ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವಾಲಯ
azadi ka amrit mahotsav

ಐ ಆರ್‌ ಇ ಡಿ ಎ ಅತ್ಯಧಿಕ ವಾರ್ಷಿಕ ಸಾಲ ವಿತರಣೆ ಮತ್ತು ಮಂಜೂರಾತಿ ಮಾಡಿದೆ


2022-23 ನೇ ಆರ್ಥಿಕ ವರ್ಷದ ಅವಧಿಯಲ್ಲಿ ನವೀಕರಿಸಬಹುದಾದ ಇಂಧನ ಯೋಜನೆಗಳಿಗೆ 16,320 ಕೋಟಿ ರೂಪಾಯಿಗಳ ಸಾಲ ವಿತರಣೆ ಮತ್ತು 32,578 ಕೋಟಿ ರೂಪಾಯಿಗಳ ಸಾಲ ಮಂಜೂರಾತಿ ಮಾಡಲಾಗಿದೆ

Posted On: 28 MAR 2023 12:32PM by PIB Bengaluru

ಭಾರತೀಯ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ಸಂಸ್ಥೆಯು (ಐ ಆರ್‌ ಇ ಡಿ ಎ) 2022-23 ಆರ್ಥಿಕ ವರ್ಷದ ಅವಧಿಯಲ್ಲಿ 16,320 ಕೋಟಿ ರೂಪಾಯಿ ಸಾಲವನ್ನು ವಿತರಿಸುವ ಮೂಲಕ ಮಹತ್ವದ ಮೈಲಿಗಲ್ಲನ್ನು ಸಾಧಿಸಿದೆ. 2021-22ರ ಅವಧಿಯಲ್ಲಿ 16,071 ಕೋಟಿ ರೂ.ಗಳು ಇದುವರೆಗಿನ ಅತಿ ಹೆಚ್ಚು ವಾರ್ಷಿಕ ಸಾಲ ವಿತರಣೆಯಾಗಿತ್ತು. ಐ ಆರ್‌ ಇ ಡಿ ಎ 23,921 ಕೋಟಿ ರೂ.ಗಳ ಅತಿ ಹೆಚ್ಚು ವಾರ್ಷಿಕ ಸಾಲ ಮಂಜೂರಾತಿಯನ್ನೂ ದಾಟಿದೆ (2021-22 ರಲ್ಲಿ ಸಾಲ ಮಂಜೂರಾತಿ) ಮತ್ತು 32,578 ಕೋಟಿ ರೂ. ಸಾಲ ಮಂಜೂರಾತಿಯನ್ನು ಮುಟ್ಟಿದೆ (27ನೇ ಮಾರ್ಚ್ 2023 ರವರೆಗೆ).

ಸಂಸ್ಥೆಯು ಸ್ಪರ್ಧಾತ್ಮಕ ದರಗಳಲ್ಲಿ ದೇಶಾದ್ಯಂತ ನವೀಕರಿಸಬಹುದಾದ ಇಂಧನ ಯೋಜನೆಗಳಿಗೆ ಹಣಕಾಸಿನ ನೆರವು ನೀಡುವ ಮೂಲಕ ಸುಸ್ಥಿರ ಮತ್ತು ಶುದ್ಧ ಇಂಧನ ಭವಿಷ್ಯದತ್ತ ಭಾರತದ ಪರಿವರ್ತನೆಗೆ ಸಕ್ರಿಯವಾಗಿ ಕೊಡುಗೆ ನೀಡುತ್ತಿದೆ.

ಈ ಸಾಧನೆಯ ಕುರಿತು ಮಾತನಾಡಿದ ಐ ಆರ್‌ ಇ ಡಿ ಎ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಶ್ರೀ ಪ್ರದೀಪ್ ಕುಮಾರ್ ದಾಸ್, "ದಾಖಲೆಯ ಸಾಲ ವಿತರಣೆ ಮತ್ತು ಮಂಜೂರಾತಿಯು ಭಾರತದಲ್ಲಿ ನವೀಕರಿಸಬಹುದಾದ ಇಂಧನ ಯೋಜನೆಗಳನ್ನು ಉತ್ತೇಜಿಸುವ ಮತ್ತು ಹಣಕಾಸು ಒದಗಿಸುವ ಉದ್ದೇಶಕ್ಕೆ ಕಂಪನಿಯ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ. ಇದು ದೇಶದ ನವೀಕರಿಸಬಹುದಾದ ಇಂಧನ (ಆರ್‌ಇ) ವಲಯದಲ್ಲಿ ಪ್ರಮುಖ ಹಣಕಾಸು ಸಂಸ್ಥೆಯಾಗಿ ನಮ್ಮ ಸ್ಥಾನವನ್ನು ಮತ್ತಷ್ಟು ಬಲಪಡಿಸುತ್ತದೆ." ಎಂದು ಹೇಳಿದರು.

****
 


(Release ID: 1911408) Visitor Counter : 162