ಗೃಹ ವ್ಯವಹಾರಗಳ ಸಚಿವಾಲಯ
“ಪದ್ಮ ಪ್ರಶಸ್ತಿ-2024”ಗಳಿಗೆ ನಾಮನಿರ್ದೇಶನ ಅವಕಾಶ 15ನೇ ಸೆಪ್ಟೆಂಬರ್, 2023 ರವರೆಗೆ ತೆರೆದಿರುತ್ತವೆ
Posted On:
06 SEP 2023 11:20AM by PIB Bengaluru
2024 ರ ಗಣರಾಜ್ಯೋತ್ಸವದ ಸಂದರ್ಭದಲ್ಲಿ ಘೋಷಿಸಲಾಗುವ ಪದ್ಮ ಪ್ರಶಸ್ತಿಗಳಿಗೆ ಜಾಲತಾಣ ಮೂಲಕ ನಾಮನಿರ್ದೇಶನಗಳು / ಶಿಫಾರಸುಗಳು ಮೇ 01, 2023 ರಂದು ಪ್ರಾರಂಭವಾಗಿದೆ. ಪದ್ಮ ಪ್ರಶಸ್ತಿಗಳಿಗೆ ನಾಮನಿರ್ದೇಶನಕ್ಕೆ ಕೊನೆಯ ದಿನಾಂಕ 15 ಸೆಪ್ಟೆಂಬರ್, 2023. ಪದ್ಮ ಪ್ರಶಸ್ತಿಗಳಿಗೆ ನಾಮನಿರ್ದೇಶನಗಳು / ಶಿಫಾರಸುಗಳು ರಾಷ್ಟ್ರೀಯ ಪುರಸ್ಕಾರ್ ಜಾಲತಾಣದಲ್ಲಿ (http://https://awards.gov.in ) ಸ್ವೀಕರಿಸಲಾಗುತ್ತದೆ.
ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿಗಳಾದ ಪದ್ಮ ಪ್ರಶಸ್ತಿಗಳಲ್ಲಿ, ಪದ್ಮವಿಭೂಷಣ, ಪದ್ಮಭೂಷಣ ಮತ್ತು ಪದ್ಮಶ್ರೀ ಪ್ರಶಸ್ತಿಗಳು ಸೇರಿವೆ.
1954 ರಲ್ಲಿ ಸ್ಥಾಪಿಸಲಾದ ಈ ಪ್ರಶಸ್ತಿಗಳನ್ನು ಪ್ರತಿ ವರ್ಷ ಗಣರಾಜ್ಯೋತ್ಸವದ ಸಂದರ್ಭದಲ್ಲಿ ಘೋಷಿಸಲಾಗುತ್ತದೆ. ಈ ಪ್ರಶಸ್ತಿಯು 'ವಿಶಿಷ್ಟತೆಯ ಕೆಲಸವನ್ನು' ಗುರುತಿಸುವ ಕಾರ್ಯಮಾಡುತ್ತದೆ. ಕಲೆ, ಸಾಹಿತ್ಯ ಮತ್ತು ಶಿಕ್ಷಣ, ಕ್ರೀಡೆ, ವೈದ್ಯಕೀಯ, ಸಮಾಜಕಾರ್ಯ, ವಿಜ್ಞಾನ ಮತ್ತು ಎಂಜಿನಿಯರಿಂಗ್, ಸಾರ್ವಜನಿಕ ವ್ಯವಹಾರಗಳು, ನಾಗರಿಕ ಸೇವೆ, ವ್ಯಾಪಾರ ಮತ್ತು ಕೈಗಾರಿಕೆ ಇತ್ಯಾದಿ, ಹಾಗೂ ಮುಂತಾದ ಎಲ್ಲಾ ಕ್ಷೇತ್ರಗಳಲ್ಲಿ/ ವರ್ಗ/ ವಿಭಾಗಗಳಲ್ಲಿ ಮಾಡಿರುವ ವಿಶಿಷ್ಟ ಮತ್ತು ಅಸಾಧಾರಣ ಸಾಧನೆಗಳು/ ಸೇವೆಗಾಗಿ ನೀಡಲಾಗುತ್ತದೆ.
ಜನಾಂಗ, ಉದ್ಯೋಗ, ಸ್ಥಾನ ಅಥವಾ ಲಿಂಗದ ಭೇದವಿಲ್ಲದ ಎಲ್ಲಾ ವ್ಯಕ್ತಿಗಳು ಈ ಪ್ರಶಸ್ತಿಗಳಿಗೆ ಅರ್ಹರಾಗಿರುತ್ತಾರೆ. ವೈದ್ಯರು ಮತ್ತು ವಿಜ್ಞಾನಿಗಳನ್ನು ಹೊರತುಪಡಿಸಿ, ಸಾರ್ವಜನಿಕ ಕ್ಷೇತ್ರದ ಉದ್ಯಮಗಳಲ್ಲಿ ಕೆಲಸ ಮಾಡುವವರು ಸೇರಿದಂತೆ ಎಲ್ಲಾ ಸರ್ಕಾರಿ ನೌಕರರು ಪದ್ಮ ಪ್ರಶಸ್ತಿಗಳಿಗೆ ಅರ್ಹರಲ್ಲ.
ಪದ್ಮ ಪ್ರಶಸ್ತಿಗಳನ್ನು "ಜನರ ಪದ್ಮ"ವನ್ನಾಗಿ ಪರಿವರ್ತಿಸಲು ಕೇಂದ್ರ ಸರ್ಕಾರ ಬದ್ಧವಾಗಿದೆ. ಆದ್ದರಿಂದ, ಎಲ್ಲಾ ನಾಗರಿಕರು ಸ್ವಯಂ ನಾಮನಿರ್ದೇಶನ ಸೇರಿದಂತೆ ಇತರ ಸೂಕ್ತರ ಹೆಸರುಗಳನ್ನು ಸೂಚಿಸಲು/ ನಾಮನಿರ್ದೇಶನಗಳನ್ನು/ ಶಿಫಾರಸುಗಳನ್ನು ಮಾಡಲು ವಿನಂತಿಸಲಾಗಿದೆ.
ಸಮಾಜಕ್ಕೆ ನಿಸ್ವಾರ್ಥ ಸೇವೆ ಸಲ್ಲಿಸುತ್ತಿರುವ ಎಸ್.ಸಿ. ಮತ್ತು ಎಸ್.ಟಿ.ಗಳು, ದಿವ್ಯಾಂಗ ವ್ಯಕ್ತಿಗಳು, ಮಹಿಳೆಯರು ಮತ್ತು ಸಮಾಜದ ಇತರ ದುರ್ಬಲ ವರ್ಗದವರಲ್ಲಿನ ಶ್ರೇಷ್ಠತೆ ಮತ್ತು ಸಾಧನೆಗಳನ್ನು ಗುರುತಿಸಲು ಅರ್ಹರಾಗಿರುವ ಪ್ರತಿಭಾವಂತ ವ್ಯಕ್ತಿಗಳನ್ನು ಗುರುತಿಸಲು ಸಂಘಟಿತ ಪ್ರಯತ್ನಗಳನ್ನು ಈ ಮೂಲಕ ಮಾಡಬಹುದು.
ನಾಮನಿರ್ದೇಶನಗಳು/ ಶಿಫಾರಸುಗಳು ರಾಷ್ಟ್ರೀಯ ಪುರಸ್ಕಾರ್ ( https://awards.gov.in ) ಜಾಲತಾಣದಲ್ಲಿ ಲಭ್ಯವಿರುವ ಸ್ವರೂಪದಲ್ಲಿ ನಿರ್ದಿಷ್ಟಪಡಿಸಿದ ಎಲ್ಲಾ ಸಂಬಂಧಿತ ವಿವರಗಳನ್ನು ಒಳಗೊಂಡಿರಬೇಕು. ಆಕೆಯ/ ಅವನ ಸಂಬಂಧಿತ ಕ್ಷೇತ್ರ/ವರ್ಗ/ವಿಭಾಗಗಳಲ್ಲಿ ಶಿಫಾರಸು ಮಾಡಿದ ವ್ಯಕ್ತಿಯ ಸಾಧನೆಗಳು/ಸೇವೆಗಳ ಕುರಿತು ನಿರೂಪಣೆಯ ರೂಪದಲ್ಲಿ ಉಲ್ಲೇಖವನ್ನು ಒಳಗೊಂಡಂತೆ (ಗರಿಷ್ಠ 800 ಪದಗಳು), ವಿಶಿಷ್ಟವಾದ ಶ್ರೇಷ್ಟತೆ ಮತ್ತು ಅಸಾಧಾರಣವಾದವುಗಳ ಮಾಹಿತಿ-ವಿವರಗಳನ್ನು ಸ್ಪಷ್ಟವಾಗಿ ಸಲ್ಲಿಸಬೇಕು.
ಈ ಸಂಬಂಧ ಮಾಹಿತಿ-ವಿವರಗಳು ಕೇಂದ್ರ ಗೃಹ ಸಚಿವಾಲಯದ ( https://mha.gov.in ) ಜಾಲತಾಣದಲ್ಲಿ ಮತ್ತು ಪದ್ಮ ಪ್ರಶಸ್ತಿಗಳ ( https://padmaawards.gov.in ) ಜಾಲತಾಣದಲ್ಲಿ 'ಪ್ರಶಸ್ತಿಗಳು ಮತ್ತು ಪದಕಗಳು' ಶೀರ್ಷಿಕೆಯಡಿಯಲ್ಲಿ ಲಭ್ಯವಿದೆ. ಈ ಪ್ರಶಸ್ತಿಗಳಿಗೆ ಸಂಬಂಧಿಸಿದ ಕಾನೂನುಗಳು ಮತ್ತು ನಿಯಮಗಳ ವಿವರಗಳು hhttp://ttps://padmaawards.gov.in/AboutAwards.aspx ಕೊಂಡಿಯೊಂದಿಗೆ ಜಾಲತಾಣದಲ್ಲಿ ಲಭ್ಯವಿದೆ.
*****
(Release ID: 1955132)
Visitor Counter : 122
Read this release in:
Assamese
,
Bengali
,
English
,
Urdu
,
Hindi
,
Marathi
,
Manipuri
,
Punjabi
,
Gujarati
,
Tamil
,
Telugu