ಸಂಸ್ಕೃತಿ ಸಚಿವಾಲಯ
azadi ka amrit mahotsav g20-india-2023

ಮುಂಬೈನ ಆಧುನಿಕ ಕಲೆಗಳ ರಾಷ್ಟ್ರೀಯ ಗ್ಯಾಲರಿ(ಎನ್ ಜಿಎಂಎ) ಆಯೋಜಿಸಿದ್ದ 'ಮಹಾರಾಜರ ಕಾಲದ ಅತ್ಯಮೂಲ್ಯ ವಸ್ತುಗಳ ಭಂಡಾರ: ಏರ್ ಇಂಡಿಯಾ ಸಂಗ್ರಹದ ಆಯ್ದ ಕಲಾಕೃತಿಗಳು' ಶೀರ್ಷಿಕೆಯ ಕಲಾ ಪ್ರದರ್ಶನ ಉದ್ಘಾಟಿಸಿದ ಸಂಸ್ಕೃತಿ ಮತ್ತು ವಿದೇಶಾಂಗ ವ್ಯವಹಾರಗಳ ಸಹಾಯಕ(ರಾಜ್ಯ) ಸಚಿವಾಲಯ


" ದೇಶವು ಆಜಾದಿ ಕಾ ಅಮೃತ ಮಹೋತ್ಸವ ಆಚರಿಸುತ್ತಿರುವ ವಿಶೇಷ ಕಾಲಘಟ್ಟದಲ್ಲಿ ನಾವು ನಮ್ಮ ಶ್ರೀಮಂತ ಸಂಪ್ರದಾಯಗಳ ಬಗ್ಗೆ ಹೆಮ್ಮೆಪಡಬೇಕು, ಅರ್ಥ ಮಾಡಿಕೊಳ್ಳಬೇಕು"

Posted On: 14 JUN 2023 2:34PM by PIB Bengaluru

ಮುಂಬೈ, ಜೂನ್ 14, 2023

 

ಕೇಂದ್ರ ಸಂಸ್ಕೃತಿ ಸಚಿವಾಲಯದ ಅಡಿ, ಮುಂಬೈನ ‘ನ್ಯಾಷನಲ್ ಗ್ಯಾಲರಿ ಆಫ್ ಮಾಡರ್ನ್ ಆರ್ಟ್(ಎನ್ ಜಿಎಂಎ)’ ಆಯೋಜಿಸಿರುವ 'ಮಹಾರಾಜರ ಕಾಲದ ಅತ್ಯಮೂಲ್ಯ ವಸ್ತುಗಳ ಭಂಡಾರ: ಏರ್ ಇಂಡಿಯಾ ಸಂಗ್ರಹದ ಆಯ್ದ ಕಲಾಕೃತಿಗಳು' ಶೀರ್ಷಿಕೆಯ ಕಲಾ ಪ್ರದರ್ಶನವನ್ನು ಕೇಂದ್ರ ವಿದೇಶಾಂಗ ಮತ್ತು ಸಂಸ್ಕೃತಿ ಖಾತೆ ರಾಜ್ಯ ಸಚಿವೆ ಶ್ರೀಮತಿ ಮೀನಾಕ್ಷಿ ಲೇಖಿ ಮಂಗಳವಾರ ಸಂಜೆ (ಜೂನ್ 13, 2023) ಉದ್ಘಾಟಿಸಿದರು. ಏರ್ ಇಂಡಿಯಾ ಸಂಸ್ಥೆಯು ವಿಮಾನ ಪ್ರಯಾಣದ ಅನುಭವವನ್ನು ಮರುವ್ಯಾಖ್ಯಾನಿಸಲು ಬಳಸಿದ ಕಲಾಕೃತಿಗಳ ಮೇಲೆ ಗಮನ ಕೇಂದ್ರೀಕರಿಸಲು ಮತ್ತು ವಿಎಸ್ ಗೈತೊಂಡೆ, ಜಿಆರ್ ಸಂತೋಷ್, ಕೆಎಚ್ ಆರಾ, ಬಿ ಪ್ರಭಾ, ಪಿಲ್ಲೂ ಪೋಚ್ಖಾನ್ವಾಲಾ, ಎಂಎಫ್ ಹುಸೇನ್ ಮತ್ತು ರಾಘವ್ ಕನೇರಿಯಾ ಅವರಂತಹ ಪ್ರಖ್ಯಾತ ಕಲಾವಿದರ ವರ್ಣಚಿತ್ರಗಳು ಮತ್ತು ಶಿಲ್ಪಕಲೆಗಳನ್ನು ಪ್ರದರ್ಶಿಸಲು ಈ ಅಪರೂಪದ ವಿಶೇಷ ಪ್ರದರ್ಶನ ಆಯೋಜಿಸಲಾಗಿದೆ. ಎನ್ ಜಿಎಂಎಯ ಆಂತರಿಕ ಅಥವಾ ಒಳಾಂಗಣ ಕಲಾಕೃತಿಗಳ ವಸ್ತುಪ್ರದರ್ಶನವು ಸುಮಾರು 200 ಕಲಾಕೃತಿಗಳ ವಿಷಯಾಧಾರಿತ ಪ್ರದರ್ಶನ ಒಳಗೊಂಡಿದೆ. ಈ ಪ್ರದರ್ಶನವು ಮುಂಬೈ ಕೋಟೆಯಲ್ಲಿರುವ ಪ್ರತಿಷ್ಠಿತ ‘ನೇಷನ್ ಗ್ಯಾಲರಿ ಆಫ್ ಮಾಡರ್ನ್ ಆರ್ಟ್‌’ನಲ್ಲಿ 2023 ಆಗಸ್ಟ್ 13ರ ವರೆಗೆ ಮುಂದುವರಿಯಲಿದೆ.

ಈ ಸಂದರ್ಭದಲ್ಲಿ ಮಾತನಾಡಿದ ಸಂಸ್ಕೃತಿ ಮತ್ತು ವಿದೇಶಾಂಗ ವ್ಯವಹಾರಗಳ ರಾಜ್ಯ ಸಚಿವೆ ಮೀನಾಕ್ಷಿ ಲೇಖಿ, “ಇದು ನಿಜವಾಗಿಯೂ ಮಹಾರಾಜರ ಕಾಲದ ಅಪರೂಪದ, ಅತ್ಯಮೂಲ್ಯ ವಸ್ತುಗಳ ಸಂಗ್ರಹವಾಗಿದೆ. ಏಕೆಂದರೆ ಏರ್ ಇಂಡಿಯಾದ 80 ವರ್ಷಗಳ ಯಶೋಗಾಥೆಯನ್ನು ಸಾರುವ ವರ್ಣಚಿತ್ರಗಳು ಮತ್ತು ಕಲಾಕೃತಿಗಳನ್ನು ಇಲ್ಲಿ ಪ್ರದರ್ಶನಕ್ಕೆ ಇಡಲಾಗಿದೆ. ಕಲಾಕೃತಿಗಳನ್ನು ಹುಡುಕುತ್ತಿರುವಾಗ ಕಲಾವಿದರಿಗೆ ಪ್ರೋತ್ಸಾಹ ನೀಡಿದ ಏರ್ ಇಂಡಿಯಾಕ್ಕೆ ನಾವು ಕೃತಜ್ಞರಾಗಿರುತ್ತೇವೆ. ಕಲಾವಿದರು ತಮ್ಮನ್ನು ತಾವು ನೋಡಿಕೊಳ್ಳಬೇಕಾದರೆ ಅವರಿಗೆ ಯಾವಾಗಲೂ ಪ್ರೋತ್ಸಾಹದ ಅಗತ್ಯವಿದೆ. ಕಲಾವಿದರು ತಮ್ಮಲ್ಲಿ ದೇವರ ಅಂಶವನ್ನು ಹೊಂದಿದ್ದಾರೆ. ಏಕೆಂದರೆ ಅವರು ಯಾವಾಗಲೂ ಒಳ್ಳೆಯದನ್ನು ಮತ್ತಷ್ಟು ಉತ್ತಮವಾಗಿ ಮಾಡಲು ಮತ್ತು ತಮ್ಮನ್ನು ತಾವು ಉನ್ನತೀಕರಿಸಲು ತಮ್ಮೊಂದಿಗೇ ಸ್ಪರ್ಧಿಸುತ್ತಾರೆ.  ದೇಶವು ವಿಶೇಷವಾಗಿ ಆಜಾದಿ ಕಾ ಅಮೃತ ಮಹೋತ್ಸವ ಆಚರಿಸುತ್ತಿರುವ ಸಮಯದಲ್ಲಿ ನಾವು ನಮ್ಮ ಶ್ರೀಮಂತ ಸಂಪ್ರದಾಯಗಳ ಬಗ್ಗೆ ಹೆಮ್ಮೆಪಡಬೇಕು ಮತ್ತು ಅರ್ಥ ಮಾಡಿಕೊಳ್ಳಬೇಕು ಎಂದು ಅವರು ಹೇಳಿದರು. "ನಾವು ಯಾರು ಎಂಬುದರ ಬಗ್ಗೆ ನಾವು ಹೆಮ್ಮೆಪಟ್ಟಾಗ ಮಾತ್ರ ನಾವು ಕಲೆ ಮತ್ತು ಕರಕುಶಲತೆ ಉತ್ತೇಜಿಸಬಹುದು". ಭಾರತದ 80 ವರ್ಷಗಳ ಯಶೋಗಾಥೆಯನ್ನು ನಿಜವಾದ ಆಜಾದಿ ಕಾ ಅಮೃತ್ ಮಹೋತ್ಸವ ಕಾಲಘಟ್ಟದಲ್ಲಿ ಅನೇಕ ಸ್ಥಳಗಳಲ್ಲಿ ಹಲವಾರು ಬಾರಿ ಹೇಳಬೇಕಾಗಿದೆ ಎಂದು ಹೇಳಿದರು.

ಕಲೆ, ಕರಕುಶಲ ಮತ್ತು ಸಂಸ್ಕೃತಿಯಲ್ಲಿ ಭಾರತ ಯಾವಾಗಲೂ ಶ್ರೀಮಂತ ರಾಷ್ಟ್ರವಾಗಿದೆ. ಅದು ಭವಿಷ್ಯದಲ್ಲೂ ಮುಂದುವರಿಯುತ್ತದೆ. ದೇಶದಲ್ಲಿ ನಡೆಯುತ್ತಿರುವ ಮೂಲಸೌಕರ್ಯ ಕಾಮಗಾರಿಗಳಿಂದಾಗಿ ನಾವು ಇಂದು 'ವಿಕಾಸ್ ಕಿ ವಿರಾಸತ್'  ನೋಡುತ್ತಿದ್ದೇವೆ. ಆದರೆ ಏಕಕಾಲದಲ್ಲಿ ಸರ್ಕಾರವು ದೇಶದ ಸಾಂಸ್ಕೃತಿಕ ಪರಂಪರೆಗೆ ಸಮಾನ ಒತ್ತು ನೀಡುತ್ತಿದೆ. ಎಲ್ಲಾ ಪ್ರಕಾರದ ಕಲೆ ಮತ್ತು ಸಂಸ್ಕೃತಿಯ ಪ್ರಚಾರ, ಕೆಲವು ವಸ್ತುಸಂಗ್ರಹಾಲಯಗಳ ಸ್ಥಾಪನೆ, ಸಾಂಸ್ಕೃತಿಕ ಪರಂಪರೆಯ ಸಂರಕ್ಷಣೆ ಮತ್ತು ಹೊಸ ಪಾರಂಪರಿಕ ವಿಶ್ವವಿದ್ಯಾಲಯಗಳ ಸ್ಥಾಪನೆಗೆ ಸಂಬಂಧಿಸಿದಂತೆ ಪ್ರಧಾನ ಮಂತ್ರಿ ಅವರು ತಮ್ಮ ಕೊಡುಗೆಗಳು ಮತ್ತು ಕ್ರಿಯಾಯೋಜನೆಗಳ ಮೇಲೆ ಹೆಚ್ಚು ಗಮನ ಹರಿಸಿದ್ದಾರೆ ಎಂದು ಸಚಿವರು ಹೇಳಿದರು.

https://static.pib.gov.in/WriteReadData/userfiles/image/1Y6JF.jpg

ಮುಂಬೈನ ಎನ್ ಜಿಎಂಎ ನಿರ್ದೇಶಕಿ ನಜ್ನೀನ್ ಬಾನು ಮಾತನಾಡಿ, ಏರ್ ಇಂಡಿಯಾದಲ್ಲಿ ತನ್ನ ಪಾಲು ಹಿಂತೆಗೆದುಕೊಳ್ಳುವ ಸರ್ಕಾರದ ನಿರ್ಧಾರದ ಪರಿಣಾಮವಾಗಿ ಏರ್ ಇಂಡಿಯಾದ ಕಲೆಗಳು ಮತ್ತು ಕಲಾಕೃತಿಗಳ ಸಂಗ್ರಹವನ್ನು ಸಂಸ್ಕೃತಿ ಸಚಿವಾಲಯಕ್ಕೆ ಹಸ್ತಾಂತರಿಸಲು ನಿರ್ಧರಿಸಲಾಗಿದೆ. ಆ ಎಲ್ಲಾ ಕಲಾಕೃತಿಗಳನ್ನು ಇದೀಗ ಆಧುನಿಕ ಕಲೆಗಳ ಅಂತಾರಾಷ್ಟ್ರೀಯ ಗ್ಯಾಲರಿಯಲ್ಲಿ ಸಂರಕ್ಷಿಸಲಾಗಿದೆ ಮತ್ತು ಪ್ರದರ್ಶನಕ್ಕೆ ಇಡಲಾಗಿದೆ.  ಗಾಢ ಪ್ರಭಾವ ಬೀರುವ ವೈವಿಧ್ಯತೆ ಮತ್ತು ವಿಶಾಲ ಚಿಂತನೆಯ ಏರ್ ಇಂಡಿಯಾದ ಕಲಾಕೃತಿಗಳ ಸಂಗ್ರಹಣೆಯು ಇಂದು ಯಾವುದೇ ವಾಣಿಜ್ಯ ವಿಮಾನಯಾನದ ಇತಿಹಾಸದಲ್ಲಿ ಸರಿಸಾಟಿಯಿಲ್ಲದ ಸ್ಥಾನ ಹೊಂದಿದ್ದು, ಅನನ್ಯವಾಗಿದೆ ಎಂದರು.

ಈ ಸಂದರ್ಭದಲ್ಲಿ ಸಂಸ್ಕೃತಿ ಸಚಿವೆ ಶ್ರೀಮತಿ ಲೇಖಿ ಅವರು 'ಮಹಾರಾಜರ ಕಾಲದ ಅತ್ಯಮೂಲ್ಯ ವಸ್ತುಗಳ ಭಂಡಾರ: ಏರ್ ಇಂಡಿಯಾ ಸಂಗ್ರಹದ ಆಯ್ದ ಕಲಾಕೃತಿಗಳು' ಶೀರ್ಷಿಕೆಯ ಕಲಾ ಪ್ರದರ್ಶನದ ಗ್ರಂಥಪಟ್ಟಿ(ಕ್ಯಾಟಲಾಗ್)ಯನ್ನು ವಿಧ್ಯುಕ್ತವಾಗಿ ಬಿಡುಗಡೆ ಮಾಡಿದರು. ವಿಶ್ವದೆಲ್ಲೆಡೆಯಿಂದ ಆಗಮಿಸಿರುವ ಕಲಾವಿದರು ಮತ್ತು ಕಲಾಭಿಮಾನಿಗಳ ಉಪಸ್ಥಿತಿಯಿಂದ ಸಂಜೆಯ ಕಾರ್ಯಕ್ರಮಕ್ಕೆ ಮೆರುಗು ತಂದಿತು. ಕಲಾವಿದರಾದ ಡಾ. ಸರಯು ದೋಷಿ, ಫೆರೋಜಾ ಗೋದ್ರೇಜ್, ಬೃಂದಾ ಮಿಲ್ಲರ್, ನಯನಾ ಕನೋಡಿಯಾ, ವಿಪ್ತ ಕಪಾಡಿಯಾ, ನಂದಿತಾ ದೇಸಾಯಿ, ಪರಮೇಶ್ ಪಾಲ್, ವಿಶ್ವ ಸಾಹ್ನಿ, ಸೋನು ಗುಪ್ತಾ, ರಂಗಕರ್ಮಿ ರೇಲ್ ಪದಂಸೀ ಸೇರಿದಂತೆ ಹಲವರು ಕಾರ್ಯಕ್ರಮಕ್ಕೆ ಸಾಕ್ಷಿಯಾದರು. ಸಂಜೆ ಪ್ರದರ್ಶನಕ್ಕಾಗಿ ವಿಶೇಷವಾಗಿ ರೂಪಿಸಲಾದ ಕಥಕ್ ಮತ್ತು ಲಾವಣಿ ಪ್ರದರ್ಶನಗಳು ಕಣ್ಮನ ಸೆಳೆದವು.

ಕಲಾ-ಪ್ರದರ್ಶನದ ಪರಿಕಲ್ಪನೆಯ ಟಿಪ್ಪಣಿ:

ಏರ್ ಇಂಡಿಯಾ ಸಂಸ್ಥೆ ಆರಂಭದಿಂದಲೂ ಭಾರತದ ವಿವಿಧ ಕಲಾತ್ಮಕ ಸಂಪ್ರದಾಯಗಳಿಂದ ಕಲಾಕೃತಿಗಳನ್ನು ಸಂಗ್ರಹಿಸಿ ಅವುಗಳ ಪ್ರಚಾರ ಮಾಡುತ್ತಾ ಬಂದಿದೆ. ಸ್ವಾತಂತ್ರ್ಯದ ನಂತರ, ಕಲೆಗಳಿಗೆ ಸಾಂಪ್ರದಾಯಿಕ ಪ್ರೋತ್ಸಾಹ ಕ್ಷೀಣಿಸುತ್ತಾ ಬಂತು. ಈ ಸನ್ನಿವೇಶದಲ್ಲಿ, ಏರ್ ಇಂಡಿಯಾವು ಕಲಾಕೃತಿಗಳ ನಿಯೋಜನೆ ಮತ್ತು ಸಂಗ್ರಹಿಸುವಲ್ಲಿ ಪ್ರಮುಖ ಪಾತ್ರ ವಹಿಸಿತು. ಭಾರತದ ಕಲೆ ಮತ್ತು ಕರಕುಶಲತೆಯ ಈ ಉತ್ಸಾಹವು ಮಹಾರಾಜರ ಕಾಲದ ಗತವೈಭವ, ಐಶ್ವರ್ಯ ಮತ್ತು ಭವ್ಯತೆ ಸೆರೆಹಿಡಿಯಲು ಪ್ರಯತ್ನಿಸಿದ ವಿಮಾನಯಾನ ಸಂಸ್ಥೆಗೆ ಬಹಳ ಚಿತ್ರಣಗಳನ್ನು ಸೃಷ್ಟಿಸಲು, ಕಲೆ ಹಾಕಲು ಸಾಧ್ಯವಾಯಿತು. ದೇಶದ ಶ್ರೀಮಂತ ಕಲಾತ್ಮಕ ಪರಂಪರೆಗೆ ಹೊಸ ನೋಟ ನೀಡಲು, ಕಂಪನಿಯು ತನ್ನ ಬುಕಿಂಗ್ ಹೌಸ್‌ಗಳು, ಮಂಟಪಗಳು ಮತ್ತು ವಿಶ್ರಾಂತಿ ಕೋಣೆಗಳನ್ನು ತನ್ನ ಪ್ರಭಾವಶಾಲಿ ಕಲಾ ಸಂಗ್ರಹದೊಂದಿಗೆ ಪ್ರದರ್ಶಿಸಲು ಮತ್ತು ಅಲಂಕರಿಸಲು ಪ್ರಾರಂಭಿಸಿತು, ಅದು ವಿಶ್ವಾದ್ಯಂತ ಇರುವ ಪ್ರಯಾಣಿಕರ ಮನಸ್ಸನ್ನು ಸದಾ ಸೆರೆ ಹಿಡಿಯುತ್ತಾ ಬಂದಿದೆ.

 

****

 



(Release ID: 1932342) Visitor Counter : 127