ಗ್ರಾಹಕ ವ್ಯವಹಾರ, ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವಾಲಯ

​​​​​​​ತೊಗರಿಯ ದಾಸ್ತಾನು ವಿವರ ಬಹಿರಂಗದ ಮೇಲೆ ನಿಗಾ ವಹಿಸಲು ಸಮಿತಿ ರಚಿಸಿದ ಕೇಂದ್ರ ಸರ್ಕಾರ

Posted On: 27 MAR 2023 3:50PM by PIB Bengaluru

ಕೇಂದ್ರ ಗ್ರಾಹಕ ವ್ಯವಹಾರಗಳ ಇಲಾಖೆ, ರಾಜ್ಯ ಸರ್ಕಾರಗಳ ನಿಕಟ ಸಮನ್ವಯದೊಂದಿಗೆ ತೊಗರಿ ಹೊಂದಿರುವ ಆಮದುದಾರರು, ಗಿರಣಿದಾರರು, ದಾಸ್ತಾನುಗಾರರು, ವ್ಯಾಪಾರಸ್ಥರು ಮತ್ತಿತರರು ಹೊಂದಿರುವ ದಾಸ್ತಾನಿನ ಮೇಲೆ ನಿಗಾ ವಹಿಸಲು ಹೆಚ್ಚುವರಿ ಕಾರ್ಯದರ್ಶಿ ಶ್ರೀಮತಿ ನಿಧಿ ಖರೆ ಅಧ್ಯಕ್ಷತೆಯಲ್ಲಿ ಸಮಿತಿಯನ್ನು ರಚಿಸಿದೆ. ಉತ್ತಮ ಪ್ರಮಾಣದಲ್ಲಿ ಆಮದು ನಿರಂತರ ಆಗಮನದ ಹೊರತಾಗಿಯೂ ಕೆಲವು ಮಾರುಕಟ್ಟೆ ವರ್ತಕರು ದಾಸ್ತಾನು ಬಿಡುಗಡೆ ಮಾಡುತ್ತಿಲ್ಲ ಎಂಬ ವರದಿಗಳ ಹಿನ್ನೆಲೆಯಲ್ಲಿ ಈ ನಿರ್ಧಾರವನ್ನು ಕೈಗೊಳ್ಳಲಾಗಿದೆ.

ನಿಗಾ ವಹಿಸಲು ಸಮಿತಿ ರಚಿಸುವ ಇತ್ತೀಚಿನ ಪ್ರಕಟಣೆಯು, ಮಾರುಕಟ್ಟೆಯಲ್ಲಿ ಉಹಾಪೋಹಗಳನ್ನು ಹರಡುವವರು ಹಾಗೂ ದಾಸ್ತಾನುಗಾರರನ್ನು ನಿಯಂತ್ರಿಸುವ ಸರ್ಕಾರದ ಉದ್ದೇಶವನ್ನು ಸೂಚಿಸುತ್ತದೆ. ಅಲ್ಲದೆ, ಇದು ಮುಂಬರುವ ತಿಂಗಳುಗಳಲ್ಲಿ ತೂಗರಿ ಬೆಲೆ ನಿಯಂತ್ರಣ ಮಾಡುವ ಸರ್ಕಾರದ ಬದ್ಧತೆಯನ್ನು ಸೂಚಿಸುತ್ತದೆ. ಮುಂಬರುವ ತಿಂಗಳುಗಳಲ್ಲಿ ಅನಗತ್ಯ ಬೆಲೆ ಏರಿಕೆ ಆದರೆ ಅವುಗಳನ್ನು ತಡೆಯಲು ಅಗತ್ಯ ಮುನ್ನೆಚ್ಚರಿಕೆಯನ್ನು ಕೈಗೊಳ್ಳಲು ಸರ್ಕಾರ ದೇಶೀಯ ಮಾರುಕಟ್ಟೆಯಲ್ಲಿ ದಾಸ್ತಾನಿನ ಮೇಲೆ ನಿರಂತರ ನಿಗಾ ಇರಿಸಿದೆ.

1995ರ ಅಗತ್ಯ ವಸ್ತುಗಳ ಕಾಯ್ದೆ ಅಡಿಯಲ್ಲಿ ತೊಗರಿಗೆ ಸಂಬಂಧಿಸಿದಂತೆ ದಾಸ್ತಾನು ವಿವರಗಳನ್ನು ಬಹಿರಂಗಪಡಿಸುವಂತೆ ಸರ್ಕಾರ ಎಲ್ಲ ರಾಜ್ಯಗಳು/ ಕೇಂದ್ರಾಡಳಿತ ಪ್ರದೇಶಗಳಿಗೆ ಸೂಚನೆ ನೀಡಿದ್ದನ್ನು ಇಲ್ಲಿ ಸ್ಮರಿಸಬಹುದಾಗಿದೆ. ಅಲ್ಲದೆ, ಸುಗಮ ಮತ್ತು ತಡೆರಹಿತ ಆಮದು ಮಾಡಿಕೊಳ್ಳಲು ಎಲ್ ಡಿಸಿ ರಾಷ್ಟ್ರಗಳಿಗೆ ಶೂನ್ಯ ಆಮದು ಸುಂಕವಿದ್ದರೂ ಸಹ ಪ್ರಕ್ರಿಯೆಗಳಲ್ಲಿ ಅಡಚಣೆಗಳಾಗುವುದರಿಂದ ಎಲ್ ಡಿಸಿಯಲ್ಲದ ರಾಷ್ಟ್ರಗಳಿಂದ ತೂಗರಿ ಆಮದಿಗೆ ಅನ್ವಯವಾಗುತ್ತಿದ್ದ ಶೇ. 10ರ ಸುಂಕವನ್ನು  ತೆಗೆದುಹಾಕಲಾಗಿದೆ.   

*****



(Release ID: 1911172) Visitor Counter : 117