ಗೃಹ ವ್ಯವಹಾರಗಳ ಸಚಿವಾಲಯ

ಕೇಂದ್ರ ಗೃಹ ಮತ್ತು ಸಹಕಾರ ಸಚಿವ ಶ್ರೀ ಅಮಿತ್ ಶಾ ಒಡಿಶಾದ ಭುವನೇಶ್ವರದಲ್ಲಿಂದು ಹಲವು ಕಾರ್ಯಕ್ರಮಗಳಲ್ಲಿ ಭಾಗಿ ರೂ.761 ಕೋಟಿ ವೆಚ್ಚದ ಕಾಮಾಖ್ಯನಗರ್ - ದುಬುರಿ ವಲಯದ ನಾಲ್ಕು ಪಥಗಳ ಹೆದ್ದಾರಿ ಲೋಕಾರ್ಪಣೆ; ರೂ.34 ಕೋಟಿ ವೆಚ್ಚದ ಲಡುಗಾವ್ ಮಾರ್ಗವಾಗಿ ಮೊತೇರ್ ನಿಂದ ಬನೇರ್ ನಡುವಿನ ರಸ್ತೆ ಅಗಲೀಕರಣ ಕಾಮಗಾರಿಗೆ ಶಿಲಾನ್ಯಾಸ


ಕಾಶ್ಮೀರ ಯಾವಾಗಲೂ ಭಾರತದ ಸಮಗ್ರ ಭಾಗವಾಗಿರಲು 2019ರ ಆಗಸ್ಟ್ 5 ರಂದು ಸಂವಿಧಾನ ವಿಧಿ 370 ರದ್ದುಪಡಿಸುವ ಬಗ್ಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಂದ ಐತಿಹಾಸಿಕ ನಿರ್ಧಾರ.

ಪ್ರಸ್ತುತ ಕಾಶ್ಮೀರ ಮುಖ್ಯವಾಹಿನಿ ಸೇರಿರುವುದು ಮಾತ್ರವಲ್ಲ, ಪ್ರಗತಿಯ ಪಥದಲ್ಲಿ ಸಾಗಿದ್ದು, ಶಾಂತಿಯೂ ನೆಲೆಸಿದೆ

ಕಳೆದ 9 ವರ್ಷಗಳಲ್ಲಿ ರಾಷ್ಟ್ರದ ಅಭಿವೃದ್ಧಿ ಮತ್ತು ಆರ್ಥಿಕ ಪ್ರಗತಿ ಹೆದ್ದಾರಿಗಳೊಂದಿಗೆ ಸಂಪರ್ಕಿತವಾಗಿದೆ. ದೇಶದಲ್ಲಿ ಹೆದ್ದಾರಿಗಳ ಅಭಿವೃದ್ಧಿಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಂದ ಅನೇಕ ಕ್ರಮ  

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ದೇಶದಲ್ಲಿ ಮೂಲಸೌಕರ್ಯ ಅಭಿವೃದ್ಧಿಗೆ ಒತ್ತು, ಬಜೆಟ್ ನಲ್ಲಿ ಇದಕ್ಕೆ ಯಾವುದೇ ಕೊರತೆ ಇಲ್ಲ

,ಮೂಲಸೌರ್ಕಯ ಅಭಿವೃದ್ಧಿಯಾಗದೇ ದೇಶದ ಅಭಿವೃದ್ಧಿ ಸಾಧ್ಯವಿಲ್ಲ ಎಂಬುದು ಪ್ರಧಾನಮಂತ್ರಿ ಮೋದಿ ಅವರ ಅಭಿಮತ; ಹೆದ್ದಾರಿಗಳ ನಿರ್ಮಾಣದಲ್ಲಿ ದೇಶದಲ್ಲಿ ಆರ್ಥಿಕ ಚಟುವಟಿಕೆಗಳಿಗೆ ಚುರುಕು

ದೇಶದ ಈಶಾನ್ಯ ಪ್ರದೇಶಗಳು ಅಭಿವೃದ್ಧಿಯಾಗುವವರೆಗೂ ರಾಷ್ಟ್ರ ಸಂಪೂರ್ಣ ಅಭಿವೃದ್ಧಿ ಸಾಧಿಸಲು ಸಾಧ್ಯವಿಲ್ಲ ಎಂದು 2014 ರಲ್ಲಿಯೇ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಹೇಳಿದ್ದು, ಈಶಾನ್ಯ ಭಾಗದ ಅಭಿವೃದ್ಧಿಗೆ ಸದಾಕಾಲ ಆದ್ಯತೆ ನೀಡಿದ್ದಾರೆ

ಒಂದಾನೊಂದು ಕಾಲದಲ್ಲಿ ಇಡೀ ಪ್ರದೇಶ ನಕ್ಸಲ ಚಟುವಟಿಕೆಗಳಿಂದ ಬಾಧಿತ, ಆದರೆ ಕಳೆದ 9 ವರ್ಷಗಳಲ್ಲಿ ನರೇಂದ್ರ ಮೋದಿ ಆಡಳಿತಾವಧಿಯಲ್ಲಿ ರಾಜ್ಯ ಸರ್ಕಾರಗಳೊಂದಿಗೆ ನಕ್ಸಲರ ಅಟ್ಟಹಾಸ ತಗ್ಗಿಸುವ ಪ್ರಯತ್ನ ಯಶಸ್ವಿ

ನಕ್ಸಲರನ್ನು ಮಟ್ಟ ಹಾಕಲು ಕೇಂದ್ರ ಸರ್ಕಾರಕ್ಕೆ ಮುಖ್ಯಮಂತ್ರಿ ಶ್ರೀ ನವೀನ್ ಪಟ್ನಾಯಕ್ ಬೆಂಬಲ; ನಕ್ಸಲ್ ಚಟುವಟಿಕೆಗಳ ವಿರುದ್ಧ ಹೋರಾಡಲು ಮೋದಿ ಸರ್ಕಾರ ಬದ್ಧ

ಶ್ರೀ ನವೀನ್ ಪಟ್ನಾಯಕ್ ಅವರಿಂದ ಮೋದಿ ಸರ್ಕಾರದ ಎಲ್ಲಾ ವಿಪತ್ತು ನಿರ್ವಹಣಾ ಉಪಕ್ರಮಗಳು ತಳಮಟ್ಟದಲ್ಲಿ ಅನುಷ್ಠಾನ; ಒಡಿಶಾ ಸರ್ಕಾರದಿಂದ ನೈಸರ್ಗಿಕ

ವಿಪತ್ತು ನಿರ್ವಹಣೆಗೆ ಅನೇಕ ಹೊಸ ಉಪಕ್ರಮ; ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಒಟ್ಟಾಗಿ ಕಾರ್ಯನಿರ್ವಹಿಸಿದಲ್ಲಿ ಯಾವುದೇ ನೈಸರ್ಗಿಕ ವಿಪತ್ತು ನಿರ್ವಹಣೆ ಸಾಧ್ಯ ಎಂಬುದು ಸಾಬೀತು

1999 ರಲ್ಲಿ ಒಡಿಶಾದಲ್ಲಿ ಅಪ್ಪಳಿಸಿದ ಚಂಡಮಾರುತದಲ್ಲಿ ಸಾವಿರಾರು ಜನರ ಸಾವು, ಪ್ರಸ್ತುತ ಒಡಿಶಾದಲ್ಲಿ ಚಂಡಮಾರುತದಿಂದ ಯಾವುದೇ ಸಾವು-ನೋವು ಇಲ್ಲ - ಈ ಉಪಕ್ರಮಗಳಿಗೆ ಇಡೀ ಜಗತ್ತಿನ ಶ್ಲಾಘನೆ

ಎನ್ ಡಿ ಆರ್ ಎಫ್ ಮತ್ತು ಎನ್ ಡಿ ಎಂ ಎ ಮೂಲಕ ವಿಪತ್ತು ನಿರ್ವಹಣೆ ಆಡಳಿತದ ಪ್ರಮುಖ ಮತ್ತು ಸಮಗ್ರ ಭಾಗ; ಒಡಿಶಾ ಸರ್ಕಾರದ ಸಂಪೂರ್ಣ ಬೆಂಬಲ

Posted On: 05 AUG 2023 4:08PM by PIB Bengaluru

ಒಡಿಶಾದ ಭುವನೇಶ್ವರದಲ್ಲಿಂದು ಕಾಮಾಖ್ಯನಗರ್ - ದುಬುರಿ ವಲಯದ 761 ಕೋಟಿ ರೂಪಾಯಿ ವೆಚ್ಚದ ಚತುಷ್ಪಥ ಅಗಲೀಕೃತ ರಸ್ತೆಯನ್ನು ಕೇಂದ್ರ ಗೃಹ ಮತ್ತು ಸಹಕಾರ ಸಚಿವ ಶ್ರೀ ಅಮಿತ್ ಶಾ ಲೋಕಾರ್ಪಣೆ ಮಾಡಿದರು. ಲಡುಗಾವ್ ಮಾರ್ಗವಾಗಿ ಮೋತಾರ್ ನಿಂದ ಬನೇರ್ ನಡುವಣ ರೂ. 34 ಕೋಟಿ ವೆಚ್ಚದ ರಸ್ತೆ ಅಗಲೀಕರಣ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿದರು. ಒಡಿಶಾ ಮುಖ್ಯಮಂತ್ರಿ ಶ್ರೀ.ನವೀನ್ ಪಟ್ನಾಯಕ್, ಕೇಂದ್ರ ಶಿಕ್ಷಣ ಮತ್ತು ಕೌಶಲ್ಯಾಭಿವೃದ್ಧಿ ಸಚಿವ ಶ್ರೀ. ಧರ್ಮೇಂದ್ರ ಪ್ರಧಾನ್ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು. 

ಕಾರ್ಯಕ್ರಮದಲ್ಲಿ ಮಾತನಾಡಿದ ಕೇಂದ್ರ ಗೃಹ ಸಚಿವ ಅಮಿತ್ ಶಾ, 2019ರ ಆಗಸ್ಟ್ 5 ರಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಕಾಶ್ಮೀರವನ್ನು ಭಾರತದ ಸಮಗ್ರ ಭಾಗವಾಗಿಸಲು ಸಂವಿಧಾನ ವಿಧಿ 370 ಅನ್ನು ರದ್ದುಗೊಳಿಸುವ ಐತಿಹಾಸಿಕ ನಿರ್ಧಾರ ಪ್ರಕಟಿಸಿದರು. ಇದರಿಂದ ಪ್ರಸ್ತುತ ಕಾಶ್ಮೀರ, ಮುಖ್ಯವಾಹಿನಿಗೆ ಸೇರ್ಪಡೆಯಾಗುವ ಜೊತೆಗೆ ಅಭಿವೃದ್ಧಿಯ ಪಥದಲ್ಲಿ ಸಾಗಿದೆ, ಅಷ್ಟೇ ಅಲ್ಲ ಅಲ್ಲಿ ಶಾಂತಿಯೂ ನೆಲಿಸಿದೆ ಎಂದು ಹೇಳಿದರು. 

ಅಗಲೀಕೃತ ಕಾಮಾಖ್ಯನಗರ್ - ದುಬುರಿ ನಾಲ್ಕುಪಥಗಳ ಹೆದ್ದಾಗಿ ಇಂದು ರಾಷ್ಟ್ರಕ್ಕೆ ಸಮರ್ಪಣೆಯಾಗಿದೆ. ಈ 51 ಕಿಲೋಮೀಟರ್ ಉದ್ದದ ರಸ್ತೆ ಅಗಲೀಕರಣ ಕಾಮಗಾರಿಗಾರಿ 761 ಕೋಟಿ ರೂಪಾಯಿ ವೆಚ್ಚ ಮಾಡಲಾಗಿದೆ. ಖನಿಜಗಳ ಆಗರ ಅಂಗುಲ್ ಮತ್ತು ಧೇನ್ಕನಲ್ ಜಿಲ್ಲೆಗಳನ್ನು ಒಡಿಶಾದ ಇತರ ಪ್ರದೇಶಗಳೊಂದಿಗೆ ಸಂಪರ್ಕಿಸುವಲ್ಲಿ ಈ ಹೆದ್ದಾರಿ ಪ್ರಮುಖವಾಗಿದೆ ಎಂದು ಶ್ರೀ ಅಮಿತ್ ಶಾ ಹೇಳಿದ್ದಾರೆ.  ದೇಶದ ಅಭಿವೃದ್ಧಿ ಮತ್ತು ಆರ್ಥಿಕ ಪ್ರಗತಿಗೆ ಹೆದ್ದಾರಿಗಳೂ ಕೊಡುಗೆ ನೀಡಿದ್ದು, ಹೆದ್ದಾರಿಗಳ ಅಭಿವೃದ್ಧಿಗೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಕಳೆದ 9 ವರ್ಷಗಳಲ್ಲಿ ಅಪಾರವಾಗಿ ಶ್ರಮಿಸಿದ್ದಾರೆ. ಇಂದು ಕಲಾಹಂದಿಯಲ್ಲಿರುವ ಮೊತೇರ್ ನಿಂದ ಲಾಡುಗಾವ್ ಮಾರ್ಗವಾಗಿ ಬನೇರ್ ವರೆಗೆ ರಸ್ತೆ ಅಗಲೀಕರಣಕ್ಕೆ ಕಾಮಗಾಗಿ ಆರಂಭವಾಗಿದೆ. 15 ಕಿಲೋಮೀಟರ್ ಉದ್ದದ ಈ ರಸ್ತೆ ಕಾಮಗಾರಿಗೆ 34 ಕೋಟಿ ರೂಪಾಯಿ ವೆಚ್ಚವಾಗಲಿದೆ ಎಂದು ಅಮಿತ್ ಶಾ ಹೇಳಿದ್ದಾರೆ.

ಮೂಲಸೌಕರ್ಯ ಅಭಿವೃದ್ಧಿಯಾಗದೇ ದೇಶದ ಪ್ರಗತಿ ಸಾಧ್ಯವಿಲ್ಲ ಎಂದು  ಮನಗಂಡಿರುವ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಕಳೆದ 9 ವರ್ಷಗಳಲ್ಲಿ ದೇಶದಲ್ಲಿ ಮೂಲಸೌಕರ್ಯ ಅಭಿವೃದ್ಧಿಗೆ ಸಾಕಷ್ಟು ಆದ್ಯತೆ ನೀಡಿದ್ದಾರೆ. ಇದಕ್ಕಾಗಿ ಬಜೆಟ್ ನಲ್ಲಿ ಯಾವುದೇ ಕೊರೆತೆಯಾಗಿಲ್ಲ. ಪ್ರಧಾನಿ ಅವರ ನಾಯಕತ್ವದಲ್ಲಿ ವೈಜ್ಞಾನಿಕ ವಿಧಾನಗಳ ಅಳವಡಿಕೆ ಮೂಲಕ ಹೆದ್ದಾರಿಗಳ ನಿರ್ಮಾಣ ಕಾರ್ಯ ಚುರುಕುಗೊಂಡಿದೆ. ಫಾಸ್ಟ್ ಟ್ಯಾಗ್ ಮೂಲಕ ಶೀಘ್ರವಾಗಿ ಟೋಲ್ ಶುಲ್ಕ ಸಂಗ್ರಹ, ಸಮರ್ಥ ಭೂ ಸ್ವಾಧೀನ ಪ್ರಕ್ರಿಯೆ, ವಿವಾದಗಳ ಶೀಘ್ರ ಇತ್ಯರ್ಥ, ಮಾಹಿತಿ ತಂತ್ರಜ್ಞಾನಕ್ಕೆ ಒತ್ತು, ನಿಧಿ ಸಂಗ್ರಹಕ್ಕೆ ಪರ್ಯಾಯ ವಿಧಾನಗಳ ಹುಡುಕಾಟ ಮೊದಲಾದವುಗಳನ್ನು ಅಳವಡಿಸಿಕೊಳ್ಳಲಾಗಿದೆ. ದೇಶದಲ್ಲಿ ಹೆದ್ದಾರಿಗಳ ನಿರ್ಮಾಣದಿಂದಾಗಿ ಆರ್ಥಿಕ ಚಟುವಟಿಕೆ ಚುರುಕುಗೊಳ್ಳಲಿದೆ ಎಂದು ಶ್ರೀ ಅಮಿತ್ ಶಾ ಹೇಳಿದ್ದಾರೆ. 

ಒಡಿಶಾದಲ್ಲಿ ಮೋದಿ ನೇತೃತ್ವದ ಸರ್ಕಾರ ಅನೇಕ ಅಭಿವೃದ್ಧಿ ಯೋಜನೆಗಳನ್ನು ಆರಂಭಿಸಿದ್ದು, ಇದು ರಾಜ್ಯದ ಆರ್ಥಿಕತೆಗೆ ಉತ್ತೇಜನ ನೀಡಿದೆ. ಈಶಾನ್ಯ ರಾಜ್ಯಗಳ ಅಭಿವೃದ್ಧಿಯಾಗದೇ ದೇಶ ಸಂಪೂರ್ಣವಾಗಿ ಅಭಿವೃದ್ಧಿ ಹೊಂದಲು ಸಾಧ್ಯವಿಲ್ಲ ಎಂದು 2014 ರಲ್ಲಿಯೇ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಹೇಳಿದ್ದರು. ದೇಶದ ಪೂರ್ವ ಮತ್ತು ಪಶ್ಚಿಮ ಭಾಗಗಳಲ್ಲಿ ಅಭಿವೃದ್ಧಿಯ ಸಮತೋಲನ ಸಾಧಿಸಿದಾಗ ಮಾತ್ರ ದೇಶ ಅಭಿವೃದ್ಧಿಯಾಗಲು ಸಾಧ್ಯ. ಹೀಗಾಗಿ ಈಶಾನ್ಯ ಪ್ರದೇಶದಲ್ಲಿ ಅಭಿವೃದ್ಧಿಗೆ ಕೇಂದ್ರ ಸರ್ಕಾರ ಒತ್ತು ನೀಡಿದ್ದು, ಒಡಿಶಾ ರಾಜ್ಯಕ್ಕೂ ವಿಶೇಷ ಗಮನ ನೀಡಲಾಗಿದೆ. ಒಂದಾನೊಂದು ಕಾಲದಲ್ಲಿ ಇಡೀ ಪ್ರದೇಶ ನಕ್ಸಲರಿಂದ ಬಾಧಿತವಾಗಿದ್ದು, ಕಳೆದ 9 ವರ್ಷ ಮೋದಿ ನೇತೃತ್ವದ ಸರ್ಕಾರ ಮತ್ತು ರಾಜ್ಯ ಸರ್ಕಾರದ ಜಂಟಿ ಉಪಕ್ರಮಗಳ ಪರಿಣಾಮವಾಗಿ ಈ ಪ್ರದೇಶದಲ್ಲಿ ನಕ್ಸಲರ ಅಟ್ಟಹಾಸ ಕಡಿಮೆ ಮಾಡಲು ಸಾಧ್ಯವಾಗಿದೆ. ಒಡಿಶಾ ಮತ್ತು ಅಲ್ಲಿನ ಮುಖ್ಯಮಂತ್ರಿ ಶ್ರೀ ನವೀನ್ ಪಟ್ನಾಯಕ್ ನಕ್ಸಲ್ ನಿಗ್ರಹಕ್ಕೆ ಕೇಂದ್ರ ಸರ್ಕಾರಕ್ಕೆ ಸದಾ ಬೆಂಬಲ ನೀಡಿದ್ದು, ನಕ್ಸಲ್ ಚಟುವಟಿಕೆಗಳನ್ನು ಸಂಪೂರ್ಣವಾಗಿ ನಿಗ್ರಹಿಸಲು ಕೇಂದ್ರ ಸರ್ಕಾರ ಬದ್ಧವಾಗಿದೆ ಎಂದು ಅಮಿತ್ ಶಾ ಹೇಳಿದ್ದಾರೆ. 

ಒಡಿಶಾದ ಅಭಿವೃದ್ಧಿಗಾಗಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಹಲವು ಕ್ರಮಗಳನ್ನು ಕೈಗೊಂಡಿದೆ. ಹಿಂದಿನ ಸರ್ಕಾರ ವಿಕಸನ ಮತ್ತು ಅನುದಾನ ನೆರವಾಗಿ ರೂ.1,14,000 ಕೋಟಿ ನೀಡಿದ್ದರೆ, ಮೋದಿ ನೇತೃತ್ವದ ಸರ್ಕಾರ ರೂ.4,57,000 ಕೋಟಿ ನೆರವನ್ನು ನೀಡಿದೆ. ಇದರ ಜೊತಗೆ, ಅನುದಾನ ಹಂಚಿಕೆಯನ್ನು3 ಲಕ್ಷ ಕೋಟಿ ರೂಪಾಯಿಯಿಂದ 18 ಲಕ್ಷ ಕೋಟಿ ರೂಪಾಯಿಗೆ ಅನುದಾನ ಮೊತ್ತವನ್ನು ಸುಮಾರು 6 ಪಟ್ಟು ಹೆಚ್ಚಿಸಲು ಮೋದಿ ಸರ್ಕಾರ ಕ್ರಮ ಕೈಗೊಂಡಿದೆ. ಒಡಿಶಾದಲ್ಲಿ ರೈಲ್ವೆಗಾಗಿ 10 ಸಾವಿರ ಕೋಟಿ ರೂಪಾಯಿ, ಭಾರತೀಯ ತೈಲ ಕೊಳವೆಮಾರ್ಗವನ್ನು 800 ಕೋಟಿ ರೂಪಾಯಿ ವೆಚ್ಚದಲ್ಲಿ ಪ್ರಧಾನಮಂತ್ರಿ ಮೋದಿ ಒದಗಿಸಿದ್ದು, ಭುವನೇಶ್ವರದಲ್ಲಿ ಐಐಟಿ ನಿರ್ಮಾಣ, ಭಾರತೀಯ ವಿಜ್ಞಾನ ಶಿಕ್ಷಣ ಮತ್ತು ಸಂಶೋಧನಾ ಸಂಸ್ಥೆ ಸ್ಥಾಪನೆ, 1500 ಹಾಸಿಗೆಗಳ ಎಐಐಎಂಎಸ್ ಆಸ್ಪತ್ರೆ ನಿರ್ಮಾಣದ ಜೊತೆಗೆ ಇಎಸ್ಐಸಿ ಆಸ್ಪತ್ರೆ ಮೇಲ್ದರ್ಜೆಗೇರಿಸುವ ಕಾರ್ಯಕ್ಕೆ ಕೇಂದ್ರ ನೆರವು ನೀಡಿದೆ ಎಂದು ಅಮಿತ್ ಶಾ ಹೇಳಿದರು.

ಒಡಿಶಾದ ಅಭಿವೃದ್ಧಿಗೆ ಇರುವ ಎಲ್ಲ ಅವಕಾಶಗಳ ಸದ್ಬಳಕೆಯ ಗುರಿ ಹೊಂದಲಾಗಿದೆ. ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ ರಾಜ್ಯದ 40 ಲಕ್ಷ ರೈತರಿಗೆ ಅನುಕೂಲವಾಗಿದೆ; ಜಲಜೀವ್ ಮಿಷನ್ ಯೋಜನೆಯಿಂದಾಗಿ 54 ಲಕ್ಷ ಮನೆಗಳಿಗೆ ಶುದ್ಧ ಕುಡಿಯುವ ನೀರು ದೊರೆತಿದೆ; 90 ಲಕ್ಷ ಶೌಚಾಲಯಗಳ ನಿರ್ಮಾಣವಾಗಿದೆ; 3.25 ಕೋಟಿ ಜನರಿಗೆ ಪ್ರತಿ ತಿಂಗಳು ಪ್ರತಿ ವ್ಯಕ್ತಿಗೆ 5 ಕೆ.ಜಿ. ಅಕ್ಕಿ ಉಚಿತವಾಗಿ ನೀಡಲಾಗುತ್ತಿದೆ; 6 ಲಕ್ಷ ಉಜ್ವಲ ಸಂಪರ್ಕಗಳನ್ನು ನೀಡಲಾಗಿದೆ; 17 ಲಕ್ಷ ಗ್ರಾಮಸ್ಥರಿಗೆ ಮನೆ ನಿರ್ಮಿಸಿಕೊಡಲಾಗಿದೆ. ಈ ಎಲ್ಲಾ ಕ್ರಮಗಳನ್ನು ನರೇಂದ್ರ ಮೋದಿ ಸರ್ಕಾರ ಕೈಗೊಂಡಿದೆ. 

ಒಡಿಶಾ ರಾಜ್ಯ, ನೈಸರ್ಗಿಕ ವಿಕೋಪಗಳಿಗೆ ಸುಲಭವಾಗಿ ತುತ್ತಾಗುವ ರಾಜ್ಯವಾಗಿದೆಯಾದರೂ ಮುಖ್ಯಮಂತ್ರಿ ಶ್ರೀ ನವೀನ್ ಪಟ್ನಾಯಕ್ ಅವರು ಕೇಂದ್ರ ಸರ್ಕಾರದ ಪ್ರತಿಯೊಂದು ವಿಪತ್ತು ನಿರ್ವಹಣಾ ಉಪಕ್ರಮಗಳನ್ನು ಅನುಷ್ಠಾನ ಮಾಡಿದ್ಧಾರೆ. ಇದರ ಜೊತೆಗೆ, ಒಡಿಶಾ ಸರ್ಕಾರ ನೈಸರ್ಗಿಕ ವಿಕೋಪಗಳ ನಿರ್ವಹಣೆಗೆ ಸ್ವತಃ ಅನೇಕ ಹೊಸ ಉಪಕ್ರಮಗಳನ್ನು ಕೈಗೊಂಡಿದೆ. ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಜಂಟಿಯಾಗಿ ಶ್ರಮಿಸಿದರೆ ಯಾವುದೇ ಪ್ರಕೃತಿ ವಿಕೋಪವನ್ನು ನಿರ್ವಹಿಸಬಹುದು ಎಂಬುದಕ್ಕೆ ಒಡಿಶಾ ಸಾಕ್ಷಿಯಾಗಿದೆ ಎಂದು ಸಚಿವರು ಹೇಳಿದ್ದಾರೆ.

1999 ರಲ್ಲಿ ಒಡಿಶಾದಲ್ಲಿ ಅಪ್ಪಳಿಸಿದ ಚಂಡಮಾರುತದಲ್ಲಿ ಸಾವಿರಾರು ಜನರು ಪ್ರಾಣ ಕಳೆದುಕೊಂಡಿದ್ದರು.  ಆದರೆ ಈಗ ಒಡಿಶಾದಲ್ಲಿ ಯಾವುದೇ ಚಂಡಮಾರುತ ಅಪ್ಪಳಿಸಿದರೂ, ಸಾವು-ನೋವುಗಳಾಗುವುದಿಲ್ಲ. ಇದಕ್ಕೆ ವಿಶ್ವದೆಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿದೆ. ಎನ್ ಡಿ ಆರ್ ಎಫ್ ಮತ್ತು ಎನ್ ಡಿ ಎಮ್ ಎ ಮೂಲಕ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ವಿಪತ್ತು ನಿರ್ವಹಣೆಯನ್ನು ಆಡಳಿತದ ಪ್ರಮುಖ ಭಾಗವನ್ನಾಗಿಸಿದ್ದಾರೆ ಮತ್ತು ಒಡಿಶಾ ಸರ್ಕಾರದ ಇದಕ್ಕೆ ಸಂಪೂರ್ಣ ಬೆಂಬಲ ನೀಡಿದೆ ಎಂದು ಶ್ರೀ ಅಮಿತ್ ಶಾ ಇದೇ ವೇಳೆ ಹರ್ಷ ವ್ಯಕ್ತಪಡಿಸಿದರು.

****



(Release ID: 1946083) Visitor Counter : 120


Read this release in: English , Urdu , Marathi , Odia , Tamil