ಪಶು ಸಂಗೋಪನೆ, ಹೈನುಗಾರಿಕೆ ಮತ್ತು ಮೀನುಗಾರಿಕೆ ಸಚಿವಾಲಯ
azadi ka amrit mahotsav

ರಾಷ್ಟ್ರೀಯ ಮೀನು ಕೃಷಿಕರ ದಿನಾಚರಣೆ 2023: ಫಿಷರೀಸ್ ಸ್ಟಾರ್ಟ್ಅಪ್ ಗ್ರ್ಯಾಂಡ್ ಚಾಲೆಂಜ್ ಮತ್ತು ಫಿಷರೀಸ್ ಸ್ಟಾರ್ಟ್ಅಪ್ ಕಾನ್ ಕ್ಲೇವ್

प्रविष्टि तिथि: 08 JUL 2023 11:13AM by PIB Bengaluru

ಮೀನುಗಾರಿಕೆ ಇಲಾಖೆಯು ಸ್ಟಾರ್ಟ್ಅಪ್ ಇಂಡಿಯಾ ಹಬ್ ಮತ್ತು ಡಿಪಿಐಐಟಿ ಸಹಭಾಗಿತ್ವದಲ್ಲಿ ಮೀನುಗಾರಿಕೆ ಪರಿಸರ ವ್ಯವಸ್ಥೆಯಲ್ಲಿ ಅಸಾಧಾರಣ ಪರಿಣಾಮವನ್ನು ಉಂಟುಮಾಡುವ ಸ್ಟಾರ್ಟ್ಅಪ್ ಗಳನ್ನು ಗುರುತಿಸಲು, ಪುರಸ್ಕರಿಸಲು ಫಿಷರೀಸ್ ಸ್ಟಾರ್ಟ್ಅಪ್ ಗ್ರ್ಯಾಂಡ್ ಚಾಲೆಂಜ್ ಅನ್ನು ಪ್ರಾರಂಭಿಸಿದೆ.

ಜುಲೈ 10 ರಂದು ಮಹಾಬಲಿಪುರಂನಲ್ಲಿ ರಾಷ್ಟ್ರೀಯ ಮೀನು ಕೃಷಿಕರ ದಿನ ಆಚರಣೆ ಮೀನುಗಾರಿಕೆ ಪರಿಸರ ವ್ಯವಸ್ಥೆಯಲ್ಲಿ ಅಸಾಧಾರಣ ಪರಿಣಾಮವನ್ನು ಉಂಟುಮಾಡುವ ಸ್ಟಾರ್ಟ್ಅಪ್ಗಳನ್ನು ಗುರುತಿಸಲು, ಪುರಸ್ಕರಿಸಲು ಮೀನುಗಾರಿಕೆ ಇಲಾಖೆಯು ಸ್ಟಾರ್ಟ್ ಅಪ್  ಇಂಡಿಯಾ ಹಬ್ ಮತ್ತು ಡಿಪಿಐಐಟಿ ಸಹಭಾಗಿತ್ವದಲ್ಲಿ ಫಿಷರೀಸ್ ಸ್ಟಾರ್ಟ್ ಅಪ್ ಗ್ರ್ಯಾಂಡ್ ಚಾಲೆಂಜ್ ಅನ್ನು ಪ್ರಾರಂಭಿಸಿದೆ, ಭಾರತದಲ್ಲಿ ಮೀನುಗಾರಿಕೆ ಕ್ಷೇತ್ರವು ನಿರಂತರ ವರ್ಷಗಳಲ್ಲಿ ಬೆಳೆಯುತ್ತಿದೆ, ಪ್ರಸ್ತುತ 21 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಮೀನುಗಾರಿಕೆ ಹೊಂದಿದೆ.

ಫಿಷರೀಸ್ ಸ್ಟಾರ್ಟ್ ಅಪ್ ಗ್ರ್ಯಾಂಡ್ ಚಾಲೆಂಜ್ ಸಂಬಂಧ ನಾಲ್ಕು ಅರ್ಜಿಗಳನ್ನು ಆಹ್ವಾನಿಸಲಾಗಿತ್ತು. ಇದಕ್ಕೆ 121 ಸ್ಟಾರ್ಟ್ಅಪ್ ಗಳಿಂದ ಅರ್ಜಿಗಳು ಬಂದಿವೆ. ಕಠಿಣ ವಿಶ್ಲೇಷಣೆಯ ನಂತರ, 12 ಸ್ಟಾರ್ಟಪ್ಗಳನ್ನು ವಿಜೇತರಾಗಿ ಆಯ್ಕೆ ಮಾಡಲಾಗಿದೆ.

ಮೀನುಗಾರಿಕೆ, ಪಶುಸಂಗೋಪನೆ ಮತ್ತು ಹೈನುಗಾರಿಕೆ ಸಚಿವ ಶ್ರೀ ಪರಷೋತ್ತಮ ರೂಪಾಲ, ಮೀನುಗಾರಿಕೆ ಖಾತೆ ರಾಜ್ಯ ಸಚಿವರಾದ  ಡಾ.ಎಲ್. ಮುರುಗನ್ ಮತ್ತು ಡಾ.ಸಂಜೀವ್ ಕುಮಾರ್ ಬಲ್ಯಾನ್ ಹಾಗೂ ಇಲಾಖೆಯ ಇತರೆ ಅಧಿಕಾರಿಗಳು, ಕೇಂದ್ರ ಹಾಗೂ ರಾಜ್ಯ ಮಟ್ಟದ ಹಿರಿಯ ಅಧಿಕಾರಿಗಳ ಸಮ್ಮುಖದಲ್ಲಿ 2023 ರ ಜುಲೈ 10 ರಂದು ತಮಿಳುನಾಡಿನ ಮಹಾಬಲಿಪುರಂನಲ್ಲಿ ರಾಷ್ಟ್ರೀಯ ಮೀನು ಕೃಷಿಕರ ದಿನದ ಸಂದರ್ಭದಲ್ಲಿ ಪ್ರಶಸ್ತಿ ವಿತರಿಸಲಾಗುವುದು.

ಪ್ರಧಾನ ಮಂತ್ರಿ ಮತ್ಸ್ಯ ಸಂಪದ ಯೋಜನೆಯಡಿ ಆಯ್ಕೆಯಾದ ಸ್ಟಾರ್ಟ್ ಅಪ್ ಗಳಿಗೆ ತಮ್ಮ ಆವಿಷ್ಕಾರಗಳನ್ನು ನಿರ್ಮಿಸಲು ಸಹಾಯ ಮಾಡಲು 2 ಲಕ್ಷ ರೂ. ನಗದು ಅನುದಾನವನ್ನು ಒದಗಿಸಲಾಗುತ್ತದೆ.

ಜುಲೈ 10, 2023 ರಂದು ಮಹಾಬಲಿಪುರಂನಲ್ಲಿ ರಾಷ್ಟ್ರೀಯ ಮೀನು ಕೃಷಿಕರ ದಿನಾಚರಣೆ ಕಾರ್ಯಕ್ರಮವು ದೇಶದಾದ್ಯಂತದ 30 ಅಸಾಧಾರಣ ಸ್ಟಾರ್ಟ್ ಅಪ್ಗಳ ಪ್ರದರ್ಶನವನ್ನು ಒಳಗೊಂಡಿರುತ್ತದೆ, ಇದು ದೇಶದ ಮೀನುಗಾರಿಕೆ ನಾವೀನ್ಯತೆ ಪ್ರದರ್ಶನಕ್ಕೆ ಉತ್ತಮ ಅವಕಾಶ ಕಲ್ಪಿಸುತ್ತಿದೆ. ವ್ಯಾಪಾರವನ್ನು ಮತ್ತಷ್ಟು ಅಭಿವೃದ್ಧಿಪಡಿಸಲು ಸಹಾಯ ಮಾಡಲು ಸ್ಟಾರ್ಟ್ಅಪ್ ಗಳಿಗೆ ಕ್ಯುರೇಟೆಡ್ ಸೆಷನ್ ಗಳನ್ನು ಸಹ ಏರ್ಪಡಿಸಲಾಗುತ್ತದೆ.

****


(रिलीज़ आईडी: 1938197) आगंतुक पटल : 164
इस विज्ञप्ति को इन भाषाओं में पढ़ें: English , Urdu , Marathi , Gujarati , Tamil , Telugu