ಕಲ್ಲಿದ್ದಲು ಸಚಿವಾಲಯ
ಕಲ್ಲಿದ್ದಲು ಉತ್ಪಾದನೆಯು 2023-24 ರ ಹಣಕಾಸು ವರ್ಷದ ಮೊದಲನೇ ತ್ರೈಮಾಸಿಕದಲ್ಲಿ 8.4% ಬೆಳವಣಿಗೆಯೊಂದಿಗೆ 222.93 ದಶಲಕ್ಷ ಟನ್ಗಳನ್ನು ಮುಟ್ಟಿದೆ.
ಕೋಲ್ ಇಂಡಿಯಾ ಲಿಮಿಟೆಡ್ ಉತ್ಪಾದನೆಯು 175.35 ಮೆಟ್ರಿಕ್ ಟನ್ ಗೆ 9.85% ರಷ್ಟು ಏರಿಕೆಯಾಗಿದೆ
ಹಣಕಾಸು ವರ್ಷದ ಮೊದಲನೇ ತ್ರೈಮಾಸಿಕದಲ್ಲಿ ಕಲ್ಲಿದ್ದಲ ರವಾನೆಯು 6.97% ರಷ್ಟು ಹೆಚ್ಚಾಗಿದೆ
37.62% ಬೆಳವಣಿಗೆಯಿಂದಾಗಿ ಕಲ್ಲಿದ್ದಲಿನ ದಾಸ್ತಾನು 107.15 ದಶಲಕ್ಷ ಟನ್ಗೆ ತಲುಪಿದೆ
Posted On:
03 JUL 2023 3:55PM by PIB Bengaluru
ಕಲ್ಲಿದ್ದಲು ಸಚಿವಾಲಯವು ಒಟ್ಟಾರೆ ಕಲ್ಲಿದ್ದಲು ಉತ್ಪಾದನೆಯಲ್ಲಿ ಗಣನೀಯ ಏರಿಕೆಯನ್ನು ಸಾಧಿಸಿದೆ ಮತ್ತು 2023-24 ರ ಹಣಕಾಸು ವರ್ಷದ ಮೊದಲನೇ ತ್ರೈಮಾಸಿಕದಲ್ಲಿ 8.40% ಬೆಳವಣಿಗೆಯನ್ನು ಸಾಧಿಸಿದೆ. 2022-23 ಹಣಕಾಸು ವರ್ಷದ ಮೊದಲನೇ ತ್ರೈಮಾಸಿಕದಲ್ಲಿ 205.65 ದಶಲಕ್ಷ ಟನ್ನಿಗೆ ಹೋಲಿಸಿದರೆ ಒಟ್ಟುಗೂಡಿದ ಕಲ್ಲಿದ್ದಲು ಉತ್ಪಾದನೆಯು ಗಮನಾರ್ಹವಾದ ಹೆಚ್ಚಳಕ್ಕೆ ಸಾಕ್ಷಿಯಾಗಿ 222.93 ಮಿಲಿಯನ್ ಟನ್ (ಎಂ.ಟಿ - ದಶಲಕ್ಷ ಟನ್) ತಲುಪಿದೆ.
ಹಿಂದಿನ ವರ್ಷದ ಇದೇ ಅವಧಿಯಲ್ಲಿ 159.63 ಎಂ.ಟಿ ಗೆ ಹೋಲಿಸಿದರೆ ಉತ್ಪಾದನೆಯು 2023-24 ರಲ್ಲಿ 175.35 ಎಂ.ಟಿ. ತಲುಪಿ ಕೋಲ್ ಇಂಡಿಯಾ ಲಿಮಿಟೆಡ್ (ಸಿಐಎಲ್) 9.85% ರಷ್ಟು ಪರಿಣಾಮಕಾರಿಯಾದ ಬೆಳವಣಿಗೆಯನ್ನು ದಾಖಲಿಸಿದೆ. ಖಾಸಗಿ ಗಣಿಗಳು ಮತ್ತು ಇತರವು ಸಹ ಇದೇ ಅವಧಿಯಲ್ಲಿ 22-23ನೇ ಹಣಕಾಸು ವರ್ಷದಲ್ಲಿ 29.10 ಎಂ.ಟಿ ಗೆ ಹೋಲಿಸಿದರೆ 23-24 ನೇ ಹಣಕಾಸು ವರ್ಷದಲ್ಲಿ 30.48 ಎಂ.ಟಿಯಷ್ಟು ಉತ್ಪಾದನೆಯ ಮೂಲಕ 4.74 % ರಷ್ಟು ಬೆಳವಣಿಗೆಯನ್ನು ಸಾಧಿಸಿವೆ. ಈ ಸಾಧನೆಗಳು ಕಲ್ಲಿದ್ದಲು ವಲಯದಲ್ಲಿ ಒಟ್ಟಾರೆ ಧನಾತ್ಮಕ ಬೆಳವಣಿಗೆಗೆ ಕೊಡುಗೆ ನೀಡಿವೆ.
ಏಕಕಾಲದಲ್ಲಿ, ಒಟ್ಟುಗೂಡಿಸಿದ ಕಲ್ಲಿದ್ದಲು ರವಾನೆಯು 6.97% ರಷ್ಟು ಬೆಳವಣಿಗೆಯೊಂದಿಗೆ 2022-23 ಹಣಕಾಸು ವರ್ಷದ ಮೊದಲನೇ ತ್ರೈಮಾಸಿಕದ 224.08 ಎಂ.ಟಿ ಗೆ ಹೋಲಿಸಿದರೆ, 2023-24 ಹಣಕಾಸು ವರ್ಷದ ಮೊದಲನೇ ತ್ರೈಮಾಸಿಕದಲ್ಲಿ 239.69 ಎಂ.ಟಿಗೆ (ತಾತ್ಕಾಲಿಕ) ತಲುಪಿದೆ. 2022-23 ಹಣಕಾಸು ವರ್ಷದ ಮೊದಲನೇ ತ್ರೈಮಾಸಿಕದ 176.81 ಎಂ.ಟಿ. ಗೆ ಹೋಲಿಸಿದರೆ ಕೋಲ್ ಇಂಡಿಯಾ ಲಿಮಿಟೆಡ್ 2023-24 ಹಣಕಾಸು ವರ್ಷದ ಮೊದಲನೇ ತ್ರೈಮಾಸಿಕದಲ್ಲಿ 186.21 ಎಂ.ಟಿ ಉತ್ಪಾದನೆಯಿಂದಾಗಿ 5.32% ರಷ್ಟು ಬೆಳವಣಿಗೆಯನ್ನು ಕಂಡಿದೆ ಅದೇ ಸಮಯದಲ್ಲಿ, ಎಸ್ ಸಿಸಿಎಲ್, ಖಾಸಗಿ ಮತ್ತು ಇತರ ಗಣಿಗಳ 2022-23 ಹಣಕಾಸು ವರ್ಷದ ಮೊದಲನೇ ತ್ರೈಮಾಸಿಕದ 17.30 ಎಂ.ಟಿ ಮತ್ತು 29.97 ಎಂ.ಟಿ ಗೆ ಹೋಲಿಸಿದರೆ 2023-24 ರ ಹಣಕಾಸು ವರ್ಷದ ಮೊದಲನೇ ತ್ರೈಮಾಸಿಕದಲ್ಲಿ 18.07 ಎಂ.ಟಿ ಮತ್ತು 35.41 ಎಂ.ಟಿ ಯಿಂದ 4.8.45% ಮತ್ತು 6% ಬೆಳವಣಿಗೆಯೊಂದಿಗೆ ಕ್ರಮವಾಗಿ ಉತ್ಪಾದನೆಯನ್ನು ದಾಖಲಿಸಿದ್ದಾರೆ. ಈ ಅಂಕಿಅಂಶಗಳು ದೇಶದಾದ್ಯಂತ ಕಲ್ಲಿದ್ದಲ ಸುಗಮವಾದ ವಿತರಣೆಯನ್ನು ಖಾತ್ರಿಪಡಿಸುವಲ್ಲಿ ಪೂರೈಕೆ ಸರಪಳಿಯ ದಕ್ಷತೆಯನ್ನು ಎತ್ತಿ ತೋರಿಸುತ್ತವೆ.
ಇದಲ್ಲದೆ, ಖರೀದಿಯಲ್ಲಿನ ಏರಿಕೆಯು ಕಲ್ಲಿದ್ದಲ ಸಾಕಷ್ಟು ದಾಸ್ತಾನಿಗೆ ಕಾರಣವಾಗಿದೆ. ಜೂನ್ 30, 2023 ರಂತೆ ಒಟ್ಟು ಕಲ್ಲಿದ್ದಲು ದಾಸ್ತಾನು 30 ಜೂನ್ 2022ರ 77.86 ಎಂ.ಟಿ ಗೆ ಹೋಲಿಸಿದರೆ 107.15 ಎಂ.ಟಿ (ತಾತ್ಕಾಲಿಕ)ಗೆ ತಲುಪುವ ಗಮನಾರ್ಹ ಬೆಳವಣಿಗೆಯನ್ನು ದಾಖಲಿಸಿದೆ, ಇದು 37.62% ರಷ್ಟು ಬೆಳವಣಿಗೆಯನ್ನು ತೋರಿಸುತ್ತದೆ. ಈ ಬೆಳವಣಿಗೆಯು ಕಲ್ಲಿದ್ದಲಿನ ಹೆಚ್ಚುತ್ತಿರುವ ಬೇಡಿಕೆಯನ್ನು ಪೂರೈಸಲು ಆಗುತ್ತಿರುವ ನಿರಂತರ ಪ್ರಯತ್ನಗಳನ್ನು ಸೂಚಿಸುತ್ತದೆ.
ಕಲ್ಲಿದ್ದಲು ಉತ್ಪಾದನೆಯನ್ನು ಹೆಚ್ಚಿಸಲು ಮತ್ತು ತಡೆರಹಿತ ರವಾನೆಯನ್ನು ಖಚಿತಪಡಿಸಿಕೊಳ್ಳಲು ಕಲ್ಲಿದ್ದಲು ಸಚಿವಾಲಯದ ನಿರಂತರ ಪ್ರಯತ್ನಗಳು ದೇಶವು ತನ್ನ ಇಂಧನದ ಬೇಡಿಕೆಗಳನ್ನು ಪೂರೈಸುವಲ್ಲಿ ಮತ್ತು ಆರ್ಥಿಕ ಬೆಳವಣಿಗೆಯನ್ನು ಉತ್ತೇಜಿಸುವಲ್ಲಿ ಕೈಗೊಂಡ ಧೃಡವಾದ ಕ್ರಮಗಳನ್ನು ತೋರಿಸುತ್ತದೆ. ಈ ಸಕಾರಾತ್ಮಕ ಬೆಳವಣಿಗೆಗಳು ದೇಶವನ್ನು ಅನುಕೂಲಕರವಾಗಿ ಇರಿಸುತ್ತವೆ , ದೇಶದ ಇಂಧನ ಕ್ಷೇತ್ರದ ಸಕಾರಾತ್ಮಕ ಪಥದಲ್ಲಿ ಸಾಗಲು ಕೊಡುಗೆ ನೀಡುತ್ತವೆ ಹಾಗು ನಿರಂತರ ವಿದ್ಯುತ್ ಸರಬರಾಜು ಮತ್ತು ಆತ್ಮನಿರ್ಭರ ಭಾರತಕ್ಕೆ ದಾರಿ ಮಾಡಿಕೊಡುವ ಬದ್ಧತೆಯನ್ನು ಬಲಪಡಿಸುತ್ತವೆ.
***
(Release ID: 1937116)
Visitor Counter : 144