ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ

ವೈಯ್ಯಕ್ತಿಕ ಡಿಜಿಟಲ್ ಡೇಟಾ ಸಂರಕ್ಷಣಾ ಕಾಯಿದೆಯು (ಡಿಪಿಡಿಪಿ) ವಿಶ್ವ ದರ್ಜೆಯ ಕಾನೂನಾಗಿದೆ: ಕೇಂದ್ರ ಕೌಶಲ್ಯಾಭಿವೃದ್ಧಿ ಮತ್ತು ಉದ್ಯಮಶೀಲತೆ ಹಾಗೂ ಎಲೆಕ್ಟ್ರಾನಿಕ್ಸ್ ಮತ್ತು ಐಟಿ ರಾಜ್ಯ ಖಾತೆ ಸಚಿವ  ಶ್ರೀ ರಾಜೀವ್ ಚಂದ್ರಶೇಖರ್


ಡಿಪಿಡಿಪಿಯ ಒಡನಾಡಿ ಶಾಸನವನ್ನು ಡಿಜಿಟಲ್ ಇಂಡಿಯಾ ಆಕ್ಟ್ ಎಂದು ಕರೆಯಲಾಗುತ್ತದೆ, ಇದು 22 ವರ್ಷ ಹಳೆಯದಾದ ತಂತ್ರಜ್ಞಾನ ಕಾಯಿದೆಯನ್ನು ಬದಲಿಸಲಿದೆ: ಕೇಂದ್ರ ಕೌಶಲ್ಯಾಭಿವೃದ್ಧಿ ಮತ್ತು ಉದ್ಯಮಶೀಲತೆ ಹಾಗೂ ಎಲೆಕ್ಟ್ರಾನಿಕ್ಸ್ ಮತ್ತು ಐಟಿ ರಾಜ್ಯ ಖಾತೆ ಸಚಿವ  ಶ್ರೀ ರಾಜೀವ್ ರಾಜೀವ್ ಚಂದ್ರಶೇಖರ್ 

ಯುವ ಭಾರತೀಯರಿಗೆ ತಮ್ಮ ಹಕ್ಕುಗಳನ್ನು ರಕ್ಷಿಸುವ ಜೊತೆಗೆ ಹೆಚ್ಚು ಹೆಚ್ಚು ಅವಕಾಶಗಳನ್ನು ಸೃಷ್ಟಿಸುವ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರ ದೃಷ್ಟಿಕೋನಕ್ಕೆ ಡಿಪಿಡಿಪಿಯು ಹೊಂದಿಕೆಯಾಗಿ ಜೊತೆ ಸೇರುತ್ತದೆ: ಕೇಂದ್ರ ಕೌಶಲ್ಯಾಭಿವೃದ್ಧಿ ಮತ್ತು ಉದ್ಯಮಶೀಲತೆ ಹಾಗೂ ಎಲೆಕ್ಟ್ರಾನಿಕ್ಸ್ ಮತ್ತು ಐಟಿ ರಾಜ್ಯ ಖಾತೆ ಸಚಿವ  ಶ್ರೀ ರಾಜೀವ್ ಚಂದ್ರಶೇಖರ್ 

ಬೆಂಗಳೂರಿನಲ್ಲಿಂದು ಜರುಗಿದ ಡಿಪಿಡಿಪಿ ಕಾರ್ಯಕ್ರಮದಲ್ಲಿ ಯುವ ಭಾರತೀಯರು ಮತ್ತು ಸ್ಟಾರ್ಟ್ಅಪ್ ಗಳೊಂದಿಗೆ ಕೇಂದ್ರ ಕೌಶಲ್ಯಾಭಿವೃದ್ಧಿ ಮತ್ತು ಉದ್ಯಮಶೀಲತೆ ಹಾಗೂ ಎಲೆಕ್ಟ್ರಾನಿಕ್ಸ್ ಮತ್ತು ಐಟಿ ರಾಜ್ಯ ಖಾತೆ ಸಚಿವ  ಶ್ರೀ ರಾಜೀವ್ ಚಂದ್ರಶೇಖರ್ ಅವರು ಸಂವಾದ ನಡೆಸಿದರು

Posted On: 13 AUG 2023 5:47PM by PIB Bengaluru

ರಾಜ್ಯದ ವಿದ್ಯಾರ್ಥಿಗಳು, ಸ್ಟಾರ್ಟ್ಅಪ್ ಗಳು ಮತ್ತು ಪ್ರಮುಖ ನಾಗರಿಕರೊಂದಿಗೆ 13.08.2023 (ಶನಿವಾರ) ರಂದು ಬೆಂಗಳೂರಿನಲ್ಲಿ ನಡೆದ ಸಂವಾದದಲ್ಲಿ ಕೇಂದ್ರ ಕೌಶಲ್ಯಾಭಿವೃದ್ಧಿ ಮತ್ತು ಉದ್ಯಮಶೀಲತೆ ಹಾಗೂ ಎಲೆಕ್ಟ್ರಾನಿಕ್ಸ್ ಮತ್ತು ಐಟಿ ರಾಜ್ಯ ಖಾತೆ ಸಚಿವ ಶ್ರೀ ರಾಜೀವ್ ಚಂದ್ರಶೇಖರ್ ಅವರು ಭಾಗವಹಿಸಿದರು. ಸಂವಾದ ರೀತಿಯ ಈ ಅಧಿವೇಶನದಲ್ಲಿ, ಅವರು ಐತಿಹಾಸಿಕ ವೈಯಕ್ತಿಕ ಡಿಜಿಟಲ್ ಡೇಟಾ ಸಂರಕ್ಷಣಾ (ಡಿಪಿಡಿಪಿ) ಕಾಯಿದೆಯ ರಚನೆಯ ಹಿಂದಿನ ವಿಧಿ-ವಿಧಾನಗಳ ಪ್ರಯಾಸ ಹಾಗೂ ಪ್ರಯಾಣಗಳನ್ನು ವಿವರಿಸಿದರು. ಪ್ರಾರಂಭ ಹಂತದಿಂದ ಅದರ ಪ್ರಸ್ತುತ ಸ್ಥಿತಿಗೆ ಕಾನೂನಿ ರೂಪದಲ್ಲಿ ತರಲು ರೂಪಿಸಿದ ಸಂಪೂರ್ಣ ಕ್ರಮಗಳ ಪಠ್ಯ(ಕೋರ್ಸ್) ವನ್ನು ಪಟ್ಟಿ ಮಾಡಿದರು. 2010 ರಲ್ಲಿ, ಯು.ಪಿ.ಎ ಅವಧಿಯಲ್ಲಿ ಅವರು ಸಂಸದೀಯ ಚರ್ಚೆಯ ವಿಷಯವಾಗಿ ಖಾಸಗಿ ಪರಿಕಲ್ಪನೆಯನ್ನು ಪರಿಚಯಿಸಿದಾಗ ಈ ಕುರಿತು ಚಿಂತನೆ ಪ್ರಾರಂಭವಾಯಿತು” ಎಂದು ಅವರು ತಮ್ಮ ಅನುಭವವನ್ನು ಹಂಚಿಕೊಳ್ಳುತ್ತಾ ತಿಳಿಸಿದರು

“ವೈಯಕ್ತಿಕ ಡಿಜಿಟಲ್ ಡೇಟಾ ಸಂರಕ್ಷಣಾ (ಡಿಪಿಡಿಪಿ) ಕಾಯಿದೆಯು ( ಡಿಜಿಟಲ್ ಪರ್ಸನಲ್ ಡಾಟಾ ಪ್ರೊಟೆಕ್ಷನ್ ಆಕ್ಟ್) ವಿಶ್ವ ದರ್ಜೆಯ ಶಾಸನವಾಗಿದೆ. ಆಗಸ್ಟ್ 15, 2021 ರಂದು, ನಮ್ಮ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ನಾಳೆ ಉದ್ಯೋಗಿಗಳ ಭಾಗವಾಗಲಿರುವ ವಿದ್ಯಾರ್ಥಿಗಳು, ಯುವ ಭಾರತೀಯರಿಗೆ ತಾಂತ್ರಿಕ ಅವಕಾಶಗಳಿಂದ ತುಂಬಿರುವ ಭವಿಷ್ಯದ ಅವರ ದೃಷ್ಟಿಕೋನವನ್ನು ಪ್ರತಿಬಿಂಬಿಸುವ 'ಟೆಚಡೆ(techade)' ಎಂಬ ಪದವನ್ನು ಪರಿಚಯಿಸಿದರು. ನಾನಿಂದು ಹಿಂತಿರುಗಿ ನೋಡಿದಾಗ, 2010 ರ ಕಾಲಘಟ್ಟದಲ್ಲಿ ನಾನು ಸಂಸದನಾಗಿದ್ದಾಗ, ಖಾಸಗಿ ಸದಸ್ಯರ ಮಸೂದೆಯನ್ನು ಸಂಸತ್ತಿನಲ್ಲಿ ಮಂಡಿಸಿದ್ದೆ, ಖಾಸಗಿತನವನ್ನು ಮೂಲಭೂತ ಹಕ್ಕಾಗಿ ಗುರುತಿಸುವಂತೆ ಸರ್ಕಾರವನ್ನು ಕೇಳಿದೆ. ದುರದೃಷ್ಟವಶಾತ್, ಆ ಸಮಯದಲ್ಲಿ ಅಂದಿನ ಅಧಿಕಾರರೂಢ ಸರ್ಕಾರವು ಇದು ಒಂದು ಅಗತ್ಯ ವಿಷಯ-ಚರ್ಚೆ ಎಂದು ಭಾವಿಸಲಿಲ್ಲ. ಮೂಲಭೂತವಾಗಿ ಈ ದೇಶದ ನಾಗರಿಕರ ವೈಯಕ್ತಿಕ ಡಿಜಿಟಲ್ ಡೇಟಾವು ಲಭ್ಯವಿತ್ತು ಮತ್ತು ಶೋಷಣೆಗೆ, ಅವಕಾಶಗಳನ್ನು ಸೃಷ್ಠಿಸುತ್ತಿತ್ತು ” ಎಂದು ಕೇಂದ್ರ ಸಚಿವರು ತಮ್ಮ ಸಂವಾದದಲ್ಲಿ ಹೇಳಿದರು. 

ಈ ಕಾನೂನು ಹೇಗೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರ ದೂರದೃಷ್ಟಿಯೊಂದಿಗೆ ಒಂದು ವಿಶಾಲವಾದ ಧ್ಯೇಯೋದ್ದೇಶದಲ್ಲಿ ಸಂಯೋಜನೆಗೊಳ್ಳುತ್ತದೆ, ಡಿಜಿಟಲ್ ವೇದಿಕೆಯ ಜವಾಬ್ದಾರಿಗಳೊಂದಿಗೆ ಭಾರತೀಯ ಅವಶ್ಯಕತೆಗಳಿಗೆ ಅನುಗುಣವಾಗಿ ಸಮಕಾಲೀನ ಮತ್ತು ಸಂಬಂಧಿತ ಕಾನೂನುಗಳನ್ನು ಸ್ಥಾಪಿಸುವ ಗುರಿಯನ್ನು ಈ ದೃಷ್ಟಿಕೋನ ಹೊಂದಿದೆ ಎಂಬುದನ್ನು ಕೇಂದ್ರ ಸಚಿವ ಶ್ರೀ ರಾಜೀವ್ ಚಂದ್ರಶೇಖರ್ ಅವರು ವಿವರಿಸಿದರು. 

“ಮುಂಬರುವ ಇದರ ಒಡನಾಡಿ/ಜೊತೆ (ಕಂಪ್ಯಾನಿಯನ್) ಶಾಸನವನ್ನು ಡಿಜಿಟಲ್ ಇಂಡಿಯಾ ಆಕ್ಟ್ ಎಂದು ಕರೆಯಲಾಗುತ್ತದೆ, ಇದು 22 ವರ್ಷ ಹಳೆಯ ಐಟಿ ಕಾಯಿದೆಯನ್ನು ಬದಲಿಸಲು ಸಿದ್ಧವಾಗಿದೆ. ತಂತ್ರಜ್ಞಾನ ಕ್ಷೇತ್ರದ ಸಂಪೂರ್ಣ ಪರಿಸರ ವ್ಯವಸ್ಥೆಯೊಂದಿಗೆ ಡಿಜಿಟಲ್ ಇಂಡಿಯಾ ಆಕ್ಟ್ ವ್ಯವಹರಿಸುತ್ತದೆ. ಹಿಂದೆ, ನಮ್ಮ ದೇಶದಲ್ಲಿ ಡೇಟಾ ಗೌಪ್ಯತೆ ಸಂಭಾಷಣೆಗಳು ಜಿಡಿಪಿಆರ್ ನೊಂದಿಗೆ ಪ್ರಾರಂಭವಾಗುತ್ತಿತ್ತು ಮತ್ತು ಅದರಲ್ಲಿಯೇ ಕೊನೆಗೊಳ್ಳುತ್ತಿತ್ತು. ವಿದೇಶಿ ಹಿನ್ನಲೆಯ ಯಾವುದೇ ಆದರೂ ಕೂಡಾ, ಅತ್ಯುತ್ತಮವೆಂದು ಪರಿಗಣಿಸುವುದು ನಮ್ಮಲ್ಲಿ ಬಹುತೇಕ ಪ್ರವೃತ್ತಿಯಾಗಿತ್ತು. ಆದರೆ ಜಿಡಿಪಿಆರ್ ನಿಂದ ಸ್ಫೂರ್ತಿ ಪಡೆಯುವ ಬದಲು ನಾವು ಭಾರತೀಯ ಮಸೂದೆಯನ್ನು ವಿನ್ಯಾಸಗೊಳಿಸಲು ನಿರ್ಧರಿಸಿದ್ದೇವೆ. ಇಂಟರ್ನೆಟ್ ಬಳಸುವ 830 ದಶಲಕ್ಷ ಭಾರತೀಯರೊಂದಿಗೆ ನಾವು ಭಾರತೀಯ ಇಂಟರ್ನೆಟ್ ಅನ್ನು ನೋಡಿದ್ದೇವೆ. 2025-26 ರ ವೇಳೆಗೆ ಅದು 1.2 ಶತಕೋಟಿ ಭಾರತೀಯರ ಪಾಲಾಗಲಿದೆ. ನಾವು ವಿಶ್ವದಲ್ಲೇ ಅತಿ ದೊಡ್ಡ ಸಂಪರ್ಕ ಹೊಂದಿರುವ ದೇಶ ಆಗಲಿದ್ದೇವೆ. ಯುರೋಪ್‌ ರಾಷ್ಟ್ರಗಳು (ಯು.ಇ)ಅಥವಾ ಸಂಯುಕ್ತ ರಾಜ್ಯಗಳಿಂದ(ಯು.ಎಸ್) ನಿಂದ ಏನನ್ನೂ ಎರವಲು ಪಡೆಯ ಬೇಕಾಗಿಲ್ಲ. ಇದರ ಬದಲು, ಭವಿಷ್ಯಕ್ಕಾಗಿ ತಂತ್ರಜ್ಞಾನದ ಕುರಿತು ಯಾವುದೇ ಸಂಭಾಷಣೆಯಲ್ಲಿ ನಮ್ಮದೇ ಆದ ಮಾನದಂಡಗಳನ್ನು ಹೊಂದಿಸಲು ನಾವು ಅರ್ಹರಾಗಿದ್ದೇವೆ.” ಎಂದು  ಕೇಂದ್ರ ಕೌಶಲ್ಯಾಭಿವೃದ್ಧಿ ಮತ್ತು ಉದ್ಯಮಶೀಲತೆ ಹಾಗೂ ಎಲೆಕ್ಟ್ರಾನಿಕ್ಸ್ ಮತ್ತು ಐಟಿ ರಾಜ್ಯ ಖಾತೆ ಸಚಿವ ಶ್ರೀ ರಾಜೀವ್ ಚಂದ್ರಶೇಖರ್ ಅವರು ಹೇಳಿದರು. 

ನಾಗರಿಕರ ವೈಯಕ್ತಿಕ ಡಿಜಿಟಲ್ ಡೇಟಾವನ್ನು ಅತ್ಯಂತ ಪ್ರಾಮುಖ್ಯತೆಯೊಂದಿಗೆ ಪರಿಗಣಿಸಲು ಕೇಂದ್ರ ಸರ್ಕಾರ ಹೊಂದಿರು ಬದ್ಧತೆಯನ್ನು ಎತ್ತಿ ತೋರಿಸುತ್ತಾ, - ಕೈಗಾರಿಕೆಗಳು ಮತ್ತು ವೇದಿಕೆಗಳು ಈ ಕಾನೂನಿಗೆ ಬದ್ಧವಾಗಿರುವುದನ್ನು ಖಚಿತಪಡಿಸಿಕೊಳ್ಳಲು ಈ ದಂಡವು ಹೇಗೆ ಪ್ರಮುಖ ಉದ್ದೇಶವನ್ನು ಪೂರೈಸುತ್ತವೆ, ಹಾಗೂ ಇದರ ಜೊತೆಗೆ, ಗಣನೀಯ ದಂಡವನ್ನು ವಿಧಿಸುವ ಮಹತ್ವವನ್ನು ಸಚಿವರು ಒತ್ತಿ ಹೇಳಿದರು. “ಈ ಕಾನೂನು ಹೊಸ ಆಡಳಿತವನ್ನು ರಚಿಸುತ್ತಿದೆ. ನಾವು ಕಂಪನಿಗಳು ಮತ್ತು ಕೈಗಾರಿಕೆಗಳಿಗೆ ಪರಿವರ್ತನೆಯ ಅವಧಿಯನ್ನು ಅನುಮತಿಸುತ್ತೇವೆ. ದುರುಪಯೋಗದ ಯುಗ, ಶೋಷಣೆಯ ಯುಗ, ಭಾರತೀಯ ನಾಗರಿಕರಿಗೆ ಹಕ್ಕುಗಳಿಲ್ಲ ಎಂದು ನಂಬುವ ಯುಗ ಈ ಕಾನೂನಿನೊಂದಿಗೆ ಕೊನೆಗೊಳ್ಳುತ್ತದೆ. ಈ ಮಸೂದೆಯು ನಾವೀನ್ಯತೆ ಪರಿಸರ ವ್ಯವಸ್ಥೆಯನ್ನು ವೇಗವರ್ಧಿಸಲು ಪ್ರಮುಖ ಬದಲಾವಣೆಯ ಹಾದಿಯಲ್ಲಿ ಪ್ರಧಾನ ಮೈಲುಗಲ್ಲಾಗಿದೆ. ಏಕೆಂದರೆ ಇದು ಗೌಪ್ಯತೆಯನ್ನು ಮೂಲಭೂತ ಹಕ್ಕು ಎಂದು ಘೋಷಿಸಿದಾಗ ಘಟಕವು ಏನು ಮಾಡಬೇಕೆಂಬುದರ ಕುರಿತಾಗಿ ಹುಟ್ಟುವ ಯಾವುದೇ ಅಸ್ಪಷ್ಟತೆಯನ್ನು ಮೂಲದಲ್ಲೇ ತೆಗೆದುಹಾಕುತ್ತದೆ. ನಾಗರಿಕರ ವೈಯ್ಯಕ್ತಿಕ ಡೇಟಾ ಉಲ್ಲಂಘನೆಯ ಸಂದರ್ಭದಲ್ಲಿ, ಅವರು ಸೂಕ್ತ ಸಂಬಂಧಿತ ವೆಬ್ಸೈಟ್ ಗೆ ಭೇಟಿ ನೀಡಬೇಕಾಗುತ್ತದೆ, ಡೇಟಾ ಸಂರಕ್ಷಣಾ ಮಂಡಳಿಗೆ ವಿವರಗಳನ್ನು ಒದಗಿಸಬೇಕು ಮತ್ತು ಮಂಡಳಿಯು ವಿಚಾರಣೆಯನ್ನು ಪ್ರಾರಂಭಿಸುತ್ತದೆ, ಉಲ್ಲಂಘನೆಯ ವೇದಿಕೆಗಳಲ್ಲಿ ದಂಡವನ್ನು ವಿಧಿಸುತ್ತದೆ. ದಂಡಗಳು ಕಠಿಣ ದಂಡನೀಯವಾಗಿರಬೇಕೆಂದು ನಾವು ಬಯಸುತ್ತೇವೆ. ಇದರಿಂದ ಡಿಜಿಟಲ್ ವೇದಿಕೆಗಳು ಇನ್ನಷ್ಟು ಬದ್ಧತಾಪೂರ್ವಕವಾಗಿ ಹಾಗೂ ಜವಾಬ್ದಾರಿಯುತವಾಗಿರಲು ಪ್ರೇರೇಪಿಸುತ್ತದೆ.” ಎಂದು ಕೇಂದ್ರ ಕೌಶಲ್ಯಾಭಿವೃದ್ಧಿ ಮತ್ತು ಉದ್ಯಮಶೀಲತೆ ಹಾಗೂ ಎಲೆಕ್ಟ್ರಾನಿಕ್ಸ್ ಮತ್ತು ಐಟಿ ರಾಜ್ಯ ಖಾತೆ ಸಚಿವ ಶ್ರೀ ರಾಜೀವ್ ಚಂದ್ರಶೇಖರ್ ಅವರು ಹೇಳಿದರು.

"ಸಂಸದ್ಧ್ವನಿ" ಎಂಬ ಸಂವಾದ ರೂಪದ ಈ ಸಭಾ ಕಾರ್ಯಕ್ರಮವು, ಬೆಂಗಳೂರು ದಕ್ಷಿಣದ ಸಂಸದ ಮತ್ತು ಭಾರತೀಯ ಜನತಾ ಯುವಮೋರ್ಚಾದ ರಾಷ್ಟ್ರೀಯ ಅಧ್ಯಕ್ಷರಾದ ಶ್ರೀ ತೇಜಸ್ವಿ ಸೂರ್ಯ ನೇತೃತ್ವದಲ್ಲಿ ನಾಗರಿಕರ ಪಾಲ್ಗೊಳ್ಳುವಿಕೆಯ ಉಪಕ್ರಮವಾಗಿದೆ.

 ಖ್ಯಾತ ಪರಿಸರವಾದಿ ಶ್ರೀಮತಿ ಶಾಲುಮರದ ತಿಮ್ಮಕ್ಕ ಅವರನ್ನು ಕೇಂದ್ರ ಕೌಶಲ್ಯಾಭಿವೃದ್ಧಿ ಮತ್ತು ಉದ್ಯಮಶೀಲತೆ ಹಾಗೂ ಎಲೆಕ್ಟ್ರಾನಿಕ್ಸ್ ಮತ್ತು ಐಟಿ ರಾಜ್ಯ ಖಾತೆ ಸಚಿವ ಶ್ರೀ ರಾಜೀವ್ ಚಂದ್ರಶೇಖರ್ ಅವರು ಅಪೋಲೋ ಆಸ್ಪತ್ರೆಯಲ್ಲಿ 13.08.2023 (ಶನಿವಾರ) ರಂದು ಭೇಟಿಯಾದರು. ಪದ್ಮಶ್ರೀ ಪ್ರಶಸ್ತಿಗೆ ಭಾಜನರಾಗಿರುವ ಅವರು ಕರ್ನಾಟಕದಲ್ಲಿ 8,000 ಕ್ಕೂ ಹೆಚ್ಚು ಮರಗಳನ್ನು ನೆಡುವ ಗಮನಾರ್ಹ ಹಾಗೂ ಪ್ರಶಂಸಾರ್ಹ ಕೆಲಸಕ್ಕೆ ಹೆಸರುವಾಸಿಯಾಗಿದ್ದಾರೆ. 


****** 



(Release ID: 1948373) Visitor Counter : 110