ಕಲ್ಲಿದ್ದಲು ಸಚಿವಾಲಯ

22 ಕಲ್ಲಿದ್ದಲು ಗಣಿಗಳಿಗೆ ಅನುಮತಿ ಆದೇಶ ಹೊರಡಿಸಿದ ಕಲ್ಲಿದ್ದಲು ಸಚಿವಾಲಯ


ಸಂಯೋಜಿತ ಕಲ್ಲಿದ್ದಲು ನಿಕ್ಷೇಪ, 6379.78 ಮಿಲಿಯನ್ ಟನ್

ಇಲ್ಲಿಯವರೆಗೆ ವಾಣಿಜ್ಯ ಹರಾಜಿನ ಅಡಿಯಲ್ಲಿ 73 ವೆಸ್ಟಿಂಗ್ ಆದೇಶಗಳನ್ನು ಹೊರಡಿಸಲಾಗಿದೆ

Posted On: 08 JUN 2023 4:00PM by PIB Bengaluru

ವಾಣಿಜ್ಯ ಕಲ್ಲಿದ್ದಲು ಗಣಿ ಹರಾಜಿನ ಅಡಿಯಲ್ಲಿ ಕಲ್ಲಿದ್ದಲು ನಿಕ್ಷೇಪಗಳ ಯಶಸ್ವಿ ಬಿಡ್ದಾರರಿಗೆ 22 ಕಲ್ಲಿದ್ದಲು ಗಣಿಗಳನ್ನು ನೀಡಲು ಕಲ್ಲಿದ್ದಲು ಸಚಿವಾಲಯದ ನಾಮನಿರ್ದೇಶಿತ ಪ್ರಾಧಿಕಾರ ಇಂದು ಆದೇಶ ಹೊರಡಿಸಿದೆ. 22 ಕಲ್ಲಿದ್ದಲು ಗಣಿಗಳ ಪೈಕಿ ಹನ್ನೊಂದು ಗಣಿಗಳು ಕಲ್ಲಿದ್ದಲು ಗಣಿಗಳ (ವಿಶೇಷ ನಿಬಂಧನೆಗಳು) ಕಾಯ್ದೆ, 2015ರ ಅಡಿಯಲ್ಲಿ ಒಳಪಟ್ಟಿವೆ. ಮಿಕ್ಕುಳಿದವು ಕಲ್ಲಿದ್ದಲು ಗಣಿಗಳು  ಗಣಿ ಮತ್ತು ಖನಿಜಗಳ (ಅಭಿವೃದ್ಧಿ ಮತ್ತು ನಿಯಂತ್ರಣ) ಕಾಯ್ದೆ, 1957ರ ಅಡಿಯಲ್ಲಿ ಒಳಪಟ್ಟಿವೆ. ಹದಿನಾರು ಕಲ್ಲಿದ್ದಲು ಗಣಿಗಳು ಸಂಪೂರ್ಣವಾಗಿ ಪರಿಶೋಧಿಸಲ್ಪಟ್ಟ ಗಣಿಗಳಾಗಿದ್ದರೆ, ಆರು ಗಣಿಗಳು ಭಾಗಶಃ ಪರಿಶೋಧಿಸಲ್ಪಟ್ಟ ಗಣಿಗಳಾಗಿವೆ.

ಈ 22 ಕಲ್ಲಿದ್ದಲು ಗಣಿಗಳ ಸಂಚಿತ ಪೀಕ್ ರೇಟೆಡ್ ಸಾಮರ್ಥ್ಯ (ಪಿಆರ್ ಸಿ) ವಾರ್ಷಿಕವಾಗಿ 53 ಮಿಲಿಯನ್ ಟನ್ (ಎಂಟಿಪಿಎ) ಆಗಿದ್ದು, ಸರಿಸುಮಾರು 6,379.78 ಮಿಲಿಯನ್ ಟನ್ (ಎಂಟಿ) ಭೂವೈಜ್ಞಾನಿಕ ಮೀಸಲನ್ನು ಹೊಂದಿದೆ. ಈ ಗಣಿಗಳು ವಾರ್ಷಿಕವಾಗಿ 9,831 ಕೋಟಿ ರೂ. ಗಳ ಆದಾಯವನ್ನು ಗಳಿಸುವ ನಿರೀಕ್ಷೆ ಇದ್ದು, 7,929 ಕೋಟಿ ರೂ. ಗಳ ಬಂಡವಾಳ ಹೂಡಿಕೆಯನ್ನು ಆಕರ್ಷಿಸುತ್ತದೆ. ಇದು ಸುಮಾರು 71,467 ಜನರಿಗೆ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಉದ್ಯೋಗವನ್ನು ಒದಗಿಸುತ್ತದೆ.

ಈ 22 ಕಲ್ಲಿದ್ದಲು ಗಣಿಗಳ ಹಂಚಿಕೆಯೊಂದಿಗೆ, ಕಲ್ಲಿದ್ದಲು ಸಚಿವಾಲಯವು ಇಲ್ಲಿಯವರೆಗೆ ಒಟ್ಟು 73 ಕಲ್ಲಿದ್ದಲು ಗಣಿಗಳನ್ನು ವಾಣಿಜ್ಯ ಹರಾಜಿನ ಅಡಿಯಲ್ಲಿ 149.304 ಎಂಟಿಪಿಎ ಸಂಚಿತ ಪಿಆರ್ ಸಿಯೊಂದಿಗೆ ಹಂಚಿಕೆ ಆದೇಶಗಳನ್ನು ಹೊರಡಿಸಿದೆ. ಇದು ರಾಜ್ಯ ಸರ್ಕಾರಗಳಿಗೆ ವಾರ್ಷಿಕ 23,097.64 ಕೋಟಿ ರೂ.ಗಳ ಆದಾಯವನ್ನು ಸೃಷ್ಟಿಸುತ್ತದೆ ಮತ್ತು 2,01,847 ಜನರಿಗೆ ಪ್ರತ್ಯಕ್ಷವಾಗಿ ಹಾಗೂ ಪರೋಕ್ಷವಾಗಿ ಉದ್ಯೋಗಾವಕಾಶವನ್ನು ಒದಗಿಸುತ್ತದೆ ಎಂದು ಸಚಿವಾಲಯವು ತಿಳಿಸಿದೆ.

***



(Release ID: 1930798) Visitor Counter : 132