ಪ್ರಧಾನ ಮಂತ್ರಿಯವರ ಕಛೇರಿ

ಭಾರತದ ಲಾಜಿಸ್ಟಿಕ್ಸ್ ವಲಯವನ್ನು ಪರಿವರ್ತಿಸುವಲ್ಲಿ ಯುನಿಫೈಡ್ ಲಾಜಿಸ್ಟಿಕ್ಸ್ ಇಂಟರ್ ಫೇಸ್ ಪ್ಲಾಟ್‌ಫಾರ್ಮ್ (ULIP) ಪಾತ್ರವನ್ನು ಶ್ಲಾಘಿಸಿದ ಪ್ರಧಾನಿ

Posted On: 10 JUL 2023 9:27PM by PIB Bengaluru

ಭಾರತದ ಲಾಜಿಸ್ಟಿಕ್ಸ್ ವಲಯವನ್ನು ಪರಿವರ್ತಿಸುವಲ್ಲಿ ಯುನಿಫೈಡ್ ಲಾಜಿಸ್ಟಿಕ್ಸ್ ಇಂಟರ್ಫೇಸ್ ಪ್ಲಾಟ್‌ಫಾರ್ಮ್ (ULIP) ಪಾತ್ರವನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಶ್ಲಾಘಿಸಿದ್ದಾರೆ.

ಕೇಂದ್ರ ವ್ಯಾಪಾರ ಮತ್ತು ವಾಣಿಜ್ಯ ಸಚಿವ ಪಿಯೂಷ್ ಗೋಯಲ್ ಅವರ ಟ್ವೀಟ್ ನ್ನು ಹಂಚಿಕೊಂಡ ಪ್ರಧಾನಮಂತ್ರಿ ಅವರು ಟ್ವೀಟ್ ಮಾಡಿ:

“ಲಾಜಿಸ್ಟಿಕ್ಸ್‌ನ ಏಕ ಗವಾಕ್ಷಿ ವೇದಿಕೆಯು ಸರಕುಗಳ ಚಲನೆಯಲ್ಲಿ ಕ್ರಾಂತಿ ತಂದಿದೆ. ಇದರಿಂದ ಸಮಯ ಮತ್ತು ವೆಚ್ಚ ಎರಡೂ ಉಳಿತಾಯವಾಗುವುದಲ್ಲದೆ, ದೇಶದ ಸ್ವಾವಲಂಬನೆಗೆ ಸಹಾಯಕವಾಗಲಿದೆ ಎಂದಿದ್ದಾರೆ.

***



(Release ID: 1938599) Visitor Counter : 109