ವಾರ್ತಾ ಮತ್ತು ಪ್ರಸಾರ ಸಚಿವಾಲಯ
ಮೊದಲ ಆವೃತ್ತಿಯ ಅತ್ಯುತ್ತಮ ವೆಬ್ ಸರಣಿ (ಒಟಿಟಿ) ಪ್ರಶಸ್ತಿಗೆ ಅರ್ಜಿ ಸಲ್ಲಿಕೆ ದಿನಾಂಕ ವಿಸ್ತರಿಸಿದ ವಾರ್ತಾ ಮತ್ತು ಪ್ರಸಾರ ಸಚಿವಾಲಯ
Posted On:
25 AUG 2023 5:07PM by PIB Bengaluru
ವಾರ್ತಾ ಮತ್ತು ಪ್ರಸಾರ ಸಚಿವಾಲಯವು ಇಂದು ಉದ್ಘಾಟನಾ ಆವೃತ್ತಿಯ ಬೆಸ್ಟ್ ವೆಬ್ ಸೀರೀಸ್ (ಒಟಿಟಿ) ಪ್ರಶಸ್ತಿಗೆ ಆನ್ಲೈನ್ ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕವನ್ನು ಆಗಸ್ಟ್ 25ರಿಂದ ಸೆಪ್ಟೆಂಬರ್ 4ರ ಸಂಜೆ 6ರ ವರೆಗೆ ವಿಸ್ತರಿಸಿದೆ. ಆದರೆ ಸರಣಿಯ ಹಾರ್ಡ್ಕಾಪಿಯನ್ನು ಈ 2023 ಸೆಪ್ಟೆಂಬರ್ 12ರೊಳಗೆ ಸಲ್ಲಿಸಬಹುದು.
2023 ಸೆಪ್ಟೆಂಬರ್ 12ರ ದಿನವನ್ನು ರಜೆ ಎಂದು ಘೋಷಿಸಿದರೆ, ಮುಂದಿನ ಕೆಲಸದ ದಿನವನ್ನು ಅರ್ಜಿಯ ಸ್ವೀಕೃತಿಯ ಅಂತಿಮ ದಿನಾಂಕವೆಂದು ಪರಿಗಣಿಸಲಾಗುತ್ತದೆ.
ಕಳೆದ 2 ವರ್ಷಗಳಲ್ಲಿ ವ್ಯಾಪಕವಾಗಿ ಅಥವಾ ಹಲವು ಪಟ್ಟು ಬೆಳವಣಿಗೆ ಕಂಡಿರುವ ಒಟಿಟಿ ವೇದಿಕೆಯ ಸೃಜನಶೀಲ ಸಾಮರ್ಥ್ಯವನ್ನು ಗುರುತಿಸಲು ಉದ್ದೇಶಿಸಿರುವ ಸಚಿವಾಲಯು, ಪ್ರಶಸ್ತಿಗಾಗಿ ಗರಿಷ್ಠ ಸಂಖ್ಯೆಯ ವೆಬ್ ಸರಣಿಗಳು ಭಾಗವಹಿಸುವುದನ್ನು ಖಚಿತಪಡಿಸಿಕೊಳ್ಳಲು ಅರ್ಜಿ ಸಲ್ಲಿಕೆ ದಿನಾಂಕವನ್ನು ವಿಸ್ತರಿಸುವ ನಿರ್ಧಾರ ತೆಗೆದುಕೊಂಡಿದೆ.
ಮನರಂಜನಾ ಉದ್ಯಮದ ವ್ಯಕ್ತಿಗಳನ್ನು ಒಳಗೊಂಡಿರುವ ಪ್ರಖ್ಯಾತ ತೀರ್ಪುಗಾರರು ಅತ್ಯುತ್ತಮ ವೆಬ್ ಸರಣಿಯನ್ನು ಆಯ್ಕೆ ಮಾಡುತ್ತಾರೆ. ವಿಜೇತರಿಗೆ 54ನೇ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ರಮಾಣಪತ್ರಗಳೊಂದಿಗೆ 10 ಲಕ್ಷ ರೂಪಾಯಿಗ ನಗದು ಬಹುಮಾನ ನೀಡಲಾಗುತ್ತದೆ.
ಪ್ರಶಸ್ತಿಗೆ ಅರ್ಹರಾಗಲು, ವೆಬ್ ಸರಣಿಯು ಯಾವುದೇ ಭಾರತೀಯ ಭಾಷೆಯಲ್ಲಿ ಅಸಲಿಯಾಗಿ ಸೃಜಿಸಿದ/ಶಾಟ್ ಸರಣಿಯಾಗಿರಬೇಕು ಮತ್ತು ನಿಯೋಜಿಸಲಾದ ಅಥವಾ ನಿರ್ಮಿಸಿದ ಅಸಲಿ ಕೃತಿಯ ಮೂಲ ಭಾಗವಾಗಿರಬೇಕು. ಇದಲ್ಲದೆ, ಒಟಿಟಿ ವೇದಿಕೆಯಲ್ಲಿ ಮಾತ್ರ ಬಿಡುಗಡೆ ಮಾಡುವ ಉದ್ದೇಶದಿಂದ ಸರಣಿಯನ್ನು ಸಹ-ನಿರ್ಮಾಣ ಮಾಡಿರುವ, ಪರವಾನಗಿ ಪಡೆದಿರುವ ಅಥವಾ ಸ್ವಾಧೀನಪಡಿಸಿಕೊಂಡಿರಬೇಕು.
ಅಲ್ಲದೆ, ಪ್ರಶಸ್ತಿಗೆ ಅರ್ಹರಾಗಲು, ಪ್ರವೇಶದ ಎಲ್ಲಾ ಸಂಚಿಕೆಗಳು (ವೆಬ್ ಸರಣಿ/ಸೀಸನ್), ಒಟಿಟಿ ಪ್ಲಾಟ್ಫಾರ್ಮ್ನಲ್ಲಿ 2022 ಜನವರಿ 1ರಿಂದ 2022 ಡಿಸೆಂಬರ್ 31ರ ವರೆಗೆ ಬಿಡುಗಡೆ ಮಾಡಿರಬೇಕು.
ಪ್ರಶಸ್ತಿಗಳಿಗೆ ಸಂಬಂಧಿಸಿದ ಅರ್ಹತೆಯ ಹೆಚ್ಚಿನ ವಿವರಗಳು ವಾರ್ತಾ ಮತ್ತು ಪ್ರಸಾರ ಸಚಿವಾಲಯ, ರಾಷ್ಟ್ರೀಯ ಚಲನಚಿತ್ರ ಅಭಿವೃದ್ಧಿ ನಿಗಮ ಮತ್ತು ಐಎಫ್ಎಫ್ಐ ವೆಬ್ಸೈಟ್ಗಳಲ್ಲಿ ಲಭ್ಯವಿದೆ.
***
(Release ID: 1952228)