ಗಣಿ ಸಚಿವಾಲಯ

30 ನಿರ್ಣಾಯಕ ಖನಿಜಗಳ ಪಟ್ಟಿ ಬಿಡುಗಡೆ


​​​​​​​ನಿರ್ಣಾಯಕ ಖನಿಜಗಳ ಶೋಧನೆಯತ್ತ ಹೆಚ್ಚಿನ ಗಮನ

Posted On: 24 JUL 2023 2:38PM by PIB Bengaluru

ಭಾರತದಲ್ಲಿ ಲಭ್ಯವಿರುವ 30 ನಿರ್ಣಾಯಕ ಖನಿಜಗಳ ಪಟ್ಟಿಯನ್ನು ಸರ್ಕಾರ ಬಿಡುಗಡೆ ಮಾಡಿದೆ. ಆ ಖನಿಜಗಳೆಂದರೆ, ಆಂಟಿಮನಿ, ಬೆರಿಲಿಯಂ, ಬಿಸ್ಮತ್, ಕೋಬಾಲ್ಟ್, ಕಾಪರ್ (ತಾಮ್ರ), ಗ್ಯಾಲಿಯಂ, ಜರ್ಮೇನಿಯಂ, ಗ್ರಾಫೈಟ್, ಹ್ಯಾಪ್ನಿಯಂ, ಇಂಡಿಯಂ, ಲಿಥಿಯಂ, ಮಾಲಿಬ್ಡಿಯಂ, ನಿಕಲ್, ಪಿಜಿಇ, ಫಾಸ್ಪರಸ್, ಪೊಟ್ಯಾಶ್, ಆರ್ ಇಇ, ರೀನಿಯಂ, ಸಿಲಿಕಾನ್, ಸ್ಟ್ರಾಂಷಿಯಂ, ಟಿಜಿನಿಯಂ, ಟ್ಯಾಂಟಾನಿಯಂ, ಕೋನಿಯಂ, ಸೆಲಿನಿಯಂ ಮತ್ತು ಕ್ಯಾಡ್ಮಿಯಂ.

ಗಣಿ ಸಚಿವಾಲಯವು ಜಿಯೋಲಾಜಿಕಲ್ ಸವೇ ಆಫ್ ಇಂಡಿಯಾ (ಜಿಎಸ್ಐ) ಮತ್ತು ಇತರೆ ಏಜೆನ್ಸಿಗಳ ಮೂಲಕ ದೇಶದಲ್ಲಿ ಈ ಖನಿಜಗಳ ಅನ್ವೇಷಣೆಗೆ ಹೆಚ್ಚಿನ ಗಮನವನ್ನು ಹರಿಸುತ್ತಿದೆ. ಭಾರತದಲ್ಲಿ ನಿರ್ಣಾಯಕ ಖನಿಜಗಳ ಮೇಲೆ ಕಳೆದ ಮೂರು ವರ್ಷಗಳಲ್ಲಿ ಜಿಎಸ್ಐ ಕೈಗೊಂಡ ಸಂಶೋಧನಾ ಯೋಜನೆಗಳ ವಿವರಗಳು ಈ ಕೆಳಗಿನಂತಿವೆ.

 

ನಿಕ್ಷೇಪಗಳ ಖುತು

2020-21

2021-22

2022-23

2023-24

ನಿರ್ಣಾಯಕ ಖನಿಗಳ ಕುರಿತ ಒಟ್ಟು ಯೋಜನೆಗಳು

59

118

123

122

ಮೂರು ಕೇಂದ್ರ ಸಾರ್ವಜನಿಕ ವಲಯದ ಉದ್ಯಮಗಳಾದ ನ್ಯಾಷನಲ್ ಅಲ್ಯೂಮಿನಿಯಂ ಕಂಪನಿ ಲಿಮಿಟೆಡ್, ಹಿಂದೂಸ್ತಾನ್ ಕಾಪರ್ ಲಿಮಿಟೆಡ್ ಮತ್ತು ಮಿನರಲ್ ಎಕ್ಸ್‌ಪ್ಲೋರೇಷನ್ ಕಂಪನಿ ಲಿಮಿಟೆಡ್‌ನಿಂದ ಷೇರುಗಳನ್ನು ಪಡೆದು ಖನೀಜ್ ಬಿದೇಶ್ ಇಂಡಿಯಾ ಲಿಮಿಟೆಡ್ (ಕೆಎಬಿಐಎಲ್) ಎಂಬ ಜಂಟಿ ಸಹಭಾಗಿತ್ವದ ಕಂಪನಿಯನ್ನು ಸ್ಥಾಪಿಸಲಾಗಿದ್ದು, ಅದರ ಉದ್ದೇಶ ಲೀಥಿಯಂ, ಕೋಬಾಲ್ಟ್ ಮತ್ತಿತರ ಕಾರ್ಯತಾಂತ್ರಿಕ ಸ್ವರೂಪದ ನಿರ್ಣಾಯಕ ಖನಿಜಗಳನ್ನು ಗುರುತಿಸುವುದು ಮತ್ತು ಅವುಗಳನ್ನು ವಿದೇಶಗಳಿಂದ ತರಿಸಿಕೊಂಡು ಬೇಡಿಕೆಗೆ ತಕ್ಕಂತೆ ಪೂರೈಕೆಯನ್ನು ಖಾತ್ರಪಡಿಸುವುದಾಗಿದೆ. ಕೆಎಬಿಐಎಲ್ ನಿರ್ಣಾಯಕ ಮತ್ತು ಕಾರ್ಯತಂತ್ರದ ಖನಿಜಗಳ ಸ್ವತ್ತುಗಳನ್ನು ಪಡೆಯಲು ಅರ್ಜೆಂಟೀನಾ, ಆಸ್ಟ್ರೇಲಿಯಾ ಮುಂತಾದ ದೇಶಗಳೊಂದಿಗೆ ಒಡಂಬಡಿಕೆಯಲ್ಲಿ ತೊಡಗಿದೆ.

ಕೇಂದ್ರ ಕಲ್ಲಿದ್ದಲು, ಗಣಿ ಮತ್ತು ಸಂಸದೀಯ ವ್ಯವಹಾರಗಳ ಸಚಿವ ಶ್ರೀ ಪ್ರಲ್ಹಾದ್ ಜೋಶಿ ಅವರು ರಾಜ್ಯಸಭೆಗಿಂದು ನೀಡಿದ ಲಿಖಿತ ಉತ್ತರದಲ್ಲಿ ಈ ವಿಷಯ ತಿಳಿಸಿದ್ದಾರೆ.

****

BY/RKP



 



(Release ID: 1942071) Visitor Counter : 115