ಸಂಪುಟ

14,903 ಕೋಟಿ ರೂ.ಗಳ ವೆಚ್ಚದಲ್ಲಿ ಡಿಜಿಟಲ್ ಇಂಡಿಯಾ ಕಾರ್ಯಕ್ರಮವನ್ನು ವಿಸ್ತರಿಸಲು ಕೇಂದ್ರ ಸಚಿವ ಸಂಪುಟದ ಅನುಮೋದನೆ

Posted On: 16 AUG 2023 4:32PM by PIB Bengaluru

ನಾಗರಿಕರಿಗೆ ಸೇವೆಗಳನ್ನು ಡಿಜಿಟಲ್ ಮೂಲಕ ತಲುಪಿಸಲು ಅನುವು ಮಾಡಿಕೊಡಲು ಡಿಜಿಟಲ್ ಇಂಡಿಯಾ ಕಾರ್ಯಕ್ರಮವನ್ನು  2015 ರ ಜುಲೈ 1 ರಂದು ಪ್ರಾರಂಭಿಸಲಾಯಿತು. ಇದು ಅತ್ಯಂತ ಯಶಸ್ವಿ ಕಾರ್ಯಕ್ರಮವೆಂದು ಸಾಬೀತಾಗಿದೆ.

ಗೌರವಾನ್ವಿತ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿಂದು ನಡೆದ ಕೇಂದ್ರ ಸಚಿವ ಸಂಪುಟ ಸಭೆ, ಡಿಜಿಟಲ್ ಇಂಡಿಯಾ ಕಾರ್ಯಕ್ರಮದ ವಿಸ್ತರಣೆಗೆ ತನ್ನ ಅನುಮೋದನೆ ನೀಡಿದೆ. ಒಟ್ಟು ವೆಚ್ಚ 14,903 ಕೋಟಿ ರೂ.

ಇದು ಈ ಕೆಳಗಿನವುಗಳನ್ನು ಸಾಧ್ಯಗೊಳಿಸುತ್ತದೆ:

* ಫ್ಯೂಚರ್ ಸ್ಕಿಲ್ಸ್ ಪ್ರೈಮ್ ಪ್ರೋಗ್ರಾಂ (ಭವಿಷ್ಯದ ಕೌಶಲ್ಯ ಪ್ರಮುಖ ಕಾರ್ಯಕ್ರಮ) ಅಡಿಯಲ್ಲಿ 6.25 ಲಕ್ಷ ಮಾಹಿತಿ ತಂತ್ರಜ್ಞಾನ  ವೃತ್ತಿಪರರಿಗೆ ಮರು ಕೌಶಲ್ಯ ಮತ್ತು ಉನ್ನತ ಕೌಶಲ್ಯ ಪಡೆಯುವ ಅವಕಾಶ.     

* ಮಾಹಿತಿ ಭದ್ರತೆ ಮತ್ತು ಶಿಕ್ಷಣ ಜಾಗೃತಿ ಹಂತ (ಐಎಸ್ಇಎ) ಕಾರ್ಯಕ್ರಮದಡಿ 2.65 ಲಕ್ಷ ಜನರಿಗೆ ಮಾಹಿತಿ ಭದ್ರತೆಯಲ್ಲಿ ತರಬೇತಿ         

* ಹೊಸ ಯುಗದ ಆಡಳಿತಕ್ಕಾಗಿ ಏಕೀಕೃತ ಮೊಬೈಲ್ ಅಪ್ಲಿಕೇಶನ್ (ಉಮಾಂಗ್) / ಪ್ಲಾಟ್ ಫಾರ್ಮ್ ಅಡಿಯಲ್ಲಿ 540 ಹೆಚ್ಚುವರಿ ಸೇವೆಗಳು ಲಭ್ಯವಿರುತ್ತವೆ. ಪ್ರಸ್ತುತ 1,700 ಕ್ಕೂ ಹೆಚ್ಚು ಸೇವೆಗಳು ಈಗಾಗಲೇ ಉಮಾಂಗ್ ನಲ್ಲಿ ಲಭ್ಯವಿವೆ;

*  ರಾಷ್ಟ್ರೀಯ ಸೂಪರ್ ಕಂಪ್ಯೂಟರ್ ಮಿಷನ್ ಅಡಿಯಲ್ಲಿ ಇನ್ನೂ 9 ಸೂಪರ್ ಕಂಪ್ಯೂಟರ್ ಗಳನ್ನು ಸೇರಿಸಲಾಗುವುದು. ಇದು ಈಗಾಗಲೇ ನಿಯೋಜಿಸಲಾದ 18 ಸೂಪರ್ ಕಂಪ್ಯೂಟರ್ ಗಳಿಗೆ ಹೆಚ್ಚುವರಿಯಾಗಿರಲಿದೆ;         

 * ಭಾಷಿನಿ, ಕೃತಕ ಬುದ್ಧಿಮತ್ತೆ (ಎಐ)-ಸಕ್ರಿಯಗೊಳಿಸಿದ/ಅಳವಡಿಸಿದ  ಬಹು-ಭಾಷಾ ಅನುವಾದ ಸಾಧನ (ಪ್ರಸ್ತುತ 10 ಭಾಷೆಗಳಲ್ಲಿ ಲಭ್ಯವಿದೆ) ಎಲ್ಲಾ 22 ಶೆಡ್ಯೂಲ್ 8 ಭಾಷೆಗಳಲ್ಲಿ ಕಾರ್ಯಾಚರಿಸುವಂತೆ ಮಾಡಲಾಗುತ್ತದೆ.   

* 1,787 ಶಿಕ್ಷಣ ಸಂಸ್ಥೆಗಳನ್ನು ಸಂಪರ್ಕಿಸುವ ರಾಷ್ಟ್ರೀಯ ಜ್ಞಾನ ಜಾಲದ (ಎನ್ ಕೆಎನ್) ಆಧುನೀಕರಣ;          

* ಡಿಜಿಲಾಕರ್ ಅಡಿಯಲ್ಲಿ ಡಿಜಿಟಲ್ ದಾಖಲೆ ಪರಿಶೀಲನೆ ಸೌಲಭ್ಯವು ಈಗ ಎಂಎಸ್ಎಂಇಗಳು ಮತ್ತು ಇತರ ಸಂಸ್ಥೆಗಳಿಗೆ ಲಭ್ಯವಿರುತ್ತದೆ;

*2/3 ಶ್ರೇಣಿಯ/ಹಂತದ  ನಗರಗಳಲ್ಲಿ 1,200 ನವೋದ್ಯಮಗಳಿಗೆ (ಸ್ಟಾರ್ಟ್ ಅಪ್ ಗಳಿಗೆ) ಬೆಂಬಲ ನೀಡಲಾಗುವುದು.     

* ಆರೋಗ್ಯ, ಕೃಷಿ ಮತ್ತು ಸುಸ್ಥಿರ ನಗರಗಳ ಕುರಿತಂತೆ ಕೃತಕ ಬುದ್ಧಿಮತ್ತೆಯಲ್ಲಿ ಉತ್ಕೃಷ್ಟತೆಯ 3 ಕೇಂದ್ರಗಳನ್ನು ಸ್ಥಾಪಿಸಲಾಗುವುದು;          

* 12 ಕೋಟಿ ಕಾಲೇಜು ವಿದ್ಯಾರ್ಥಿಗಳಿಗೆ ಸೈಬರ್ ಜಾಗೃತಿ ಕೋರ್ಸ್ ಗಳು;       

* ಸಾಧನಗಳ/ಸಲಕರಣೆಗಳ ಅಭಿವೃದ್ಧಿ ಮತ್ತು ರಾಷ್ಟ್ರೀಯ ಸೈಬರ್ ಸಮನ್ವಯ ಕೇಂದ್ರದೊಂದಿಗೆ 200 ಕ್ಕೂ ಹೆಚ್ಚು ಸೈಟ್ ಗಳ ಏಕೀಕರಣ ಸೇರಿದಂತೆ ಸೈಬರ್ ಭದ್ರತೆ ಕ್ಷೇತ್ರದಲ್ಲಿ ಹೊಸ ಉಪಕ್ರಮಗಳು.

* ಇಂದಿನ ಘೋಷಣೆಯು ಭಾರತದ ಡಿಜಿಟಲ್ ಆರ್ಥಿಕತೆಗೆ ಉತ್ತೇಜನ ನೀಡಲಿದೆ, ಸೇವೆಗಳಲ್ಲಿ ಡಿಜಿಟಲ್ ಪ್ರವೇಶವನ್ನು ಹೆಚ್ಚಿಸುತ್ತದೆ ಮತ್ತು ಭಾರತದ ಮಾಹಿತಿ ತಂತ್ರಜ್ಞಾನ ಹಾಗು ವಿದ್ಯುನ್ಮಾನ (ಐಟಿ ಮತ್ತು ಎಲೆಕ್ಟ್ರಾನಿಕ್ಸ್) ಪರಿಸರ ವ್ಯವಸ್ಥೆಯನ್ನು ಬೆಂಬಲಿಸುತ್ತದೆ

****



(Release ID: 1949502) Visitor Counter : 120