ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ

ಐಐಟಿ ಮದ್ರಾಸ್ ಆಗಸ್ಟ್ 6 ರಂದು ಆಯೋಜಿಸುತ್ತಿರುವ ‘ಡಿಜಿಟಲ್ ಇಂಡಿಯಾ ಆರ್.ಐ.ಎಸ್.ಸಿ - ವಿ’ ವಿಚಾರ ಗೋಷ್ಠಿಯಲ್ಲಿ ಭಾಗವಹಿಸಲಿರುವ  ಕೇಂದ್ರ ವಾಣಿಜ್ಯೋದ್ಯಮ, ಕೌಶಲ್ಯಾಭಿವೃದ್ಧಿ, ಎಲೆಕ್ಟ್ರಾನಿಕ್ಸ್ ಮತ್ತು ಐ.ಟಿ. ರಾಜ್ಯ ಖಾತೆ ಸಚಿವ ಶ್ರೀ ರಾಜೀವ್ ಚಂದ್ರಶೇಖರ್

Posted On: 05 AUG 2023 12:23PM by PIB Bengaluru

ಐಐಟಿ ಮದ್ರಾಸ್ ಮತ್ತು ಐಐಟಿ-ಎಂ ಪ್ರವರ್ತಕ್ ಟೆಕ್ನಾಲಜೀಸ್ ಫೌಂಡೇಶನ್ ಜಂಟಿಯಾಗಿ ನಾಳೆ (ಆಗಸ್ಟ್ 6 , 2023 ಭಾನುವಾರ) ಚೆನ್ನೈನಲ್ಲಿ ಆಯೋಜಿಸಿರುವ ‘ಡಿಜಿಟಲ್ ಇಂಡಿಯಾ ಆರ್.ಐ.ಎಸ್.ಸಿ-ವಿ’ ವಿಚಾರ ಸಂಕಿರಣದಲ್ಲಿ ಕೇಂದ್ರ ವಾಣಿಜ್ಯೋದ್ಯಮ, ಕೌಶಲ್ಯಾಭಿವೃದ್ಧಿ, ಎಲೆಕ್ಟ್ರಾನಿಕ್ಸ್ ಮತ್ತು ಐಟಿ ರಾಜ್ಯ ಖಾತೆ ಸಚಿವ ಶ್ರೀ ರಾಜೀವ್ ಚಂದ್ರಶೇಖರ್ ಭಾಗವಹಿಸಲಿದ್ದಾರೆ.

“ ಆರ್.ಐ.ಎಸ್.ಸಿ-ವಿ’ ಮೂಲಕ ಭಾರತದಲ್ಲಿ ಎಲೆಕ್ಟ್ರಾನಿಕ್ಸ್ ಭವಿಷ್ಯ “ ಎಂಬ ಆಶಯದಲ್ಲಿ ಪ್ರದರ್ಶಿಸುವ ವಿವಿಧ ಈವೆಂಟ್ , ಸಂವಾದ, ಹಾಗೂ ಗೋಷ್ಠಿಗಳಲ್ಲಿ ವಿದ್ಯಾರ್ಥಿಗಳು, ಉದ್ಯಮದ ವೃತ್ತಿಪರರು, ಸಂಶೋಧಕರು ಭಾಗವಹಿಸಲಿದ್ದಾರೆ. ಭಾರತದಲ್ಲಿ ಬೆಳೆಯುತ್ತಿರುವ ಆರ್.ಐ.ಎಸ್.ಸಿ-ವಿ’ ಪರಿಸರ ವ್ಯವಸ್ಥೆಯ ಬಗ್ಗೆ ಒಳನೋಟಗಳನ್ನು ಪಡೆಯಲು ಇವರೆಲ್ಲರೂ ಉತ್ಸುಕರಾಗಿರುವ ಭಾಗವಹಿಸಲಿದ್ದಾರೆ.

ಇತರ ಗಣ್ಯರೊಂದಿಗೆ, ಕೇಂದ್ರ ಸಚಿವ ಶ್ರೀ ರಾಜೀವ್ ಚಂದ್ರಶೇಖರ್ ಮತ್ತು ಐಐಟಿ ಮದ್ರಾನ್ ಇದರ ನಿರ್ದೇಶಕ ಪ್ರೊಫೆಸರ್ ಶ್ರೀ ವಿ. ಕಾಮಕೋಟಿ ಅವರು ಸಮಾರಂಭವನ್ನು ಉದ್ದೇಶಿಸಿ ಭಾಷಣ ಮಾಡಲಿದ್ದಾರೆ.

ಶಿಕ್ಷಣ ತಜ್ಞರು ಮತ್ತು ಉದ್ಯಮ ತಜ್ಞರಿಂದ ಉದ್ಯಮಕ್ಷೇತ್ರ ಕುರಿತು ಮಾಹಿತಿಪೂರ್ಣ ಒಳನೋಟವುಳ್ಳ ಟೆಕ್ ಮಾತುಕತೆಗಳು, ಚರ್ಚೆ, ಗೋಷ್ಠಿ, ಸ್ಥಳೀಯ ಆರ್.ಐ.ಎಸ್.ಸಿ-ವಿ  ವಿದ್ಯಾರ್ಥಿಗಳು ಮತ್ತು ಪ್ರೊಸೆಸರ್ ಗಳ ಕೌಶಲ್ಯತೆ ಪ್ರದರ್ಶಿಸುವ ಸಂವಾದಾತ್ಮಕ ಪೂರಕ ಮಳಿಗೆಗಳು, ನವೋದ್ಯಮಿಗಳಿಗಾಗಿ ಹ್ಯಾಕಥಾನ್ ಮತ್ತು ವಿಶೇಷ ಹೂಡಿಕೆದಾರರ ಅಧಿವೇಶನವನ್ನು ಈ ವಿಚಾರ ಸಂಕಿರಣವು ಒಳಗೊಂಡಿರುತ್ತದೆ.

ಆರ್.ಐ.ಎಸ್.ಸಿ-ವಿ ಬಗ್ಗೆ

' ಆರ್.ಐ.ಎಸ್.ಸಿ' ಎಂದರೆ 'ರಿಡ್ಯೂಸ್ಡ್ ಇನ್ಸ್ಟ್ರಕ್ಷನ್ ಸೆಟ್ ಕಂಪ್ಯೂಟರ್' ಮತ್ತು 'ವಿ' ಎಂದರೆ ಐದನೇ ಪೀಳಿಗೆ ಎಂದರ್ಥ. ಆರ್.ಐ.ಎಸ್.ಸಿ-ವಿ ಯೋಜನೆಯು 2010 ರಲ್ಲಿ ಪ್ರಾರಂಭವಾಯಿತು. ಮುಕ್ತ ಗುಣಮಟ್ಟದ ಸಹಯೋಗದ ಮೂಲಕ ಪ್ರೊಸೆಸರ್ ಆವಿಷ್ಕಾರದ ಹೊಸ ಯುಗವನ್ನು ಆರ್.ಐ.ಎಸ್.ಸಿ-ವಿ ಐ.ಎಸ್.ಎ. ಸಕ್ರಿಯಗೊಳಿಸುತ್ತದೆ. ಆರ್ಕಿಟೆಕ್ಚರ್ ಕ್ಷೇತ್ರದಲ್ಲಿ ಹೊಸ ಮಟ್ಟದ ಉಚಿತ, ವಿಸ್ತರಿಸಬಹುದಾದ ಸಾಫ್ಟ್ವೇರ್ ಮತ್ತು ಹಾರ್ಡ್ವೇರ್ ಸ್ವಾತಂತ್ರ್ಯವನ್ನು ತಲುಪಿಸುವ ಗುರಿಯನ್ನು ಹೊಂದಿದೆ. ಇದು ಮುಂದಿನ 50 ವರ್ಷಕ್ಕೆ ಕಂಪ್ಯೂಟಿಂಗ್ ವಿನ್ಯಾಸ ಮತ್ತು ನಾವೀನ್ಯತೆಗಳ ದಾರಿ ಸುಗಮ ಮಾಡಿಕೊಡುತ್ತದೆ ಎಂದು ಅಂದಾಜಿಸಲಾಗಿದೆ. ಆರ್.ಐ.ಎಸ್.ಸಿ-ವಿ ಐ.ಎಸ್.ಎ ಆಧಾರಿತ ಭಾರತದ ಮೊದಲ ಸ್ವದೇಶಿ ವಿನ್ಯಾಸದ ಮೈಕ್ರೊಪ್ರೊಸೆಸರ್ 'ಶಕ್ತಿ' ಅನ್ನು ಪ್ರೊ.ಕಾಮಕೋಟಿ ಅವರು ಅಭಿವೃದ್ಧಿಪಡಿಸಿದ್ದಾರೆ.

ಆರ್.ಐ.ಎಸ್.ಸಿ-ವಿ ಫೌಂಡೇಶನ್ ಅನ್ನು 2015 ರಲ್ಲಿ ರಚಿಸಲಾಯಿತು, ಮತ್ತು ಐಐಟಿ ಮದ್ರಾಸ್ ಸ್ಥಾಪಕ ಸದಸ್ಯರಲ್ಲಿ ಇದೂ ಕೂಡಾ ಒಂದಾಗಿದೆ. ಭಾರತ ಸರಕಾರವು ಡಿ.ಐ.ಆರ್.-ವಿ (ಡಿಜಿಟಲ್ ಇಂಡಿಯಾ ಆರ್.ಐ.ಎಸ್.ಸಿ-ವಿ) ಮೈಕ್ರೊಪ್ರೊಸೆಸರ್ ಪ್ರೋಗ್ರಾಂ ಅನ್ನು 2022 ರಲ್ಲಿ ಪ್ರಾರಂಭಿಸಿತು ಹಾಗೂ ಒಟ್ಟಾರೆ ಉದ್ದೇಶದಿಂದ ಭಾರತದಲ್ಲಿ ಭವಿಷ್ಯಕ್ಕಾಗಿ ಮೈಕ್ರೊಪ್ರೊಸೆಸರ್ ಗಳ ರಚನೆಯನ್ನು ಸಕ್ರಿಯಗೊಳಿಸಲು ಮತ್ತು ಉದ್ಯಮ-ದರ್ಜೆಯ ಸಿಲಿಕಾನ್ ಮತ್ತು ವಿನ್ಯಾಸವನ್ನು ಸಾಧಿಸಲು ಡಿಸೆಂಬರ್ 2023 ರಲ್ಲಿ ಸಾಧ್ಯವಾಯಿತು.

ಅನೇಕ ಕಂಪನಿಗಳು ಮತ್ತು ಸ್ಟಾರ್ಟ್ ಅಪ್ ಗಳು ಆರ್.ಐ.ಎಸ್.ಸಿ-ವಿ ಐ.ಎಸ್.ಎ. ಆಧಾರಿತ ವಿನ್ಯಾಸಗಳನ್ನು ಬಳಸುತ್ತವೆ. ಇದು ಮುಕ್ತ ಮೂಲ ಮತ್ತು ಉಚಿತ ಸಂಪನ್ಮೂಲವಾಗಿದೆ. ಶಿಕ್ಷಣತಜ್ಞರಿಗೆ, ಆರ್.ಐ.ಎಸ್.ಸಿ-ವಿ ಐ.ಎಸ್.ಎ.  ಕುರಿತು ನೀಡುವ ಪ್ರಾತ್ಯಕ್ಷಿಕ ಶಿಕ್ಷಣವು ಹಲವಾರು ಉತ್ತೇಜಕ ಸಂಶೋಧನೆ ಮತ್ತು ಪೂರಕ ಅನ್ವಯಗಳೊಂದಿಗೆ ಉದ್ಯಮ-ಸಂಬಂಧಿತ ನೂತನ ಪಠ್ಯಕ್ರಮವನ್ನು ಕೂಡಾ ತೆರೆಯುತ್ತದೆ.

******



(Release ID: 1946065) Visitor Counter : 86