ಸಂಪರ್ಕ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ
azadi ka amrit mahotsav

ಟೆಲಿಕಾಂ ರೆಗ್ಯುಲೇಟರಿ ಅಥಾರಿಟಿ ಆಫ್ ಇಂಡಿಯಾದ 'ಓವರ್-ದಿ-ಟಾಪ್ (ಒಟಿಟಿ) ಸಂವಹನ ಸೇವೆಗಳ ನಿಯಂತ್ರಕ ಕಾರ್ಯವಿಧಾನ ಮತ್ತು ಆಯ್ದ ಒಟಿಟಿ ಸೇವೆಗಳ ನಿಷೇಧ' ಕುರಿತಾದ ಸಮಾಲೋಚನಾ ಪತ್ರದ ಬಗ್ಗೆ ಪ್ರತಿಕ್ರಿಯೆಗಳು / ಕೌಂಟರ್ ಪ್ರತಿಕ್ರಿಯೆಗಳನ್ನು ಸ್ವೀಕರಿಸುವ ಕೊನೆಯ ದಿನಾಂಕವನ್ನು ವಿಸ್ತರಿಸಲಾಗಿದೆ

Posted On: 18 AUG 2023 3:09PM by PIB Bengaluru

ಟೆಲಿಕಾಂ ರೆಗ್ಯುಲೇಟರಿ ಅಥಾರಿಟಿ ಆಫ್ ಇಂಡಿಯಾ (ಟ್ರಾಯ್) 07.07.2023ರಂದು 'ಓವರ್-ದಿ-ಟಾಪ್ (ಒಟಿಟಿ) ಸಂವಹನ ಸೇವೆಗಳ ನಿಯಂತ್ರಣ ಕಾರ್ಯವಿಧಾನ ಮತ್ತು ಆಯ್ದ ಒಟಿಟಿ ಸೇವೆಗಳ ನಿಷೇಧ' ಕುರಿತಾದ ಸಮಾಲೋಚನಾ ಪತ್ರವನ್ನು ಬಿಡುಗಡೆ ಮಾಡಿತು. ಮಧ್ಯಸ್ಥಗಾರರಿಂದ ಆಹ್ವಾನಿಸಲಾದ ಸಮಾಲೋಚನಾ ಪತ್ರದಲ್ಲಿ ಸೂಚಿಸಲಾದ ವಿಷಯಗಳ ಬಗ್ಗೆ ಲಿಖಿತ ಪ್ರತಿಕ್ರಿಯೆಗಳನ್ನು ಸ್ವೀಕರಿಸಲು ಕೊನೆಯ ದಿನಾಂಕವನ್ನು 04.08.2023 ಮತ್ತು ಕೌಂಟರ್ ಪ್ರತಿಕ್ರಿಯೆಗಳಿಗಾಗಿ ದಿನಾಂಕವನ್ನು 18.08.2023 ಎಂದು ನಿಗದಿಪಡಿಸಲಾಗಿತ್ತು.

ಪ್ರತಿಕ್ರಿಯೆಗಳನ್ನು ಸಲ್ಲಿಸಲು ಸಮಯವನ್ನು ವಿಸ್ತರಿಸಲು ಮಧ್ಯಸ್ಥಗಾರರ ಕೋರಿಕೆಯ ಮೇರೆಗೆ, ಲಿಖಿತ ಪ್ರತಿಕ್ರಿಯೆಗಳು ಮತ್ತು ಕೌಂಟರ್ ಪ್ರತಿಕ್ರಿಯೆಗಳನ್ನು ಸಲ್ಲಿಸುವ ಕೊನೆಯ ದಿನಾಂಕವನ್ನು ಕ್ರಮವಾಗಿ 18.08.2023 ಮತ್ತು 01.09.2023 ಎಂದು ತದನಂತರದಲ್ಲಿ ವಿಸ್ತರಿಸಲಾಯಿತು.

ತಮ್ಮ ಅಭಿಪ್ರಾಯಗಳನ್ನು ಸಲ್ಲಿಸಲು ಸಮಯವನ್ನು ಮತ್ತಷ್ಟು ವಿಸ್ತರಿಸಲು ಮಧ್ಯಸ್ಥಗಾರರ ವಿನಂತಿಯನ್ನು ಗಮನದಲ್ಲಿಟ್ಟುಕೊಂಡು, ಅದರ ಮೇರೆಗೆ ಲಿಖಿತ ಪ್ರತಿಕ್ರಿಯೆಗಳು ಮತ್ತು ಕೌಂಟರ್ ಪ್ರತಿಕ್ರಿಯೆಗಳನ್ನು ಸಲ್ಲಿಸುವ ಕೊನೆಯ ದಿನಾಂಕವನ್ನು ಕ್ರಮವಾಗಿ 01.09.2023 ಮತ್ತು 15.09.2023ರವರೆಗೆ ವಿಸ್ತರಿಸಲು ನಿರ್ಧರಿಸಲಾಗಿದೆ.

ಪ್ರತಿಕ್ರಿಯೆಗಳು ಮತ್ತು ಕೌಂಟರ್ ಪ್ರತಿಕ್ರಿಯೆಗಳನ್ನು ಶ್ರೀ ಅಖಿಲೇಶ್ ಕುಮಾರ್ ತ್ರಿವೇದಿ, ಟ್ರಾಯ್ ನ ಸಲಹೆಗಾರ (ನೆಟ್ವರ್ಕ್, ಸ್ಪೆಕ್ಟ್ರಮ್ ಮತ್ತು ಪರವಾನಗಿ) ಅವರಿಗೆ ಎಲೆಕ್ಟ್ರಾನಿಕ್ ರೂಪದಲ್ಲಿ http://advmn@trai.gov.in ನಲ್ಲಿ ಕಳುಹಿಸಬಹುದು. ಯಾವುದೇ ಸ್ಪಷ್ಟೀಕರಣ ಅಥವಾ ಮಾಹಿತಿಗಾಗಿ, ಶ್ರೀ ಅಖಿಲೇಶ್ ಕುಮಾರ್ ತ್ರಿವೇದಿ, ಟ್ರಾಯ್ ನ ಸಲಹೆಗಾರ (ನೆಟ್ ವರ್ಕ್, ಸ್ಪೆಕ್ಟ್ರಮ್ ಮತ್ತು ಪರವಾನಗಿ) ಅವರನ್ನು ದೂರವಾಣಿ ಸಂಖ್ಯೆ +91-11-23210481ರಲ್ಲಿ ಸಂಪರ್ಕಿಸಬಹುದು.

*****


(Release ID: 1950132) Visitor Counter : 124