ಪ್ರಧಾನ ಮಂತ್ರಿಯವರ ಕಛೇರಿ

ಮೊಟ್ಟಮೊದಲ ರಾಷ್ಟ್ರೀಯ ತರಬೇತಿ ಸಮಾವೇಶ ಪ್ರಧಾನ ಮಂತ್ರಿಗಳಿಂದ ಉದ್ಘಾಟನೆ


ದೇಶಾದ್ಯಂತ ನಾಗರಿಕ ಸೇವಾ ತರಬೇತಿ ಸಂಸ್ಥೆಗಳ ಪ್ರತಿನಿಧಿಗಳು ಸಮಾವೇಶದಲ್ಲಿ ಭಾಗಿ 

ತರಬೇತಿ ಸಂಸ್ಥೆಗಳ ನಡುವೆ ಸಹಯೋಗವನ್ನು ಬೆಳೆಸಲು ಮತ್ತು ದೇಶಾದ್ಯಂತ ನಾಗರಿಕ ಸೇವಕರಿಗೆ ತರಬೇತಿ ಮೂಲಸೌಕರ್ಯವನ್ನು ಬಲಪಡಿಸಲು ಸಮಾವೇಶದಿಂದ ಅನುಕೂಲ 

Posted On: 10 JUN 2023 10:40AM by PIB Bengaluru

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಜೂನ್ 11ರಂದು ಬೆಳಗ್ಗೆ 10:30ಕ್ಕೆ ದೆಹಲಿಯ ಅಂತಾರಾಷ್ಟ್ರೀಯ ಪ್ರದರ್ಶನ ಮತ್ತು ಸಮಾವೇಶ ಕೇಂದ್ರ ಪ್ರಗತಿ ಮೈದಾನದಲ್ಲಿ ಮೊದಲ ರಾಷ್ಟ್ರೀಯ ತರಬೇತಿ ಸಮಾವೇಶವನ್ನು ಉದ್ಘಾಟಿಸಿ, ನಂತರ ಮಾತನಾಡಲಿದ್ದಾರೆ.

ಪ್ರಧಾನ ಮಂತ್ರಿಗಳು ನಾಗರಿಕ ಸೇವೆಯ ಸಾಮರ್ಥ್ಯವನ್ನು ಹೆಚ್ಚಿಸುವ ಮೂಲಕ ದೇಶದಲ್ಲಿ ಆಡಳಿತ ಪ್ರಕ್ರಿಯೆ ಮತ್ತು ನೀತಿ ಅನುಷ್ಠಾನವನ್ನು ಸುಧಾರಿಸುವ ಪ್ರತಿಪಾದಕರಾಗಿದ್ದಾರೆ. ಈ ದೃಷ್ಟಿಕೋನದಿಂದ ಮಾರ್ಗದರ್ಶಿಸಲ್ಪಟ್ಟ, ನಾಗರಿಕ ಸೇವೆಗಳ ಸಾಮರ್ಥ್ಯ ನಿರ್ಮಾಣಕ್ಕಾಗಿ ರಾಷ್ಟ್ರೀಯ ಕಾರ್ಯಕ್ರಮ (NPCSCB) - 'ಮಿಷನ್ ಕರ್ಮಯೋಗಿ'ಯನ್ನು ಸರಿಯಾದ ವರ್ತನೆ, ಕೌಶಲ್ಯ ಮತ್ತು ಜ್ಞಾನದೊಂದಿಗೆ ಭವಿಷ್ಯಕ್ಕೆ ಸಿದ್ಧವಾಗಿರುವ ನಾಗರಿಕ ಸೇವೆಯನ್ನು ತಯಾರಿಸಲು ಪ್ರಾರಂಭಿಸಲಾಯಿತು.

ನಾಗರಿಕ ಸೇವಾ ತರಬೇತಿ ಸಂಸ್ಥೆಗಳ ನಡುವೆ ಸಹಯೋಗವನ್ನು ಬೆಳೆಸುವ ಮತ್ತು ದೇಶಾದ್ಯಂತ ನಾಗರಿಕ ಸೇವಕರಿಗೆ ತರಬೇತಿ ಮೂಲಸೌಕರ್ಯವನ್ನು ಬಲಪಡಿಸುವ ಉದ್ದೇಶದಿಂದ ರಾಷ್ಟ್ರೀಯ ತರಬೇತಿ ಸಮಾವೇಶವನ್ನು, ಸಾಮರ್ಥ್ಯ ನಿರ್ಮಾಣ ಆಯೋಗವು ಆಯೋಜಿಸಿದೆ.

ಕೇಂದ್ರೀಯ ತರಬೇತಿ ಸಂಸ್ಥೆಗಳು, ರಾಜ್ಯ ಆಡಳಿತ ತರಬೇತಿ ಸಂಸ್ಥೆಗಳು, ಪ್ರಾದೇಶಿಕ ಮತ್ತು ವಲಯ ತರಬೇತಿ ಸಂಸ್ಥೆಗಳು ಹಾಗೂ ಸಂಶೋಧನಾ ಸಂಸ್ಥೆಗಳು ಸೇರಿದಂತೆ ತರಬೇತಿ ಸಂಸ್ಥೆಗಳಿಂದ 1,500ಕ್ಕೂ ಹೆಚ್ಚು ಪ್ರತಿನಿಧಿಗಳು ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ. ಕೇಂದ್ರ ಸರ್ಕಾರದ ಇಲಾಖೆಗಳು, ರಾಜ್ಯ ಸರ್ಕಾರಗಳು, ಸ್ಥಳೀಯ ಸರ್ಕಾರಗಳ ನಾಗರಿಕ ಸೇವಾ ಅಧಿಕಾರಿಗಳು ಹಾಗೂ ಖಾಸಗಿ ವಲಯದ ತಜ್ಞರು ಚರ್ಚೆಯಲ್ಲಿ ಭಾಗವಹಿಸಲಿದ್ದಾರೆ.

ಸಮಾವೇಶದಲ್ಲಿ ಸೇರುವ ವೈವಿಧ್ಯಮಯ ಪ್ರದೇಶಗಳ ಅಧಿಕಾರಿಗಳು, ವಿವಿಧ ಆಲೋಚನೆಗಳ ವಿನಿಮಯವನ್ನು ಉತ್ತೇಜಿಸುತ್ತದೆ. ಪ್ರಸಕ್ತ ಎದುರಿಸುತ್ತಿರುವ ಸವಾಲುಗಳು ಮತ್ತು ಲಭ್ಯವಿರುವ ಅವಕಾಶಗಳನ್ನು ಗುರುತಿಸುತ್ತದೆ. ಸಾಮರ್ಥ್ಯ ನಿರ್ಮಾಣಕ್ಕಾಗಿ ಕಾರ್ಯಸಾಧ್ಯವಾದ ಪರಿಹಾರಗಳು ಮತ್ತು ಸಮಗ್ರ ಕಾರ್ಯತಂತ್ರಗಳನ್ನು ರಚಿಸುತ್ತದೆ. ಸಮಾವೇಶದಲ್ಲಿ ಎಂಟು ತಂಡಗಳಿಂದ ಚರ್ಚೆಗಳು ನಡೆಯುತ್ತವೆ. ಪ್ರತಿಯೊಂದೂ ನಾಗರಿಕ ಸೇವಾ ತರಬೇತಿ ಸಂಸ್ಥೆಗಳಿಗೆ ಸಂಬಂಧಿಸಿದ ಪ್ರಮುಖ ವಿಷಯಗಳಾದ ಅಧ್ಯಾಪಕ ವೃಂದದ ಅಭಿವೃದ್ಧಿ, ತರಬೇತಿ ಪ್ರಭಾವದ ಮೌಲ್ಯಮಾಪನ ಮತ್ತು ವಿಷಯ ಡಿಜಿಟಲೀಕರಣದ ಮೇಲೆ ಕೇಂದ್ರೀಕರಿಸುತ್ತದೆ.

****



(Release ID: 1931472) Visitor Counter : 87