ಚುನಾವಣಾ ಆಯೋಗ
ಚುನಾವಣೆ ನಡೆಯುತ್ತಿರುವ ಕರ್ನಾಟಕ ರಾಜ್ಯದಲ್ಲಿ ವೆಚ್ಚ ಮೇಲ್ವಿಚಾರಣೆಯ ಮೇಲೆ ಹೆಚ್ಚಿನ ಗಮನದಿಂದಾಗಿ ಜಪ್ತಿಯಲ್ಲಿ 4.5 ಪಟ್ಟು ಹೆಚ್ಚಳವಾಗಿದೆ.
ನಡೆಯುತ್ತಿರುವ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಇದುವರೆಗೆ ಒಟ್ಟು 375 ಕೋಟಿ ರೂ.ಗೂ ಹೆಚ್ಚು ಜಪ್ತಿ
ಮಾದರಿ ನೀತಿ ಸಂಹಿತೆ ಜಾರಿ ಬಳಿಕ ಜಾರಿ ನಿರ್ದೇಶನಾಲಯ 288 ಕೋಟಿ ಮೌಲ್ಯದ ಆಸ್ತಿ ಮುಟ್ಟುಗೋಲು ಹಾಕಿಕೊಂಡಿದೆ.
ಕಟ್ಟುನಿಟ್ಟಿನ ಜಾಗರೂಕತೆ ಮತ್ತು ಮೇಲ್ವಿಚಾರಣೆಗಾಗಿ ರಾಜ್ಯದಲ್ಲಿ 146 ವೆಚ್ಚ ವೀಕ್ಷಕರ ನಿಯೋಜನೆ; 81 ವಿಧಾನಸಭಾ ಕ್ಷೇತ್ರಗಳನ್ನು ವೆಚ್ಚ ಸೂಕ್ಷ್ಮ ಕ್ಷೇತ್ರಗಳೆಂದು ಗುರುತಿಸಲಾಗಿದೆ
Posted On:
09 MAY 2023 1:25PM by PIB Bengaluru
ಕಳೆದ ಕೆಲವು ಚುನಾವಣೆಗಳಿಂದ "ಪ್ರಲೋಭನೆ-ಮುಕ್ತ" ಚುನಾವಣೆಗಳ ಮೇಲೆ ಭಾರತದ ಚುನಾವಣಾ ಆಯೋಗವು ಒತ್ತು ಮುಂದುವರೆಸಿದೆ ಮತ್ತು ಇದು ಚುನಾವಣೆ ನಡೆಯುತ್ತಿರುವ ಕರ್ನಾಟಕದಲ್ಲಿ ಚುನಾವಣಾ ವೆಚ್ಚದ ಮೇಲ್ವಿಚಾರಣೆಗಾಗಿ ನಿರಂತರ ಪ್ರಯತ್ನಗಳಿಗೆ ಕಾರಣವಾಗಿದೆ. 2018 ರ ವಿಧಾನಸಭಾ ಚುನಾವಣೆಗೆ ಹೋಲಿಸಿದರೆ ರಾಜ್ಯದಲ್ಲಿ ದಾಖಲಾದ ಜಪ್ತಿಗಳು ಗಣನೀಯವಾಗಿ 4.5 ಪಟ್ಟು ಹೆಚ್ಚಾಗಿವೆ. ಕಟ್ಟುನಿಟ್ಟಾದ ಜಾಗರೂಕತೆ, ವ್ಯಾಪಕವಾದ ಮೇಲ್ವಿಚಾರಣೆ, ನೆರೆಯ ರಾಜ್ಯಗಳೊಂದಿಗೆ ಸಮನ್ವಯ ಮತ್ತು ಅಂತರ್ ಸಂಸ್ಥೆಗಳ ನಡುವಿನ ಸಮನ್ವಯವು ಈ ಬಾರಿ ಕರ್ನಾಟಕದಲ್ಲಿ ಪ್ರಲೋಭನೆಗಳ ಹರಿವು ಮತ್ತು ವಿತರಣೆಯನ್ನು ನಿಗ್ರಹಿಸಲು ಕಾರಣವಾಗಿದೆ. ಕರ್ನಾಟಕದಲ್ಲಿ ಇದುವರೆಗೆ (08.05.2023 ರವರೆಗೆ) ಈಗಾಗಲೇ ಮಾಡಲಾದ ಜಪ್ತಿಯ ವಿವರಗಳು ಈ ಕೆಳಗಿನಂತಿವೆ:
ನಗದು
|
ಮದ್ಯ
|
ಮಾದಕ ವಸ್ತು
|
ಅಮೂಲ್ಯ ಲೋಹ
|
ಉಚಿತ ಉಡುಗೊರೆ
|
ಒಟ್ಟು ಜಪ್ತಿ
08.05.2023 ರವರೆಗೆ
|
ಕೋಟಿ ರೂ.ಗಳಲ್ಲಿ
|
ಪ್ರಮಾಣ (ಲೀಟರ್ ಗಳಲ್ಲಿ)
|
ಮೌಲ್ಯ (ಕೋಟಿ ರೂ.ಗಳಲ್ಲಿ)
|
ಮೌಲ್ಯ (ಕೋಟಿ ರೂ.ಗಳಲ್ಲಿ)
|
ಮೌಲ್ಯ (ಕೋಟಿ ರೂ.ಗಳಲ್ಲಿ)
|
(ಕೋಟಿ ರೂ.ಗಳಲ್ಲಿ)
|
147.46
|
2227045
|
83.66
|
23.67
|
96.60
|
375.61
|
ಮಾರ್ಚ್ 2 ನೇ ವಾರದಲ್ಲಿ ಕರ್ನಾಟಕಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ, ಆಯೋಗವು ಕೇಂದ್ರ ಮತ್ತು ರಾಜ್ಯ ಎರಡೂ ಜಾರಿ ಸಂಸ್ಥೆಗಳ ಸುಸಂಘಟಿತ ಕಾರ್ಯನಿರ್ವಹಣೆಯ ವ್ಯಾಪಕ ಪರಿಶೀಲನೆ ಮತ್ತು ಸಿದ್ಧತೆಗಳನ್ನು ಒಳಗೊಂಡಿರುವ ತಯಾರಿಗಳನ್ನು ಕೂಲಂಕಷವಾಗಿ ಪರಿಶೀಲಿಸಿತು. ಆಯೋಗವು ಚುನಾವಣೆ ನಡೆಯುವ ರಾಜ್ಯಗಳ ಜಿಲ್ಲಾ ಮುಖ್ಯಸ್ಥರು ಮತ್ತು ಎಸ್‌ಪಿಗಳ ವಿವರವಾದ ಪರಿಶೀಲನೆಗಳನ್ನು ಸಹ ಹೊಂದಿತ್ತು. ಕರ್ನಾಟಕ ವಿಧಾನಸಭಾ ಚುನಾವಣೆ 2023 ರ ವೇಳಾಪಟ್ಟಿಯನ್ನು ಪ್ರಕಟಿಸುವಾಗ, ಮುಖ್ಯ ಚುನಾವಣಾ ಆಯುಕ್ತ ಶ್ರೀ ರಾಜೀವ್ ಕುಮಾರ್ ಅವರು ಚುನಾವಣಾ ಪ್ರಕ್ರಿಯೆಯಲ್ಲಿ ಪ್ರಲೋಭನೆಗಳ ವಿತರಣೆಯಲ್ಲಿ ಹೆಚ್ಚಿನ ಜಾಗರೂಕತೆ ಮತ್ತು ಶೂನ್ಯ ಸಹಿಷ್ಣುತೆಯನ್ನು ಒತ್ತಿ ಹೇಳಿದರು. ಪ್ರಲೋಭನೆ ಮುಕ್ತ ಚುನಾವಣೆಗಳನ್ನು ಖಾತ್ರಿಪಡಿಸಿಕೊಳ್ಳಲು ಆಯೋಗವು ಗಣನೀಯವಾಗಿ ನಿಗಾ ಹೆಚ್ಚಿಸಿದೆ ಮತ್ತು ಐದು ರಾಜ್ಯಗಳಲ್ಲಿ ಇತ್ತೀಚೆಗೆ ನಡೆದ ವಿಧಾನಸಭಾ ಚುನಾವಣೆಗಳಲ್ಲಿ ಕಂಡುಬಂದಿರುವ ಪ್ರಯತ್ನಗಳ ನಿರಂತರತೆ ಮತ್ತು ಜಪ್ತಿಗಳ ಹೆಚ್ಚಳವು ಮುಂದುವರಿಯುತ್ತದೆ ಎಂದು ಅವರು ಹೇಳಿದ್ದರು.
ಕರ್ನಾಟಕದಲ್ಲಿ ಮಾದರಿ ನೀತಿ ಸಂಹಿತೆಯ ಜಾರಿಯ ಸಮಯದಲ್ಲಿ 375.61 ಕೋಟಿ ರೂ.ಗಳನ್ನು ವಶಪಡಿಸಿಕೊಳ್ಳುವುದರೊಂದಿಗೆ ಫಲಿತಾಂಶಗಳು ಉತ್ತೇಜನಕಾರಿಯಾಗಿವೆ, ಇದು 2018 ರ ವಿಧಾನಸಭಾ ಚುನಾವಣೆಗಳಲ್ಲಿ ನಡೆದ ಜಪ್ತಿಗಿಂತ ಸುಮಾರು 4.5 ಪಟ್ಟು ಹೆಚ್ಚು. ಹೆಚ್ಚುವರಿಯಾಗಿ, ಮಾರ್ಚ್, 2023 ರ ಎರಡನೇ ವಾರದಲ್ಲಿ ಆಯೋಗದ ಭೇಟಿಯ ದಿನಾಂಕದಿಂದ ಚುನಾವಣೆ ಘೋಷಣೆಯ ದಿನಾಂಕದವರೆಗೆ, 83.78 ಕೋಟಿ ರೂಪಾಯಿಗಳನ್ನು ವಿವಿಧ ಜಾರಿ ಸಂಸ್ಥೆಗಳು ವಶಪಡಿಸಿಕೊಂಡಿವೆ. ಮಾದರಿ ನೀತಿ ಸಂಹಿತೆ ಜಾರಿಯಾದ ನಂತರ ಜಾರಿ ನಿರ್ದೇಶನಾಲಯ ಕೂಡ 288 ಕೋಟಿ ರೂಪಾಯಿ ಆಸ್ತಿಯನ್ನು ಜಪ್ತಿ ಮಾಡಿದೆ.
ಬೆಂಗಳೂರಿನಲ್ಲಿ ಮದ್ಯ ವಶ ಹಾಗೂ ಕೋಲಾರ ಜಿಲ್ಲೆಯ ಬಂಗಾರಪೇಟೆ ವಿಧಾನಸಭಾ ಕ್ಷೇತ್ರದಲ್ಲಿ ಭಾರೀ ಪ್ರಮಾಣದ ನಗದು ಜಪ್ತಿ
ಕೋಲಾರ ಜಿಲ್ಲೆಯ ಬಂಗಾರಪೇಟೆ ವಿಧಾನಸಭಾ ಕ್ಷೇತ್ರದಲ್ಲಿ 4.04 ಕೋಟಿ ರೂ. ನಗದು ಜಪ್ತಿ, ಹೈದರಾಬಾದ್‌ನಲ್ಲಿ ಅಕ್ರಮವಾಗಿ ಅಲ್ಪ್ರೋಝೋಲಮ್ ತಯಾರಿಸುವ ಲ್ಯಾಬ್ ಕುರಿತು ಗುಪ್ತಚರ ಮಾಹಿತಿ ಮತ್ತು ಎನ್‌ಸಿಬಿ ನಡೆಸಿದ ಟ್ರಯಲ್ ಮ್ಯಾಪಿಂಗ್ ಮೂಲಕ ದಾಳಿ; ಬೀದರ್ ಜಿಲ್ಲೆಯಲ್ಲಿ 100 ಕೆಜಿ ಗಾಂಜಾ ವಶ; ಎಲ್ಲಾ ಜಿಲ್ಲೆಗಳಿಂದ ಗಮನಾರ್ಹ ಪ್ರಮಾಣದ ಮದ್ಯ ವಶಪಡಿಸಿಕೊಳ್ಳಲಾಗಿದೆ. ಖರ್ಚು ಮೇಲ್ವಿಚಾರಣೆಯ ಮತ್ತೊಂದು ಗಮನಾರ್ಹ ಲಕ್ಷಣವೆಂದರೆ ಉಚಿತ ಉಡುಗೊರೆಗಳ ಬೃಹತ್ ಜಪ್ತಿ. ಕಲಬುರ್ಗಿ, ಚಿಕ್ಕಮಗಳೂರು ಮತ್ತಿತರ ಜಿಲ್ಲೆಗಳಿಂದ ಸೀರೆ, ಆಹಾರ ಕಿಟ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ಬೈಲಹೊಂಗಲ, ಕುಣಿಗಲ್ ಮತ್ತಿತರ ವಿಧಾನಸಭಾ ಕ್ಷೇತ್ರಗಳಿಂದ ಅಪಾರ ಸಂಖ್ಯೆಯ ಪ್ರೆಶರ್ ಕುಕ್ಕರ್‌ಗಳು ಮತ್ತು ಅಡುಗೆ ಉಪಕರಣಗಳನ್ನು ಸಹ ವಶಪಡಿಸಿಕೊಳ್ಳಲಾಗಿದೆ.
ಬೀದರ್ ಜಿಲ್ಲೆಯ ಗಾಂಧಿ ಗುಂಜ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಗಾಂಜಾ ಮತ್ತು ಬೆಳಗಾವಿ ಜಿಲ್ಲೆಯ ಬೈಲಹೊಂಗಲ ವಿಧಾನಸಭಾ ಕ್ಷೇತ್ರದಲ್ಲಿ ಪ್ರೆಶರ್ ಕುಕ್ಕರ್ ಜಪ್ತಿ
ಸವದತ್ತಿ ವಿಧಾನಸಭಾ ಕ್ಷೇತ್ರದ ಗೋದಾಮಿನಲ್ಲಿ 1000ಕ್ಕೂ ಹೆಚ್ಚು ಹೊಲಿಗೆ ಯಂತ್ರ ವಶ
ವ್ಯಾಪಕವಾದ ಮೇಲ್ವಿಚಾರಣಾ ಪ್ರಕ್ರಿಯೆಯು ಚುನಾವಣೆ ಘೋಷಣೆಯ ತಿಂಗಳುಗಳ ಹಿಂದೆಯೇ ಪ್ರಾರಂಭವಾಯಿತು ಮತ್ತು ಜಾರಿ ಸಂಸ್ಥೆಗಳು, ಡಿಇಒಗಳು/ಎಸ್‌ಪಿಗಳು ಸೇರಿದಂತೆ ವಿವಿಧ ಮಧ್ಯಸ್ಥಗಾರರ ಸಂಪೂರ್ಣ ಪರಿಶೀಲನೆ, ವೆಚ್ಚ ವೀಕ್ಷಕರಾಗಿ ಅನುಭವಿ ಅಧಿಕಾರಿಗಳನ್ನು ನೇಮಿಸುವುದು, ಸಂವೇದನಾಶೀಲತೆ ಮತ್ತು ಅಂತರ್-ಸಂಸ್ಥೆಗಳ ಸಮನ್ವಯ ಮತ್ತು ಮೇಲ್ವಿಚಾರಣೆ ಮತ್ತು ಕ್ಷೇತ್ರ ಮಟ್ಟದ ತಂಡಗಳ ಸಮರ್ಪಕ ಲಭ್ಯತೆಯಂತಹ ಚಟುವಟಿಕೆಗಳನ್ನು ಇದು ಒಳಗೊಂಡಿದೆ. 146 ವೆಚ್ಚ ವೀಕ್ಷಕರನ್ನು ನಿಯೋಜಿಸಲಾಗಿದೆ ಮತ್ತು 81 ವಿಧಾನಸಭಾ ಕ್ಷೇತ್ರಗಳನ್ನು ಕಟ್ಟುನಿಟ್ಟಿನ ಜಾಗರೂಕತೆಗಾಗಿ ವೆಚ್ಚ ಸೂಕ್ಷ್ಮ ಕ್ಷೇತ್ರಗಳೆಂದು ಗುರುತಿಸಲಾಗಿದೆ.
ಆಯೋಗವು ಮೇ 1, 2023 ರಂದು ಕರ್ನಾಟಕ ಮತ್ತು ನೆರೆಯ ರಾಜ್ಯಗಳಾದ ಮಹಾರಾಷ್ಟ್ರ, ಗೋವಾ, ತೆಲಂಗಾಣ, ಆಂಧ್ರಪ್ರದೇಶ, ಕೇರಳ ಮತ್ತು ತಮಿಳುನಾಡುಗಳ ಗಡಿ ಚೆಕ್ ಪೋಸ್ಟ್‌ಗಳ ಮೂಲಕ ಕಾನೂನು ಸುವ್ಯವಸ್ಥೆ ಮತ್ತು ಅಂತರರಾಜ್ಯ ಜಾಗರೂಕತೆಯನ್ನು ಪರಿಶೀಲಿಸಿತು. ಪರಿಶೀಲನೆಯಲ್ಲಿ ಮುಖ್ಯ ಕಾರ್ಯದರ್ಶಿಗಳು, ಡಿಜಿಪಿಗಳು, ಅಬಕಾರಿ ಆಯುಕ್ತರು ಮತ್ತು ಪ್ರಮುಖ ಜಾರಿ ಏಜೆನ್ಸಿಗಳ ಪ್ರಾದೇಶಿಕ ಮುಖ್ಯಸ್ಥರು ಭಾಗವಹಿಸಿದ್ದರು ಈ ಸಂದರ್ಭದಲ್ಲಿ ಮುಖ್ಯ ಚುನಾವಣಾ ಆಯುಕ್ತ ಶ್ರೀ ರಾಜೀವ್ ಕುಮಾರ್ ಅವರು ಗಡಿ ಜಿಲ್ಲೆಗಳಲ್ಲಿರುವ 185 ಚೆಕ್ ಪೋಸ್ಟ್‌ಗಳ ಸರಿಯಾದ ನಿರ್ವಹಣೆ ಮತ್ತು ಮೇಲ್ವಿಚಾರಣೆಗೆ ಮತ್ತೊಮ್ಮೆ ಒತ್ತು ನೀಡಿದರು. ಪರಿಶೀಲನಾ ಸಭೆಯಲ್ಲಿ, ಚುನಾವಣಾ ಆಯುಕ್ತ ಶ್ರೀ ಅನುಪ್ ಚಂದ್ರ ಪಾಂಡೆ ಅವರು ಅಕ್ರಮ ಮದ್ಯ ವಶಪಡಿಸಿಕೊಳ್ಳುವುದು, ಕಿಂಗ್‌ಪಿನ್‌ಗಳ ವಿರುದ್ಧ ಕ್ರಮ, ಮದ್ಯ ಸಂಗ್ರಹಣೆಯನ್ನು ತಡೆಯುವ ಸುಧಾರಣೆಯ ಬಗ್ಗೆ ಒತ್ತಿಹೇಳಿದರು, ಚುನಾವಣಾ ಆಯುಕ್ತ ಶ್ರೀ ಅರುಣ್ ಗೋಯೆಲ್ ಅವರು ಸಾರ್ವಜನಿಕರಿಗೆ ತೊಂದರೆಯಾಗದಂತೆ ಜಾಗರೂಕತೆಯನ್ನು ಬಿಗಿಗೊಳಿಸುವಂತೆ ಮತ್ತು ವಶಪಡಿಸಿಕೊಂಡ ನಂತರದ ಸಂಪೂರ್ಣ ಅನುಸರಣೆಯನ್ನು ಖಚಿತಪಡಿಸಿಕೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಅಂತಹ ಗಡಿ ಚೆಕ್ ಪೋಸ್ಟ್‌ಗಳಿಂದ ವಶಪಡಿಸಿಕೊಳ್ಳಲಾದ ನಗದು, ಮದ್ಯ, ಡ್ರಗ್ಸ್, ಬೆಲೆಬಾಳುವ ಲೋಹಗಳು ಮತ್ತು ಉಚಿತ ಉಡುಗೊರೆಯ ವಸ್ತುಗಳ ಮೌಲ್ಯ 70 ಕೋಟಿ ರೂ.ಗೂ ಹೆಚ್ಚು ಎಂದು ವರದಿಯಾಗಿದೆ.
ಜಾರಿ ಸಂಸ್ಥೆಗಳು ಅಕ್ರಮ ತಡೆಯುವ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿವೆ. ರಾಜ್ಯ ಪೊಲೀಸ್, ಆದಾಯ ತೆರಿಗೆ, ವಾಣಿಜ್ಯ ತೆರಿಗೆ, ಇಡಿ, ಆರ್ ಪಿ ಎಫ್, ಜಿ ಆರ್ ಪಿ, ಸಿ ಐ ಎಸ್ ಎಫ್, ಎನ್ ಸಿ ಬಿ, ಸಿ ಐ ಎಸ್ ಎಫ್ ಮತ್ತು ಡಿ ಆರ್ ಐ ಸೇರಿದಂತೆ ಎಲ್ಲಾ ಪಾಲುದಾರ ಏಜೆನ್ಸಿಗಳಿಂದ ವಶಪಡಿಸಿಕೊಳ್ಳುವಿಕೆಗಳು ಮತ್ತು ಜಪ್ತಿಗಳನ್ನು ಮಾಡಲಾಗಿದೆ. ಜಾರಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುವ ಏಜೆನ್ಸಿಗಳು ಮಾತ್ರವಲ್ಲದೆ ಕೆಲವರು ಪ್ರಲೋಭನೆ ಮುಕ್ತ ಮತ್ತು ನ್ಯಾಯ ಸಮ್ಮತ ಚುನಾವಣೆಗಳಿಗಾಗಿ ನಾಗರಿಕರಲ್ಲಿ ಜಾಗೃತಿ ಮೂಡಿಸುವ ಪ್ರಯತ್ನಗಳನ್ನು ಮಾಡುತ್ತಿದ್ದಾರೆ.
ಮತದಾರರು ಉಚಿತಗಳನ್ನು ಸ್ವೀಕರಿಸುವುದನ್ನು ತಡೆಯಲು ವಾಣಿಜ್ಯ ತೆರಿಗೆ ಇಲಾಖೆ ಹೊರಡಿಸಿರುವ ಜಾಗೃತಿ ಭಿತ್ತಿಪತ್ರ
****
(Release ID: 1923131)
Visitor Counter : 401