ರಾಷ್ಟ್ರಪತಿಗಳ ಕಾರ್ಯಾಲಯ
azadi ka amrit mahotsav

ಜುಲೈ 10 ಮತ್ತು 11 ರಂದು ಸಂದರ್ಶಕರ ಸಮಾವೇಶ  2023 ನ್ನು ಆಯೋಜಿಸಿದ ರಾಷ್ಟ್ರಪತಿ ಭವನ 


​​​​​​​ಸಮಾವೇಶದ ಸಂದರ್ಭದಲ್ಲಿ ಸಂದರ್ಶಕರ ಪ್ರಶಸ್ತಿ 2021 ಪ್ರದಾನ ಮಾಡಲಿರುವ ಭಾರತದ ಸನ್ಮಾನ್ಯ ರಾಷ್ಟ್ರಪತಿ

Posted On: 08 JUL 2023 7:48PM by PIB Bengaluru

ಜುಲೈ 10 ಮತ್ತು 11, 2023 ರಂದು ರಾಷ್ಟ್ರಪತಿ ಭವನವು ಸಂದರ್ಶಕರ ಸಮಾವೇಶ 2023 ಅನ್ನು ಆಯೋಜಿಸಿದೆ. 162 ಕೇಂದ್ರೀಯ ಉನ್ನತ ಶಿಕ್ಷಣ ಸಂಸ್ಥೆಗಳನ್ನು ಭಾರತದ ರಾಷ್ಟ್ರಪತಿಯವರು ಸಂದರ್ಶಿಸಲಿದ್ದಾರೆ.

ಜುಲೈ 10, 2023 ರಂದು, ಭಾರತದ ಸನ್ಮಾನ್ಯ ರಾಷ್ಟ್ರಪತಿ ಶ್ರೀಮತಿ ದ್ರೌಪದಿ ಮುರ್ಮು ಅವರು ಉದ್ಘಾಟನಾ ಭಾಷಣವನ್ನು ಮಾಡಲಿದ್ದಾರೆ. ಕೇಂದ್ರ ಶಿಕ್ಷಣ ಮತ್ತು ಕೌಶಲ್ಯ ಅಭಿವೃದ್ಧಿ ಮತ್ತು ಉದ್ಯಮಶೀಲತೆ ಸಚಿವರಾದ ಶ್ರೀ ಧರ್ಮೇಂದ್ರ ಪ್ರಧಾನ್ ಕೂಡ ಸಮ್ಮೇಳನವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.

ಜುಲೈ 11, 2023 ರಂದು, ಸುಸ್ಥಿರ ಅಭಿವೃದ್ಧಿಗಾಗಿ ಶಿಕ್ಷಣ: ಉತ್ತಮ ಜಗತ್ತಿನ ನಿರ್ಮಾಣ ಎಂಬ ವಿಷಯದ ಮೇಲೆ ಸಮಾವೇಶ ಕೇಂದ್ರೀಕೃತವಾಗಿದೆ. ಅಮೃತ್ ಕಾಲ್‌ ನ ಯೋಜನೆಗಳು ಮತ್ತು ಕ್ರಿಯಾ ರೂಪು ರೇಷೆಗಳಾದ ಅಂತಾರಾಷ್ಟ್ರೀಕರಣದ ಪ್ರಯತ್ನಗಳು ಮತ್ತು G-20; ಸಂಶೋಧನಾ ಕೊಡುಗೆಗಳು ಮತ್ತು ಮಾನ್ಯತೆಗಳು; ವೈವಿಧ್ಯತೆ, ಸಮಾನತೆ, ಒಳಗೊಳ್ಳುವಿಕೆ ಮತ್ತು ಕ್ಷೇಮಾಭಿವೃದ್ಧಿಯಂತಹ NEP-2020 ರ ಸಾಕ್ಷಾತ್ಕಾರಕ್ಕೆ ಕೊಡುಗೆಗಳನ್ನು ನೀಡುವಂತಹ ಉಪ-ವಿಷಯಗಳ ಕುರಿತು ಐದು ವಿಭಿನ್ನ ತಂಡಗಳು ಚರ್ಚೆ ನಡೆಸಲಿವೆ;. ಸಮಾರೋಪ ಸಮಾರಂಭದಲ್ಲಿ, ಚರ್ಚೆಯ ಫಲಿತಾಂಶವನ್ನು ಸನ್ಮಾನ್ಯ ರಾಷ್ಟ್ರಪತಿಯವರ ಮುಂದೆ ಮಂಡಿಸಲಾಗುವುದು. ಸನ್ಮಾನ್ಯ ರಾಷ್ಟ್ರಪತಿ ದ್ರೌಪದಿ ಮುರ್ಮು ಸಮಾರೋಪ ಭಾಷಣ ಮಾಡಲಿದ್ದಾರೆ. 

ಜುಲೈ 10, 2023 ರಂದು, ಸಂದರ್ಶಕರ ಸಮಾವೇಶ ಪ್ರಾರಂಭವಾಗುವ ಮೊದಲು, ಸನ್ಮಾನ್ಯ ರಾಷ್ಟ್ರಪತಿ ಮುರ್ಮು ಅವರು 'ನಾವೀನ್ಯತೆ', 'ಸಂಶೋಧನೆ' ಮತ್ತು 'ತಂತ್ರಜ್ಞಾನ ಅಭಿವೃದ್ಧಿ' ವಿಭಾಗಗಳಲ್ಲಿ 2021 ರ ಸಂದರ್ಶಕರ ಪ್ರಶಸ್ತಿಗಳನ್ನು ಪ್ರದಾನ ಮಾಡಲಿದ್ದಾರೆ.

ಸಿಲಿಕಾನ್ ಫೈಬರ್ ಶೀಟ್ ಬಳಸಿ ರೆಸಿಸ್ಟಿವ್ ಪ್ಲೇಟ್ ಚೇಂಬರ್ ಡಿಟೆಕ್ಟರ್‌ ನ ಚಾರ್ಜ್ ಪಿಕ್-ಅಪ್ ಪ್ಯಾನೆಲ್‌ಗಳನ್ನು ಸ್ಥಳೀಯವಾಗಿ ಅಭಿವೃದ್ಧಿಪಡಿಸಿದ್ದಕ್ಕೆ ದಕ್ಷಿಣ ಬಿಹಾರದ ಕೇಂದ್ರೀಯ ವಿಶ್ವವಿದ್ಯಾಲಯದ ಸ್ಕೂಲ್ ಆಫ್ ಫಿಸಿಕಲ್ ಮತ್ತು ಕೆಮಿಕಲ್ ಸೈನ್ಸಸ್‌ನ ಪ್ರೊ. ವೆಂಕ್ಟೇಶ್ ಸಿಂಗ್ ಅವರಿಗೆ ‘ವಿಷ್ಕಾರಕ್ಕಾಗಿ’ ಸಂದರ್ಶಕರ ಪ್ರಶಸ್ತಿಯನ್ನು ನೀಡಲಾಗುತ್ತಿದೆ.

ಸಾಫ್ಟ್ ಮ್ಯಾಟರ್ ಮತ್ತು ಲಿಕ್ವಿಡ್ ಕ್ರಿಸ್ಟಲ್‌ಗಳಲ್ಲಿ  ಕೊಡುಗೆ ನೀಡಿದ ಹೈದರಾಬಾದ್ ವಿಶ್ವವಿದ್ಯಾಲಯದ ಸ್ಕೂಲ್‌ ಆಫ್ ಫಿಸಿಕ್ಸ್ ನ ಪ್ರೊ. ಸೂರಜಿತ್ ಧಾರಾ ಅವರಿಗೆ ‘ಭೌತಿಕ ವಿಜ್ಞಾನದಲ್ಲಿ ಸಂಶೋಧನೆ’ ವಿಭಾಗದಡಿ ಸಂದರ್ಶಕರ ಪ್ರಶಸ್ತಿಯನ್ನು ನೀಡಲಾಗುತ್ತಿದೆ 

ಪೂರ್ವ ಹಿಮಾಲಯ ಮತ್ತು ಮಧ್ಯ ಭಾರತದಲ್ಲಿನ ಅರಣ್ಯಗಳ ಅಪಾಯದ ಸ್ಥಿತಿಯ ಮೌಲ್ಯಮಾಪನ ಮತ್ತು RET (ಅಪರೂಪದ, ಅಳಿವಿನಂಚಿನಲ್ಲಿರುವ ಮತ್ತು ಬೆದರಿಕೆ) ಸಸ್ಯ ಪ್ರಭೇದಗಳ ಪುನರುತ್ಪಾದನೆ ಹಾಗೂ  ಅರಣ್ಯ ಜೀವವೈವಿಧ್ಯತೆಯನ್ನು ಅರ್ಥಮಾಡಿಕೊಳ್ಳುವ ಕುರಿತು ನೀಡಿದ ಕೊಡುಗೆಗಳಿಗಾಗಿ  ಸಾಗರ್‌ನ ಡಾ ಹರಿಸಿಂಗ್ ಗೌರ್ ವಿಶ್ವವಿದ್ಯಾಲಯದ ಪ್ರೊ. ಮೊಹಮ್ಮದ್ ಲತೀಫ್ ಖಾನ್ ಅವರಿಗೆ 'ಜೈವಿಕ ವಿಜ್ಞಾನದಲ್ಲಿ ಸಂಶೋಧನೆ'ಗಾಗಿ ಸಂದರ್ಶಕರ ಪ್ರಶಸ್ತಿಯನ್ನು ನೀಡಲಾಗುತ್ತಿದೆ.

ಫೆರೋಎಲೆಕ್ಟ್ರಿಕ್ ಥಿನ್ ಫಿಲ್ಮಗಳನ್ನು ಬಳಸಿ ಫ್ರೀಕ್ವೆನ್ಸಿ ಟ್ಯೂನಬಲ್ ಮೈಕ್ರೋವೇವ್ ಸಾಧನಗಳಲ್ಲಿ ನೀಡಿದ ಕೊಡುಗೆಗಳಿಗಾಗಿ ಹೈದರಾಬಾದ್ ವಿಶ್ವವಿದ್ಯಾಲಯದ ಸ್ಕೂಲ್ ಆಫ್ ಫಿಸಿಕ್ಸ್ ಪ್ರೊ. ಕೆ.ಸಿ. ಜೇಮ್ಸ್ ರಾಜು ಅವರಿಗೆ ‘ತಂತ್ರಜ್ಞಾನ ಅಭಿವೃದ್ಧಿ’ಗಾಗಿ ಸಂದರ್ಶಕರ ಪ್ರಶಸ್ತಿಯನ್ನು ನೀಡಲಾಗುತ್ತದೆ.

ಆಣ್ವಿಕ ವ್ಯವಸ್ಥೆಗಳು ಮತ್ತು ವಸ್ತುಗಳ ಫೋಟೊ  ಎಕ್ಸೈಟೇಶನ್ ಮೇಲೆ ರೂಪುಗೊಂಡ ಅಲ್ಪಾವಧಿಯ ರಾಸಾಯನಿಕ ಪ್ರಭೇದಗಳ ಸ್ಪೆಕ್ಟ್ರೋಸ್ಕೋಪಿ ಮತ್ತು ಡೈನಾಮಿಕ್ಸ್  ಕುರಿತ ಸಂಶೋಧನಾ ಕೊಡುಗೆಗಳಿಗಾಗಿ ಹೈದರಾಬಾದ್ ವಿಶ್ವವಿದ್ಯಾಲಯದ ಸ್ಕೂಲ್ ಆಫ್ ಕೆಮಿಸ್ಟ್ರಿ ಪ್ರೊ. ಅನುನೈ ಸಮಂತಾ ಅವರಿಗೆ ಭೌತಿಕ ವಿಜ್ಞಾನದ ಸಂಶೋಧನೆಗಾಗಿ 2020 ರ 6ನೇ ಸಂದರ್ಶಕರ ಪ್ರಶಸ್ತಿಯನ್ನು ಸನ್ಮಾನ್ಯ ರಾಷ್ಟ್ರಪತಿಯವರು ಪ್ರದಾನ ಮಾಡಲಿದ್ದಾರೆ  

****


(Release ID: 1938381) Visitor Counter : 146