ಉಪರಾಷ್ಟ್ರಪತಿಗಳ ಕಾರ್ಯಾಲಯ
ಯೋಗ ನಮ್ಮ ಸಂಸ್ಕೃತಿಯ ಅವಿಭಾಜ್ಯ ಅಂಗ; ಇಡೀ ಮಾನವಕುಲದ ಕಲ್ಯಾಣಕ್ಕಾಗಿ ಸಹಕಾರಿ
ಜಬಲ್ಪುರದಲ್ಲಿ ನಡೆದ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯಲ್ಲಿ ಉಪರಾಷ್ಟ್ರಪತಿ ಭಾಗಿ
ಭಾರತದ ಪ್ರಯತ್ನದಿಂದ, ಯೋಗ ದಿನವು ಇದು ವಿಶ್ವದ ಹಬ್ಬವಾಗಿದೆ: ಉಪರಾಷ್ಟ್ರಪತಿ
ಯೋಗ ಕೇವಲ ಒಂದು ದಿನದ ಕಾರ್ಯ ಅಲ್ಲ, ಬದಲಿಗೆ ಅದು ನಮ್ಮ ಜೀವನದ ಅವಿಭಾಜ್ಯ ಅಂಗವಾಗಬೇಕು: ಉಪ ರಾಷ್ಟ್ರಪತಿ
Posted On:
21 JUN 2023 5:31PM by PIB Bengaluru
ಯೋಗವು ದೇಹ, ಮನಸ್ಸು ಮತ್ತು ಆತ್ಮದ ಏಕತೆಗೆ ಸಹಕಾರಿಯಾಗಿದೆ. ಈ ಪುರಾತನ ವಿಜ್ಞಾನ ಪದ್ಧತಿಯು ಕೇವಲ ವ್ಯಕ್ತಿಗಳ ಮೇಲೆ ಕೇಂದ್ರೀಕರಿಸುವುದಿಲ್ಲ, ಆದರೆ ಇಡೀ ಮನುಕುಲದ ಯೋಗಕ್ಷೇಮಕ್ಕೆ ಒತ್ತು ನೀಡುತ್ತದೆ ಎಂದು ಉಪರಾಷ್ಟ್ರಪತಿ ಶ್ರೀ ಜಗದೀಪ್ ಧನಕರ್ ತಿಳಿಸಿದರು. ಈ ಸಂದರ್ಭದಲ್ಲಿ, ಅವರು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರ ಹೇಳಿಕೆಯನ್ನು ಉಲ್ಲೇಖಿಸಿ, ಯೋಗವನ್ನು "ಶೂನ್ಯ-ಬಜೆಟ್ ಆರೋಗ್ಯ ಭರವಸೆ" ಎಂದು ಹೇಳಿದರು.
ಇಂದು ಮಧ್ಯಪ್ರದೇಶದ ಜಬಲ್ಪುರದಲ್ಲಿ 9ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಉದ್ದೇಶಿಸಿ ಮಾತನಾಡಿದ ಉಪರಾಷ್ಟ್ರಪತಿ, ಯೋಗವು ಒಂದೇ ಒಂದು ವಿಶೇಷ ದಿನ ಅಥವಾ ಸಂದರ್ಭಕ್ಕಾಗಿ ಅಲ್ಲ, ಆದರೆ ಜನರ ದೈನಂದಿನ ಜೀವನದ ಅವಿಭಾಜ್ಯ ಅಂಶವಾಗಬೇಕು ಎಂದು ಸಲಹೆ ನೀಡಿದರು.
ಈ ವರ್ಷದ ಅಂತಾರಾಷ್ಟ್ರೀಯ ಯೋಗ ದಿನದ ಧ್ಯೇಯವಾಕ್ಯ- 'ಯೋಗ ಫಾರ್ ವಸುಧೈವ ಕುಟುಂಬಕಂ'. ಭಾರತದ G-20 ಅಧ್ಯಕ್ಷೀಯ ಈ ಘೋಷವಾಕ್ಯ ಬಗ್ಗೆ ಉಪರಾಷ್ಟ್ರಪತಿಗಳು ಗಮನ ಸೆಳೆದರು. 'ಒಂದು ಭೂಮಿ, ಒಂದು ಕುಟುಂಬ, ಒಂದು ಭವಿಷ್ಯ' . ಇದು ದೇಶಗಳನ್ನು ಒಂದುಗೂಡಿಸಲು ಮತ್ತು ಜಾಗತಿಕ ಶಾಂತಿ ಮತ್ತು ಸ್ನೇಹದ ಸಂದೇಶವನ್ನು ಹೆಚ್ಚಿಸಲು ಭಾರತದ ಬದ್ಧತೆಗೆ ಸಾಕ್ಷಿಯಾಗಿದೆ ಎಂದು ಅವರು ಹೇಳಿದರು.
ವಿಶ್ವಸಂಸ್ಥೆಯ 69 ನೇ ಸಾಮಾನ್ಯ ಅಧಿವೇಶನದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಜೂನ್ 21 ಅನ್ನು ಅಂತಾರಾಷ್ಟ್ರೀಯ ಯೋಗ ದಿನವನ್ನಾಗಿ ಆಚರಿಸಬೇಕು ಎಂದು ಪ್ರಸ್ತಾಪಿಸಿದ್ದರು. ಇದು ನಿಜಕ್ಕೂ ದಿಟ್ಟ ನಾಯಕತ್ವದ ಪ್ರತೀಕ ಎಂದು ಜಗದೀಪ್ ಧನಕರ್ ಶ್ಲಾಘಿಸಿದರು. ಅತ್ಯಂತ ಕಡಿಮೆ ಸಮಯದಲ್ಲಿ 193 ದೇಶಗಳು ಪ್ರಸ್ತಾವನೆಯನ್ನು ಸರ್ವಾನುಮತದಿಂದ ಅಂಗೀಕರಿಸಿದ್ದು ನಿಜಕ್ಕೂ ಸ್ಮರಣೀಯ ಎಂದು ನೆನಪು ಮಾಡಿಕೊಂಡರು. ಭಾರತದ ಪ್ರಯತ್ನದಿಂದ ಯೋಗ ದಿನವು ವಿಶ್ವ ಹಬ್ಬವಾಗಿದೆ ಎಂದು ಉಪರಾಷ್ಟ್ರಪತಿಗಳು ತಿಳಿಸಿದರು.
ಯೋಗವು ಭಾರತದ ಸಾಂಸ್ಕೃತಿಕ ಮತ್ತು ನಾಗರೀಕತೆಯ ನೀತಿಯ ಅವಿನಾಭಾವ ಅಂಶವಾಗಿದೆ. ರಾಷ್ಟ್ರದ ಪ್ರಗತಿಯನ್ನು ಸುಗಮಗೊಳಿಸುವಲ್ಲಿ ಇದರ ಪಾತ್ರ ಪ್ರಮುಖವಾಗಿದೆ. ಅಂತಾರಾಷ್ಟ್ರೀಯ ಯೋಗ ದಿನವನ್ನು ಆಚರಿಸುವಲ್ಲಿ ಪ್ರಪಂಚದಾದ್ಯಂತ ದೇಶಗಳು ಭಾಗವಹಿಸುವ ಮೂಲಕ ಹೆಚ್ಚು ಶಕ್ತಿ ಮತ್ತು ಉತ್ಸಾಹ ತುಂಬುತ್ತಿವೆ. ವಿಶ್ವ ಯೋಗ ದಿನ ಈಗ ವಿಶ್ವದ ಹಬ್ಬವಾಗಿದೆ ಎಂದು ಮೆಚ್ಚುಗೆಯನ್ನು ವ್ಯಕ್ತಪಡಿಸಿದರು.
ಮಧ್ಯಪ್ರದೇಶದ ರಾಜ್ಯಪಾಲ ಶ್ರೀ ಮಂಗು ಭಾಯಿ ಪಟೇಲ್, ಮಧ್ಯಪ್ರದೇಶದ ಮುಖ್ಯಮಂತ್ರಿ ಶ್ರೀ ಶಿವರಾಜ್ ಸಿಂಗ್ ಚೌಹಾಣ್, ಕೇಂದ್ರ ಆಯುಷ್ ಸಚಿವ ಶ್ರೀ ಸರ್ಬಾನಂದ ಸೋನಾವಾಲ್, ಪದ್ಮಭೂಷಣ ಪುರಸ್ಕೃತರು ಮತ್ತು ಶ್ರೀ ರಾಮಚಂದ್ರ ಮಿಷನ್ ಅಧ್ಯಕ್ಷರು, 'ದಾಜಿ' ಕಮಲೇಶ್ ಪಟೇಲ್, ಸಂಸತ್ ಸದಸ್ಯರು ಮತ್ತು ಇತರ ಗಣ್ಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಪೂರ್ಣ ಭಾಷಣಕ್ಕೆ ಇಲ್ಲಿ ಕ್ಲಿಕ್ ಮಾಡಿ
https://www.pib.gov.in/PressReleseDetail.aspx?PRID=1933911
****
(Release ID: 1934359)