ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯ

ಭಾರತ ಮತ್ತು ನ್ಯೂಜಿಲೆಂಡ್ ನಡುವೆ ಪ್ರಥಮ ಸುತ್ತಿನ ದುಂಡು ಮೇಜಿನ ಜಂಟಿ ಸಭೆ ನಡೆಯಿತು


UPI ವ್ಯವಸ್ಥೆ, ಕಾರ್ಬನ್ ಕ್ರೆಡಿಟ್, ಕಿವಿ ಹಣ್ಣುಗಳ ಪ್ಯಾಕೇಜ್ ಪ್ರಸ್ತಾವನೆ, ಟ್ರಾನ್ಸ್-ಶಿಪ್ಮೆಂಟ್ ಹಬ್, ತಾಂತ್ರಿಕ ಸಹಯೋಗ, ಕಾರ್ಯನಿಮಿತ್ತ ವೀಸಾದಲ್ಲಿ ಮತ್ತು ಬ್ಯಾಂಕಿಂಗ್ ಸಹಕಾರಗಳನ್ನು ತಾತ್ಕಾಲಿಕ ಸಹಕಾರ ಕ್ಷೇತ್ರಗಳಾಗಿ ಗುರುತಿಸಲಾಗಿದೆ.

Posted On: 08 JUN 2023 8:34PM by PIB Bengaluru

ಇಂದು ನವದೆಹಲಿಯಲ್ಲಿ ಎರಡೂ ದೇಶಗಳ ಉದ್ಯಮ ಮತ್ತು ಉದ್ಯಮ ಸಂಸ್ಥೆಗಳೊಂದಿಗೆ ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಮೊದಲ ದುಂಡು ಮೇಜಿನ ಸಭೆ ನಡೆಯಿತು. ಭಾರತ ಸರ್ಕಾರದ ವಾಣಿಜ್ಯ ಇಲಾಖೆಯ ಹೆಚ್ಚುವರಿ ಕಾರ್ಯದರ್ಶಿ ಶ್ರೀ ರಾಜೇಶ್ ಅಗರ್ವಾಲ್ ಮತ್ತು ಭಾರತದಲ್ಲಿನ ನ್ಯೂಜಿಲೆಂಡ್‌ನ ಹೈ ಕಮಿಷನರ್ ಶ್ರೀ ಡೇವಿಡ್ ಪೈನ್ ಅವರು ಸಭೆಯ ಅಧ್ಯಕ್ಷತೆ ವಹಿಸಿದ್ದರು.

ಉಭಯ ದೇಶಗಳ ನಡುವಿನ ದ್ವಿಪಕ್ಷೀಯ ವ್ಯಾಪಾರದ ಪ್ರಸ್ತುತ ಪ್ರಮಾಣವನ್ನು ಗಮನಿಸಿದಲ್ಲಿ, ಉಭಯತ್ರರು ಭಾರತ ಮತ್ತು ನ್ಯೂಜಿಲೆಂಡ್ ಪಾಲುದಾರಿಕೆಯಲ್ಲಿನ ಬೃಹತ್ ಸಾಮರ್ಥ್ಯ ಮತ್ತು ಪರಸ್ಪರ ಆಸಕ್ತಿಯ ಕ್ಷೇತ್ರಗಳಲ್ಲಿ ವರ್ಧಿತ ಆರ್ಥಿಕ ಸಂಬಂಧಗಳಿಗೆ ಸಮನ್ವಯತೆ ತರುವ ಅಗತ್ಯವನ್ನು ಒಪ್ಪಿಕೊಂಡರು. ಯಾವುದೇ ಮುಕ್ತ ವ್ಯಾಪಾರ ಒಪ್ಪಂದವನ್ನು ಮೀರಿ ಕೆಲಸ ಮಾಡುವ ಮತ್ತು ಪರಸ್ಪರ ಪೂರಕವಾಗಿರಬಹುದಾದ ಇತರ ಕ್ಷೇತ್ರಗಳನ್ನು ಅನ್ವೇಷಿಸುವ ಅಗತ್ಯವಿದೆ ಎಂಬುದು ಸಾಮಾನ್ಯ ಒಪ್ಪಂದವಾಗಿತ್ತು. 1986ರ ದ್ವಿಪಕ್ಷೀಯ ವ್ಯಾಪಾರ ಒಪ್ಪಂದದ ಅಡಿಯಲ್ಲಿ ರೂಪುಗೊಂಡ ಜಂಟಿ ವ್ಯಾಪಾರ ಸಮಿತಿಯ (JTC) ಉದ್ದೇಶಗಳನ್ನು ಮುಂದಕ್ಕೆ ಕೊಂಡೊಯ್ಯುವುದು ಕೂಡ ಚರ್ಚೆಯ ಪ್ರಮುಖ ವಿಷಯವಾಗಿತ್ತು.

ಪರಸ್ಪರ ಪ್ರಯೋಜನಗಳು, ಅನುಪಾತ, ವ್ಯಾಪಾರ ಮತ್ತು ಖಾಸಗಿ ವಲಯಗಳೊಂದಿಗೆ ಸಹಯೋಗದ ತತ್ವಗಳನ್ನು ಗಮನದಲ್ಲಿಟ್ಟುಕೊಂಡು ಸಾಮೂಹಿಕ ಪ್ರಯತ್ನಗಳಿಗೆ ಒತ್ತು ನೀಡಿಬೇಕೆಂದು ನ್ಯೂಜಿಲೆಂಡ್ ಹೈಕಮಿಷನರ್, ತಮ್ಮ ಸಂಕ್ಷಿಪ್ತ ಹೇಳಿಕೆಯಲ್ಲಿ ತಿಳಿಸಿದರು. ಅವರು ಬೆಳಕು ಚೆಲ್ಲಿದ ಕೆಲವು ಕ್ಷೇತ್ರಗಳಲ್ಲಿ ಯೂನಿಫೈಡ್ ಪೇಮೆಂಟ್ ಇಂಟರ್‌ಫೇಸ್ (UPI) ವ್ಯವಸ್ಥೆಯ ಪ್ರಚಾರ, ಕಾರ್ಬನ್ ಕ್ರೆಡಿಟ್ ಸಹಕಾರ, ವಲಯದ ವ್ಯವಸ್ಥೆಗಳ ಮೂಲಕ ಆರ್ಥಿಕ ಸಹಕಾರ ಮತ್ತು ಝೆಸ್ಪ್ರಿ ಮಾಡಿದ ಸಮಗ್ರ ಪ್ರಸ್ತಾವನೆ ಹಾಗೂ ಉಭಯತ್ರರ ವ್ಯವಹಾರಗಳಿಗೆ ದ್ವಿಪಕ್ಷೀಯ ಲಾಭಕ್ಕಾಗಿ ಸುಂಕ ರಹಿತ ಕ್ರಮಗಳಂತಹ ಆದ್ಯತೆಯ ನಿರ್ದಿಷ್ಟ ವಿಷಯಗಳಲ್ಲಿ ಒಟ್ಟಾಗಿ ಕೆಲಸ ಮಾಡುವುದು ಮುಂತಾದವು ಸೇರಿವೆ. ಆರ್ಥಿಕ ಏಳಿಗೆಗಾಗಿ ಸಹಕಾರ ಚಟುವಟಿಕೆಗಳ ಕಾರ್ಯಸಾಧ್ಯ ಕ್ಷೇತ್ರಗಳನ್ನು ಪ್ರತಿಬಿಂಬಿಸುವ “India New Zealand –Relationship ready for next phase” (“ಭಾರತ ನ್ಯೂಜಿಲೆಂಡ್-ಸಂಬಂಧವು ಮುಂದಿನ ಹಂತಕ್ಕೆ ಸಿದ್ಧವಾಗಿದೆ”) ಎಂಬ ವರದಿಯನ್ನು ಭಾರತ ನ್ಯೂಜಿಲೆಂಡ್ ಬಿಸಿನೆಸ್ ಕೌನ್ಸಿಲ್ 2023ರ ಏಪ್ರಿಲ್‌ನಲ್ಲಿ ಹೊರತಂದಿದೆ ಎಂದು ಹೈ ಕಮಿಷನರ್ ಮಾಹಿತಿ ನೀಡಿದರು. ಉಭಯ ದೇಶಗಳ ಮಧ್ಯೆ ವಾಯು ಸಂಪರ್ಕ ವೃದ್ಧಿ ಬಗ್ಗೆಯೂ ಅವರು ಒತ್ತು ನೀಡಿದರು.

ದ್ವಿಪಕ್ಷೀಯ ವ್ಯಾಪಾರವನ್ನು ಸುಧಾರಿಸಲು ಅಸ್ತಿತ್ವದಲ್ಲಿರುವ ಸಾಂಸ್ಥಿಕ ಕಾರ್ಯವಿಧಾನವನ್ನು ಬಲಪಡಿಸುವ ಬಗ್ಗೆ ಶ್ರೀ ರಾಜೇಶ್ ಅಗರ್ವಾಲ್ ಪ್ರಸ್ತಾಪಿಸಿದರು. ಸಹಕಾರ ಹಾಗೂ ಸಹಯೋಗದ ವಿಷಯಗಳ ಕುರಿತು ಕೆಲಸ ಮಾಡಲು ಒಂದು ಚೌಕಟ್ಟು ನಿರ್ಮಾಣದ ಬಗ್ಗೆಯೂ ಅವರು ಒತ್ತು ನೀಡಿದರು. ಗುರುತಿಸಲಾದ ನಿರ್ದಿಷ್ಟ ಸಮಸ್ಯೆಗಳ ಮೇಲೆ ಕೆಲಸ ಮಾಡಲು ಜಂಟಿ ಕಾರ್ಯದರ್ಶಿ ಮಟ್ಟದಲ್ಲಿ ಕಾರ್ಯನಿರ್ವಹಿಸುವ ಗುಂಪನ್ನು ಸ್ಥಾಪಿಸುವುದನ್ನು ಇದು ಒಳಗೊಳ್ಳಬಹುದು ಮತ್ತು ಒಮ್ಮೆ ವಿಚಾರಗಳು ಹಾಗೂ ಅದಕ್ಕೆ ಅನುಗುಣವಾದ ಸಹಕಾರಿ ಚಟುವಟಿಕೆಗಳನ್ನು ಸಿದ್ಧಗೊಳಿಸಿದ ನಂತರ, ಜಂಟಿ ವ್ಯಾಪಾರ ಸಮಿತಿ ಸಭೆಯಲ್ಲಿ ಅದಕ್ಕೆ ಪುಷ್ಟಿ ನೀಡಬಹುದು ಮತ್ತು ಅಂತಿಮಗೊಳಿಸಬಹುದು. ಇದಕ್ಕೆ ಉಭಯತ್ರರ ಸಂಘಟಿತ ಪ್ರಯತ್ನದ ಅಗತ್ಯವಿದೆ ಮತ್ತು G2G, B2B ಮತ್ತು G2B ಸಂವಾದಗಳಲ್ಲಿನ ಚರ್ಚೆಗಳನ್ನು ಗಣನೆಗೆ ತೆಗೆದುಕೊಳ್ಳಬೇಕು ಎಂದು ಕೂಡ ಅವರು ಹೇಳಿದರು.


ಕೆಲಸದ ನಿಮಿತ್ತ ವೀಸಾ ಸಂಬಂಧಿಸಿದ ಸಮಸ್ಯೆಗಳಂತಹ ಸೇವೆಗಳಲ್ಲಿ ಸಹಕಾರ, ಬ್ಯಾಂಕಿಂಗ್ ವ್ಯವಹಾರಗಳನ್ನು ಮತ್ತಷ್ಟು ಸುಧಾರಿಸುವುದು ಮುಂತಾದವು ಸೇರಿದಂತೆ ಯುಪಿಐ ವ್ಯವಸ್ಥೆ, ಕಾರ್ಬನ್ ಕ್ರೆಡಿಟ್, ಕಿವಿ ಹಣ್ಣುಗಳ ಪ್ಯಾಕೇಜ್ ಪ್ರಸ್ತಾವನೆ, ಟ್ರಾನ್ಸ್-ಶಿಪ್ಮೆಂಟ್ ಹಬ್, ದ್ವಿಪಕ್ಷೀಯ ವ್ಯಾಪಾರ ಸಮಸ್ಯೆಗಳ ಸಕಾಲಿಕ ಪರಿಹಾರಕ್ಕಾಗಿ ಆದ್ಯತೆ, ತಂತ್ರಜ್ಞಾನದ ಸಹಯೋಗ ಸೇರಿದಂತೆ ಸಹಕಾರದ ವಿವಿಧ ಕ್ಷೇತ್ರಗಳ ತಾತ್ಕಾಲಿಕ ಗುರುತಿಸುವಿಕೆಗೆ ಕಾರಣವಾದ ಚರ್ಚೆಯಲ್ಲಿನ ಸಕಾರಾತ್ಮಕತೆಯನ್ನು ಶ್ರೀ ರಾಜೇಶ್ ಅಗರ್ವಾಲ್ ಶ್ಲಾಘಿಸಿದರು. ವಿಶಿಷ್ಟ ಯೋಜನೆಗಳು ಮತ್ತು ಪರಿಹಾರಗಳನ್ನು ಜಂಟಿ ವ್ಯಾಪಾರ ಸಮಿತಿಗೆ ನೀಡುವಂತಹ ಕಾರ್ಯಕಾರಿ ತಂಡಗಳನ್ನು ರಚಿಸುವ ಮೂಲಕ ಪರಸ್ಪರ ಪ್ರಯೋಜನಕ್ಕಾಗಿ ಪೂರ್ವಭಾವಿ ಕಾರ್ಯಾಚರಣೆಯ ಚೌಕಟ್ಟಿನ ಅಗತ್ಯದ ಕುರಿತು ಅವರು ಒತ್ತಿ ಹೇಳಿದರು. 

IT ಮತ್ತು ITeS, ಲಾಜಿಸ್ಟಿಕ್ಸ್ ಮತ್ತು ಬ್ಯಾಂಕಿಂಗ್ ವಲಯದಂತಹ ಸೇವಾ ಕ್ಷೇತ್ರಗಳ ಭಾರತೀಯ ಉದ್ಯಮ ಪ್ರತಿನಿಧಿಗಳು ಮತ್ತು ಆಹಾರ ಸಂಸ್ಕರಣೆ, ಔಷಧಗಳು, ಆಟೋಮೊಬೈಲ್, ನಿರ್ಮಾಣ ಇಂಧನದಂತಹ ಉತ್ಪಾದನಾ ಕ್ಷೇತ್ರಗಳು ದ್ವಿಪಕ್ಷೀಯ ಸಮಸ್ಯೆಗಳ ಕುರಿತು, ಉಭಯತ್ರರ ಆರ್ಥಿಕತೆಗಳ ಮಧ್ಯೆ ಲಭ್ಯವಿರುವ ದೊಡ್ಡ ಮಟ್ಟದ ಸಾಮರ್ಥ್ಯ ಹಾಗೂ ಹೇರಳ ಅವಕಾಶಗಳನ್ನು ಸಂವಾದ ಮತ್ತು ಕಾರ್ಯಚಟುವಟಿಕೆಗಳ ಮೂಲಕ ಪುಷ್ಟಿ ನೀಡಬೇಕಿದೆ ಎಂಬ ಸಲಹೆ ಸೂಚನೆಗಳನ್ನು ನೀಡಿವೆ. 

ನ್ಯೂಜಿಲೆಂಡ್‌ನ ಕೈಗಾರಿಕೆ ಮತ್ತು ಉದ್ಯಮ ಸಂಘಗಳು, ಉಭಯ ದೇಶಗಳ ಮಧ್ಯದ  ಬಾಂಧವ್ಯ ಆರ್ಥಿಕತೆಯನ್ನು ಸದೃಢಗೊಳಿಸುವ ಮಹತ್ವದ ಕ್ಷಣ ಎಂದು ಬಣ್ಣಿಸಿವೆ ಹಾಗೂ ಇಂತಹ ಸಭೆಗಳ ಮೂಲಕ ಮತ್ತಷ್ಟು ರಚನಾತ್ಮಕ ರೀತಿಯಲ್ಲಿ ಸಂವಾದವನ್ನು ಮುಂದುವರಿಸಿ ಚಟುವಟಿಕೆಗಳಿಗೆ ವೇಗ ನೀಡುವ ಅಗತ್ಯತೆ ಬಗ್ಗೆ ಒತ್ತಿ ಹೇಳಿದವು.

ಪರಸ್ಪರ ಸಮಗ್ರ ಪ್ರಯೋಜನಗಳಿಗಾಗಿ ಸರ್ಕಾರ ಮತ್ತು ಉದ್ಯಮಗಳ ಮಧ್ಯೆ  ಹೆಚ್ಚೆಚ್ಚು ಸಂವಾದಗಳನ್ನು ನಡೆಸುವ ಅಗತ್ಯತೆಗಳಿಗೆ ಉಭಯತ್ರರು ಸಮ್ಮತಿಸಿದರು.

****



(Release ID: 1930914) Visitor Counter : 122