ರಾಷ್ಟ್ರಪತಿಗಳ ಕಾರ್ಯಾಲಯ
azadi ka amrit mahotsav g20-india-2023

ರಾಜಸ್ಥಾನದ ಶಾಸಕಾಂಗ ಸಭೆಯ ಸದಸ್ಯರನ್ನು ಉದ್ದೇಶಿಸಿ ರಾಷ್ಟ್ರಪತಿ ಭಾಷಣ


ಸಮಗ್ರ ಅಭಿವೃದ್ಧಿಗೆ ಶ್ರಮಿಸುವುದು ಮತ್ತು ಸಾರ್ವಜನಿಕ ಹಿತಾಸಕ್ತಿಯಲ್ಲಿ ಕೆಲಸ ಮಾಡುವುದು ಎಲ್ಲ ಶಾಸಕರ ಕರ್ತವ್ಯ: ರಾಷ್ಟ್ರಪತಿ ದ್ರೌಪದಿ ಮುರ್ಮು

Posted On: 14 JUL 2023 1:16PM by PIB Bengaluru

ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಇಂದು (ಜುಲೈ 14, 2023) ಜೈಪುರದಲ್ಲಿ ರಾಜಸ್ಥಾನ ವಿಧಾನಸಭೆಯ ಸದಸ್ಯರನ್ನು ಉದ್ದೇಶಿಸಿ ಮಾತನಾಡಿದರು.

ನಮ್ಮ ಸ್ವಾತಂತ್ರ್ಯ ಹೋರಾಟದ ಆದರ್ಶಗಳ ಮೇಲೆ ಸಂವಿಧಾನದ ತತ್ವಗಳನ್ನು ರೂಪಿಸಲಾಗಿದೆ. ನ್ಯಾಯ, ಸ್ವಾತಂತ್ರ್ಯ, ಸಮಾನತೆ ಮತ್ತು ಭ್ರಾತೃತ್ವದ ಈ ಸಾಂವಿಧಾನಿಕ ಆದರ್ಶಗಳು ಎಲ್ಲಾ ಶಾಸಕರಿಗೆ ಮಾರ್ಗದರ್ಶಿ ತತ್ವಗಳಾಗಿರಬೇಕು ಎಂದು ಹೇಳಿದರು.

ನಾಗರಿಕತೆ ಮತ್ತು ಸಂಸ್ಕೃತಿಯ ಪ್ರತಿಯೊಂದು ಅಂಶಗಳಲ್ಲಿ ರಾಜಸ್ಥಾನವು ಅತ್ಯಂತ ಬಲವಾದ ಸಂಪ್ರದಾಯಗಳನ್ನು ಹೊಂದಿದೆ.  ಸ್ವಾಭಿಮಾನಕ್ಕಾಗಿ ಹೋರಾಡುವ ಮನೋಭಾವ ರಾಜಸ್ಥಾನದ ಜನರಲ್ಲಿ ಆಳವಾಗಿ ಬೇರೂರಿದೆ. ಇದು ರಾಜಸ್ಥಾನದ ಭವ್ಯ ಇತಿಹಾಸದ ಆಧಾರವಾಗಿದೆ. ಬುಡಕಟ್ಟು ಸೇರಿದಂತೆ ರಾಜಸ್ಥಾನದ ಎಲ್ಲಾ ಸಮುದಾಯಗಳ ಜನರು ದೇಶಭಕ್ತಿಯ ವಿಶಿಷ್ಟ ಉದಾಹರಣೆಗಳನ್ನು ಪ್ರಸ್ತುತಪಡಿಸಿದ್ದಾರೆ ಎಂದು ರಾಷ್ಟ್ರಪತಿಗಳು ಹೇಳಿದರು.

ಜನರ ಸೌಮ್ಯ ಸ್ವಭಾವ ಮತ್ತು ರಾಜಸ್ಥಾನದ ಕಲಾಕೃತಿಗಳು ಪ್ರಪಂಚದಾದ್ಯಂತದ ಜನರನ್ನು ಆಕರ್ಷಿಸುತ್ತವೆ.  ಜೈಸಲ್ಮೇರ್ನ ಮರುಭೂಮಿಯಿಂದ ಮೌಂಟ್ ಅಬುವರೆಗೆ, ಉದಯಪುರದ ಸರೋವರಗಳು ಮತ್ತು ರಣಥಂಬೋರ್ನ ಶ್ರೀಮಂತ ಅರಣ್ಯ ಸಂಪತ್ತು, ಪ್ರಕೃತಿಯ ಹೊಳಪಿನ ಛಾಯೆಯನ್ನು ಪ್ರಸ್ತುತಪಡಿಸುತ್ತವೆ. ರಾಜಸ್ಥಾನದ ಉದ್ಯಮಶೀಲ ಜನರು ಭಾರತ ಮತ್ತು ವಿದೇಶಗಳಲ್ಲಿ ವಾಣಿಜ್ಯ ಮತ್ತು ವ್ಯಾಪಾರದ ವಿವಿಧ ಕ್ಷೇತ್ರಗಳಲ್ಲಿ ಪ್ರಭಾವ ಹೊಂದಿದ್ದಾರೆ ಎಂದು ವಿವರಿಸಿದರು.

ಪ್ರಸ್ತುತ ಸಂಸತ್ತಿನ ಉಭಯ ಸದನಗಳ ಅಧ್ಯಕ್ಷತೆಯನ್ನು ರಾಜಸ್ಥಾನ ಜನಪ್ರತಿನಿಧಿಗಳು ವಹಿಸುತ್ತಿರುವುದು ರಾಜಸ್ಥಾನಕ್ಕೆ ಹೆಮ್ಮೆಯ ಸಂಗತಿಯಾಗಿದೆ ಎಂದು ರಾಷ್ಟ್ರಪತಿ ಹೇಳಿದರು.

ಸಮಾನತೆ ಮತ್ತು ಪ್ರಜಾಸತ್ತಾತ್ಮಕ ಭಾವನೆಗಳನ್ನು ಆಧರಿಸಿದ ಆಡಳಿತ ಈ ನೆಲದಲ್ಲಿ ಪ್ರಾಚೀನ ಕಾಲದಿಂದಲೂ ಇದೆ. ಸ್ವಾತಂತ್ರ್ಯದ ನಂತರ, ಶ್ರೀ ಮೋಹನ್ಲಾಲ್ ಸುಖದಿಯಾ ಅವರಿಂದ ಹಿಡಿದು ಶ್ರೀ ಭೈರೋನ್ ಸಿಂಗ್ ಶೇಖಾವತ್ ವರೆಗೆ ಜನ ಪ್ರತಿನಿಧಿಗಳು ರಾಜ್ಯದಲ್ಲಿ ಎಲ್ಲರನ್ನೂ ಒಳಗೊಳ್ಳುವ ಮತ್ತು ಕಲ್ಯಾಣ ಯೋಜನೆಗಳನ್ನು ಜಾರಿಗೊಳಿಸುವಲ್ಲಿ ಪರಿಣಾಮಕಾರಿ ನಾಯಕತ್ವವನ್ನು ಒದಗಿಸಿದ್ದಾರೆ. ಅಭಿವೃದ್ಧಿಯ ಈ ಸಂಪ್ರದಾಯವನ್ನು ಬಲಪಡಿಸುವುದು ಮತ್ತು ಸಾರ್ವಜನಿಕ ಹಿತಾಸಕ್ತಿಯಿಂದ ಕೆಲಸ ಮಾಡುವುದು ಎಲ್ಲ ಶಾಸಕರ ಕರ್ತವ್ಯ ಎಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಸಲಹೆ ನೀಡಿದರು.

ರಾಷ್ಟ್ರಪತಿಗಳ ಭಾಷಣವನ್ನು ಓದಲು ಇಲ್ಲಿ ಕ್ಲಿಕ್ ಮಾಡಿ…

****



(Release ID: 1939524) Visitor Counter : 102