ಆಯುಷ್
azadi ka amrit mahotsav

20ನೇ ಜುಲೈ 2023 ರಂದು ಸಾಂಪ್ರದಾಯಿಕ ಔಷಧಿಗಳ ಕುರಿತು ASEAN ದೇಶಗಳ ಸಮ್ಮೇಳನ  ಭಾರತದಲ್ಲಿ ಆಯೋಜನೆ


ಸುಮಾರು ಒಂದು ದಶಕದ ನಂತರ ನವದೆಹಲಿಯಲ್ಲಿ ಭಾರತ-ಆಸಿಯಾನ್ ಸಮ್ಮೇಳನ ನಡೆಯುತ್ತಿದ್ದು, ಕಾಂಬೋಡಿಯಾ, ವಿಯೆಟ್ನಾಂ ಸೇರಿದಂತೆ ಹತ್ತು ಆಸಿಯಾನ್ ರಾಷ್ಟ್ರಗಳು ಭಾಗಿ

ಸಾಂಪ್ರದಾಯಿಕ ಔಷಧ ಪದ್ಧತಿಯಲ್ಲಿ "ಆಕ್ಟ್ ಈಸ್ಟ್ ಪಾಲಿಸಿ" ವಿಸ್ತರಣೆಗೆ ಆಯುಷ್ ಅಭೂತಪೂರ್ವ ಸಾಮರ್ಥ್ಯವನ್ನು ಹೊಂದಿದೆ: ಕೇಂದ್ರ ಆಯುಷ್ ಸಚಿವರು

Posted On: 13 JUL 2023 2:05PM by PIB Bengaluru

ವಿದೇಶಾಂಗ ವ್ಯವಹಾರಗಳ ಸಚಿವಾಲಯ, ಆಸಿಯಾನ್ ಭಾರತೀಯ ಮಿಷನ್ ಮತ್ತು ಆಸಿಯಾನ್ ಬೆಂಬಲದೊಂದಿಗೆ ಆಯುಷ್ ಸಚಿವಾಲಯವು ಇದೇ ಜುಲೈ 20ರಂದು ಆಸಿಯಾನ್ ದೇಶಗಳ ಸಾಂಪ್ರದಾಯಿಕ ಔಷಧಗಳ ಸಮ್ಮೇಳನವನ್ನು ಆಯೋಜಿಸಲು ಮುಂದಾಗಿದೆ.

ಸಾಂಪ್ರದಾಯಿಕ ಔಷಧಗಳ ಸಮ್ಮೇಳನವು ಭಾರತ ಮತ್ತು ಆಸಿಯಾನ್ ದೇಶಗಳ ನಡುವೆ ಉತ್ತಮ ಪದ್ಧತಿ ಹಂಚಿಕೊಳ್ಳಲು ಮತ್ತು ಸಾಂಪ್ರದಾಯಿಕ ಔಷಧಿಗಳ ಕ್ಷೇತ್ರದಲ್ಲಿ ಭವಿಷ್ಯದ ಸಹಕಾರಕ್ಕಾಗಿ ಮಾರ್ಗಸೂಚಿಯನ್ನು ರೂಪಿಸಲು ಸೂಕ್ತ ವೇದಿಕೆ ಬಲಪಡಿಸುವ ಗುರಿಯನ್ನು ಹೊಂದಿದೆ.

ಇಂದು ನಡೆದ ಪೂರ್ವಭಾವಿ ಕಾರ್ಯಕ್ರಮದಲ್ಲಿ ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಿದ ಕೇಂದ್ರ ಆಯುಷ್ ಸಚಿವ ಶ್ರೀ ಸರ್ಬಾನಂದ ಸೋನಾವಾಲ್, “ಭಾರತ ಮತ್ತು ಆಸಿಯಾನ್ ನಡುವಿನ ಎರಡು ಸಹಸ್ರಮಾನಗಳಿಗಿಂತ ಹೆಚ್ಚು ಕಾಲ ಬಹು ಆಯಾಮದ ಸಂಬಂಧವು ಹಂಚಿಕೆಯ ಭೌಗೋಳಿಕ, ಐತಿಹಾಸಿಕ ಮತ್ತು ನಾಗರಿಕ ಸಂಬಂಧಗಳ ಬಲವಾದ ಅಡಿಪಾಯದ ಮೇಲೆ ನಿಂತಿದೆ " 

 “ಭಾರತದ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ನವೆಂಬರ್ 2014 ರಲ್ಲಿ ಮ್ಯಾನ್ಮಾರ್ನಲ್ಲಿ ನಡೆದ 12 ನೇ ಆಸಿಯಾನ್ ಭಾರತ ಶೃಂಗಸಭೆಯಲ್ಲಿ ‘ಆಕ್ಟ್ ಈಸ್ಟ್ ಪಾಲಿಸಿ”ಯನ್ನು ಘೋಷಿಸಿದರು, ಇದು ಕಾರ್ಯತಂತ್ರದ ಪಾಲುದಾರಿಕೆಗೆ ಹೊಸ ವೇಗವನ್ನು ನೀಡಿತು. ಸುಮಾರು ಒಂದು ದಶಕದ ನಂತರ ಸಾಂಪ್ರದಾಯಿಕ ಔಷಧದ ಕುರಿತು ಭಾರತ ಆಸಿಯಾನ್ ಸಮ್ಮೇಳನವು ಆಸಿಯಾನ್ ಜೊತೆಗಿನ ಭಾರತದ ಸಹಕಾರವನ್ನು ಗಾಢಗೊಳಿಸುವತ್ತ ಒಂದು ಪ್ರಮುಖ ಹೆಜ್ಜೆಯಾಗಿದೆ ಎಂದರು.

“ಪ್ರಧಾನಿ ನರೇಂದ್ರ ಮೋದಿ ಅವರು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಅಡಿಯಲ್ಲಿ ಆಯುಷ್ನ ಸ್ವತಂತ್ರ ಸಚಿವಾಲಯ ಮಾಡಲು ಆದ್ಯತೆ ನೀಡಿದರು. 2014 ರಿಂದ ಕಳೆದ 9 ವರ್ಷಗಳಲ್ಲಿ ಆಯುಷ್ ಕ್ಷೇತ್ರವು ಬಹುಳ ವೇಗವಾಗಿ ಬೆಳೆದಿದೆ.. ಇಂದು ಸಚಿವಾಲಯವು UK, USA, ಜಪಾನ್, ಬ್ರೆಜಿಲ್, ಜರ್ಮನಿಯ ಅನೇಕ ಉನ್ನತ ದರ್ಜೆಯ ಅಂತರರಾಷ್ಟ್ರೀಯ ಸಂಸ್ಥೆಗಳೊಂದಿಗೆ ಮತ್ತು CSIR, DST, DBT, IIT ಗಳಂತಹ ರಾಷ್ಟ್ರೀಯ ಸಂಸ್ಥೆಗಳೊಂದಿಗೆ ವಿವಿಧ ರೋಗ ಪರಿಸ್ಥಿತಿಗಳು, ಡಯಾಬಿಟಿಸ್ ಮೆಲ್ಲಿಟಸ್, ಕ್ಯಾನ್ಸರ್, ಮಾನಸಿಕ ಆರೋಗ್ಯ ಹಾಗೂ ಕೋವಿಡ್ನಂತಹ ಸಾಂಕ್ರಾಮಿಕ ರೋಗಗಳ ಬಗ್ಗೆ ಆಯುಷ್ ವ್ಯವಸ್ಥೆಗಳ ಉತ್ತಮ ಗುಣಮಟ್ಟದ ಚಿಕಿತ್ಸಾ ಪದ್ಧತಿ ಸಂಶೋಧನೆಯನ್ನು ಕೈಗೊಳ್ಳಲು ತೊಡಗಿಸಿಕೊಂಡಿದೆ.. ಆಯುಷ್ ಸಚಿವಾಲಯವು ಜಾರಿಗೊಳಿಸಿದ ವಿವಿಧ ಯೋಜನೆಗಳ ಸಂಶೋಧನಾ ಫಲಿತಾಂಶಗಳನ್ನು ಹಂಚಿಕೊಳ್ಳಲು ASEAN ಸಮ್ಮೇಳನವು ವೇದಿಕೆಯನ್ನು ಒದಗಿಸುತ್ತದೆ. ಅಂತೆಯೇ, ಆಸಿಯಾನ್ ದೇಶಗಳು ಸಹ ತಮ್ಮ ಅನುಭವಗಳನ್ನು ಹಂಚಿಕೊಳ್ಳುತ್ತವೆ., "ಸಾಂಪ್ರದಾಯಿಕ ಔಷಧವನ್ನು ಉತ್ತೇಜಿಸಲು ಆಸಿಯಾನ್ ಸದಸ್ಯ ರಾಷ್ಟ್ರಗಳಲ್ಲಿ ನಿಯಂತ್ರಕ ಚೌಕಟ್ಟಿನಲ್ಲಿ ಇತ್ತೀಚಿನ ಬೆಳವಣಿಗೆಗಳನ್ನು ಹಂಚಿಕೊಳ್ಳಲು ಸಮ್ಮೇಳನವು ವೇದಿಕೆಯನ್ನು ಒದಗಿಸುತ್ತದೆ" ಎಂದು ಹೇಳಿದರು.

ಆಯುಷ್ ಉತ್ಪನ್ನಗಳು ಮತ್ತು ಸೇವೆಗಳ ರಫ್ತು ಹೆಚ್ಚಿಸಲು ಆಯುಷ್ ಸಚಿವಾಲಯವು ಈಗಾಗಲೇ ಆಯುಷ್ನಲ್ಲಿ ದೃಢವಾದ ಅಂತಾರಾಷ್ಟ್ರೀಯ ಸಹಕಾರವನ್ನು ಸ್ಥಾಪಿಸಿದೆ ಮತ್ತು 'ಸಾಂಪ್ರದಾಯಿಕ ಔಷಧಿಗಳ ಕ್ಷೇತ್ರದಲ್ಲಿ ಸಹಕಾರ', 'ಆಯುಷ್ ಪೀಠಗಳ ಸ್ಥಾಪನೆ' ಕುರಿತು ತಿಳಿವಳಿಕೆ ಪತ್ರಗಳಿಗೆ (ಎಂಒಯು) ಸಹಿ ಹಾಕಿದೆ. ವಿಶ್ವವಿದ್ಯಾಲಯಗಳು/ಸಂಸ್ಥೆಗಳಲ್ಲಿ ಮತ್ತು ವಿವಿಧ ಹಂತಗಳಲ್ಲಿ 'ಸಹಕಾರಿ ಸಂಶೋಧನೆ' ಕೈಗೊಳ್ಳಲು ASEAN ಮಾತ್ರವಲ್ಲದೆ ಇತರ ದೇಶಗಳಲ್ಲಿಯೂ ಆಯುಷ್ ಬಲವಾದ ಮನ್ನಣೆಯನ್ನು ಗಳಿಸಿದೆ.

ಭಾಗವಹಿಸುವವರು: ಹೊಸ ದೆಹಲಿಯ ವಿಜ್ಞಾನ ಭವನದಲ್ಲಿ ನಡೆಯಲಿರುವ ಈ ಒಂದು ದಿನದ ಸಮ್ಮೇಳನದಲ್ಲಿ 8 ಆಸಿಯಾನ್ ದೇಶಗಳ ಪ್ರತಿನಿಧಿಗಳು ಮತ್ತು ವರ್ಚುವಲ್ ಮೂಲಕ ಅಂತಾರಾಷ್ಟ್ರೀಯ ಪ್ರತಿನಿಧಿಗಳು ಸಾಂಪ್ರದಾಯಿಕ ಔಷಧಿಗಳ ಕುರಿತು ತಮ್ಮ ಆಲೋಚನೆಗಳನ್ನು ಹಂಚಿಕೊಳ್ಳುತ್ತಾರೆ.

****


(Release ID: 1939227) Visitor Counter : 130