ಪರಿಸರ ಮತ್ತು ಅರಣ್ಯ ಸಚಿವಾಲಯ
ಪ್ರಧಾನಮಂತ್ರಿಯವರ ಲೈಫ್ ಅಭಿಯಾನದ ಸಂದೇಶವನ್ನು ಜನರಿಗೆ ತಲುಪಿಸುತ್ತಿರುವ ಇಐಎಸಿಪಿ
ಭೂಗ್ರಹ ಪರವಾದ ಜನರಾಗಲು ಸ್ಫೂರ್ತಿ ಪಡೆದ ಸುಮಾರು 59,500 ಜನರು
Posted On:
26 MAR 2023 10:28AM by PIB Bengaluru
ದೆಹಲಿ, ಉತ್ತರಾಖಂಡ ಮತ್ತು ಪಂಜಾಬ್ ನ ಪರಿಸರ ಮಾಹಿತಿ, ಜಾಗೃತಿ, ಸಾಮರ್ಥ್ಯ ವರ್ಧನೆ ಮತ್ತು ಜೀವನೋಪಾಯ ಕಾರ್ಯಕ್ರಮ, ಕಾರ್ಯಕ್ರಮ ಕೇಂದ್ರಗಳು ಹಾಗು ಸಂಪನ್ಮೂಲ ಪಾಲುದಾರರು (ಇಐಎಸಿಪಿ ಪಿಸಿ-ಆರ್ ಪಿ) 2023ರ ಮಾರ್ಚ್ 20-24 ರವರೆಗೆ ಲೈಫ್ ಅಭಿಯಾನವನ್ನು ಉತ್ತೇಜಿಸುವ ಐದು ದಿನಗಳ ಸಾಮೂಹಿಕ ಜಾಗೃತಿ ಕಾರ್ಯಕ್ರಮವನ್ನು ನಡೆಸಲಾಯಿತು. ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಪ್ರಾರಂಭಿಸಿದ ಎಲ್.ಐ.ಎಫ್.ಇ. (ಲೈಫ್) ಅಭಿಯಾನ ಪರಿಸರ ಪ್ರಜ್ಞೆಯ ಜೀವನ, ವ್ಯರ್ಥ ಬಳಕೆಯ ಬದಲು ಪ್ರಜ್ಞಾಪೂರ್ವಕ ಮತ್ತು ಉದ್ದೇಶಪೂರ್ವಕ ಬಳಕೆಯನ್ನು ಉತ್ತೇಜಿಸುವತ್ತ ಗಮನ ಹರಿಸುತ್ತದೆ. ಪರಿಸರ ಸ್ನೇಹಿ ಜೀವನಶೈಲಿಯನ್ನು ಅಳವಡಿಸಿಕೊಳ್ಳಲು ಮತ್ತು ಉತ್ತೇಜಿಸಲು ಬದ್ಧವಾಗಿರುವ ಗ್ರಹ ಪರವಾದ ಜನರು (ಪಿ 3) ಎಂಬ ವ್ಯಕ್ತಿಗಳ ಜಾಗತಿಕ ಜಾಲವನ್ನು ರಚಿಸುವ ಗುರಿಯನ್ನು ಈ ಉಪಕ್ರಮ ಹೊಂದಿದೆ.
ಇಐಎಸಿಪಿ ಆಯೋಜಿಸಿದ್ದ ಲೈಫ್ ಅಭಿಯಾನದಲ್ಲಿ ಮತ್ತು ಅದರ ವಿಷಯಗಳ ಬಗ್ಗೆ ಜಾಗೃತಿ ಕಾರ್ಯಕ್ರಮಗಳಲ್ಲಿ ಸುಮಾರು 59,500 ಜನರು (ಯೂಟ್ಯೂಬ್ ಮೂಲಕ ನೇರ ಕಾರ್ಯಕ್ರಮದಲ್ಲಿ ಪಾಲ್ಗೊಂಡ 2000 ಜನರೂ ಸೇರಿದಂತೆ) ಭಾಗವಹಿಸಿದ್ದರು. ಹರಿದ್ವಾರ, ಹೃಷಿಕೇಶ ಮತ್ತು ಡೆಹ್ರಾಡೂನ್ ನಲ್ಲಿ ಸ್ಥಳೀಯ ಸಮುದಾಯಗಳು ಮತ್ತು ವಿದ್ಯಾರ್ಥಿಗಳನ್ನು ಗುರಿಯಾಗಿಸಿಕೊಂಡು ಜಾಗೃತಿ ಚಟುವಟಿಕೆಗಳನ್ನು ನಡೆಸಲಾಯಿತು. ಈ ಕಾರ್ಯಕ್ರಮವು ಪರಿಸರ ಸ್ನೇಹಿ ಜೀವನಶೈಲಿಯನ್ನು ಅಳವಡಿಸಿಕೊಳ್ಳಲು ಮತ್ತು ಜಗತ್ತನ್ನು ಉತ್ತಮ ತಾಣವನ್ನಾಗಿ ಮಾಡಲು ಬದ್ಧವಾಗಿರುವ ಪರಿಸರ ಪ್ರಜ್ಞೆಯ ವ್ಯಕ್ತಿಗಳ ಜಾಗತಿಕ ಜಾಲವನ್ನು ರಚಿಸಲು ಜನರನ್ನು ಪ್ರೇರೇಪಿಸಿತು.
ಹರಿದ್ವಾರದಲ್ಲಿ, ಹರ್-ಕಿ-ಪೌರಿ, ಮೇಲಿನ ಮತ್ತು ಕೆಳಗಿನ ಮಾರುಕಟ್ಟೆ ಮತ್ತು ಕೊಟ್ವಾಲಿ ಚೌಕ್ ನಲ್ಲಿ ಅಭಿಯಾನವನ್ನು ನಡೆಸಲಾಯಿತು. ಕಳೆದ ಮಾರ್ಚ್ ನಲ್ಲಿ ಡೂನ್ ವಿಶ್ವವಿದ್ಯಾಲಯ, ಶ್ರೀ ದೇವ್ ಭೂಮಿ ತಾಂತ್ರಿಕ ಸಂಸ್ಥೆ, ಕಿಂಗ್ ಸ್ಟನ್ ಇಂಪೀರಿಯಲ್ ತಾಂತ್ರಿಕ ಸಂಸ್ಥೆ, ಗುರುಕುಲ ಕಾಂಗ್ರಿ ವಿಶ್ವವಿದ್ಯಾಲಯ ಮತ್ತು ಪತಂಜಲಿ ವಿಶ್ವವಿದ್ಯಾಲಯಗಳಲ್ಲಿ ಪ್ರತಿಜ್ಞೆ ಮತ್ತು ಸಂವಾದ ಅಧಿವೇಶನಗಳನ್ನು ನಡೆಸಲಾಯಿತು. ಈ ಕಾರ್ಯಕ್ರಮದಲ್ಲಿ ವಿವಿಧ ಸಮುದಾಯಗಳು, ವಿದ್ಯಾರ್ಥಿಗಳು ಮತ್ತು ಬೋಧಕವರ್ಗದ ಸದಸ್ಯರು ಸಕ್ರಿಯವಾಗಿ ಭಾಗವಹಿಸಿದ್ದರು.
ಪರಮಾರ್ಥ್ ನಿಕೇತನದಲ್ಲಿ, ಭಾಗವಹಿಸುವವರಿಗೆ ಸಂಜೆ ಗಂಗಾ ಆರತಿಯ ಸಮಯದಲ್ಲಿ ಲೈಫ್ ಅಭಿಯಾನದ ಪ್ರಾಮುಖ್ಯದ ಬಗ್ಗೆ ಮಾಹಿತಿ ನೀಡಲಾಯಿತು, ಅಲ್ಲಿ ಸ್ವಾಮಿ ಚಿದಾನಂದ ಸರಸ್ವತಿ ಮತ್ತು ಸಾಧ್ವಿ ಭಗವತಿ ಸರಸ್ವತಿ ಪರಿಸರ ಸ್ನೇಹಿ ಜೀವನದ ಮಹತ್ವವನ್ನು ಒತ್ತಿ ಹೇಳಿದರು. ಡಬ್ಲ್ಯೂಡಬ್ಲ್ಯೂಎಫ್ ಇಐಎಸಿಪಿ ಪಿಸಿ-ಆರ್.ಪಿ. ಸಂಯೋಜಕ, ಡಾ. ಜಿ. ಅರೇಂದ್ರನ್; ಎಸ್.ಪಿ.ಓ., ಡಬ್ಲ್ಯು ಡಬ್ಲ್ಯು ಎಫ್ ಇಐಎಸಿಪಿ ಪಿಸಿ-ಆರ್.ಪಿ. ಶ್ರೀ ರಾಜೀವ್ ಕುಮಾರ್; ಎಸ್.ಪಿ.ಒ, ಜೆಎನ್.ಯು ಇಐಎಸಿಪಿ ಪಿಸಿ-ಆರ್.ಪಿ. ಶ್ರೀಮತಿ ಸ್ವಾತಿ ಸಿಂಗ್; ಮತ್ತು ಐ.ಓ, ಯುಕೆಪಿಸಿಬಿ ಇಐಎಸಿಪಿ ಪಿಸಿ-ಆರ್ ಪಿ ಶ್ರೀಮತಿ ನಿಹಾರಿಕಾ ಡಿಮ್ರಿ ಅವರನ್ನು ಸ್ವಾಮಿ ಚಿದಾನಂದ ಸರಸ್ವತಿ ಅವರು ರುದ್ರಾಕ್ಷ ಸಸಿ ನೀಡಿ ಸನ್ಮಾನಿಸಿದರು.
ವಿಶ್ವ ವನ್ಯಜೀವಿ ನಿಧಿ (ಡಬ್ಲ್ಯುಡಬ್ಲ್ಯುಎಫ್) ಇಐಎಸಿಪಿ, ಜೆಎನ್.ಯು, ಇಐಎಸಿಪಿ, ಐಐಎಚ್ಎಚ್ ಸುಲಭ್ ಇಐಎಸಿಪಿ ಪಿಸಿ-ಆರ್ ಪಿ, ಎಸ್.ಪಿ.ಎ ಇಐಎಸಿಪಿ ಪಿಸಿ-ಆರ್.ಪಿ., ಸಿಪಿಸಿಬಿ ಇಐಎಸಿಪಿ ಪಿಸಿ-ಆರ್.ಪಿ., ಎನ್.ಸಿ.ಎಪಿ (ರಾಷ್ಟ್ರೀಯ ಸ್ವಚ್ಛ ವಾಯು ಕಾರ್ಯಕ್ರಮ) ತಂಡ, ಯುಕೆಪಿಸಿಬಿ ಇಐಎಸಿಪಿ ಪಿಸಿ-ಆರ್.ಪಿ., ಎಫ್ಆರ್.ಐ., ಇಐಎಸಿಪಿ ಪಿಸಿ-ಆರ್.ಪಿ. ಮತ್ತು ಪಂಜಾಬ್ ಇಐಎಸಿಪಿ ಪಿಸಿ ತಾಣ ಸೇರಿದಂತೆ ವಿವಿಧ ಇಐಎಸಿಪಿ ಪಿಸಿ-ಆರ್.ಪಿ.ಗಳು ಮತ್ತು ತಾಣಗಳು ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸಿದ್ದವು.
*****
(Release ID: 1910940)
Visitor Counter : 155