ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯ

ಭಾರತ - ಯುಎಇ ಸಮಗ್ರ ಆರ್ಥಿಕ ಪಾಲುದಾರಿಕೆ ಒಪ್ಪಂದದ ಜಂಟಿ ಸಮಿತಿಯ ಮೊದಲನೇ ಸಭೆಯ ಯಶಸ್ವಿ ಮುಕ್ತಾಯ.


ಭಾರತ-ಯುಎಇ ಸಿಇಪಿಎ ಅಡಿಯಲ್ಲಿ ಸ್ಥಾಪಿಸಲಾದ ಸಮಿತಿಗಳು, ಉಪ-ಸಮಿತಿಗಳು ಮತ್ತು ತಾಂತ್ರಿಕ ಮಂಡಳಿಗಳ ಕಾರ್ಯಗತಗೊಳಿಸುವಿಕೆ 

ಭಾರತ ಮತ್ತು ಯುಎಇ 2030ರ ವೇಳೆಗೆ ಪೆಟ್ರೋಲಿಯಂಯೇತರ  ಉತ್ಪನ್ನಗಳ ವ್ಯಾಪಾರವನ್ನು 100 ಶತಕೋಟಿ ಡಾಲರ್ ನಷ್ಟು ದ್ವಿಗುಣಗೊಳಿಸಲು ಒಪ್ಪಿಗೆ ನೀಡಿವೆ.

ಶ್ರೀ ಪಿಯೂಷ್ ಗೋಯಲ್ ಅವರು ಭಾರತ-ಯುಎಇ ಸಮಗ್ರ ಆರ್ಥಿಕ ಪಾಲುದಾರಿಕೆ ಒಪ್ಪಂದವು,ಎರಡೂ ದೇಶಗಳ ಪಾಲುದಾರಿಕೆಯನ್ನು ನವೀಕೃತ ಉತ್ತೇಜನ ಮತ್ತು ವೇಗದೊಂದಿಗೆ ಈಗಾಗಲೇ, ಇರುವ ನಿಕಟ ಮತ್ತು ಬಲವಾದ ಸಂಬಂಧಕ್ಕೆ ಗಮನಾರ್ಹವಾಗಿ ಪರಿವರ್ತಿಸುತ್ತದೆ.

ಭಾರತ ಮತ್ತು ಯುಎಇ ನಡುವಿನ ದ್ವಿಪಕ್ಷೀಯ ವ್ಯಾಪಾರವು ಸುಮಾರು 16.5% ರಷ್ಟು ಬೆಳವಣಿಗೆಯೊಂದಿಗೆ ಲಭಿಸುವ ಆರಂಭಿಕ ಲಾಭವನ್ನು ಶ್ರೀ ಗೋಯಲ್ ಎತ್ತಿ ತೋರಿಸಿದರು.

Posted On: 12 JUN 2023 7:04PM by PIB Bengaluru

ಭಾರತ-ಯುಎಇ ಸಿಇಪಿಎಯ ಜಂಟಿ ಸಮಿತಿಯ (ಜೆಸಿ)  ಮೊದಲನೇ ಸಭೆಯನ್ನು ಭಾರತ ಮತ್ತು ಯುಎಇ ಯಶಸ್ವಿಯಾಗಿ ನಡೆಸಿವೆ. ಸಭೆಯಲ್ಲಿ, ಎರಡೂ ಕಡೆಯವರು, ಸಿಇಪಿಎ ಅಡಿಯಲ್ಲಿ ದ್ವಿಪಕ್ಷೀಯ ವ್ಯಾಪಾರವನ್ನು ಪರಿಶೀಲಿಸಿದರು, ಸಿಇಪಿಎ  ಅಡಿಯಲ್ಲಿ ಸ್ಥಾಪಿಸಲಾದ ಸಮಿತಿಗಳು,ಉಪ-ಸಮಿತಿಗಳು, ತಾಂತ್ರಿಕ ಮಂಡಳಿಯನ್ನು ಕಾರ್ಯಗತಗೊಳಿಸಲು ಒಪ್ಪಿಕೊಂಡರು. ಪರಿಣಾಮಕಾರಿ ಮೇಲ್ವಿಚಾರಣೆಗಾಗಿ ತ್ರೈಮಾಸಿಕ ಆಧಾರದ ಮೇಲೆ ಆದ್ಯತೆಯ ವ್ಯಾಪಾರದ ದತ್ತಾಂಶವನ್ನು ಪರಸ್ಪರ ವಿನಿಮಯ ಮಾಡಿಕೊಳ್ಳಲು ಒಪ್ಪಿಕೊಂಡರು.  ಸಿಇಪಿಎ ಒಪ್ಪಂದದ ಅನುಷ್ಠಾನಕ್ಕೆ ಸಂಬಂಧಿಸಿದ ವಿವಿಧ ವಿಷಯಗಳನ್ನು ಚರ್ಚಿಸಲಾಯಿತು ಮತ್ತು ಸಿಇಪಿಎ ಅನುಷ್ಠಾನಕ್ಕೆ, ಎರಡೂ ಕಡೆಯ ವ್ಯವಹಾರಗಳಿಂದ ಅದರ ಬಳಕೆಗೆ ಮುಂದೆ ಅಡ್ಡಿಯಾಗಬಹುದಾದ ಯಾವುದೇ ಸಮಸ್ಯೆಯನ್ನು ಪರಿಹರಿಸಲು ಒಪ್ಪಿಕೊಳ್ಳಲಾಯಿತು.  ವ್ಯಾಪಾರದ ಸೇವೆಗಳಲ್ಲಿ ಹೊಸ ಉಪ-ಸಮಿತಿಯ ರಚನೆಗೆ ಒಪ್ಪಿಗೆ ನೀಡಲಾಯಿತು. ಸಣ್ಣ, ಅತಿಸಣ್ಣ, ಮಧ್ಯಮ ಉದ್ಯಮಗಳು ಮತ್ತು  ನವೋದ್ಯಮಗಳ ಮೇಲೆ ಕೇಂದ್ರೀಕರಿಸಿ, ಹೆಚ್ಚಿನ ಆರ್ಥಿಕ ಸಂಪರ್ಕಗಳನ್ನು ನಿರ್ಮಿಸಲು ಮತ್ತು ಸಿಎಪಿಎ ಪ್ರಯೋಜನಗಳನ್ನು ಉತ್ತಮಗೊಳಿಸಲು ಯುಎಇ-ಇಂಡಿಯಾ ಸಿಇಪಿಎ ಕೌನ್ಸಿಲ್ (ಯುಐಸಿಸಿ) ಅನ್ನು B2B ಸಹಯೋಗದ ಕಾರ್ಯವಿಧಾನವಾಗಿ ಸ್ಥಾಪಿಸಲು ಪರಸ್ಪರ ಒಪ್ಪಿಗೆ ನೀಡಲಾಯಿತು.

ವಿಶ್ವ ವ್ಯಾಪಾರ ಸಂಸ್ಥೆ ( ಡಬ್ಲ್ಯೂ ಟಿ ಒ) ವಿಷಯಗಳ ಬಗ್ಗೆ ಎರಡೂ ಕಡೆಯವರು ಅಭಿಪ್ರಾಯಗಳನ್ನು ವಿನಿಮಯ ಮಾಡಿಕೊಂಡರು. ವಿಶ್ವ ವ್ಯಾಪಾರ ಸಂಸ್ಥೆಯ [WTO (MC13)] 13ನೇ ಸಚಿವರ ಸಮ್ಮೇಳನವು ಯುನೈಟೆಡ್ ಅರಬ್ ಎಮಿರೇಟ್ಸ್ನ ಅಬುಧಾಬಿಯಲ್ಲಿ 26, ಫೆಬ್ರವರಿ, 2024 ರ ವಾರದಲ್ಲಿ ನಡೆಯಲಿದೆ.

ಯುನೈಟೆಡ್ ಅರಬ್ ಎಮಿರೇಟ್ಸ್  ಸರ್ಕಾರದ ಹಿರಿಯ ಅಧಿಕಾರಿಗಳು ಮತ್ತು ಆ ದೇಶದ ವ್ಯಾಪಾರ ಸಮುದಾಯದ ಪ್ರತಿನಿಧಿಗಳನ್ನು ಒಳಗೊಂಡ ಉನ್ನತ ಮಟ್ಟದ ನಿಯೋಗ, ವಿದೇಶಿ ವ್ಯಾಪಾರದ ರಾಜ್ಯ ಸಚಿವ ಡಾ. ಥಾನಿ ಬಿನ್ ಅಹ್ಮದ್ ಅಲ್ ಝೀಯೌದಿ ಅವರು 11-12 ಜೂನ್ 2023 ರಂದು ಭಾರತಕ್ಕೆ ಭೇಟಿ ನೀಡಿದರು. ಇಂದು ಸಚಿವರ ಸಮ್ಮುಖದಲ್ಲಿ ಉಭಯ ಪಕ್ಷಗಳು ಭಾರತ-ಯುಎಇ ಸಮಗ್ರ ಆರ್ಥಿಕ ಪಾಲುದಾರಿಕೆ ಒಪ್ಪಂದದ ಜಂಟಿ ಸಮಿತಿಯ ಮೊದಲನೇ ಸಭೆಯ ಟಿಪ್ಪಣಿಗಳಿಗೆ ಸಹಿ ಹಾಕಿದವು. 

ಇದಕ್ಕೂ ಮುನ್ನ, ಯುಎಇಯ ವಿದೇಶಾಂಗ ವ್ಯಾಪಾರದ ರಾಜ್ಯ ಸಚಿವ ಗೌರವಾನ್ವಿತ ಡಾ. ಥಾನಿ ಬಿನ್ ಅಹ್ಮದ್ ಅಲ್ ಝೆಯೋದಿ ಇಂದು ಭಾರತ ಸರ್ಕಾರದ ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕೆ, ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ಸಾರ್ವಜನಿಕ ವಿತರಣೆ ಮತ್ತು ಜವಳಿ ಸಚಿವರಾದ ಶ್ರೀ ಪಿಯೂಷ್ ಗೋಯಲ್ ಅವರನ್ನು ನವ ದೆಹಲಿಯಲ್ಲಿ ಭೇಟಿ ಮಾಡಿದರು. ಈ ಭೇಟಿಯು ಉಭಯ ದೇಶಗಳ ಸಮಗ್ರ ಆರ್ಥಿಕ ಪಾಲುದಾರಿಕೆ ಒಪ್ಪಂದದ (ಸಿಇಪಿಎ) ಅನುಷ್ಠಾನದ ಮೊದಲನೇ ವಾರ್ಷಿಕೋತ್ಸವದ ಭಾರತದ ಹಂತವನ್ನು ಗುರುತಿಸಿದೆ. ಜಂಟಿ ಸಮಿತಿಯ ಮೊದಲನೇ ಸಭೆಯ ಸಾಧನೆಗಳು ಮತ್ತು ಯಶಸ್ವಿ ಮುಕ್ತಾಯದ ಕುರಿತು ಜಂಟಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಇಬ್ಬರೂ ಮಾತನಾಡಿದರು. ಶ್ರೀ ಗೋಯಲ್ ಮಾತನಾಡಿ, ಪ್ರಸ್ತುತ 48 ಶತಕೋಟಿ ಡಾಲರ್ ನಿಂದ 2030ರ ವೇಳೆಗೆ ಪೆಟ್ರೋಲಿಯಂಯೇತರ ಉತ್ಪನ್ನಗಳಲ್ಲಿ 100 ಶತಕೋಟಿ ಡಾಲರ್ ವ್ಯಾಪಾರದ ಗುರಿಯನ್ನು ಹೊಂದಲು ಉಭಯ ದೇಶಗಳು ಒಪ್ಪಿಕೊಂಡಿವೆ ಎಂದು ಹೇಳಿದರು.

ಭಾರತೀಯ ಕೈಗಾರಿಕೆಗಳ ಒಕ್ಕೂಟ (ಸಿಐಐ) ಸಹಭಾಗಿತ್ವದಲ್ಲಿ ವಾಣಿಜ್ಯ ಇಲಾಖೆ ಆಯೋಜಿಸಿದ್ದ ಬಿ-2-ಬಿ ಕಾರ್ಯಕ್ರಮದಲ್ಲಿ ಇಬ್ಬರೂ ಸಚಿವರು ಭಾಗವಹಿಸಿದ್ದರು. ಬಿ-2-ಬಿ ಕಾರ್ಯಕ್ರಮದಲ್ಲಿ (B2B) ವ್ಯಾಪಾರ ಸಭೆಯನ್ನುದ್ದೇಶಿಸಿ ಮಾತನಾಡಿದ, ಪಿಯೂಷ್ ಗೋಯಲ್, ಈ ಕ್ರಾಂತಿಕಾರಕ ಒಪ್ಪಂದವು ನವೀಕೃತ ಉತ್ತೇಜನ ಮತ್ತು ವೇಗದೊಂದಿಗೆ ಭಾರತ-ಯುಎಇ ಪಾಲುದಾರಿಕೆಯನ್ನು ಗಣನೀಯವಾಗಿ ಪರಿವರ್ತಿಸಿದೆ ಎಂದು  ಹೇಳಿದರು. ಈಗಾಗಲೇ, ನಿಕಟ ಮತ್ತು ಬಲವಾದ ಸಂಬಂಧಕ್ಕೆ ಎರಡೂ ದೇಶಗಳ ನಡುವಿನ ದ್ವಿಪಕ್ಷೀಯ ವ್ಯಾಪಾರ ಒಪ್ಪಂದದಿಂದ ಆರಂಭಿಕ ಲಾಭಗಳು ಈಗಾಗಲೇ ಸುಮಾರು 16.5% ರಷ್ಟು ಬೆಳವಣಿಗೆಯಾಗುತ್ತಿವೆ ಮತ್ತು  2022-23 ರ ಹಣಕಾಸು ವರ್ಷದ ಅವಧಿಯಲ್ಲಿ 84.84 ಶತಕೋಟಿಯ ಡಾಲರ್ ಸಾರ್ವಕಾಲಿಕ ಗರಿಷ್ಠ ಮಟ್ಟವನ್ನು ಮುಟ್ಟಿದೆ ಎಂದು  ತಿಳಿಸಿದರು.

ಯುಎಇಗೆ ಭಾರತದಿಂದ ರಫ್ತು ಕೂಡ 12% ರಷ್ಟು ಬೆಳವಣಿಗೆಯನ್ನು ದಾಖಲಿಸಿದೆ, 2022-2023 ರಲ್ಲಿ 31.6 ಶತಕೋಟಿ ಡಾಲರ್ ತಲುಪಿದೆ ಎಂದು ಶ್ರೀ ಗೋಯಲ್ ಹೇಳಿದರು. ಹೊಸ ಸಂಬಂಧಗಳನ್ನು ಬೆಸೆಯಲು ಮತ್ತು  ವೇಗದಲ್ಲಿ ಬೆಳವಣಿಗೆ ಹೊಂದಲು ಅವರು ಎರಡೂ ಕಡೆಯ ಉದ್ದಿಮೆಯವರನ್ನು ಒತ್ತಾಯಿಸಿದರು. ವರ್ಚುವಲ್ ಟ್ರೇಡ್ ಕಾರಿಡಾರ್ ಗಳು, ಗುಜರಾತ್ನ ಗಿಫ್ಟ್ ಸಿಟಿಯಲ್ಲಿ ಅಬುಧಾಬಿ ಹೂಡಿಕೆ ಪ್ರಾಧಿಕಾರದ ಕಚೇರಿಗಳ ಮುಂದಿನ ವ್ಯವಸ್ಥೆ, ಯುಪಿಐ ಪಾಲುದಾರಿಕೆ ಮತ್ತು ನೇರ ರೂಪಾಯಿ ದಿರ್ಹಾಮ್ ವ್ಯವಹಾರಕ್ಕೆ ಸಮರ್ಥ ವ್ಯವಸ್ಥೆಯ ಸಂಭಾವ್ಯ ಅಭಿವೃದ್ಧಿ ಸೇರಿದಂತೆ ಎರಡು ಕಡೆಯ ನಡುವೆ ಚರ್ಚಿಸಲಾಗುತ್ತಿರುವ ಇತರ ಪ್ರಮುಖ ಉಪಕ್ರಮಗಳನ್ನು ಅವರು ಉಲ್ಲೇಖಿಸಿದರು.

ಯುಎಇ ದೇಶದ ವಿದೇಶಾಂಗ ವ್ಯಾಪಾರದ ರಾಜ್ಯ ಸಚಿವ ಡಾ. ಥಾನಿ ಬಿನ್ ಝೆಯೋದಿ ಅವರು ಎರಡೂ ದೇಶಗಳಿಗೆ ಪರಸ್ಪರ ಪ್ರಾಮುಖ್ಯತೆಯ ಎಲ್ಲಾ ಕ್ಷೇತ್ರಗಳಲ್ಲಿ ತೊಡಗಿಸಿಕೊಳ್ಳುವ ಮೂಲಕ ಭಾರತ-ಯುಎಇ ದ್ವಿಪಕ್ಷೀಯ ಸಂಬಂಧಗಳನ್ನು ಮತ್ತಷ್ಟು ಬಲಪಡಿಸಲು ಯುಎಇ ಸರ್ಕಾರ ಮತ್ತು ಅದರ ಮುಖ್ಯಸ್ಥರ ಉತ್ಸುಕತೆಯನ್ನು ದೃಢಪಡಿಸಿದರು. ಉಭಯ ದೇಶಗಳ ಜನರ ಬೆಳವಣಿಗೆ, ಸಮೃದ್ಧಿ ಮತ್ತು ಕಲ್ಯಾಣಕ್ಕಾಗಿ ಪರಸ್ಪರ ನಂಬಿಕೆ, ಸಹಕಾರ ಮತ್ತು ಅದೇ ಉತ್ಸಾಹದಲ್ಲಿ ಭಾರತದ ಕಡೆಯಿಂದ ನಿಕಟವಾಗಿ ಕೆಲಸ ಮಾಡುವಲ್ಲಿ ಅವರು ತಮ್ಮ ಸಚಿವಾಲಯ ಮತ್ತು ಅವರ ಸರ್ಕಾರದ ಬದ್ಧತೆಯನ್ನು ಪುನರುಚ್ಚರಿಸಿದರು.
ಸ್ವಾಗತ ಭಾಷಣ ಮಾಡಿದ ವಾಣಿಜ್ಯ ಕಾರ್ಯದರ್ಶಿ ಶ್ರೀ ಸುನಿಲ್ ಬರ್ತ್ವಾಲ್, ಯುಎಇ ನಿಯೋಗದ ಭೇಟಿಯು ಉಭಯ ದೇಶಗಳ ನಡುವಿನ ಆರ್ಥಿಕ ಸಂಬಂಧಗಳ ಮಹತ್ವವನ್ನು ಒತ್ತಿಹೇಳುತ್ತದೆ ಎಂದು ಹೇಳಿದರು.

ಬಿ2ಬಿ (B2B) ಕಾರ್ಯಕ್ರಮದಲ್ಲಿ ಭಾರತ ಮತ್ತು ಯುಎಇ ದೇಶಗಳ ವ್ಯಾಪಾರ ಸಮುದಾಯಗಳ ಪ್ರತಿನಿಧಿಗಳು ಮತ್ತು ಎರಡೂ ಕಡೆಯ ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು.

****



(Release ID: 1931877) Visitor Counter : 130