ಪ್ರಧಾನ ಮಂತ್ರಿಯವರ ಕಛೇರಿ
ಕೇಂದ್ರ ಅಲ್ಪಸಂಖ್ಯಾತ ವ್ಯವಹಾರಗಳ ರಾಜ್ಯ ಸಚಿವ ಶ್ರೀ ಜಾನ್ ಬಾರ್ಲಾ ಅವರು ಹಲವು ಹಬ್ಬಗಳ ಸಂದರ್ಭಗಳಲ್ಲಿ ಪ್ರಧಾನಮಂತ್ರಿಯವರ ಭಾಗವಹಿಸುವಿಕೆ ಕುರಿತ ಮಾಹಿತಿ ಹಂಚಿಕೊಂಡರು
Posted On:
14 APR 2023 9:31AM by PIB Bengaluru
ಕೇಂದ್ರ ಅಲ್ಪಸಂಖ್ಯಾತ ವ್ಯವಹಾರಗಳ ರಾಜ್ಯ ಸಚಿವ ಶ್ರೀ.ಜಾನ್ ಬಾರ್ಲಾ ಅವರು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಹಲವು ಹಬ್ಬಗಳ ಸಂದರ್ಭಗಳಲ್ಲಿ ಪಾಲ್ಗೊಂಡಿರುವ ಮಾಹಿತಿ ಹಂಚಿಕೊಂಡಿದ್ದಾರೆ. ಕೇಂದ್ರ ರಾಜ್ಯ ಸಚಿವ ಡಾ.ಎಲ್.ಮುರುಗನ್ ಅವರ ನಿವಾಸದಲ್ಲಿ ನಡೆದ ತಮಿಳು ಹೊಸ ವರ್ಷದ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ ಭಾಗವಹಿಸುವುದು, ದೆಹಲಿಯ ಸೇಕ್ರೆಡ್ ಹಾರ್ಟ್ ಕ್ಯಾಥೆಡ್ರಲ್ನಲ್ಲಿ ಈಸ್ಟರ್ ಆಚರಣೆ, ಕೇಂದ್ರ ಸಚಿವ ಶ್ರೀ.ಪಿಯೂಷ್ ಗೋಯಲ್ ಅವರ ನಿವಾಸದಲ್ಲಿ ಗಣೇಶ ಉತ್ಸವದಲ್ಲಿ ಭಾಗವಹಿಸುವುದು, ಅಸ್ಸಾಂ ಮುಖ್ಯಮಂತ್ರಿ ಬಿಹು ಆಚರಣೆಯಲ್ಲಿ ಭಾಗವಹಿಸುವುದು ಮುಂತಾದ ವಿವಿಧ ಹಬ್ಬಗಳಲ್ಲಿ ಪ್ರಧಾನ ಮಂತ್ರಿಯವರ ಭಾಗವಹಿಸುವಿಕೆಯ ಇಣುಕುನೋಟಗಳನ್ನು ಕೇಂದ್ರ ಸಚಿವರು ಹಂಚಿಕೊಂಡರು. ಶ್ರೀ ಸರ್ಬಾನಂದ ಸೋನೊವಾಲ್ ಅವರ ನಿವಾಸ ಮತ್ತು ಇನ್ನೂ ಅನೇಕ ಸಂದರ್ಭಗಳ ಮಾಹಿತಿ ಹಂಚಿಕೊಂಡಿದ್ದಾರೆ.
ಕೇಂದ್ರ ಅಲ್ಪಸಂಖ್ಯಾತ ವ್ಯವಹಾರಗಳ ರಾಜ್ಯ ಸಚಿವರ ಟ್ವೀಟ್ ಥ್ರೆಡ್ ಗೆ ಪ್ರತಿಕ್ರಿಯಿಸಿದ ಪ್ರಧಾನಿ;
"ಭಾರತದ ಸಾಂಸ್ಕೃತಿಕ ಹುರುಪು ಮತ್ತು ವೈವಿಧ್ಯತೆ ನಮ್ಮನ್ನು ಬಲಪಡಿಸುತ್ತದೆ. ಜನರ ನಡುವೆ ಇರುವುದು ಮತ್ತು ಅವರ ವಿಶಿಷ್ಟ ಪರಂಪರೆಯ ಅಂಶಗಳನ್ನು ಆಚರಿಸುವುದು ಬಹಳ ಸಂತೋಷದ ವಿಷಯವಾಗಿದೆ' ಎಂದರು."
(Release ID: 1926241)
Visitor Counter : 100
Read this release in:
English
,
Urdu
,
Marathi
,
Hindi
,
Manipuri
,
Bengali
,
Assamese
,
Punjabi
,
Gujarati
,
Odia
,
Tamil
,
Telugu
,
Malayalam