ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ
ಕರ್ನಾಟಕದಲ್ಲಿ ಹುಬ್ಬಳ್ಳಿ-ಧಾರವಾಡದಲ್ಲಿ ಎಲೆಕ್ಟ್ರಾನಿಕ್ಸ್ ಮ್ಯಾನುಫ್ಯಾಕ್ಚರಿಂಗ್ ಕ್ಲಸ್ಟರ್ (ಇ.ಎಂ.ಸಿ.) ಸ್ಥಾಪನೆಗೆ ಕೇಂದ್ರ ಸರ್ಕಾರದಿಂದ ಅನುಮೋದನೆ
ರೂಪಾಯಿ 180 ಕೋಟಿ ಮೌಲ್ಯದ ಯೋಜನೆಯು 18,000 ಉದ್ಯೋಗ ಅವಕಾಶವನ್ನು ಸೃಷ್ಟಿಸಲಿವೆ; ಒಂಬತ್ತು ಕಂಪನಿಗಳು/ ನವೋದ್ಯಮಗಳು ಈಗಾಗಲೇ ರೂ. 340 ಕೋಟಿ ಹೂಡಿಕೆ ಮಾಡಲು ಬದ್ಧವಾಗಿವೆ
Posted On:
24 MAR 2023 6:59PM by PIB Bengaluru
18,000 ಕ್ಕೂ ಹೆಚ್ಚು ಉದ್ಯೋಗಗಳನ್ನು ಸೃಷ್ಟಿಸುವ ನಿರೀಕ್ಷೆಯಿರುವ 180 ಕೋಟಿ ರೂಪಾಯಿ ಮೌಲ್ಯದ ಎಲೆಕ್ಟ್ರಾನಿಕ್ಸ್ ಮ್ಯಾನುಫ್ಯಾಕ್ಚರಿಂಗ್ ಕ್ಲಸ್ಟರ್ (ಇ.ಎಂ.ಸಿ) ಅನ್ನು ಧಾರವಾಡದಲ್ಲಿ ಸ್ಥಾಪನೆಗೆ ಅನುಮೋದನೆಯನ್ನು ಕೇಂದ್ರ ಕೌಶಲ್ಯಾಭಿವೃದ್ಧಿ ಮತ್ತು ಉದ್ಯಮಶೀಲತೆ ಹಾಗೂ ಎಲೆಕ್ಟ್ರಾನಿಕ್ಸ್ ಮತ್ತು ಐಟಿ ರಾಜ್ಯ ಸಚಿವ ಶ್ರೀ ರಾಜೀವ್ ಚಂದ್ರಶೇಖರ್ ಅವರು ಇಂದು ಬೆಂಗಳೂರಿನಲ್ಲಿ ಘೋಷಿಸಿದರು.
“ಇಎಂಸಿ 2.0 ಯೋಜನೆಯಡಿ ಕರ್ನಾಟಕದ ಧಾರವಾಡ ಜಿಲ್ಲೆಯ ಕೋಟೂರು-ಬಾಳೂರು ಕೈಗಾರಿಕಾ ಪ್ರದೇಶದಲ್ಲಿ ಸ್ಥಾಪಿಸಲಾಗುತ್ತಿರುವ ಈ ಯೋಜನೆಯು ಶೀಘ್ರದಲ್ಲೇ 1,500 ಕೋಟಿ ರೂಪಾಯಿಗಳ ಹೂಡಿಕೆಗೆ ವೇಗವರ್ಧನೆ ನೀಡುವ ನಿರೀಕ್ಷೆಯಿದೆ. ಸ್ಟಾರ್ಟ್ಅಪ್ಗಳು ಸೇರಿದಂತೆ ಒಂಬತ್ತು ಕಂಪನಿಗಳು ಈಗಾಗಲೇ 2,500 ಜನರಿಗೆ ಉದ್ಯೋಗಾವಕಾಶದೊಂದಿಗೆ 340 ಕೋಟಿ ರೂಪಾಯಿ ಹೂಡಿಕೆ ಮಾಡಲು ಬದ್ಧವಾಗಿವೆ ”ಎಂದು ಸಚಿವರು ಹೇಳಿದರು.
“ಕೋಲಾರ (ವಿಸ್ಟ್ರಾನ್) ಮತ್ತು ದೇವನಹಳ್ಳಿ (ಫಾಕ್ಸ್ಕಾನ್) ನಲ್ಲಿ ಆಪಲ್ ಸ್ಥಾವರಗಳೊಂದಿಗೆ ಕರ್ನಾಟಕವು ಈಗಾಗಲೇ ದೇಶದ ಟೆಲಿಕಾಂ ಹಬ್ ಆಗಿರುವಂತೆಯೇ, ವಿಶ್ವಕ್ಕೆ ಜಾಗತಿಕ ಎಲೆಕ್ಟ್ರಾನಿಕ್ಸ್ ಉತ್ಪಾದನಾ ಕೇಂದ್ರವಾಗಿ ಹೊರಹೊಮ್ಮುತ್ತಿದೆ. ಈ ಹೊಸ ಹೂಡಿಕೆಗಳು ಉದ್ಯೋಗಗಳು ಮತ್ತು ಅಭಿವೃದ್ಧಿಯನ್ನು ಸೃಷ್ಟಿಸುತ್ತಿವೆ. ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ನೇತೃತ್ವದ ಕೇಂದ್ರ ಸರ್ಕಾರವು ತನ್ನ ‘ಆತ್ಮನಿರ್ಭರ್ ಭಾರತ್’ ನೀತಿಗಳ ಭಾಗವಾಗಿ ಭಾರತವನ್ನು ಉತ್ಪಾದನಾ ಕೇಂದ್ರವಾಗಿ ನಿರ್ಮಿಸಲು ಬದ್ಧವಾಗಿದೆ ”ಎಂದು ಸಚಿವರು ಹೇಳಿದರು.
ಈ ಇಎಂಸಿ ಯೋಜನೆಯು ರಾಷ್ಟ್ರೀಯ -48 ರಿಂದ ಕೇವಲ 1 ಕಿಮೀ, ಹುಬ್ಬಳ್ಳಿ ವಿಮಾನನಿಲ್ದಾಣದಿಂದ ಕೇವಲ 33 ಕಿಮೀ ದೂರವಿದ್ದು, ಉತ್ತಮವಾದ ಸಂಪರ್ಕ ಹೊಂದಿದೆ, ಇಎಂಸಿಯಲ್ಲಿ ಉದ್ಯಮದ ಲಾಜಿಸ್ಟಿಕ್ಸ್ / ಸಾರಿಗೆ ವೆಚ್ಚವನ್ನು ಕಡಿಮೆ ಮಾಡುತ್ತದೆ.
ಉದ್ಯಮದ ವಿವಿಧ ಪರೀಕ್ಷಾ ಅಗತ್ಯಗಳನ್ನು ಪೂರೈಸುವ ಕರ್ನಾಟಕದ ಮೈಸೂರಿನಲ್ಲಿ ಸುಧಾರಿತ ಪರೀಕ್ಷಾ ಸೌಲಭ್ಯವನ್ನು ಅಭಿವೃದ್ಧಿಪಡಿಸಲು ಕೇಂದ್ರ ಸರ್ಕಾರವು ಈಗಾಗಲೇ ಸಾಮಾನ್ಯ ಸೌಲಭ್ಯ ಕೇಂದ್ರವನ್ನು (ಸಿ.ಎಫ್.ಸಿ) ಅನುಮೋದಿಸಿದೆ.
ಮಾರ್ಪಡಿಸಿದ ಎಲೆಕ್ಟ್ರಾನಿಕ್ಸ್ ಮ್ಯಾನುಫ್ಯಾಕ್ಚರಿಂಗ್ ಕ್ಲಸ್ಟರ್ (ಇಎಂಸಿ 2.0) ಯೋಜನೆಯನ್ನು 1 ನೇ ಏಪ್ರಿಲ್ 2020 ರಂದು ಪರಿಚಯಿಸಲಾಯಿತು, ಜೊತೆಗೆ ಸಾಮಾನ್ಯ ಪರೀಕ್ಷಾ ಸೌಲಭ್ಯಗಳೊಂದಿಗೆ ವಿಶ್ವ ದರ್ಜೆಯ ಮೂಲಸೌಕರ್ಯವನ್ನು ರಚಿಸುವ ಉದ್ದೇಶದಿಂದ, ರೆಡಿ ಬಿಲ್ಟ್ ಫ್ಯಾಕ್ಟರಿ ಶೆಡ್ಗಳು / ಪ್ಲಗ್ ಮತ್ತು ಪ್ಲೇ ಮೂಲಸೌಕರ್ಯಗಳು ಅವುಗಳ ಪೂರೈಕೆ ಸರಪಳಿಯೊಂದಿಗೆ ಆಂಕರ್ ಘಟಕವನ್ನು ಕೂಡಾ ಸಿದ್ದಪಡಿಸಲಾಗಿದೆ. ದೇಶದಲ್ಲಿ ತಮ್ಮ ಉತ್ಪಾದನೆ/ಉತ್ಪಾದನಾ ಸೌಲಭ್ಯವನ್ನು ಸ್ಥಾಪಿಸಲು ಇದು ಸಹಾಯಮಾಡುತ್ತದೆ.
ಯೋಜನೆಯಡಿ, 1,337 ಎಕರೆ ಪ್ರದೇಶದಲ್ಲಿ ಮೂರು ಎಲೆಕ್ಟ್ರಾನಿಕ್ಸ್ ಮ್ಯಾನುಫ್ಯಾಕ್ಚರಿಂಗ್ ಕ್ಲಸ್ಟರ್ಗಳನ್ನು ರೂ. 1,903 ಕೋಟಿ ಯೋಜನಾ ವೆಚ್ಚದಲ್ಲಿ ಅನುಮೋದಿಸಲಾಗಿದೆ, ಇದರಲ್ಲಿ ಕೇಂದ್ರ ಸರ್ಕಾರದ ರೂ. 889 ಕೋಟಿ ಹಣಕಾಸು ನೆರವು ಸೇರಿದಂತೆ ಒಟ್ಟು ರೂ. 20,910 ಕೋಟಿ ಹೂಡಿಕೆ ಗುರಿಯನ್ನು ಯೋಜಿಸಲಾಗಿದೆ.
ಸರ್ಕಾರದ ಈ ಉಪಕ್ರಮಗಳ ಪರಿಣಾಮವಾಗಿ, ಕಳೆದ ಎಂಟು ವರ್ಷಗಳಲ್ಲಿ ಭಾರತವು ಎಲೆಕ್ಟ್ರಾನಿಕ್ಸ್ ತಯಾರಿಕೆಯಲ್ಲಿ ಬಹಳ ದೂರ ಸಾಗಿದೆ ಹಾಗೂ ಜಾಗತಿಕಮಟ್ಟದಲ್ಲಿ ಉತ್ತಮ ಸ್ಥಿತಿಯಲ್ಲಿದೆ.
****
(Release ID: 1910529)
Visitor Counter : 194