ರಾಷ್ಟ್ರಪತಿಗಳ ಕಾರ್ಯಾಲಯ
azadi ka amrit mahotsav

ಭಾರತದ ರಾಷ್ಟ್ರಪತಿಗಳು ಭಾರತೀಯ ರೆಡ್ ಕ್ರಾಸ್ ಸೊಸೈಟಿಯ ವಾರ್ಷಿಕೋತ್ಸವದ ಔಪಚಾರಿಕ  ಅಧಿವೇಶನದ ಅಧ್ಯಕ್ಷತೆ ವಹಿಸಿದರು

प्रविष्टि तिथि: 17 JUL 2023 1:22PM by PIB Bengaluru

ಭಾರತದ ರಾಷ್ಟ್ರಪತಿ ಶ್ರೀಮತಿ ದ್ರೌಪದಿ ಮುರ್ಮು ಅವರು ಇಂದು (ಜುಲೈ 17, 2023) ರಾಷ್ಟ್ರಪತಿ ಭವನದ ಸಾಂಸ್ಕೃತಿಕ ಕೇಂದ್ರದಲ್ಲಿ ಭಾರತೀಯ ರೆಡ್ಕ್ರಾಸ್ ಸೊಸೈಟಿಯ ಸಾಮಾನ್ಯ ವಾರ್ಷಿಕ ಸಭೆಯ  ಔಪಚಾರಿಕ ಅಧಿವೇಶನದ ಅಧ್ಯಕ್ಷತೆಯನ್ನು ವಹಿಸಿದ್ದರು.

ಈ ಸಂದರ್ಭದಲ್ಲಿ ಮಾತನಾಡಿದ ಅಧ್ಯಕ್ಷರು, ಭಾರತೀಯ ಪರಂಪರೆಯಲ್ಲಿ ಪರೋಪಕಾರವನ್ನು ಅತ್ಯಂತ ಪ್ರಮುಖ ಮಾನವೀಯ ಮೌಲ್ಯವೆಂದು ಪರಿಗಣಿಸಲಾಗಿದೆ. ಭಾರತೀಯ ರೆಡ್ ಕ್ರಾಸ್ ಸೊಸೈಟಿಯು 100 ವರ್ಷಗಳಿಗೂ ಹೆಚ್ಚು ಕಾಲದಿಂದ ಜನರಿಗೆ ಸೇವೆ ಸಲ್ಲಿಸುತ್ತಿದೆ ಎಂದು ತಿಳಿದು ಸಂತಸ ವ್ಯಕ್ತಪಡಿಸಿದರು. ಪ್ರಕೃತಿ ವಿಕೋಪಗಳು ಮತ್ತು ಆರೋಗ್ಯ ತುರ್ತು ಸಂದರ್ಭಗಳಲ್ಲಿ ರೆಡ್ಕ್ರಾಸ್ ಪರಿಹಾರ ಕಾರ್ಯಗಳ ಮೂಲಕ ತನ್ನ ಬದ್ಧತೆಯನ್ನು ತೋರಿಸಿದೆ ಎಂದು ಅವರು ಹೇಳಿದರು. ಸೊಸೈಟಿಯ ಎಲ್ಲಾ ಸದಸ್ಯರು ಮತ್ತು ಸ್ವಯಂಸೇವಕರನ್ನು ಮನುಕುಲಕ್ಕೆ ಅವರ ಸಮರ್ಪಣೆ ಮತ್ತು ಸೇವೆಗಾಗಿ ಶ್ಲಾಘಿಸಿದರು. ಅವರ ಸಮರ್ಪಣಾಭಾವ, ಸಹಾನುಭೂತಿ ಮತ್ತು ಮಾನವ ಸೇವೆಯ ನಿಸ್ವಾರ್ಥ ಮನೋಭಾವ ಇತರರಿಗೆ ಸ್ಫೂರ್ತಿ ನೀಡುತ್ತದೆ ಎಂದು ಅವರು ಹೇಳಿದರು. ಭಾರತೀಯ ರೆಡ್ ಕ್ರಾಸ್ ಸೊಸೈಟಿ  ಮನುಕುಲದ ಕಲ್ಯಾಣಕ್ಕಾಗಿ ಕೆಲಸ ಮಾಡುವುದನ್ನು ಮುಂದುವರಿಸುತ್ತದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

ಭಾರತೀಯ ರೆಡ್ ಕ್ರಾಸ್ ಸೊಸೈಟಿಯು ದೇಶದಾದ್ಯಂತ 100 ಕ್ಕೂ ಹೆಚ್ಚು ರಕ್ತದಾನ ಕೇಂದ್ರಗಳು ಮತ್ತು ಮೊಬೈಲ್ ಅಭಿಯಾನಗಳ ಮೂಲಕ ದೇಶದ ರಕ್ತದ ಅವಶ್ಯಕತೆಯ ಸುಮಾರು ಶೇಕಡಾ 10ರಷ್ಟನ್ನು ಪೂರೈಸುತ್ತಿದೆ ಎಂದು ರಾಷ್ಟ್ರಪತಿಗಳು ತಿಳಿದು ಸಂತೋಷಪಟ್ಟರು. ಅಗತ್ಯವಿರುವವರಿಗೆ ರಕ್ತವನ್ನು ಸುರಕ್ಷಿತವಾಗಿ ಸಂಗ್ರಹಿಸಿ ಸ್ವಯಂಪ್ರೇರಿತ ರಕ್ತದಾನ ಸಂಸ್ಕೃತಿಯನ್ನು ಉತ್ತೇಜಿಸುವ ಮೂಲಕ ಭಾರತೀಯ ರೆಡ್ಕ್ರಾಸ್ ಸೊಸೈಟಿ ಅತ್ಯುತ್ತಮ ಪಾತ್ರವನ್ನು ವಹಿಸುತ್ತಿದೆ ಎಂದು ಅವರು ಹೇಳಿದರು. ರಕ್ತದಾನಕ್ಕೆ ಸಂಬಂಧಿಸಿದ ತಪ್ಪು ಕಲ್ಪನೆಗಳನ್ನು ಹೋಗಲಾಡಿಸಬೇಕು  ಮತ್ತು ಈ ಉದಾತ್ತ ಸಾಮಾಜಿಕ ಕಾರ್ಯದೊಂದಿಗೆ ಜನರನ್ನು ವಿಶೇಷವಾಗಿ ಯುವಜನರನ್ನು ಸಂಪರ್ಕಿಸುವ ಕೆಲಸ ಮಾಡಬೇಕು ಎಂದು ಅವರು ಒತ್ತಾಯಿಸಿದರು. 

http://ಅಧ್ಯಕ್ಷರ ಭಾಷಣವನ್ನು ಓದಲು ದಯವಿಟ್ಟು ಇಲ್ಲಿ ಕ್ಲಿಕ್ ಮಾಡಿರಿ . 

*****


(रिलीज़ आईडी: 1940386) आगंतुक पटल : 308
इस विज्ञप्ति को इन भाषाओं में पढ़ें: English , Urdu , हिन्दी , Marathi , Punjabi , Tamil , Telugu , Malayalam