ಕಲ್ಲಿದ್ದಲು ಸಚಿವಾಲಯ

ಸೌತ್ ಈಸ್ಟ್ ಕೋಲ್ ಫೀಲ್ಡ್ ಲಿಮಿಟೆಡ್ ನಿಂದ 600 ಮೆಗಾವ್ಯಾಟ್ ಸಾಮರ್ಥ್ಯದ ಸೌರ ವಿದ್ಯುತ್ ಯೋಜನೆಗಳ ಅಭಿವೃದ್ಧಿ


ನವೀಕೃತ ಇಂಧನ ವಲಯದಲ್ಲಿ 1,000 ಕೋಟಿ ರೂಪಾಯಿಗೂ ಅಧಿಕ ಮೊತ್ತದ ಹೂಡಿಕೆ

Posted On: 11 JUL 2023 3:33PM by PIB Bengaluru

ಕೋಲ್ ಇಂಡಿಯಾ ಲಿಮಿಟೆಡ್ ನ ಅತಿ ದೊಡ್ಡ ಕಲ್ಲಿದ್ದಲು ಉತ್ಪಾದನಾ ಅಂಗ ಸಂಸ್ಥೆಗಳಲ್ಲಿ ಒಂದಾದ ಸೌತ್ ಈಸ್ಟರ್ನ್ ಕೋಲ್ ಫೀಲ್ಡ್ ಲಿಮಿಟೆಡ್ [ಎಸ್.ಇ.ಸಿ.ಎಲ್], ಬರುವ ವರ್ಷಗಳಲ್ಲಿ 600 ಮೆಗಾವ್ಯಾಟ್ ಸಾಮರ್ಥ್ಯದ ಮೇಲ್ಛಾವಣಿ ಮತ್ತು ನೆಲದ ಮೇಲೆ ಸೌರ ವಿದ್ಯುತ್ ಯೋಜನೆಗಳನ್ನು ಅಳವಡಿಸಲಿದೆ ಮತ್ತು ವ್ಯಾಪಾರ ಹಾಗೂ “ನಿವ್ವಳ ಶೂನ್ಯ ಇಂಧನ” ಗರಿ ಸಾಧಿಸುವ ನಿಟ್ಟಿನಲ್ಲಿ ಮುನ್ನಡೆದಿದೆ.

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಕಾಪ್ -26 ರಲ್ಲಿ 2070 ರ ವೇಳೆಗೆ ನಿವ್ವಳ ಇಂಧನ ಹೊರ ಸೂಸುವಿಕೆಯನ್ನು ಶೂನ್ಯಕ್ಕೆ ಇಳಿಸುವ ವಿಸ್ತೃತ ಗುರಿ ಕುರಿತಾದ “ಪಂಚಾಮೃತ್” ಆಶಯಗಳನ್ನು ಈಡೇರಿಸುವ ನಿಟ್ಟಿನಲ್ಲಿ ಈ ಕಾರ್ಯತಂತ್ರ ಅಳವಡಿಸಲಾಗಿದೆ. ಎಸ್.ಇ.ಸಿ.ಎಲ್ ಸಾರ್ವಜನಿಕ ಸ್ವಾಮ್ಯದ ಮಿತಿ ರತ್ನ ಕಂಪೆನಿಯಾಗಿದ್ದು, 1,000 ಕೋಟಿ ರೂಪಾಯಿಗೂ ಹೆಚ್ಚಿನ ವೆಚ್ಚದಲ್ಲಿ ಈ ಯೋಜನೆಯನ್ನು ಜಾರಿಗೊಳಿಸಲಿದೆ. ಈ ಯೋಜನೆಗಳನ್ನು ಆರ್.ಇ.ಎಸ್.ಸಿ.ಒ [ನವೀಕೃತ ಇಂಧನ ಸೇವೆಗಳ ಕಂಪೆನಿ]/ಬಿಒಒ [ನಿರ್ಮಾಣ, ನಿರ್ವಹಣೆ ಮತ್ತು ಕಾರ್ಯಾಚರಣೆ] ಮಾದರಿಯಲ್ಲಿ ಅನುಷ್ಠಾನಕ್ಕೆ ತರಲಿದೆ.

ಎಸ್.ಇ.ಸಿ.ಎ. ವ್ಯಾಪ್ತಿಯ ಚತ್ತೀಸ್ ಗಢ ಮತ್ತು ಮಧ್ಯ ಪ್ರದೇಶದ ವಿವಿಧೆಡೆ 180 ಮೆಗಾವ್ಯಾಟ್ ಗೂ ಅಧಿಕ ಪ್ರಮಾಣದ ಸೌರ ವಿದ್ಯುತ್ ಉತ್ಪಾದನೆ ಪ್ರಕ್ರಿಯೆ ಈಗಾಗಲೇ ಅಭಿವೃದ್ಧಿಪಡಿಸಿದ್ದು, ಇವು ಕಾರ್ಯಾಚರಣೆ ಹಂತದಲ್ಲಿವೆ. ಜೋಹಿಲ್ಲಾ, ಜಮುನಾ –ಕೊಟ್ಮಾ ಮತ್ತು ಕುಸ್ಮುಂದದಲ್ಲಿ 580 ಕೆ.ಡಬ್ಲ್ಯೂ.ಪಿ ಸಾಮರ್ಥ್ಯದಷ್ಟು ಮೇಲ್ಛಾವಣೆ ಸೌರ ವಿದ್ಯುತ್ ಉತ್ಪಾದನೆ ಆರಂಭವಾಗಿದೆ.  

ಜೊಹಿಲ್ಲಾದಲ್ಲಿ 280 ಕೆ.ಡಬ್ಲ್ಯೂ.ಪಿ ಸಾಮರ್ಥ್ಯದ ಮೇಲ್ಛಾವಣಿ ಸೌರ ವಿದ್ಯುತ್ ಉತ್ಪಾದನೆ ಪ್ರಾರಂಭವಾಗಿದ್ದು, ಇದು ಒಟ್ಟಾರೆ ತನ್ನ ಕಂಪೆನಿಯಲ್ಲಿ ಅತಿ ಹೆಚ್ಚು ಸಾಮರ್ಥ್ಯದ ಸೌರ ವಿದ್ಯುತ್ ಉತ್ಪಾದನೆಯಾಗಿದೆ. ಎಸ್.ಇ.ಸಿ.ಎಲ್ ನ ಪ್ರಧಾನ ವ್ಯವಸ್ಥಾಪಕರ ಆಡಳಿತಾತ್ಮಕ ಕಚೇರಿ, ಸಂಸ್ಥೆಯ ಕೇಂದ್ರೀಯ ವಿದ್ಯಾಲಯ, ಪ್ರಾದೇಶಿಕ ಆಸ್ಪತ್ರೆ ಮತ್ತು ಈ ಪ್ರದೇಶದ ಅತಿಥಿ ಗೃಹದಲ್ಲಿ ಮೇಲ್ಛಾವಣಿ ಫಲಕಗಳನ್ನು ಅಳವಡಿಸಲಾಗಿದೆ. ಈ ಯೋಜನೆಯಿಂದ 4,20,000 ಯೂನಿಟ್ ವಿದ್ಯುತ್ ಉತ್ಪಾದನೆಯಾಗುತ್ತಿದ್ದು, ವಾರ್ಷಿಕ 21 ಲಕ್ಷ ರೂಪಾಯಿ ಇಂಧನ ವೆಚ್ಚ ಉಳಿತಾಯವಾಗುತ್ತಿದೆ.

ಇದಲ್ಲದೇ ಎರಡು ತಲಾ 40 ಮೆಗಾವ್ಯಾಟ್ ಸಾಮರ್ಥ್ಯದ ಸೌರ ವಿದ್ಯುತ್ ಯೋಜನೆಗಳು ಅನುಷ್ಠಾನದ ಹಂತದಲ್ಲಿವೆ. ಮೊದಲನೆ ಯೋಜನೆಯಡಿ ಚತ್ತೀಸ್ ಗಢದ ಸುರ್ಜಾಪುರ್ ಜಿಲ್ಲೆಯ ಭಟ್ಕಾಗಾನ್ ಮತ್ತು ಬಿಶ್ರಾರಂಪುರ್ ನಲ್ಲಿ  40 ಮೆಗಾವ್ಯಾಟ್ ಸಾಮರ್ಥ್ಯದಲ್ಲಿ ನೆಲದ ಮೇಲೆ  ಸೌರ ವಿದ್ಯುತ್ ಯೋಜನೆ ಅನುಷ್ಠಾನಗೊಳಿಸಲಾಗುತ್ತಿದೆ. ಈ ಯೋಜನೆ ಅನುಷ್ಠಾನದ ಹಂತದಲ್ಲಿದೆ ಮತ್ತು ಪ್ರಸಕ್ತ ಹಣಕಾಸು ವರ್ಷದಲ್ಲಿ ಪೂರ್ಣಗೊಳ್ಳುವ ನಿರೀಕ್ಷೆಯಿದೆ. ಮಧ್ಯ ಪ್ರದೇಶದ ಜೊಹಿಲ್ಲಾ ಪ್ರದೇಶದಲ್ಲಿ ಮತ್ತೊಂದು 40 ಮೆಗಾವ್ಯಾಟ್ ಸಾಮರ್ಥ್ಯದ ಯೋಜನೆಯನ್ನು ಜಾರಿಗೊಳಿಸಲು ಯೋಜನಾ ವರದಿ ಸಿದ್ಧಪಡಿಸುವ ಕಾರ್ಯದಲ್ಲಿ ಸಂಸ್ಥೆಯ ಆಡಳಿತ ವ್ಯವಸ್ಥೆ ನಿರತವಾಗಿದೆ. ಎಸ್,ಇ.ಸಿ.ಎಲ್ 4 ಮೆಗಾವ್ಯಾಟ್ ಮೇಲ್ಛಾವಣಿ ವಿದ್ಯುತ್ ಯೋಜನೆ ಆರಂಭಕ್ಕೆ ಟೆಂಡರ್ ಕರೆದಿದೆ ಮತ್ತು ಮಧ್ಯ ಪ್ರದೇಶದ ಸೋಹಾಪುರ್ ಭಾಗದ ಶಾರಾದ ಒಸಿ ಗಣಿಯಲ್ಲಿ ತೇಲುವ ಸೌರ ವಿದ್ಯುತ್ ಫಲಕಗಳನ್ನು ಅಳವಡಿಸುವ ಕಾರ್ಯಸಾಧ್ಯತೆಯ ಕುರಿತಂತೆಯೂ ಪರಿಶೋಧಿಸಲಾಗುತ್ತಿದೆ.

ನಿವ್ವಳ ಶೂನ್ಯ ಗುರಿ ಸಾಧನೆಯ ಭಾಗವಾಗಿ ಕೋಲ್ ಇಂಡಿಯಾ ಬರುವ 2026 ರ ವೇಳೆಗೆ 3000 ಮೆಗಾವ್ಯಾಟ್ ಸಾಮರ್ಥ್ಯದ ನವೀಕೃತ ಇಂಧನ ಯೋಜನೆಗಳನ್ನು ಜಾರಿಗೊಳಿಸುವ ಮಹತ್ವಾಕಾಂಕ್ಷೆಯ ಗುರಿ ಹೊಂದಿದ್ದು, ಇದು ಕಂಪೆನಿಯು ಇಂಗಾಲ ಹೊರ ಸೂಸುವಿಕೆಯನ್ನು ತಗ್ಗಿಸುವ ನೀಲನಕ್ಷೆಯ ವಿಸ್ತೃತ ಯೋಜನೆಯ ಭಾಗವಾಗಿದೆ ಮತ್ತು ಹೆಚ್ಚಿನ ಸುಸ್ಥಿರ ಭವಿಷ್ಯ ರೂಪಿಸುವ ಸದಾಶಯವನ್ನು ಹೊಂದಿದೆ. ಕೋಲ್ ಇಂಡಿಯಾ ಇತ್ತೀಚೆಗೆ ಸ್ಥಗಿತಗೊಳಿಸಿರುವ ಗಣಿಗಳಲ್ಲಿ ಪಂಪ್ಡ್ ಸ್ಟೋರೇಜ್ ವಿದ್ಯುತ್ [ಪಿ.ಎಸ್.ಪಿ] ಯೋಜನೆಗಳಿಗೆ ಸಂಭವನೀಯ ಸ್ಥಳಗಳನ್ನು ಅನ್ವೇಷಿಸಲು ಸಟ್ಲೇಜ್ ಜಲ ವಿದ್ಯುತ್ ನಿಗಮ ಲಿಮಿಟೆಡ್ [ಎಸ್.ಜೆ.ವಿ.ಎನ್.ಎಲ್] ನೊಂದಿಗೆ ಕೈ ಜೋಡಿಸಿದೆ.

ಎಸ್.ಇ.ಸಿ.ಎಲ್ 2022-23 ನೇ ಸಾಲಿನ ಹಣಕಾಸು ವರ್ಷದಲ್ಲಿ ಕೋಲ್ ಇಂಡಿಯಾ ಲಿಮಿಟೆಡ್ ನ ಒಟ್ಟಾರೆ ನಾಲ್ಕನೇ ಒಂದು ಭಾಗದಷ್ಟು ಕೊಡುಗೆ ನೀಡಿದೆ. ಕಲ್ಲಿದ್ದಲು ಗಣಿಗಳಲ್ಲಿ ಇಂಗಾಲ ಹೊರಸೂಸುವಿಕೆಯ ಹೆಜ್ಜೆ ಗುರುತುಗಳನ್ನು ತಗ್ಗಿಸಲು ನವೀಕೃತ ಇಂಧನ ಉತ್ಪಾದನೆಯನ್ನು ಪ್ರೋತ್ಸಾಹಿಸಲಾಗುತ್ತಿದೆ ಮತ್ತು ನಿವ್ವಳ ಶೂನ್ಯ ಇಂಗಾಲ ಹೊರ ಸೂಸುವಿಕೆಯ ನಿಟ್ಟಿನಲ್ಲಿ ಸಾಗುತ್ತಿದೆ. ಈ ಯೋಜನೆಗಳಿಂದ ಉತ್ಪಾದನೆಯಾಗುವ ವಿದ್ಯುತ್ ನೊಂದಿಗೆ ಕಲ್ಲಿದ್ದಲು ಗಣಿಗಾರಿಕೆ ಮತ್ತು ಸಂಬಂಧಿತ ಚಟುವಟಿಕೆಗಳಿಗೆ ತನ್ನ ವಿದ್ಯುತ್ ಅಗತ್ಯತೆಗಳನ್ನು ಸಮತೋಲನಗೊಳಿಸಲು ಕಂಪೆನಿಯು ಶ್ರಮಿಸುತ್ತಿದೆ.

***



(Release ID: 1938720) Visitor Counter : 109