ಯುವಜನ ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯ
azadi ka amrit mahotsav g20-india-2023

‘ಮೇರಿ ಮಾತಿ ಮೇರಾ ದೇಶ್’ ಅಭಿಯಾನದಡಿ 17 ಲಕ್ಷಕ್ಕೂ ಹೆಚ್ಚು ಸಸಿಗಳನ್ನು ನೆಡಲಾಗಿದೆ: ಶ್ರೀಮತಿ. ಮೀತಾ ರಾಜೀವಲೋಚನ್

Posted On: 22 AUG 2023 5:47PM by PIB Bengaluru

‘ಮೇರಿ ಮಾತಿ ಮೇರಾ ದೇಶ್’ ಅಭಿಯಾನದಡಿ ಇದುವರೆಗೆ 17 ಲಕ್ಷಕ್ಕೂ ಹೆಚ್ಚು ಸಸಿಗಳನ್ನು ನೆಡಲಾಗಿದೆ. ಇದಲ್ಲದೆ, 25 ಸಾವಿರಕ್ಕೂ ಹೆಚ್ಚು ಅಮೃತ ವಾಟಿಕಗಳನ್ನು ಮಾಡಲಾಗಿದೆ. ಭಾರತ ಸರ್ಕಾರದ ಯುವಜನ ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯದ  ಯುವ ವ್ಯವಹಾರಗಳ ಇಲಾಖೆ ಕಾರ್ಯದರ್ಶಿ  ಶ್ರೀಮತಿ. ಮೀತಾ ರಾಜೀವಲೋಚನ್, ಭೋಪಾಲ್‌ನಲ್ಲಿ ಈ ಮಾಹಿತಿ ನೀಡಿದ್ದಾರೆ.

'ಮೇರಿ ಮಾತಿ ಮೇರಾ ದೇಶ್' ಅಭಿಯಾನದ ಅಡಿ, 4 ಕೋಟಿಗಿಂತ ಹೆಚ್ಚಿನ ಜನರು ಪಂಚಪ್ರಾಣ(ಪಂಚ ಸಂಕಲ್ಪ)ದ ಪ್ರತಿಜ್ಞಾವಿಧಿ ಸ್ವೀಕರಿಸಿದ್ದಾರೆ. ಈ ಅಭಿಯಾನದಲ್ಲಿ ಯುವಕರು ಸಕ್ರಿಯವಾಗಿ ಪಾಲ್ಗೊಳ್ಳುತ್ತಿದ್ದಾರೆ ಎಂದು ಅವರು ಮಾಹಿತಿ ನೀಡಿದರು.

ಭೋಪಾಲ್‌ನ ತಾತ್ಯಾ ಟೋಪೆ ಸ್ಟೇಡಿಯಂನಲ್ಲಿ ಆಯೋಜಿಸಲಾದ ‘ಮೇರಿ ಮಾತಿ ಮೇರಾ ದೇಶ್’ ಕಾರ್ಯಕ್ರಮದ ರಾಜ್ಯ ಮಟ್ಟದ ಪರಿಶೀಲನಾ ಸಭೆಯಲ್ಲಿ ಮೀತಾ ರಾಜೀವಲೋಚನ್ ಅವರು ರಾಜ್ಯದಲ್ಲಿ ನಡೆಯುತ್ತಿರುವ ಚಟುವಟಿಕೆಗಳ ಪರಾಮರ್ಶೆ ನಡೆಸಿದರು.

ಪಂಜಾಬ್ ಬೆಟಾಲಿಯನ್‌ನ ಹುತಾತ್ಮ ಕ್ಯಾಪ್ಟನ್ ದೇವಶಿಶ್ ಶರ್ಮಾ ಅವರ ತಾಯಿ ನಿರ್ಮಲಾ ಶರ್ಮಾ ಅವರಿಗೆ ಸನ್ಮಾನ ನೆರವೇರಿಸಿದರು. ಮಧ್ಯಪ್ರದೇಶ ಸರ್ಕಾರದ ಕ್ರೀಡೆ ಮತ್ತು ಯುವಜನ ಕಲ್ಯಾಣ ಇಲಾಖೆ  ಕಾರ್ಯದರ್ಶಿ ಶ್ರೀ ಪಿ. ನರಹರಿ, ಪಿಐಬಿ, ದೂರದರ್ಶನ, ಆಕಾಶವಾಣಿ, ರಾಷ್ಟ್ರೀಯ ಸೇವಾ ಯೋಜನೆ, ನೆಹರು ಯುವ ಕೇಂದ್ರ ಸಂಘಟನೆ ಮತ್ತು ರಾಜ್ಯ ಸರ್ಕಾರದ ಅನೇಕ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.

2 ದಿನಗಳ ಭೇಟಿಯ ಮೊದಲ ದಿನ ಶ್ರೀಮತಿ. ಮೀತಾ ರಾಜೀವಲೋಚನ್ ಅವರು ಭೋಪಾಲ್‌ನ ಉನ್ನತ ಶಿಕ್ಷಣ ಸಂಸ್ಥೆಯಲ್ಲಿ 'ಮೇರಿ ಮಾತಿ ಮೇರಾ ದೇಶ್ ಅಭಿಯಾನ' ಅಡಿ  ನಡೆಯುತ್ತಿರುವ ಚಟುವಟಿಕೆಗಳನ್ನು ಪರಿಶೀಲಿಸಿದರು, ಕ್ಯಾಂಪಸ್‌ನಲ್ಲಿ ನಿರ್ಮಿಸಲಾದ ಅಮೃತ ವಾಟಿಕಾವನ್ನು ಉದ್ಘಾಟಿಸುವ ಜತೆಗೆ, ಅಲ್ಲಿ ರುದ್ರಾಕ್ಷಿ ಸಸಿ ನೆಟ್ಟು ರಾಷ್ಟ್ರೀಯ ಸೇವಾ ಯೋಜನಾ ಕಚೇರಿಯಲ್ಲಿ ಆಯೋಜಿಸಲಾಗಿದ್ದ ವಸ್ತು ಪ್ರದರ್ಶನಕ್ಕೆ ಭೇಟಿ ನೀಡಿದರು.

 

 

***

 



(Release ID: 1951330) Visitor Counter : 114