ಯುವಜನ ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯ
azadi ka amrit mahotsav

​​​​​​​ಮುಂಬರುವ ವಿಶ್ವ ವಿಶ್ವವಿದ್ಯಾಲಯ ಕ್ರೀಡಾಕೂಟಕ್ಕಾಗಿ 4 ಕತ್ತಿವರಸೆಗಾರರಿಗೆ ಆರ್ಥಿಕ ನೆರವು ಒದಗಿಸಲಿರುವ ಭಾರತೀಯ ಕ್ರೀಡಾ ಪ್ರಾಧಿಕಾರ (ಎಸ್ ಎಐ)

Posted On: 26 JUL 2023 4:40PM by PIB Bengaluru

ಭಾರತೀಯ ಕ್ರೀಡಾ ಪ್ರಾಧಿಕಾರ (ಎಸ್ ಎಐ) ಚೀನಾದ ಚೆಂಗ್ಡುವಿನಲ್ಲಿ ನಡೆಯಲಿರುವ ಮುಂಬರುವ ವಿಶ್ವ ವಿದ್ಯಾಲಯ ಕ್ರೀಡಾಕೂಟಕ್ಕಾಗಿ ಎಸ್ ಎಐ ರಾಷ್ಟ್ರೀಯ ಜೇಷ್ಠತಾ ಕೇಂದ್ರಗಳು (ಎನ್ ಸಿಒಎಎಫ್) ಗಳಲ್ಲಿನ ನಾಲ್ವರು ಕತ್ತಿವರಸೆಗಾರರಿಗೆ ಆರ್ಥಿಕ ನೆರವು ನೀಡಲಿದೆ. ಕತ್ತಿವರಸೆಗಾರರಲ್ಲಿ  ಅಭಯ್ ಕೃಷ್ಣ ಶಿಂಧೆ (ಎನ್ ಸಿಒಇ ಪಟಿಯಾಲ ಮತ್ತು ಟಾಪ್ಸ್‌ ಅಥ್ಲೀಟ್), ದುರ್ಗೇಶ್ ಮಿಲಿಂದ್ ಜಹಾಗಿರ್ ದಾರ್ (ಎನ್ ಸಿಒಒ ಔರಂಗಾಬಾದ್ ಮತ್ತು ಖೇಲೋ ಇಂಡಿಯಾ ಅಥ್ಲೀಟ್) ಮತ್ತು ಎನ್ ಸಿಒಒ ಪಟಿಯಾಲ ಅಥ್ಲೀಟ್ ತನ್ನು ಗುಲಿಯಾ ಮತ್ತು ಶಿಕ್ಷಾ ಬಲ್ಲೂರಿಯಾ ಸೇರಿದ್ದಾರೆ.

          

ದುರ್ಗೇಶ್ ಮಿಲಿಂದ್ ಜಹಾಗಿರ್ ದಾರ್ ಹರ್ದೀಪ್

ಫೆನ್ಸಿಂಗ್ ತರಬೇತಿ ಮತ್ತು ಸ್ಪರ್ಧಾ ಯೋಜನೆಗಳು (ಎಸಿಟಿಸಿ) ವಾರ್ಷಿಕ ವೇಳಾಪಟ್ಟಿಯ ವ್ಯಾಪ್ತಿಗೆ ಒಳಪಡದ ವಿಶ್ವ ಯೂನಿವರ್ಸಿಟಿ ಕ್ರೀಡಾಕೂಟದಲ್ಲಿ ಅಥ್ಲೀಟ್ ಗಳಿಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ತಮ್ಮ ಪ್ರತಿಭಾ ಪ್ರದರ್ಶನಕ್ಕೆ ವೇದಿಕೆಯಾಗಲಿದೆ. ಆದ್ದರಿಂದ ಎಸ್ ಎಐ, ವಿಶೇಷ ಪ್ರಕರಣವೆಂದು ಪರಿಗಣಿಸಿ ಈ ಅಥ್ಲೀಟ್ ಗೆ ಆರ್ಥಿಕ ನೆರವು ನೀಡಲಿದೆ. ಸ್ಪರ್ಧೆಗಳು ಜುಲೈ 28ರಿಂದ ಆಗಸ್ಟ್ 8 ರವರೆಗೆ ನಡೆಯಲಿವೆ.

ಖ್ಯಾತ್

ಅಭಯ್ ಕೃಷ್ಣ ಶಿಂಧೆ

ವಿಶ್ವ ವಿದ್ಯಾಲಯ ಕ್ರೀಡಾಕೂಟಕ್ಕೆ ಅರ್ಹತೆ ಪಡೆದಿರುವ ಇತರೆ ಎನ್ ಸಿಒಇ ಅಥ್ಲೀಟ್‌ ಗಳೆಂದರೆ ಬೆಂಗಳೂರಿನ ಎನ್ ಸಿಒಇ ಅಥ್ಲೀಟ್ ಹರ್ದೀಪ್ (ರೇಸ್ ವಾಕಿಂಗ್) ಮತ್ತು ಖ್ಯಾತ್ (ಎತ್ತರ ಜಿಗಿತ), ಎನ್ ಸಿಒಇ ತ್ರಿವೇಡ್ರಂನ ಟೆಕ್ವಾಂಡೋ ಆಟಗಾರರಾದ ಶಿವಾಂಗಿ ಚನಂಬಮ್  ಮತ್ತು ಪಾರ್ಸಿಯಾ ನೊಗೈಮೈಥುಂ ಮತ್ತು ಎನ್ ಇಒಇ ಇಟಾನಗರದ ವುಶು ಆಟಗಾರ್ತಿ ಸನಂ ಬ್ರಹ್ಮ ಮತ್ತಿತರರು ಸೇರಿದ್ದಾರೆ.

****
 


(Release ID: 1943249) Visitor Counter : 77