ಉಪರಾಷ್ಟ್ರಪತಿಗಳ ಕಾರ್ಯಾಲಯ
ಈದ್-ಉಲ್-ಜುಹಾ ಮುನ್ನಾ ದಿನ ರಾಷ್ಟ್ರಕ್ಕೆ ಶುಭಾಶಯ ಕೋರಿದ ಉಪರಾಷ್ಟ್ರಪತಿ
Posted On:
28 JUN 2023 3:57PM by PIB Bengaluru
ಭಾರತದ ಉಪರಾಷ್ಟ್ರಪತಿ ಶ್ರೀ ಜಗದೀಪ್ ಧನಕರ್ ಅವರು ಈದ್-ಉಲ್-ಜುಹಾದ ಮುನ್ನಾ ದಿನ ರಾಷ್ಟ್ರಕ್ಕೆ ಶುಭಾಶಯ ಕೋರಿದರು.
ಅವರ ಸಂದೇಶದ ಪೂರ್ಣ ಪಠ್ಯ ಹೀಗಿದೆ:
"ಈದ್-ಉಲ್-ಜುಹಾ ಮಂಗಳಕರ ಹಬ್ಬ. ನಾನು ಎಲ್ಲಾ ಭಾರತೀಯರಿಗೆ ನನ್ನ ಆತ್ಮೀಯ ಶುಭಾಶಯಗಳನ್ನು ಸಲ್ಲಿಸುತ್ತೇನೆ.
ಈದ್-ಉಲ್-ಜುಹಾ ತ್ಯಾಗ, ನಿಸ್ವಾರ್ಥತೆಯ ಸಂಕೇತ ಮತ್ತು ನಮ್ಮ ಕೃತಜ್ಞತೆಯನ್ನು ವ್ಯಕ್ತಪಡಿಸುವ ಸುಸಂದರ್ಭವಾಗಿದೆ. ಸಂತೋಷ ಮತ್ತು ಆಶೀರ್ವಾದಗಳನ್ನು ಹಂಚಿಕೊಳ್ಳಲು ಕುಟುಂಬಗಳು ಮತ್ತು ಸಮುದಾಯಗಳು ಒಗ್ಗೂಡಲು ಇದು ಒಂದು ಶುಭ ಸಂದರ್ಭವಾಗಿದೆ. ಈದ್ ನಮಗೆಲ್ಲರಿಗೂ ಶಾಂತಿ, ಸಮೃದ್ಧಿ ಮತ್ತು ಸಂತೋಷ ತರಲಿ.
ಉಪರಾಷ್ಟ್ರಪತಿ ಅವರ ಹಿಂದಿ ಭಾಷೆಯ ಸಂದೇಶ ಹೀಗಿದೆ;
"ಈದ್-ಉಲ್-ಜುಹಾ ಶುಭ ಸಂದರ್ಭದಲ್ಲಿ, ನಾನು ಎಲ್ಲಾ ದೇಶವಾಸಿಗಳಿಗೆ ನನ್ನ ಹೃತ್ಪೂರ್ವಕ ಶುಭಾಶಯಗಳನ್ನು ಸಲ್ಲಿಸುತ್ತೇನೆ.
ಈದ್-ಉಲ್-ಜುಹಾ ತ್ಯಾಗ ಮತ್ತು ನಿಸ್ವಾರ್ಥ ಸೇವೆಯ ಸಂಕೇತವಾಗಿದೆ. ಜತೆಗೆ, ಕೃತಜ್ಞತೆ ವ್ಯಕ್ತಪಡಿಸುವ ಸುಸಂದರ್ಭವಾಗಿದೆ. ಎಲ್ಲಾ ಕುಟುಂಬಗಳು ಮತ್ತು ಸಮುದಾಯಗಳು ತಮ್ಮ ನಡುವೆ ಸಂತೋಷ ಮತ್ತು ಶುಭ ಹಾರೈಕೆಗಳನ್ನು ಹಂಚಿಕೊಳ್ಳಲು ಇದು ಶುಭ ಸಂದರ್ಭವಾಗಿದೆ.
ಈದ್ ನಮಗೆಲ್ಲರಿಗೂ ಶಾಂತಿ, ಸಮೃದ್ಧಿ ಮತ್ತು ಸಂತೋಷ ತರಲಿ, ಇದು ಶುಭ ಹಾರೈಕೆಗಳು..
***
(Release ID: 1935936)
Visitor Counter : 152