಡಿ ಜಾಗವನ್ನು ಮುಕ್ತಗೊಳಿಸಲಾಗಿದೆ

Posted On: 08 SEP 2023 12:39PM by PIB Bengaluru

ವಿಶೇಷ ಅಭಿಯಾನ 2.0 ರ ಭಾಗವಾಗಿ, ಗಣಿ ಸಚಿವಾಲಯವು ತನ್ನ ಕ್ಷೇತ್ರ ರಚನೆಗಳೊಂದಿಗೆ 2022 ರ ನವೆಂಬರ್ ನಿಂದ 2023 ರ ಆಗಸ್ಟ್ ವರೆಗೆ ತನ್ನ ಚಟುವಟಿಕೆಗಳನ್ನು ಮುಂದುವರಿಸಿತು. ಸಚಿವಾಲಯದ ಅಭಿಯಾನವನ್ನು ಗಣಿ ಸಚಿವಾಲಯದ ಕಾರ್ಯದರ್ಶಿ 2022 ರ ಅಕ್ಟೋಬರ್ 2 ರಂದು ನವದೆಹಲಿಯಲ್ಲಿ ಪ್ರಾರಂಭಿಸಿದರು. ಅಲ್ಲಿ ಸಚಿವಾಲಯದ ಅಡಿಯಲ್ಲಿನ ಎಲ್ಲಾ ಸಂಸ್ಥೆಗಳು ವಿಸಿ(ವಿಡಿಯೊ ಕಾನ್ಫರೆನ್ಸ್) ಮೂಲಕ ಸೇರಿಕೊಂಡವು. 116 ಸ್ವಚ್ಛತಾ ಅಭಿಯಾನಗಳನ್ನು ಅನುಷ್ಠಾನಗೊಳಿಸಲು ಸಚಿವಾಲಯವು ಭಾರತದಾದ್ಯಂತ 84 ಸೈಟ್ ಕಚೇರಿಗಳನ್ನು ಗುರುತಿಸಿದೆ.

ಅಭಿಯಾನದ ಸಮಯದಲ್ಲಿ ಸಚಿವಾಲಯವು ನಿಗದಿಪಡಿಸಿದ ಗುರಿಯು ಮಳೆನೀರು ಕೊಯ್ಲು, ಕಾಂಪೋಸ್ಟ್ ಗುಂಡಿಗಳು, ಸರೋವರಗಳು / ಕೊಳಗಳನ್ನು ಸ್ವಚ್ಛಗೊಳಿಸುವುದು ಮತ್ತು ತ್ಯಾಜ್ಯದ ಪರಿಸರ ವಿಲೇವಾರಿಯ ರೂಪದಲ್ಲಿ "ಪರಿಸರಕ್ಕೆ ಹಿಂತಿರುಗುವುದು". ಉತ್ತಮ ಅಭ್ಯಾಸಗಳ ಭಾಗವಾಗಿ, ಗಣಿ ಸಚಿವಾಲಯದ ಕಚೇರಿಗಳ ಒಡೆತನದ ಕಟ್ಟಡಗಳು ಮಳೆನೀರು ಕೊಯ್ಲು ರಚನೆಗಳನ್ನು ಸ್ಥಾಪಿಸಿದ್ದವು. ವರ್ಮಿ ಕಾಂಪೋಸ್ಟ್ ಪಿಟ್ ಯೋಜನೆಗಳಿಗಾಗಿ ಸ್ಥಳಗಳನ್ನು ಗುರುತಿಸಲಾಗಿದೆ.


ಎಚ್ ಸಿಎಲ್ ವರ್ಮಿಕಾಂಪೋಸ್ಟ್ ಪ್ಲಾಂಟ್- ಐಸಿಸಿ ಘಟಕ, ಘಾಟ್ಸಿಲಾ (ಜಾರ್ಖಂಡ್)

NALCO Damanjodi, vermicompost.jpg
ನಾಲ್ಕೊ, ದಮನ್ಜೋಡಿ (ಒಡಿಶಾ) ನಲ್ಲಿ ಎರೆಹುಳು ಗೊಬ್ಬರ ಘಟಕ


ಮಳೆನೀರು ಕೊಯ್ಲು, ಖನಿಜ ಪರಿಶೋಧನೆ ಮತ್ತು ಸಲಹಾ ಲಿಮಿಟೆಡ್ (ಎಂಇಸಿಎಲ್), ನಾಗ್ಪುರ


ಜಿಎಸ್ಐಟಿಐ ಹೈದರಾಬಾದ್, ಮಳೆನೀರು ಕೊಯ್ಲು


ಬಳಕೆಯಾಗದ ಜಾಗದಲ್ಲಿ ಸ್ವಾಸ್ಥ್ಯ ಕೇಂದ್ರ, ನಾಲ್ಕೊ, ಅಂಗುಲ್ (ಒಡಿಶಾ)

ವಿಶೇಷ ಅಭಿಯಾನದಡಿ ಕೈಗೊಂಡಿರುವ ಕಾಮಗಾರಿಗಳನ್ನು ಪರಿಶೀಲಿಸಿದ ಕೇಂದ್ರ ಸಚಿವ ಶ್ರೀ ಪ್ರಲ್ಹಾದ್ ಜೋಶಿ, ಗಣಿ ಸಚಿವಾಲಯವು ಅನುಷ್ಠಾನಗೊಳಿಸಿರುವ ಇಲಾಖಾ ಕ್ಯಾಂಟೀನ್ ನಲ್ಲಿ ತ್ಯಾಜ್ಯವನ್ನು ಬೇರ್ಪಡಿಸುವಂತೆ ಸೂಚಿಸಿದರು. ಶಾಸ್ತ್ರಿ ಭವನದ ಇಲಾಖಾ ಕ್ಯಾಂಟೀನ್ ಗಳಲ್ಲಿ ತ್ಯಾಜ್ಯ ವಿಂಗಡಣೆ ಮತ್ತು ಕಾಂಪೋಸ್ಟ್ ಗುಂಡಿಗಳನ್ನು ತಯಾರಿಸಲು ಜೈವಿಕ ತ್ಯಾಜ್ಯವನ್ನು ಬಳಸಲು ಇದೇ ರೀತಿಯ ಮಾರ್ಗಸೂಚಿಗಳನ್ನು ಹೊರಡಿಸುವಂತೆ ಶಿಕ್ಷಣ ಸಚಿವಾಲಯ, ನೋಡಲ್ ಸಚಿವಾಲಯವನ್ನು ಕೋರಲಾಗಿದೆ.

Mines photographs.jpg

ಗಣಿ ಸಚಿವಾಲಯ, ಶಾಸ್ತ್ರಿ ಭವನದ ಇಲಾಖಾ ಕ್ಯಾಂಟೀನ್ ನಲ್ಲಿ ತ್ಯಾಜ್ಯ ವಿಂಗಡಣೆ

ಹೈದರಾಬಾದ್ ನ ಜಿಎಸ್ಐಟಿಐ ಕೂಡ ಉತ್ತಮ ಅಭ್ಯಾಸವಾಗಿ ತನ್ನ ಹಾಸ್ಟೆಲ್ ಕ್ಯಾಂಟೀನ್ ನಲ್ಲಿ ತ್ಯಾಜ್ಯ ವಿಂಗಡಣೆಯನ್ನು ಪ್ರಾರಂಭಿಸಿತು ಮತ್ತು ಮಿಶ್ರಗೊಬ್ಬರ ತಯಾರಿಸಲು ಜೈವಿಕ ತ್ಯಾಜ್ಯವನ್ನು ಬಳಸಿತು. ಹೈದರಾಬಾದ್ ನ ಜಿಎಸ್ ಐಟಿಐನಲ್ಲಿ ಕಾಂಪೋಸ್ಟ್ ಪಿಟ್ ಅನ್ನು ರಚಿಸಲಾಗಿದೆ. ಇದಲ್ಲದೆ ಬಳಕೆಯಾಗದ ಭೂಮಿಯನ್ನು ತರಬೇತಿದಾರರು / ಉದ್ಯೋಗಿಗಳು / ಸಾರ್ವಜನಿಕರಿಗೆ ಓಪನ್ ಏರ್ ಜಿಮ್ ಆಗಿ ಪರಿವರ್ತಿಸಲಾಯಿತು.


ಜಿಎಸ್ಐಟಿಐ, ಹೈದರಾಬಾದ್, ಓಪನ್ ಏರ್ ಜಿಮ್

ಗಣಿ ಸಚಿವಾಲಯವು ತನ್ನ ವಿಶೇಷ ಅಭಿಯಾನ 2.0 ರ ಭಾಗವಾಗಿ, 2022 ರ ನವೆಂಬರ್ ನಿಂದ 2023 ರ ಆಗಸ್ಟ್  ವರೆಗೆ ಸುಮಾರು 2743 ಕಡತಗಳನ್ನು ತೆಗೆದುಹಾಕಿದೆ, ಜತೆಗೆ ಒಟ್ಟು 34549 ಚದರ ಅಡಿ ಜಾಗವನ್ನು ಮುಕ್ತಗೊಳಿಸಿದೆ ಮತ್ತು ಗುಜರಿ ವಿಲೇವಾರಿಯಿಂದ ಒಟ್ಟು 172,130,148 ರೂ.ಗಳ ಆದಾಯವನ್ನು ಗಳಿಸಿದೆ.

ಉತ್ತಮ ಕೆಲಸದ ವಾತಾವರಣವನ್ನು ಸೃಷ್ಟಿಸಲು ಕಚೇರಿ ಸ್ಥಳವನ್ನು ಆಧುನೀಕರಿಸಲಾಯಿತು. ಗಣಿ ಸಚಿವಾಲಯದ ಕಾರಿಡಾರ್ ಗಳನ್ನು ವರ್ಣಚಿತ್ರಗಳಿಂದ ಅಲಂಕೃತಗೊಳಿಸಲಾಯಿತ್ತು ಮತ್ತು ಸ್ಥಳವನ್ನು ಸುಂದರಗೊಳಿಸಲು ಸಸ್ಯಗಳಿಂದ ಮಡಕೆಗಳನ್ನು ಅಲಂಕರಿಸಲಾಗಿತ್ತು ಮತ್ತು ಆಜಾದಿ ಕಾ ಅಮೃತ್ ಮಹೋತ್ಸವ್ ಮತ್ತು ಹರ್ ಘರ್ ತಿರಂಗಾ ಅಭಿಯಾನಗಳ ಉದ್ಘಾಟನಾ ಕಾರ್ಯಕ್ರಮಗಳಿಗೆ ಬಳಸಲಾಗುತ್ತಿತ್ತು. ಕಚೇರಿ ಸ್ಥಳವನ್ನು ಪರಿಶೀಲಿಸಿ ವರದಿ ಸಲ್ಲಿಸಲು ನಿರ್ದೇಶಕ ಮಟ್ಟದ ಅಧಿಕಾರಿಗಳಿಗೆ ಕರ್ತವ್ಯಗಳನ್ನು ವಹಿಸಲಾಯಿತು. ಗಣಿ ಸಚಿವಾಲಯದ ಎಲ್ಲಾ ಸಂಸ್ಥೆಗಳು, ಪಿಎಸ್ ಯುಗಳಲ್ಲಿ ಇದೇ ಅಭ್ಯಾಸಗಳನ್ನು ಅನುಸರಿಸಲಾಗುತ್ತಿದೆ. ಈ ಉಪಕ್ರಮವು ಆವರಣದಲ್ಲಿ ಸ್ವಚ್ಚತೆಯನ್ನು ಮುಂದುವರಿಸಲು ಕಾರಣವಾಗಿದೆ ಮತ್ತು ವಿಶೇಷ ಅಭಿಯಾನ 2.0 ರ ಅಡಿಯಲ್ಲಿ ನಿರಂತರ ಉಪಕ್ರಮಗಳನ್ನು ತೆಗೆದುಕೊಳ್ಳಲಾಗಿದೆ

 

***



(Release ID: 1955617) Visitor Counter : 99