ಸಹಕಾರ ಸಚಿವಾಲಯ
ಹೊಸ ರಾಷ್ಟ್ರೀಯ ಸಹಕಾರ ನೀತಿ ದಾಖಲೆಯ ಕರಡು ರಚನೆಯ ರಾಷ್ಟ್ರೀಯ ಸಮಿತಿಯ ಅಧ್ಯಕ್ಷ ಶ್ರೀ ಸುರೇಶ್ ಪ್ರಭು ಅವರು ನವದೆಹಲಿಯಲ್ಲಿಂದು ಕೇಂದ್ರ ಗೃಹ ಮತ್ತು ಸಹಕಾರ ಸಚಿವ ಶ್ರೀ ಅಮಿತ್ ಶಾ ಅವರಿಗೆ ಕರಡು ನೀತಿಯ ವಿವರ(ಪ್ರಸ್ತುತಿ) ನೀಡಿದರು.
ವಿವಿಧ ವಲಯಗಳ ಪ್ರಮುಖ ಶಿಫಾರಸುಗಳ ಜತೆಗೆ ಕರಡು ನೀತಿಯ ಉದ್ದೇಶಗಳು, ದೃಷ್ಟಿ ಮತ್ತು ಧ್ಯೇಯಗಳ ಬಗ್ಗೆ ಸಮಿತಿಯ ಸದಸ್ಯರು ಸಹಕಾರ ಸಚಿವ ಶ್ರೀ ಅಮಿತ್ ಶಾ ಅವರಿಗೆ ವಿವರ ಒದಗಿಸಿದರು
ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರ ‘ಸಹಕಾರ್ ಸೇ ಸಮೃದ್ಧಿ’ಯ ದೃಷ್ಟಿಕೋನವನ್ನು ಹೇಗೆ ಸಾಕಾರಗೊಳಿಸುವುದು ಮತ್ತು ಹೊಸ ನೀತಿಯ ಮೂಲಕ ಸಹಕಾರಿ ಆಂದೋಲನವನ್ನು ತಳಮಟ್ಟದಲ್ಲಿ ಬಲಪಡಿಸುವುದು ಹೇಗೆ ಎಂಬುದರ ಕುರಿತು ಕೇಂದ್ರ ಗೃಹ ಮತ್ತು ಸಹಕಾರ ಸಚಿವ ಶ್ರೀ ಅಮಿತ್ ಶಾ ಅವರು ತಮ್ಮ ಮಾರ್ಗದರ್ಶನ ನೀಡಿದರು.
ರಾಜ್ಯ ಸರ್ಕಾರಗಳು, ಕೇಂದ್ರ ಸಚಿವಾಲಯಗಳು, ಇಲಾಖೆಗಳು, ರಾಷ್ಟ್ರೀಯ ಸಹಕಾರಿ ಸಂಸ್ಥೆಗಳು ಸೇರಿದಂತೆ ಎಲ್ಲಾ ಪಾಲುದಾರರನ್ನು ಸಂಪರ್ಕಿಸಿದ ನಂತರ ಹೊಸ ಸಹಕಾರ ನೀತಿಯನ್ನು 2023 ಜುಲೈನಲ್ಲಿ ಅನಾವರಣಗೊಳಿಸುವ ನಿರೀಕ್ಷೆಯಿದೆ.
ಗೃಹ ಮತ್ತು ಸಹಕಾರ ಸಚಿವ ಶ್ರೀ ಅಮಿತ್ ಶಾ ನೇತೃತ್ವದಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ 'ಸಹಕಾರ್ ಸೆ ಸಮೃದ್ಧಿ'ಯ ದೃಷ್ಟಿಕೋನವನ್ನು ಸಾಕಾರಗೊಳಿಸಲು ಹೊಸ ರಾಷ್ಟ್ರೀಯ ನೀತಿ ಸಿದ್ಧಪಡಿಸುವ ದೃಷ್ಟಿಯಿಂದ ಹೊಸ ರಾಷ್ಟ್ರೀಯ ಸಹಕಾರ ನೀತಿಯ ಕರಡು ರಚನೆಗಾಗಿ ರಾಷ್ಟ್ರೀಯ ಮಟ್ಟದ ಸಮಿತಿಯನ್ನು 2022 ಸೆಪ್ಟೆಂಬರ್ 2ರಂದು ರಚಿಸಲಾಯಿತು.
Posted On:
05 JUN 2023 8:26PM by PIB Bengaluru
ಹೊಸ ರಾಷ್ಟ್ರೀಯ ಸಹಕಾರ ನೀತಿ ದಾಖಲೆಯ ಕರಡು ರಚನೆಯ ರಾಷ್ಟ್ರೀಯ ಸಮಿತಿ ಅಧ್ಯಕ್ಷ ಶ್ರೀ ಸುರೇಶ್ ಪ್ರಭು ಅವರು ನವದೆಹಲಿಯಲ್ಲಿಂದು ಕೇಂದ್ರ ಗೃಹ ಮತ್ತು ಸಹಕಾರ ಸಚಿವ ಶ್ರೀ ಅಮಿತ್ ಶಾ ಅವರಿಗೆ ಕರಡು ರಚನೆಯ ವಿವರ(ಪ್ರಸ್ತುತಿ) ನೀಡಿದರು. ಸಭೆಯಲ್ಲಿ ಎನ್ ಸಿಯುಐ ಅಧ್ಯಕ್ಷ ಶ್ರೀ ದಿಲೀಪ ಸಂಘಾನಿ, ನಬಾರ್ಡ್ ಅಧ್ಯಕ್ಷ ಶ್ರೀ ಕೆ ವಿ ಶಾಜಿ, ಎನ್ಎಎಫ್ ಸಿಯುಬಿ ಅಧ್ಯಕ್ಷ ಶ್ರೀ ಜ್ಯೋತಿಂದ್ರ ಮೆಹ್ತಾ, ಉತ್ತರ ಪ್ರದೇಶ ಸರ್ಕಾರದ ಸಹಕಾರ ಸಚಿವಾಲಯದ ಆರ್ಥಿಕ ಸಲಹೆಗಾರ ಶ್ರೀ ಪಿ ಕೆ ಅಗರ್ ವಾಲ್ ಸೇರಿದಂತೆ ಸಮಿತಿಯ ಇತರೆ ಸದಸ್ಯರು ಉಪಸ್ಥಿತರಿದ್ದರು. ಡಾ. ಉಮಾಕಾಂತ್ ದಾಶ್, ಇನ್‌ಸ್ಟಿಟ್ಯೂಟ್ ಆಫ್ ರೂರಲ್ ಮ್ಯಾನೇಜ್‌ಮೆಂಟ್ ಆನಂದ್ (IRMA), ಶ್ರೀ ಸತೀಶ್ ಮರಾಠೆ, ನಿರ್ದೇಶಕ, ಆರ್‌ಬಿಐ, ಡಾ. ಸಿ ಪಿಚ್ಚೈ, ಗಾಂಧಿಗ್ರಾಮ್ ಗ್ರಾಮೀಣ ವಿಶ್ವವಿದ್ಯಾಲಯದ ಪ್ರಾಧ್ಯಾಪಕ, ಡಾ. ಹೇಮಾ ಯಾದವ್ ಮತ್ತು ನಿರ್ದೇಶಕಿ, VAMNICOM. ಕಾರ್ಯದರ್ಶಿ (ಸಹಕಾರ), ಹೆಚ್ಚುವರಿ ಕಾರ್ಯದರ್ಶಿ (ಸಹಕಾರ) ಮತ್ತು ಸಹಕಾರ ಸಚಿವಾಲಯದ ಹಿರಿಯ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.
ರಚನಾತ್ಮಕ ಸುಧಾರಣೆಗಳು ಮತ್ತು ಆಡಳಿತ, ರೋಮಾಂಚಕ ಆರ್ಥಿಕ ಸಂಸ್ಥೆಗಳಾಗಿ ಸಹಕಾರಿ ಸಂಸ್ಥೆಗಳು, ಬಂಡವಾಳ ಮೂಲಗಳು ಸೇರಿದಂತೆ ವಿವಿಧ ವಲಯಗಳ ಪ್ರಮುಖ ಶಿಫಾರಸುಗಳ ಜತೆಗೆ ಕರಡು ನೀತಿಯ ಉದ್ದೇಶಗಳು, ದೃಷ್ಟಿ ಮತ್ತು ಧ್ಯೇಯೋದ್ದೇಶಗಳು, ನಿಧಿಗಳು, ಆದ್ಯತೆಯ ವಿಭಾಗಗಳ ಸೇರ್ಪಡೆ, ತಂತ್ರಜ್ಞಾನದ ಬಳಕೆ, ಕೌಶಲ್ಯ ಮತ್ತು ತರಬೇತಿ, ಸಮರ್ಥನೀಯತೆ ಮತ್ತು ಅನುಷ್ಠಾನ ಯೋಜನೆ. ಬಗ್ಗೆ ಸಮಿತಿಯ ಸದಸ್ಯರು ಸಹಕಾರ ಸಚಿವ ಶ್ರೀ ಅಮಿತ್ ಶಾ ಅವರಿಗೆ ವಿವರ ನೀಡಿದರು.
ಸಭೆಯಲ್ಲಿ ಕೇಂದ್ರ ಗೃಹ ಮತ್ತು ಸಹಕಾರ ಸಚಿವ ಶ್ರೀ ಅಮಿತ್ ಶಾ ಅವರು ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಜಿಯವರ ‘ಸಹಕಾರ್ ಸೇ ಸಮೃದ್ಧಿ’ಯ ದೃಷ್ಟಿಕೋನವನ್ನು ಹೇಗೆ ಸಾಕಾರಗೊಳಿಸಬೇಕು ಮತ್ತು ಹೊಸ ನೀತಿಯ ಮೂಲಕ ತಳಮಟ್ಟದಲ್ಲಿ ಸಹಕಾರ ಚಳವಳಿಯನ್ನು ಬಲಪಡಿಸುವುದು ಹೇಗೆ ಎಂಬುದರ ಕುರಿತು ಮಾರ್ಗದರ್ಶನ ನೀಡಿದರು. ಸಹಕಾರ ಸಚಿವರಿಂದ ಪಡೆದ ಮಾರ್ಗದರ್ಶನದಂತೆ ಸಮಿತಿಯು ಪರಿಷ್ಕೃತ ಕರಡು ಸಿದ್ಧಪಡಿಸುತ್ತದೆ. ರಾಜ್ಯ ಸರ್ಕಾರಗಳು, ಕೇಂದ್ರ ಸಚಿವಾಲಯಗಳು, ಇಲಾಖೆಗಳು, ರಾಷ್ಟ್ರೀಯ ಸಹಕಾರಿ ಸಂಸ್ಥೆಗಳು ಸೇರಿದಂತೆ ಎಲ್ಲಾ ಪಾಲುದಾರರನ್ನು ಸಂಪರ್ಕಿಸಿದ ನಂತರ 2023 ಜುಲೈನಲ್ಲಿ ಹೊಸ ಸಹಕಾರ ನೀತಿ ಅನಾವರಣಗೊಳ್ಳುವ ನಿರೀಕ್ಷೆಯಿದೆ.
ಹೊಸ ರಾಷ್ಟ್ರೀಯ ಸಹಕಾರ ನೀತಿಯ ಕರಡು ರಚನೆಗಾಗಿ ರಾಷ್ಟ್ರೀಯ ಮಟ್ಟದ ಸಮಿತಿಯನ್ನು 2022 ಸೆಪ್ಟೆಂಬರ್ 2ರಂದು ಗೃಹ ಮತ್ತು ಸಹಕಾರ ಸಚಿವ ಶ್ರೀ ಅಮಿತ್ ಶಾ ಅವರ ನೇತೃತ್ವದಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ 'ಸಹಕಾರ್ ಸೆ ಸಮೃದ್ಧಿ'ಯ ದೃಷ್ಟಿಕೋನವನ್ನು ಸಾಕಾರಗೊಳಿಸಲು ಹೊಸ ರಾಷ್ಟ್ರೀಯ ನೀತಿ ಸಿದ್ಧಪಡಿಸುವ ದೃಷ್ಟಿಯಿಂದ ಸಮಿತಿ ರಚಿಸಲಾಯಿತು. ಪ್ರಸ್ತುತ ಸಹಕಾರದ ನೀತಿಯನ್ನು 2002ರಲ್ಲಿ ರೂಪಿಸಲಾಯಿತು, ಬದಲಾದ ಆರ್ಥಿಕ ಸನ್ನಿವೇಶ ಎದುರಿಸಲು ಹೊಸ ನೀತಿಯನ್ನು ರಚಿಸುವ ಅವಶ್ಯಕತೆಯಿದೆ.
ಮಾಜಿ ಕೇಂದ್ರ ಸಚಿವ, ರಚನಾ ಸಮಿತಿಯ ಅಧ್ಯಕ್ಷ ಶ್ರೀ ಸುರೇಶ್ ಪ್ರಭು ನೇತೃತ್ವದ ಸಮಿತಿಯು ದೇಶಾದ್ಯಂತ 49 ಸದಸ್ಯರನ್ನು ಒಳಗೊಂಡಿದೆ. ವಿವಿಧ ರಾಜ್ಯ ಸರ್ಕಾರಗಳ ಸಹಕಾರ ಇಲಾಖೆಯ ಅಧಿಕಾರಿಗಳು, ಕೇಂದ್ರದ ಸಚಿವಾಲಯಗಳು, ಇಲಾಖೆಗಳು, ಐಆರ್ ಎಂಎ, ಆರ್ ಬಿಐನಂತಹ ಸಂಸ್ಥೆಗಳು, ಇಫ್ಕೊ, ಎನ್ ಸಿಸಿಎಫ್, NAFCARD, NAFCUB ನಂತಹ ರಾಷ್ಟ್ರೀಯ ಒಕ್ಕೂಟಗಳು ಸೇರಿದಂತೆ ವಿವಿಧ ಪಾಲುದಾರರನ್ನು ಒಳಗೊಂಡಿದೆ. KRIBHCO, NFCSF, NCUI, NAFED, ವಿವಿಧ ವಲಯಗಳಲ್ಲಿನ ಸಹಕಾರ ಸಂಘಗಳ ಪ್ರತಿನಿಧಿಗಳು, ಶಿಕ್ಷಣ ತಜ್ಞರು ಮತ್ತು ತಜ್ಞರು ಸಮಿತಿಯಲ್ಲಿದ್ದಾರೆ.
2022 ಏಪ್ರಿಲ್ 12 ಮತ್ತು 13ರಂದು ನಡೆದ ರಾಜ್ಯ ಸಹಕಾರ ಕಾರ್ಯದರ್ಶಿಗಳ ಸಮ್ಮೇಳನ ಮತ್ತು 2022 ಸೆಪ್ಟೆಂಬರ್ 8 ಮತ್ತು 9ರಂದು ನಡೆದ ರಾಜ್ಯ ಸಹಕಾರ ಮಂತ್ರಿಗಳ ಸಮ್ಮೇಳನದಲ್ಲಿ ಈ ಪರಿಕಲ್ಪನೆ ಕುರಿತು ಚರ್ಚಿಸಿದಾಗ ಹೊಸ ರಾಷ್ಟ್ರೀಯ ಸಹಕಾರ ನೀತಿ ರೂಪಿಸುವ ಪ್ರಕ್ರಿಯೆ ಪ್ರಾರಂಭಿಸಲಾಯಿತು, ಇದನ್ನು ಕೇಂದ್ರ ಗೃಹ ಮತ್ತು ಸಹಕಾರ ಸಚಿವರು ಉದ್ಘಾಟಿಸಿದರು. ಕರಡು ನೀತಿ ದಾಖಲೆಗಾಗಿ ವಿವಿಧ ಪಾಲುದಾರರು ಮತ್ತು ಸಾರ್ವಜನಿಕರಿಂದ 500ಕ್ಕೂ ಹೆಚ್ಚು ಸಲಹೆಗಳನ್ನು ಸ್ವೀಕರಿಸಲಾಗಿದೆ. ರಾಷ್ಟ್ರೀಯ ಮಟ್ಟದ ಸಮಿತಿಯು ಅದರ ರಚನೆಯ ನಂತರ 8ಕ್ಕೂ ಹೆಚ್ಚು ಸಭೆಗಳನ್ನು ನಡೆಸಿದೆ. ಕರಡು ದಾಖಲೆ ತಯಾರಿಸಲು ವಿವಿಧ ಪಾಲುದಾರರೊಂದಿಗೆ ಸಮಾಲೋಚನೆ ನಡೆಸಲಾಗಿದೆ.
*****
(Release ID: 1930226)
Visitor Counter : 188