ಅಣುಶಕ್ತಿ ಇಲಾಖೆ

2031ರ ವೇಳೆಗೆ ಪರಮಾಣು ಇಂಧನ ಸಾಮರ್ಥ್ಯ 7480 ಮೆಗಾ ವ್ಯಾಟ್ ನಿಂದ 22480 ಮೆಗಾವ್ಯಾಟ್ ಗೆ ಹೆಚ್ಚಾಗಲಿದೆ: ಡಾ ಜಿತೇಂದ್ರ ಸಿಂಗ್ ಹೇಳಿಕೆ

Posted On: 20 JUL 2023 4:06PM by PIB Bengaluru

ದೇಶದಲ್ಲಿ ಸ್ಥಾಪಿಸಲಾದ 23 ಪರಮಾಣು ಶಕ್ತಿ ರಿಯಾಕ್ಟರ್‌ಗಳು ಸೇರಿದಂತೆ ಒಟ್ಟು ಪರಮಾಣು ಇಂಧನ ಸಾಮರ್ಥ್ಯವು 7480 ಮೆಗಾವ್ಯಾಟ್ ಆಗಿದೆ. ಎಂದು ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ, ಪ್ರಧಾನ ಮಂತ್ರಿಗಳ ಕಾರ್ಯಾಲಯ ಸಹಾಯಕ ಖಾತೆ, ಸಿಬ್ಬಂದಿ, ಸಾರ್ವಜನಿಕ ಕುಂದುಕೊರತೆಗಳು, ಪಿಂಚಣಿ, ಪರಮಾಣು ಶಕ್ತಿ ಮತ್ತು ಬಾಹ್ಯಾಕಾಶ ಖಾತೆ ರಾಜ್ಯ ಸಚಿವ (ಸ್ವತಂತ್ರ ಉಸ್ತುವಾರಿ) ಡಾ. ಜಿತೇಂದ್ರ ಸಿಂಗ್ ತಿಳಿಸಿದರು.  ರಾಜ್ಯಸಭೆಯಲ್ಲಿಂದು ಲಿಖಿತ ಉತ್ತರ ನೀಡಿದ ಡಾ. ಜಿತೇಂದ್ರ ಸಿಂಗ್, 2022-23ರಲ್ಲಿ ಪರಮಾಣು ಇಂಧನ ರಿಯಾಕ್ಟರ್‌ಗಳು 46,982 ದಶಲಕ್ಷ ಯೂನಿಟ್ ವಿದ್ಯುತ್ (ನಿಶ್ಶಕ್ತ ಅಥವಾ ಅಸ್ಥಿರ ಉತ್ಪಾದನೆ ಸೇರಿದಂತೆ) ಉತ್ಪಾದಿಸಿವೆ ಎಂದರು.

2022-23ರಲ್ಲಿ ದೇಶದ ಒಟ್ಟು ವಿದ್ಯುತ್ ಉತ್ಪಾದನೆಯಲ್ಲಿ ಪರಮಾಣು ಇಂಧನದ ಪಾಲು ಸುಮಾರು 2.8% ಎಂದು ಡಾ. ಜಿತೇಂದ್ರ ಸಿಂಗ್ ಹೇಳಿದರು. ವಿವರಗಳನ್ನು ಅನುಬಂಧದಲ್ಲಿ ನೀಡಲಾಗಿದೆ.

ಪ್ರಸ್ತುತ ಸ್ಥಾಪಿಸಲಾದ ಪರಮಾಣು ಇಂಧನ ಸಾಮರ್ಥ್ಯವು 2031ರ ವೇಳೆಗೆ 7,480 ಮೆಗಾವ್ಯಾಟ್ ನಿಂದ 22,480 ಮೆಗಾವ್ಯಾಟ್ ವರೆಗೆ ಹೆಚ್ಚಾಗಲಿದೆ. ನಿರ್ಮಾಣ ಹಂತದಲ್ಲಿರುವ ಯೋಜನೆಗಳ ಪ್ರಗತಿಪರ ಪೂರ್ಣಗೊಳಿಸುವಿಕೆ ಮತ್ತು ಮಂಜೂರಾತಿ ನೀಡಲಾದ ಯೋಜನೆಗಳು ಇದರಲ್ಲಿ ಸೇರಿವೆ. ಭವಿಷ್ಯದಲ್ಲಿ ಪರಮಾಣು ರಿಯಾಕ್ಟರ್‌ಗಳನ್ನು ಸ್ಥಾಪಿಸಲು ಹೊಸ ಜಾಗ(ಸ್ಥಳ)ಗಳಿಗೆ ಸರ್ಕಾರವು 'ತಾತ್ವಿಕ' ಅನುಮೋದನೆ ನೀಡಿದೆ ಎಂದು ಅವರು ಹೇಳಿದರು.

***

ಅನುಬಂಧ

State

ಸ್ಥಳ

ಘಟಕ

ಸಾಮರ್ಥ್ಯ (ಮೆಗಾವ್ಯಾಟ್ ಗಳಲ್ಲಿ)

 

 

Maharashtra

ತಾರಾಪುರ್

ಟಿಎಪಿಎಸ್-1 &

160

 

ಟಿಎಪಿಎಸ್-2 &

160

 

ಟಿಎಪಿಎಸ್-3

540

 

ಟಿಎಪಿಎಸ್-4

540

 

Rajasthan

ರಾವತ್ ಭಾತ

ಆರ್ ಎಪಿಎಸ್-1 @

100

 

ಆರ್ ಎಪಿಎಸ್-2

200

 

ಆರ್ ಎಪಿಎಸ್-3 &

220

 

ಆರ್ ಎಪಿಎಸ್-4

220

 

ಆರ್ ಎಪಿಎಸ್-5

220

 

ಆರ್ ಎಪಿಎಸ್-6

220

 

Tamil Nadu

ಕಲ್ಪಕ್ಕಮ್

ಎಂಎಪಿಎಸ್-1 &

220

 

ಎಂಎಪಿಎಸ್-2

220

 

ಕುಡುಕುಳಂ

ಕೆಕೆಎನ್ ಪಿಪಿ-1

1000

 

ಕೆಕೆಎನ್ ಪಿಪಿ-2

1000

 

Uttar Pradesh

ನರೋರಾ

ಎನ್ಎಪಿಎಸ್-1

220

 

ಎನ್ಎಪಿಎಸ್-2

220

 

Gujarat

ಕಾಕ್ರಪಾರ್

ಕೆಎಪಿಎಸ್-1

220

 

ಕೆಎಪಿಎಸ್-1

220

 

ಕೆಎಪಿಎಸ್-3 *

700

 

Karnataka

ಕೈಗಾ

ಕೆಜಿಎಸ್-1

220

 

ಕೆಜಿಎಸ್-2

220

 

ಕೆಜಿಎಸ್-3

220

 

ಕೆಜಿಎಸ್-4

220

 

 

@ ಆರ್ ಎಪಿಎಸ್-1 ತಾಂತ್ರಿಕ-ಆರ್ಥಿಕ ಮೌಲ್ಯಮಾಪನಕ್ಕಾಗಿ ವಿಸ್ತೃತ ಸ್ಥಗಿತದಲ್ಲಿದೆ.

& ಟಿಎಪಿಎಸ್ 1&2, ಆರ್ ಎಪಿಎಸ್-3 ಮತ್ತು ಎಂಎಪಿಎಸ್-1 ಪ್ರಸ್ತುತ ಯೋಜನಾ ಹಂತದಲ್ಲಿವೆ.

* ಪ್ರಸ್ತುತ 90% ಇಂಧನದಲ್ಲಿ ಕಾರ್ಯ ನಿರ್ವಹಿಸುತ್ತಿದೆ.

 

********

 



(Release ID: 1941140) Visitor Counter : 83