ರಾಷ್ಟ್ರಪತಿಗಳ ಕಾರ್ಯಾಲಯ

ಜುಲೈ 25ರಿಂದ 27ರವರೆಗೆ ಒಡಿಶಾಕ್ಕೆ ಭಾರತದ ರಾಷ್ಟ್ರಪತಿ ಭೇಟಿ

Posted On: 24 JUL 2023 7:53PM by PIB Bengaluru

ಭಾರತದ ರಾಷ್ಟ್ರಪತಿ ಶ್ರೀಮತಿ ದ್ರೌಪದಿ ಮುರ್ಮು ಅವರು 2023ರ ಜುಲೈ 25ರಿಂದ 27ರವರೆಗೆ ಒಡಿಶಾಕ್ಕೆ ಭೇಟಿ ನೀಡಲಿದ್ದಾರೆ.

2023 ರ ಜುಲೈ 25 ರಂದು  ಸಂಜೆ, ರಾಷ್ಟ್ರಪತಿಗಳು ಎಟಿಯುಟಿ-ಬಂಧನ್ ಕುಟುಂಬ ಪ್ರಾಯೋಜಿತ ವೈದ್ಯಕೀಯ ವಿದ್ಯಾರ್ಥಿಗಳ ಗುಂಪಿನೊಂದಿಗೆ ಸಂವಾದ ನಡೆಸಲಿದ್ದಾರೆ ಮತ್ತು ಭುವನೇಶ್ವರದಲ್ಲಿ ರಾಜಭವನ ಒಡಿಶಾದ ಹೊಸ ಕಟ್ಟಡ ಬ್ಲಾಕ್ ಗೆ  ಶಂಕುಸ್ಥಾಪನೆ ನೆರವೇರಿಸಲಿದ್ದಾರೆ.

2023ರ ಜುಲೈ 26ರಂದು ಕಟಕ್ ನಲ್ಲಿ ಒರಿಸ್ಸಾ ಹೈಕೋರ್ಟಿನ 75 ನೇ ವಾರ್ಷಿಕೋತ್ಸವದ ಸಮಾರೋಪ ಸಮಾರಂಭದಲ್ಲಿ ರಾಷ್ಟ್ರಪತಿಗಳು ಭಾಗವಹಿಸಲಿದ್ದಾರೆ. ಅದೇ ದಿನ ಅವರು ಕಟಕ್ ನ ಎಸ್ ಸಿಬಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ವಾರ್ಷಿಕ ಸಮಾರಂಭದಲ್ಲಿ ಭಾಷಣ ಮಾಡಲಿದ್ದಾರೆ ಹಾಗು ಕಟಕ್ ನಲ್ಲಿ ಒಡಿಶಾ ರಾಷ್ಟ್ರೀಯ ಕಾನೂನು ವಿಶ್ವವಿದ್ಯಾಲಯದ ಘಟಿಕೋತ್ಸವದಲ್ಲಿ ಭಾಗವಹಿಸಲಿದ್ದಾರೆ.

2023ರ ಜುಲೈ 27 ರಂದು ರಾಷ್ಟ್ರಪತಿಗಳು ಒಡಿಶಾದ ರಾಜಭವನದಲ್ಲಿ ಪಿವಿಟಿಜಿಗಳ ಸದಸ್ಯರೊಂದಿಗೆ ಸಂವಾದ ನಡೆಸಲಿದ್ದಾರೆ.  ಅದೇ ದಿನ, ಅವರು ಪ್ರಜಾಪಿತ ಬ್ರಹ್ಮ ಕುಮಾರಿಸ್ ಈಶ್ವರೀಯ ವಿಶ್ವ ವಿದ್ಯಾಲಯವು   ಈ ವರ್ಷ "ಸಕಾರಾತ್ಮಕ ಬದಲಾವಣೆಯ ವರ್ಷ" ಶೀರ್ಷಿಕೆಯಲ್ಲಿ ಆಯೋಜಿಸುವ ರಾಷ್ಟ್ರವ್ಯಾಪಿ ವಿಚಾರ ಸಂಕಿರಣ  ಮತ್ತು ಸಮ್ಮೇಳನಗಳಿಗೆ ಚಾಲನೆ ನೀಡಲಿದ್ದಾರೆ. ಮತ್ತು ಭುವನೇಶ್ವರದ ತಮಾಂಡೊದ ದಸಬಟಿಯಾದಲ್ಲಿ ಅದರ "ಲೈಟ್ ಹೌಸ್ ಕಾಂಪ್ಲೆಕ್ಸ್" ಗೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ.

****



(Release ID: 1942339) Visitor Counter : 108