ವಾರ್ತಾ ಮತ್ತು ಪ್ರಸಾರ ಸಚಿವಾಲಯ

ಕೇಂದ್ರ ಮಾಹಿತಿ ಮತ್ತು ಪ್ರಸಾರ, ಯುವ ವ್ಯವಹಾರ ಮತ್ತು ಕ್ರೀಡಾ ಸಚಿವ ಶ್ರೀ ಅನುರಾಗ್ ಸಿಂಗ್ ಠಾಕೂರ್ ಅವರು ಮೂರು ದಿನಗಳ ಮುಂಬೈ ಪ್ರವಾಸ ಕೈಗೊಂಡಿದ್ದು, ಈ ಸಂದರ್ಭ ಶ್ರೀಮತಿ ವಂದನಾ ಗುಪ್ತೆ ಮತ್ತು ಡಾ. ಸಂಧ್ಯಾ ಪುರೇಚಾ ಅವರನ್ನು ಭೇಟಿ ಮಾಡಿದರು.


ಉತ್ತಮ ಸೇವೆ, ಉತ್ತಮ ಆಡಳಿತ ಮತ್ತು ಬಡವರ ಕಲ್ಯಾಣಕ್ಕಾಗಿ ಮೀಸಲಾದ ಸರ್ಕಾರದ 9 ವರ್ಷಗಳ ಆಡಳಿತಾವಧಿಯು ಅತ್ಯಂತ ಯಶಸ್ವಿಯಾಗಿದೆ: ಅನುರಾಗ್ ಸಿಂಗ್ ಠಾಕೂರ್

Posted On: 20 JUN 2023 7:04PM by PIB Bengaluru

ಕೇಂದ್ರ ಮಾಹಿತಿ ಮತ್ತು ಪ್ರಸಾರ ಮತ್ತು ಯುವ ವ್ಯವಹಾರ ಮತ್ತು ಕ್ರೀಡಾ ಸಚಿವ ಶ್ರೀ ಅನುರಾಗ್ ಸಿಂಗ್ ಠಾಕೂರ್ ಮೂರು ದಿನಗಳ ಕಾಲ ಮುಂಬೈ ಪ್ರವಾಸ ಕೈಗೊಂಡಿದ್ದು ಈ ಸಂದರ್ಭದಲ್ಲಿ ಗಣ್ಯರನ್ನು ಭೇಟಿ ಮಾಡಿ ಚರ್ಚೆ ನಡೆಸಿದರು. ಮುಂಬೈಗೆ ಭೇಟಿ ನೀಡಿದ ಸಂದರ್ಭದಲ್ಲಿ ಮರಾಠಿ ಮತ್ತು ಹಿಂದಿ ಚಲನಚಿತ್ರ ಮತ್ತು ರಂಗಭೂಮಿ ಖ್ಯಾತ ನಟಿ ಶ್ರೀಮತಿ ವಂದನಾ ಗುಪ್ತೆ ಮತ್ತು ಸಂಗೀತ ನಾಟಕ ಅಕಾಡೆಮಿ ಅಧ್ಯಕ್ಷೆ ಡಾ. ಸಂಧ್ಯಾ ಪುರೇಚಾ ಅವರನ್ನು ಅವರ ನಿವಾಸಗಳಲ್ಲಿ ಭೇಟಿ ಮಾಡಿ ಸಚಿವರು ಮಾತುಕತೆ ನಡೆಸಿದರು. 

ಕಳೆದ 9 ವರ್ಷಗಳಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ನೇತೃತ್ವದಲ್ಲಿ ಸರ್ಕಾರ ಮಾಡಿರುವ ಅಭೂತಪೂರ್ವ ಕಾರ್ಯಗಳ ಕುರಿತು ಈ ವೇಳೆ ಚರ್ಚಿಸಿದರು. ಉತ್ತಮ ಸೇವೆ, ಉತ್ತಮ ಆಡಳಿತ ಮತ್ತು ಬಡವರ ಕಲ್ಯಾಣಕ್ಕಾಗಿ ಮೀಸಲಾಗಿರುವ ಸರ್ಕಾರದ 9 ವರ್ಷಗಳ ಆಡಳಿತವು ಅತ್ಯಂತ ಯಶಸ್ವಿಯಾಗಿದೆ ಎಂದು ಸಚಿವರು ಹೇಳಿದರು.
ಹಿರಿಯ ನಟಿ ಶ್ರೀಮತಿ ವಂದನಾ ಗುಪ್ತೆ ಅವರನ್ನು ಅವರ ನಿವಾಸದಲ್ಲಿ ಭೇಟಿ ಮಾಡಿದ ಸಚಿವರು ಕೇಂದ್ರ ಸರ್ಕಾರದ ಯೋಜನೆಗಳನ್ನು ವಿವರಿಸುವ ಕಿರು ಹೊತ್ತಗೆಯನ್ನು ಉಡುಗೊರೆಯಾಗಿ ನೀಡಿದರು. 

ಭೇಟಿಯ ಕುರಿತು ಮಾತನಾಡಿದ ಶ್ರೀಮತಿ ವಂದನಾ ಗುಪ್ತೆ, ' ಕೇಂದ್ರ ಸಚಿವರ ಭೇಟಿಯಿಂದ ನನಗೆ ಸಂತೋಷವಾಗಿದೆ ಮತ್ತು ಗೌರವ ಎನಿಸಿದೆ. ರಂಗಭೂಮಿಯಲ್ಲಿ ಕೆಲಸ ಮಾಡುವವರು ಎದುರಿಸುತ್ತಿರುವ ವಿವಿಧ ಸಮಸ್ಯೆಗಳ ಕುರಿತು ನಾವು ಚರ್ಚಿಸಿದ್ದೇವೆ ಮತ್ತು ಚಲನಚಿತ್ರದಂತೆ ರಂಗಭೂಮಿಯನ್ನು ಸಹ ಉದ್ಯಮವಾಗಿ ಘೋಷಿಸಬೇಕು. ಇದರಿಂದ ಕೆಲಸ ಮಾಡುವ ವ್ಯಕ್ತಿಗಳು ತಮ್ಮ ಹಕ್ಕುಗಳನ್ನು ಪ್ರತಿಪಾದಿಸಬಹುದು. ಈ ಕುರಿತು ಸಚಿವರಲ್ಲಿ ನಾನು ವಿನಂತಿ ಮಾಡಿದ್ದೇನೆ. ಕಳೆದ ಒಂಬತ್ತು ವರ್ಷಗಳ ಸರ್ಕಾರದ ಸಾಧನೆಗಳ ಬಗ್ಗೆಯೂ ಚರ್ಚಿಸಿದ್ದೇವೆ’ ಎಂದು ಹೇಳಿದರು.

(ಮಾಹಿತಿ ಮತ್ತು ಪ್ರಸಾರ ಮತ್ತು ಯುವ ವ್ಯವಹಾರಗಳು ಮತ್ತು ಕ್ರೀಡೆಗಳ ಕೇಂದ್ರ ಸಚಿವರು, ಶ್ರೀ. ಅನುರಾಗ್ ಸಿಂಗ್ ಠಾಕೂರ್ ಅವರು ಹಿರಿಯ ನಟಿ ಶ್ರೀಮತಿ ವಂದನಾ ಗುಪ್ತೆ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದರು)


ಶ್ರೀ. ಅನುರಾಗ್ ಸಿಂಗ್ ಠಾಕೂರ್ ಅವರು W20, ಮತ್ತು ಸಂಗೀತ ನಾಟಕ ಅಕಾಡೆಮಿ ಅಧ್ಯಕ್ಷರು, ಪ್ರಶಸ್ತಿ ವಿಜೇತ ನೃತ್ಯ ಗುರು ಡಾ. ಸಂಧ್ಯಾ ಪುರೇಚಾ ಅವರ ನಿವಾಸಕ್ಕೆ ಭೇಟಿ ನೀಡಿದರು ಮತ್ತು ಕೇಂದ್ರ ಸರ್ಕಾರದ ಕಾರ್ಯಗಳನ್ನು ವಿವರಿಸುವ ಕಿರುಪುಸ್ತಕವನ್ನು ಉಡುಗೊರೆಯಾಗಿ ನೀಡಿದರು. ಭೇಟಿಯ ಕುರಿತು ಮಾತನಾಡಿದ ಡಾ. ಸಂಧ್ಯಾ ಪುರೇಚ, ಡಬ್ಲ್ಯು 20 ಸಂವಹನದ ಕುರಿತು ಸಚಿವರೊಂದಿಗೆ ಚರ್ಚಿಸಿದ್ದೇನೆ.  ಸಂಗೀತ ನಾಟಕ ಅಕಾಡೆಮಿಯ ಅಧ್ಯಕ್ಷರಾಗಿರುವುದರಿಂದ, ಭಾರತೀಯ ಕಲೆ ಮತ್ತು ಸಂಸ್ಕೃತಿಗೆ ಸಂಬಂಧಿಸಿದ ವಿಷಯಗಳಲ್ಲಿ ಯುವಕರ ಪಾಲ್ಗೊಳ್ಳುವಿಕೆ ಕುರಿತು ಮಾತುಕತೆ ನಡೆಸಲಾಯಿತು.  ಇದೇ ಸಂದರ್ಭದಲ್ಲಿ ತಾವು ಅನುವಾದ ಮಾಡಿರುವ ಐದನೇ ವೇದವೆಂದೇ ಕರೆಯಲ್ಪಡುವ ನಾಟ್ಯಶಾಸ್ತ್ರ ಪುಸ್ತಕವನ್ನು ಡಾ. ಸಂಧ್ಯಾ ಪುರೇಚಾ ಅವರು ಸಚಿವರಿಗೆ ನೀಡಿದರು.

(ಮಾಹಿತಿ ಮತ್ತು ಪ್ರಸಾರ ಮತ್ತು ಯುವ ವ್ಯವಹಾರಗಳು ಮತ್ತು ಕ್ರೀಡೆಗಳ ಕೇಂದ್ರ ಸಚಿವರು, ಶ್ರೀ. ಅನುರಾಗ್ ಸಿಂಗ್ ಠಾಕೂರ್ ಅವರು ಹಿರಿಯ ನೃತ್ಯ ಗುರು ಡಾ. ಸಂಧ್ಯಾ ಪುರೇಚಾ ಅವರನ್ನು ಭೇಟಿ ಮಾಡಿದರು)



(Release ID: 1933894) Visitor Counter : 99