ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯ

ಮಲ್ಟಿಪಲ್ ಸ್ಕ್ಲೆರೋಸಿಸ್ ನಂತಹ ರೋಗಗಳನ್ನು ಅಧ್ಯಯನ ಮಾಡಲು ಸಹಾಯ ಮಾಡುವ ಪ್ರೋಟೀನ್ ಅನ್ನು ವಿಜ್ಞಾನಿಗಳು ತಯಾರಿಸಿದ್ದಾರೆ

Posted On: 21 APR 2023 2:43PM by PIB Bengaluru

ವಿಜ್ಞಾನಿಗಳು ಶುದ್ಧ ಮೈಲಿನ್ ಬೇಸಿಕ್ ಪ್ರೊಟೀನ್ (ಎಂ.ಬಿ.ಪಿ.) ನ ಏಕಪದರಗಳನ್ನು ತಯಾರಿಸಿದ್ದಾರೆ. ಇದು ಮೈಲಿನ್ ಕೋಶದ ಪ್ರಮುಖ ಪ್ರೋಟೀನ್ ಅಂಶವಾಗಿದೆ. ಇದು ರಕ್ಷಣಾತ್ಮಕ ಪೊರೆಯಾಗಿದ್ದು ಅದು ನರ ಕೋಶಗಳ ಆಕ್ಸಾನ್ ಸುತ್ತಲೂ ಸುತ್ತುತ್ತದೆ ಮತ್ತು ಮಲ್ಟಿಪಲ್ ಸ್ಕ್ಲೆರೋಸಿಸ್ (ಎಂ.ಎಸ್.) ನಂತಹ ರೋಗಗಳ ಅಧ್ಯಯನದಲ್ಲಿ ಮಾದರಿ ಪ್ರೋಟೀನ್ ಆಗಿ ಕಾರ್ಯನಿರ್ವಹಿಸಲಿದೆ

ಮೈಲಿನ್ ಪೊರೆಯನ್ನು ಸಂಕುಚಿತಗೊಳಿಸಲು ಎಂ.ಬಿ.ಪಿ. ಸಹಾಯ ಮಾಡುತ್ತದೆ. ಫ್ಯಾಬ್ರಿಕೇಟೆಡ್ ಟೈಲರ್ಡ್ ಮೊನೊಲೇಯರ್‌ ಗಳು ಕವಚದ ಸಮಗ್ರತೆ, ಸ್ಥಿರತೆ ಮತ್ತು ಸಾಂದ್ರತೆಯನ್ನು ಕಾಪಾಡುತ್ತದೆ ಹಾಗೂ ಮಲ್ಟಿ-ಲ್ಯಾಮೆಲ್ಲರ್ ಮೈಲಿನ್ ಕವಚದ ರಚನೆಯನ್ನು ರೂಪಿಸುವಲ್ಲಿ ಎಂ.ಬಿ.ಪಿ.ಯ ಪಾತ್ರದ ಬಗ್ಗೆ ಆಳವಾದ ತಿಳಿವಳಿಕೆಯನ್ನು ಮುಂಬರುವ ದಿನಗಳಲ್ಲಿ ನೀಡಬಹುದು.

ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಅಡಿಯಲ್ಲಿ ಈಶಾನ್ಯ ಭಾರತದ ಸ್ವಾಯತ್ತ ಸಂಸ್ಥೆಯಾದ ಗುವಾಹಟಿ ಮೂಲದ ಇನ್‌ಸ್ಟಿಟ್ಯೂಟ್ ಆಫ್ ಅಡ್ವಾನ್ಸ್ಡ್ ಸ್ಟಡಿ ಇನ್ ಸೈನ್ಸ್ ಅಂಡ್ ಟೆಕ್ನಾಲಜಿಯ ಭೌತಿಕ ವಿಜ್ಞಾನ ವಿಭಾಗದ ಸಂಶೋಧನಾ ತಂಡವು ಗಾಳಿ-ನೀರು ಮತ್ತು ಗಾಳಿ-ಘನ ಇಂಟರ್ಫೇಸ್‌ಗಳಲ್ಲಿ ಶುದ್ಧ ಮೈಲಿನ್ ಮೂಲ ಪ್ರೋಟೀನ್‌ ನ ಏಕಪದರಗಳನ್ನು ರೂಪಿಸಲು, ಲ್ಯಾಂಗ್‌ಮುಯಿರ್-ಬ್ಲಾಡ್ಜೆಟ್ (ಎಲ್‌.ಬಿ) ತಂತ್ರವನ್ನು ಬಳಸಿದೆ.

ಡಾ. ಸಾರಥಿ ಕುಂದು, ಅಸೋಸಿಯೇಟ್ ಪ್ರೊಫೆಸರ್ ಇವರು ಹಿರಿಯ ಸಂಶೋಧನಾ ಸಹೋದ್ಯೋಗಿ ಶ್ರೀ ರಕ್ತಿಮ್ ಜೆ. ಶರ್ಮಾ ಜೊತೆಗೆ ಈ ವಿಜ್ಞಾನಿಗಳ ತಂಡದ ನೇತೃತ್ವ ವಹಿಸಿದ್ದಾರೆ. ಪಿಹೆಚ್ ಸಬ್‌ಫೇಸ್ ಟ್ಯೂನ್ ಮಾಡುವ ಮೂಲಕ ಪ್ರೋಟೀನ್ ಫಿಲ್ಮ್‌ಗಳ ಸ್ಥಿರತೆ ಮತ್ತು ಬಿಗಿತವನ್ನು ಟ್ರ್ಯಾಕ್ ಮಾಡುವಾಗ ಎಂ.ಬಿ.ಪಿ. ರಚನೆಯ ಕಾರ್ಯವಿಧಾನವನ್ನು ವಿವರಿಸಿದ್ದಾರೆ. ಅಣುಗಳ ಹಿಮ್ಮುಖ ಸ್ವಭಾವವು, ಪಿಎಚ್ ಪರಿಸ್ಥಿತಿಗಳಿಗೆ ಸಂಬಂಧಿಸಿದಂತೆ ಫಿಲ್ಮ್‌ಗಳ ನಮ್ಯತೆಯನ್ನು ಖಚಿತಪಡಿಸುತ್ತದೆ.

ಗಾಳಿ-ನೀರಿನ ಅಂತರ ಸಂಪರ್ಕ ಸಾಧನ(ಇಂಟರ್‌ಫೇಸ್‌) ಮೂಲಕ ರೂಪುಗೊಂಡ ಏಕಪದರದ ವಿವಿಧ ಪ್ರದೇಶಗಳಿಂದ ವೇರಿಯಬಲ್ ಪಿಹೆಚ್ ಪರಿಸ್ಥಿತಿಗಳಲ್ಲಿ ಪ್ರೋಟೀನ್‌ ನ ವರ್ತನೆಯನ್ನು ತನಿಖೆ ಮಾಡಲಾಗಿದೆ. ಏಕಪದರಗಳ ಬಿಗಿತವು ರೂಪುಗೊಂಡ ನಿರ್ದಿಷ್ಟ ಪ್ರಭಾವಲಯದ ಕಾರ್ಯಕ್ಷೇತ್ರಗಳೊಂದಿಗೆ ಮತ್ತು ನೀರಿನ ಮೇಲ್ಮೈಯಲ್ಲಿ ಪ್ರಭಾವಲಯಗಳು ಆಕ್ರಮಿಸಿಕೊಂಡಿರುವ ಪ್ರದೇಶದೊಂದಿಗೆ ಪರಸ್ಪರ ಸಂಬಂಧ ಹೊಂದಿದೆ.

ಗಾಳಿ-ನೀರಿನಲ್ಲಿ ಮತ್ತು ಎಲ್.ಬಿ. ವಿಧಾನದಿಂದ ತಯಾರಿಸಲಾದ ಘನ ಮೇಲ್ಮೈಗಳಲ್ಲಿ ರೂಪುಗೊಂಡ ನಿಕಟವಾಗಿ ಪ್ಯಾಕ್ ಮಾಡಲಾದ ಎಂಬಿಪಿ ಪದರವು ಪ್ರೋಟೀನ್ ಪರಿಸರದ ಸಮೀಪದಲ್ಲಿ 2ಡಿ ಯಲ್ಲಿ ವಿವಿಧ ರಾಸಾಯನಿಕ ಮತ್ತು ಭೌತಿಕ ಗುಣಲಕ್ಷಣಗಳನ್ನು ಅಧ್ಯಯನ ಮಾಡಲು ಸಹಾಯ ಮಾಡುತ್ತದೆ. ಎಂಬಿಪಿಯ ಠೇವಣಿ ಮಾಡಿದ ಎಲ್.ಬಿ. ಫಿಲ್ಮ್‌ಗಳನ್ನು ವಿಶೇಷ ಪ್ರೋಟೀನ್‌ಗಳನ್ನು ಸ್ಫಟಿಕೀಕರಿಸಲು ಬಳಸುವ ಪ್ರೋಟೀನ್ ನ್ಯಾನೊಟೆಂಪ್ಲೇಟ್‌ ಗಳೆಂದು ಪರಿಗಣಿಸಬಹುದು. ಈ ಮಹತ್ತರವಾದ ಸಂಶೋಧನೆಯನ್ನು ಇತ್ತೀಚೆಗೆ ಜರ್ನಲ್ ಆಫ್ ಕೊಲಾಯ್ಡ್ಸ್ ಮತ್ತು ಸರ್ಫೇಸಸ್ ಎ: ಫಿಸಿಕೊಕೆಮಿಕಲ್ ಮತ್ತು ಇಂಜಿನಿಯರಿಂಗ್ ಆಸ್ಪೆಕ್ಟ್ಸ್ ಎಂಬ ಹೆಸರಲ್ಲಿ ಎಲ್ಸೆವಿಯರ್ ಎಂಬ ಹೆಸರಾಂತ ಪ್ರಕಾಶಕರು ಪ್ರಕಟಿಸಿದ್ದಾರೆ.

****



(Release ID: 1918574) Visitor Counter : 101


Read this release in: English , Urdu , Hindi , Telugu