ಹಣಕಾಸು ಸಚಿವಾಲಯ

ನೇರ ಲಾಭ ವರ್ಗಾವಣೆ (ಡಿಬಿಟಿ) ಸಬ್ಸಿಡಿ ಯೋಜನೆಗಳ ಮೂಲಕ ಆದಾಯ ಉಳಿತಾಯ

Posted On: 24 JUL 2023 4:29PM by PIB Bengaluru

ನೇರ ಲಾಭ ವರ್ಗಾವಣೆ (ಡಿಬಿಟಿ) ಮತ್ತು ಇತರ ಆಡಳಿತ ಸುಧಾರಣೆಗೆ ನಕಲಿ ಫಲಾನುಭವಿಗಳನ್ನು ತೆಗೆದುಹಾಕಲು ಮತ್ತು ಸೋರಿಕೆಯನ್ನು ತಡೆಗಟ್ಟಲು ಕಾರಣವಾಗಿವೆ. ಇದರ ಪರಿಣಾಮವಾಗಿ ಸರ್ಕಾರವು ನಿಜವಾದ ಮತ್ತು ಅರ್ಹ ಫಲಾನುಭವಿಗಳನ್ನು ಗುರಿಯಾಗಿಸಲು ಸಾಧ್ಯವಾಗುತ್ತದೆ. ಕೇಂದ್ರ ಹಣಕಾಸು ಖಾತೆ ರಾಜ್ಯ ಸಚಿವ ಶ್ರೀ ಪಂಕಜ್ ಚೌಧರಿ ಅವರು ಲೋಕಸಭೆಯಲ್ಲಿ ಪ್ರಶ್ನೆಯೊಂದಕ್ಕೆ ಲಿಖಿತ ಉತ್ತರದಲ್ಲಿ ಈ ವಿಷಯ ತಿಳಿಸಿದರು.

ಪ್ರಮುಖ ಕೇಂದ್ರ ವಲಯ / ಕೇಂದ್ರ ಪ್ರಾಯೋಜಿತ ಯೋಜನೆಗಳಿಗೆ ಸಂಬಂಧಿಸಿದಂತೆ ವಿವಿಧ ಸಚಿವಾಲಯಗಳು / ಇಲಾಖೆಗಳು ವರದಿ ಮಾಡಿದ ಡಿಬಿಟಿ ಮತ್ತು ಇತರ ಆಡಳಿತ ಸುಧಾರಣೆಗಳಿಂದ ಅಂದಾಜು ಉಳಿತಾಯಗಳು ಈ ಕೆಳಗಿನಂತಿವೆ:

(ಕೋಟಿ ರೂ.ಗಳಲ್ಲಿ)

ಆರ್ಥಿಕ ವರ್ಷ

ಅಂದಾಜು ಉಳಿತಾಯ

2017-18

32983.41

2018-19

52157.19

20T9-20

36226.74

2020-21

44571.78

2021-22

50125.37

****



(Release ID: 1942114) Visitor Counter : 363