ರಾಷ್ಟ್ರಪತಿಗಳ ಕಾರ್ಯಾಲಯ
ತಮಾಂಡೋದ ದಸಬಟಿಯಾದಲ್ಲಿ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವ ವಿದ್ಯಾಲಯದ "ಡಿವೈನ್ ಲೈಟ್ ಹೌಸ್" ಗೆ ಭಾರತದ ರಾಷ್ಟ್ರಪತಿಗಳು ಶಂಕುಸ್ಥಾಪನೆ ನೆರವೇರಿಸಿದರು.
ರಾಷ್ಟ್ರಪತಿ, ಮುರ್ಮು ಅವರು ವರ್ಷದ ಧ್ಯೇಯ ಘೋಷಣೆ "ಸಕಾರಾತ್ಮಕ ಬದಲಾವಣೆಯ ವರ್ಷ" ವನ್ನು ಪ್ರಾರಂಭಿಸಿದರು.
Posted On:
27 JUL 2023 1:37PM by PIB Bengaluru
ಭಾರತದ ರಾಷ್ಟ್ರಪತಿ ಶ್ರೀಮತಿ ದ್ರೌಪದಿ ಮುರ್ಮು ಅವರು ಇಂದು, (July 27, 2023)ತಮಂಡೊದ ದಸಬಟಿಯಾದಲ್ಲಿ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವ ವಿದ್ಯಾಲಯದ "ಡಿವೈನ್ ಲೈಟ್ ಹೌಸ್" ಗೆ ಶಂಕುಸ್ಥಾಪನೆ ನೆರವೇರಿಸಿದರು. ಸೆಮಿನಾರ್ ಗಳು ಮತ್ತು ಸಮ್ಮೇಳನಗಳನ್ನು ನಡೆಸಲು "ಸಕಾರಾತ್ಮಕ ಬದಲಾವಣೆಯ ವರ್ಷ" ವರ್ಷದ ಥೀಮ್ ಅನ್ನು ಪ್ರಾರಂಭಿಸಿತು.
ಈ ಸಂದರ್ಭದಲ್ಲಿ ಮಾತನಾಡಿದ ರಾಷ್ಟ್ರಪತಿಗಳು, ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವ ವಿದ್ಯಾಲಯ, ಕೇವಲ ಒಂದು ಸಂಘಟನೆ ಮಾತ್ರವಲ್ಲ, ಮಹಿಳೆಯರು ನಡೆಸುವ ಸಾಮಾಜಿಕ ಮತ್ತು ಆಧ್ಯಾತ್ಮಿಕ ಅಭಿಯಾನವಾಗಿದೆ ಎಂದರು.
ಮಾನವಕುಲಕ್ಕೆ ಭೌತಿಕ ಮತ್ತು ಆಧ್ಯಾತ್ಮಿಕ ಅಭಿವೃದ್ಧಿ ಎರಡೂ ಅಗತ್ಯ ಎಂದು ರಾಷ್ಟ್ರಪತಿ ಹೇಳಿದರು. ತಂತ್ರಜ್ಞಾನವು ಬದಲಾವಣೆಗೆ ಪ್ರೇರಕವಾಗಿದೆ ಮತ್ತು ಬದಲಾವಣೆ ಅನಿವಾರ್ಯ ಮತ್ತು ಅಭಿವೃದ್ಧಿಗೆ ಅಗತ್ಯವಾಗಿದೆ ಎಂದು ಅವರು ಹೇಳಿದರು. ಭೌತಿಕ ಬದಲಾವಣೆಗಳು ನಮಗೆ ಸಂತೋಷವನ್ನು ನೀಡಬಹುದು ಆದರೆ ಆಧ್ಯಾತ್ಮಿಕ ಮಾರ್ಗವನ್ನು ಅನುಸರಿಸುವ ಮೂಲಕ ಮಾನಸಿಕ ಶಾಂತಿಯನ್ನು ಪಡೆಯಬಹುದು ಎಂದು ಅವರು ಹೇಳಿದ್ದಾರೆ. ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವ ವಿದ್ಯಾಲಯ ಧ್ಯಾನ ಮತ್ತು ಶಿಸ್ತುಬದ್ಧ ಜೀವನಶೈಲಿಯ ಮೂಲಕ ಆಧ್ಯಾತ್ಮಿಕತೆಗೆ ದಾರಿ ಮಾಡಿಕೊಡುತ್ತಿದೆ, ಇದು ಸಂತೋಷದ ವಿಷಯ ಎಂದು ರಾಷ್ಟ್ರಪತಿಗಳು ತಿಳಿಸಿದರು.
ಕಾಲಕಾಲಕ್ಕೆ ಕೆಲವು ನಕಾರಾತ್ಮಕ ಆಲೋಚನೆಗಳು ನಮ್ಮ ಮನಸ್ಸನ್ನು ತೊಂದರೆಗೊಳಿಸುತ್ತವೆ ಎಂದು ರಾಷ್ಟ್ರಪತಿ ಹೇಳಿದರು. ಆತ್ಮಾವಲೋಕನದ ಕೊರತೆಯಿಂದಾಗಿ, ನಾವು ನಕಾರಾತ್ಮಕ ಚಿಂತನೆಗೆ ಬಲಿಯಾಗಲು ಪ್ರಾರಂಭಿಸುತ್ತೇವೆ. ನಮ್ಮೊಳಗೆ ಅಸೂಯೆ ಮತ್ತು ದ್ವೇಷದ ಭಾವನೆಗಳು ಹೆಚ್ಚಾಗಲು ಪ್ರಾರಂಭಿಸುತ್ತವೆ ಎಂದು ಅವರು ಹೇಳಿದರು. ನಕಾರಾತ್ಮಕ ಆಲೋಚನೆಗಳನ್ನು ತೊಡೆದುಹಾಕುವುದು ಮತ್ತು ಸಕಾರಾತ್ಮಕತೆಯತ್ತ ಸಾಗುವುದು ಇಂದು ನಮ್ಮ ಮುಂದಿರುವ ದೊಡ್ಡ ಸವಾಲಾಗಿದೆ ಎಂದು ಅವರು ಹೇಳಿದರು. ಮಾನವೀಯತೆಯನ್ನು ಜಾಗೃತಗೊಳಿಸಲು ಮತ್ತು ಜನರು ಸಕಾರಾತ್ಮಕ ದಿಕ್ಕಿನಲ್ಲಿ ಮುಂದೆ ಸಾಗಲು ಸಹಾಯ ಮಾಡುವ ಬ್ರಹ್ಮ ಕುಮಾರಿ ಸಂಸ್ಥೆಯ ಪ್ರಯತ್ನಗಳನ್ನು ಅವರು ಶ್ಲಾಘಿಸಿದರು.
****
(Release ID: 1943223)
Visitor Counter : 164