ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯ
azadi ka amrit mahotsav

ಏಪ್ರಿಲ್, 2023 ರಲ್ಲಿ ಇಎಸ್ಐ ಯೋಜನೆಯಡಿಯಲ್ಲಿ 17.88 ಲಕ್ಷ ಹೊಸ ಉದ್ಯೋಗಿಗಳನ್ನು ಸೇರಿಸಲಾಗಿದೆ


ಹೆಚ್ಚಿನ ಹೊಸ ನೋಂದಣಿಗಳು 25 ವರ್ಷ ವಯಸ್ಸಿನವರೆಗಿನ ಯುವ ಉದ್ಯೋಗಿಗಳನ್ನು ಒಳಗೊಂಡಿವೆ

ಏಪ್ರಿಲ್ 2023 ರಲ್ಲಿ ಇಎಸ್ಐ ಯೋಜನೆಯಡಿಯಲ್ಲಿ ಸುಮಾರು 30,249 ಹೊಸ ಸಂಸ್ಥೆಗಳು ನೋಂದಾಯಿಸಲ್ಪಟ್ಟಿವೆ

ಏಪ್ರಿಲ್, 2023 ರಲ್ಲಿ 63 ತೃತೀಯಲಿಂಗಿ ಉದ್ಯೋಗಿಗಳಿಗೆ ಇಎಸ್ಐ ಯೋಜನೆಯ ಪ್ರಯೋಜನಗಳನ್ನು ಒದಗಿಸಲಾಗಿದೆ

Posted On: 19 JUN 2023 8:19PM by PIB Bengaluru

ಕಾರ್ಮಿಕರ ರಾಜ್ಯ ವಿಮಾ ಯೋಜನೆ ವೈದ್ಯಕೀಯ ಸೇವೆ (ಇಎಸ್ಐ) ಯ ತಾತ್ಕಾಲಿಕ ವೇತನದಾರರ ದತ್ತಾಂಶವು ಏಪ್ರಿಲ್, 2023 ರಲ್ಲಿ 17.88 ಲಕ್ಷ ಹೊಸ ಉದ್ಯೋಗಿಗಳನ್ನು ಸೇರಿಸಲಾಗಿದೆ ಎಂದು ತಿಳಿಸುತ್ತದೆ. 2023,ಏಪ್ರಿಲ್ ತಿಂಗಳಲ್ಲಿ ಸುಮಾರು 30,249 ಹೊಸ ಸಂಸ್ಥೆಗಳು ನೋಂದಾಯಿಸಲ್ಪಟ್ಟಿವೆ  ಮತ್ತು   ಕಾರ್ಮಿಕರ ರಾಜ್ಯ ವಿಮಾ ನಿಗಮದ ಸಾಮಾಜಿಕ ಭದ್ರತಾ   ಯೋಜನೆ ಅಡಿಯಲ್ಲಿ ತರಲಾಗಿದೆ. ಇದು ಹೆಚ್ಚಿನ ವ್ಯಾಪ್ತಿಯನ್ನು ಖಾತ್ರಿಪಡಿಸುತ್ತದೆ.

 ಏಪ್ರಿಲ್ 2023ರಲ್ಲಿ ಒಟ್ಟು 17.88 ಲಕ್ಷ ಉದ್ಯೋಗಿಗಳಲ್ಲಿ 25 ವರ್ಷ ವಯಸ್ಸಿನವರೆಗಿನ 8.37 ಲಕ್ಷ ಉದ್ಯೋಗಿಗಳು ಹೊಸ ನೋಂದಣಿಗಳ ಗರಿಷ್ಠ ಪಾಲನ್ನು ಹೊಂದಿದ್ದು, ಅಂದರೆ ಸೇರಿಸಲಾದ ಒಟ್ಟು ಉದ್ಯೋಗಿಗಳ   47%  ರಷ್ಟಿದ್ದು, ದೇಶದ ಯುವಕರಿಗೆ ಹೆಚ್ಚಿನ ಉದ್ಯೋಗಗಳನ್ನು ಸೃಷ್ಟಿಸಲಾಗಿದೆ ಎಂದು ದೃಢಪಡಿಸುವ ದತ್ತಾಂಶವು   
ವೇತನದಾರರ ದತ್ತಾಂಶದ ಲಿಂಗ-ವಾರು ವಿಶ್ಲೇಷಣೆಯು ಏಪ್ರಿಲ್, 2023 ರಲ್ಲಿ ನಿವ್ವಳ ಮಹಿಳಾ ಸದಸ್ಯರ ದಾಖಲಾತಿ 3.53 ಲಕ್ಷ ಎಂದು ಸೂಚಿಸುತ್ತದೆ. ಒಟ್ಟು 63 ತೃತೀಯಲಿಂಗಿ ಉದ್ಯೋಗಿಗಳು ಏಪ್ರಿಲ್ 2023 ರಲ್ಲಿ ಇಎಸ್ಐ ಯೋಜನೆಯಡಿ ನೋಂದಾಯಿಸಿಕೊಂಡಿದ್ದಾರೆ ಎಂದು ದತ್ತಾಂಶವು ತೋರಿಸುತ್ತದೆ. ಇಎಸ್ಐಸಿ  ಸಮಾಜದ ಪ್ರತಿಯೊಂದು ವರ್ಗಕ್ಕೂ ಅದರ ಪ್ರಯೋಜನಗಳನ್ನು ತಲುಪಿಸಲು ಬದ್ಧವಾಗಿದೆ.

ವೇತನಕ್ಕೆ ಸಂಬಂಧಿಸಿದ ಈ ಅಂಕಿಅಂಶಗಳು ತಾತ್ಕಾಲಿಕವಾಗಿರುತ್ತವೆ, ಏಕೆಂದರೆ ದತ್ತಾಂಶಗಳ ರಚನೆಯು ನಿರಂತರವಾಗಿರುತ್ತವೆ. 

***


(Release ID: 1933664) Visitor Counter : 147


Read this release in: English , Urdu , Hindi , Telugu