ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav g20-india-2023

​​​​​​​ಯುನೈಟೆಡ್ ಸ್ಟೇಟ್ಸ್ ಕಾಂಗ್ರೆಸ್ ನ ಜಂಟಿ ಸಭೆಯನ್ನುದ್ದೇಶಿಸಿ ಮಾತನಾಡುವ ಆಹ್ವಾನ ಸ್ವೀಕರಿಸಿದ ಪ್ರಧಾನಿ

Posted On: 06 JUN 2023 9:45PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ಅಮೆರಿಕಾ ಕಾಂಗ್ರೆಸ್ಸಿನ (ಯುನೈಟೆಡ್ ಸ್ಟೇಟ್ಸ್ ಕಾಂಗ್ರೆಸ್ ) ಜಂಟಿ ಸಭೆಯನ್ನುದ್ದೇಶಿಸಿ ಮಾತನಾಡುವಂತೆ  ಸದನದ ಸ್ಪೀಕರ್ ಕೆವಿನ್ ಮೆಕಾರ್ಥಿ ಅವರು ನೀಡಿರುವ ಆಹ್ವಾನವನ್ನು ಸ್ವೀಕರಿಸಿದ್ದಾರೆ. ಪರಸ್ಪರ ಹಂಚಿಕೊಂಡ ಪ್ರಜಾಪ್ರಭುತ್ವ ಮೌಲ್ಯಗಳು, ಜನರ ನಡುವಿನ ಬಲವಾದ ಸಂಬಂಧಗಳು ಮತ್ತು ಜಾಗತಿಕ ಶಾಂತಿ ಹಾಗು ಸಮೃದ್ಧಿಗೆ ಅಚಲ ಬದ್ಧತೆಯ ಅಡಿಪಾಯದ ಮೇಲೆ ರೂಪುಗೊಂಡ  ಭಾರತ ಮತ್ತು ಯುಎಸ್ ನಡುವಿನ ಸಮಗ್ರ ಜಾಗತಿಕ ಕಾರ್ಯತಂತ್ರದ ಸಹಭಾಗಿತ್ವದ ಬಗ್ಗೆ ಪ್ರಧಾನ ಮಂತ್ರಿ ಅವರು  ಹೆಮ್ಮೆ ವ್ಯಕ್ತಪಡಿಸಿದ್ದಾರೆ.

ಹೌಸ್ ಆಫ್ ದಿ ಯುನೈಟೆಡ್ ಸ್ಟೇಟ್ಸ್ ಆಫ್ ಅಮೇರಿಕಾದ ಸ್ಪೀಕರ್ ಕೆವಿನ್ ಮೆಕಾರ್ಥಿ ಅವರ ಟ್ವೀಟ್ ಗೆ ಪ್ರತಿಕ್ರಿಯಿಸಿರುವ  ಪ್ರಧಾನಮಂತ್ರಿ ಅವರು ತಮ್ಮ ಟ್ವೀಟ್ ನಲ್ಲಿ ;

"ಆಹ್ವಾನಕ್ಕಾಗಿ ಕೆವಿನ್ ಮೆಕಾರ್ಥಿ, ಮಿಚ್ ಮೆಕಾನೆಲ್, ಚಾರ್ಲ್ಸ್ ಶ್ಚುಮರ್ ಮತ್ತು ಹಕೀಮ್ ಜೆಫ್ರೀಸ್ ಅವರಿಗೆ ಧನ್ಯವಾದಗಳು. ಕಾಂಗ್ರೆಸ್ ನ ಜಂಟಿ ಸಭೆಯನ್ನುದ್ದೇಶಿಸಿ ಮತ್ತೊಮ್ಮೆ ಮಾತನಾಡಲು ಲಭಿಸಿರುವ ಅವಕಾಶಕ್ಕೆ ನಾನು ಹೆಮ್ಮೆ ಪಡುತ್ತೇನೆ. ಮತ್ತು ಆದನ್ನು ಎದುರು ನೋಡುತ್ತಿದ್ದೇನೆ.ಈ ಆಹ್ವಾನವನ್ನು  ಗೌರವದಿಂದ ಒಪ್ಪಿಕೊಂಡಿದ್ದೇನೆ. ಅಮೆರಿಕಾದ ಜೊತೆಗಿನ ನಮ್ಮ ಸಮಗ್ರ ಜಾಗತಿಕ ಕಾರ್ಯತಂತ್ರದ ಸಹಭಾಗಿತ್ವದ ಬಗ್ಗೆ ನಾವು ಹೆಮ್ಮೆ ಹೊಂದಿದ್ದೇವೆ.  ಪರಸ್ಪರ ಹಂಚಿಕೊಂಡ ಪ್ರಜಾಪ್ರಭುತ್ವ ಮೌಲ್ಯಗಳು, ಜನರ ನಡುವಿನ ಬಲವಾದ ಸಂಬಂಧಗಳು ಮತ್ತು ಜಾಗತಿಕ ಶಾಂತಿ ಮತ್ತು ಸಮೃದ್ಧಿಗೆ ಅಚಲ ಬದ್ಧತೆಯ ಅಡಿಪಾಯದ ಮೇಲೆ ಈ ಸಹಭಾಗಿತ್ವ ನಿಂತಿದೆ” ಎಂದು ಹೇಳಿದ್ದಾರೆ.

***(Release ID: 1930460) Visitor Counter : 70