ಪಶು ಸಂಗೋಪನೆ, ಹೈನುಗಾರಿಕೆ ಮತ್ತು ಮೀನುಗಾರಿಕೆ ಸಚಿವಾಲಯ
ಪ್ರಧಾನ ಮಂತ್ರಿ ಮತ್ಸ್ಯ ಸಂಪದ ಯೋಜನೆಯು ಭಾರತದ ಮೀನುಗಾರಿಕೆ ಕ್ಷೇತ್ರದ ಮೇಲೆ ಗಮನಾರ್ಹ ಪರಿಣಾಮ ಬೀರುತ್ತದೆ: ಸಾಗರ ಪರಿಕ್ರಮ ಹಂತ IV ರ ಎರಡನೇ ಮತ್ತು ಸಮಾರೋಪ ದಿನದಂದು ಕೇಂದ್ರ ಸಚಿವ ಶ್ರೀ ಪರಶೋತ್ತಮ ರೂಪಾಳ
ಸಾಗರ ಪರಿಕ್ರಮವು ಸರ್ಕಾರದ ದೂರಗಾಮಿ ನೀತಿ ಕಾರ್ಯತಂತ್ರವನ್ನು ಪ್ರತಿಬಿಂಬಿಸುವ ಕಾರ್ಯಕ್ರಮವಾಗಿದ್ದು, ಕರಾವಳಿ ಪ್ರದೇಶಗಳು ಮತ್ತು ಮೀನುಗಾರ ಸಮುದಾಯಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ಅರ್ಥಮಾಡಿಕೊಳ್ಳಲು ಮೀನುಗಾರರು ಮತ್ತು ಮೀನು ಕೃಷಿಕರೊಂದಿಗೆ ನೇರ ಸಂವಾದಕ್ಕೆ ಕಾರಣವಾಗುತ್ತದೆ.
ಮೀನುಗಾರಿಕೆಯಿಂದ ಜೀವನೋಪಾಯ ಮತ್ತು ಆಹಾರ ಭದ್ರತೆಗೆ ಸಂಬಂಧಿಸಿದಂತೆ ಮೀನುಗಾರರು, ಮೀನು ಕೃಷಿಕರು ಮತ್ತು ಫಲಾನುಭವಿಗಳೊಂದಿಗೆ ಸಂವಾದ ನಡೆಸಲಾಯಿತು
ಪ್ರಗತಿಪರ ಮೀನುಗಾರರಿಗೆ ಪಿ ಎಂ ಎಂ ಎಸ್ ವೈ ಯೋಜನೆ, ಕೆಸಿಸಿ ಮತ್ತು ರಾಜ್ಯ ಯೋಜನೆಗೆ ಸಂಬಂಧಿಸಿದ ಪ್ರಮಾಣಪತ್ರಗಳು/ಮಂಜೂರಾತಿಗಳನ್ನು ನೀಡಲಾಯಿತು
प्रविष्टि तिथि:
19 MAR 2023 5:03PM by PIB Bengaluru
ಭಾರತ ಸರ್ಕಾರದ ಮೀನುಗಾರಿಕೆ ಇಲಾಖೆ, ಮೀನುಗಾರಿಕೆ, ಪಶುಸಂಗೋಪನೆ ಮತ್ತು ಹೈನುಗಾರಿಕೆ ಸಚಿವಾಲಯ ಮತ್ತು ರಾಷ್ಟ್ರೀಯ ಮೀನುಗಾರಿಕೆ ಅಭಿವೃದ್ಧಿ ಮಂಡಳಿ ಜೊತೆಗೆ ಕರ್ನಾಟಕ ಮತ್ತು ಗೋವಾ ಸರ್ಕಾರಗಳ ಮೀನುಗಾರಿಕೆ ಇಲಾಖೆ, ಭಾರತೀಯ ಕರಾವಳಿ ಕಾವಲುಪಡೆ, ಫಿಶರಿ ಸರ್ವೆ ಆಫ್ ಇಂಡಿಯಾ ಮತ್ತು ಮೀನುಗಾರರ ಪ್ರತಿನಿಧಿಗಳು 2023 ರ ಮಾರ್ಚ್ 17 ರಂದು ಗೋವಾದ ಮೊರ್ಮುಗೋವಾ ಬಂದರಿನಿಂದ ಪ್ರಾರಂಭವಾದ ಸಾಗರ ಪರಿಕ್ರಮ ಹಂತ IV ರಲ್ಲಿ ಪಾಲ್ಗೊಂಡು ವೀಕ್ಷಿಸಿದರು. ಕೇಂದ್ರ ಮೀನುಗಾರಿಕೆ, ಪಶುಸಂಗೋಪನೆ ಮತ್ತು ಹೈನುಗಾರಿಕೆ ಸಚಿವ ಶ್ರೀ ಪರಶೋತ್ತಮ ರೂಪಾಳ ಮತ್ತು ಮೀನುಗಾರಿಕೆ, ಪಶುಸಂಗೋಪನೆ ಮತ್ತು ಹೈನುಗಾರಿಕೆ ಸಹಾಯಕ ಸಚಿವ ಡಾ.ಎಲ್.ಮುರುಗನ್ ಅವರು ಮೀನುಗಾರಿಕೆ ಸಚಿವಾಲಯದ ಕಾರ್ಯದರ್ಶಿ ಶ್ರೀ ಜತೀಂದ್ರ ನಾಥ್ ಸ್ವೈನ್ ಅವರ ಉಪಸ್ಥಿತಿಯಲ್ಲಿ ಸಾಗರ ಪರಿಕ್ರಮ ಹಂತ-IV ಕ್ಕೆ ಚಾಲನೆ ನೀಡಿದರು. ಗೋವಾದ ಮೊರ್ಮುಗೋವಾ ಬಂದರಿನಿಂದ ಉತ್ತರ ಕನ್ನಡ ಕರಾವಳಿಯುದ್ದಕ್ಕೂ ಸಾಗಿದ ಯಾತ್ರೆಯು 18ನೇ ಮಾರ್ಚ್ 2023 ರಂದು ಕಾರವಾರ ಬಂದರಿನ ಮೂಲಕ ಮಾಜಾಳಿಯನ್ನು ತಲುಪಿತು, ನಂತರ ಕರ್ನಾಟಕ ರಾಜ್ಯದ ಕರಾವಳಿ ಭಾಗದಲ್ಲಿ ಪ್ರಯಾಣ ಬೆಳೆಸಿತು. ಸಾಗರ ಪರಿಕ್ರಮ ಹಂತ IV ಮೂರು ಪ್ರಮುಖ ಕರಾವಳಿ ಜಿಲ್ಲೆಗಳ ಮಾಜಾಳಿ, ಕಾರವಾರ, ಬೆಳಂಬಾರ, ಮಂಕಿ, ಮುರುಡೇಶ್ವರ, ಅಳವೆಕೋಡಿ ಮುಂತಾದ ಪ್ರದೇಶಗಳನ್ನು ಒಳಗೊಂಡಿತು. ಇಂದು (19 ನೇ ಮಾರ್ಚ್ 2023) ಮಲ್ಪೆ ಬಂದರು, ಉಚ್ಚಿಲ ಗ್ರಾಮ ಮತ್ತು ಮಂಗಳೂರು ಟೌನ್ಹಾಲ್ವರೆಗೆ ಸಾಗಿ ಮಂಗಳೂರು ಟೌನ್ಹಾಲ್ನಲ್ಲಿ ಮುಕ್ತಾಯಗೊಂಡಿದೆ. 4ನೇ ಹಂತದ ಕಾರ್ಯಕ್ರಮವು 17ನೇ ಮಾರ್ಚ್ 2023 ರಂದು ಗೋವಾದ ಮೊರ್ಮುಗೋವಾ ಬಂದರಿನಿಂದ ಪ್ರಾರಂಭವಾಯಿತು ಮತ್ತು 19ನೇ ಮಾರ್ಚ್ 2023 ರಂದು ಮಂಗಳೂರಿನಲ್ಲಿ ಮುಕ್ತಾಯಗೊಂಡಿದೆ.
ಸಾಗರ್ ಪರಿಕ್ರಮವು ಸರ್ಕಾರದ ದೂರಗಾಮಿ ನೀತಿ ಕಾರ್ಯತಂತ್ರವನ್ನು ಪ್ರತಿಬಿಂಬಿಸುವ ಕಾರ್ಯಕ್ರಮವಾಗಿದ್ದು, ಕರಾವಳಿ ಪ್ರದೇಶಗಳ ಸಮಸ್ಯೆಗಳು ಮತ್ತು ಮೀನುಗಾರರಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಅರ್ಥಮಾಡಿಕೊಳ್ಳಲು ಮೀನುಗಾರರು ಮತ್ತು ಮೀನುಗಾರರೊಂದಿಗೆ ನೇರ ಸಂವಾದಕ್ಕೆ ಕಾರಣವಾಗುತ್ತದೆ. ಇದನ್ನು ಮೀನುಗಾರರು ಮತ್ತು ಮೀನು ಕೃಷಿಕರು ಮತ್ತು ಇತರ ಭಾಗೀದಾರರು ಮುಕ್ತ ಮನಸ್ಸಿನಿಂದ ಸ್ವಾಗತಿಸಿದ್ದಾರ. ಅವರು ಇದನ್ನು ಮೀನುಗಾರಿಕೆ ಕ್ಷೇತ್ರದಲ್ಲಿ ತಮ್ಮ ಅಭಿವೃದ್ಧಿಯ ಸಾಧನವಾಗಿ ನೋಡಿದ್ದಾರೆ. ಸಾಗರ ಪರಿಕ್ರಮ 4ನೇ ಹಂತದ ಇಂದಿನ ಕಾರ್ಯಕ್ರಮಕ್ಕೆ ಮಲ್ಪೆ ಬಂದರಿನಲ್ಲಿ ಕೇಂದ್ರ ಮೀನುಗಾರಿಕೆ, ಪಶುಸಂಗೋಪನೆ ಮತ್ತು ಹೈನುಗಾರಿಕೆ ಸಚಿವ ಶ್ರೀ ಪರಶೋತ್ತಮ ರೂಪಾಳ ಅವರಿಗೆ ಧೂಮನೋಧಿ ಚೆಂಡೆ, ಕೋಟಕೋರಿ ಸಿಂಗರಿಮೆಬಂ ನೃತ್ಯದೊಂದಿಗೆ ಮೀನುಗಾರರು ನೀಡಿದ ಸ್ವಾಗತದೊಂದಿಗೆ ಚಾಲನೆ ನೀಡಲಾಯಿತು.

ಸಮುದಾಯ ಸಂವಾದ ಕಾರ್ಯಕ್ರಮದಲ್ಲಿ ಮೀನುಗಾರರು, ಮೀನು ಕೃಷಿಕರು, ಫಲಾನುಭವಿಗಳು, ಕರಾವಳಿ ಕಾವಲು ಪಡೆಯವರೊಂದಿಗೆ ಅವರ ಜೀವನೋಪಾಯ, ಮೀನುಗಾರಿಕೆಯಿಂದ ಆಹಾರ ಭದ್ರತೆ ಕುರಿತು ಸಂವಾದ ನಡೆಸಲಾಯಿತು. ಈ ಸಂವಾದಾತ್ಮಕ ಅಧಿವೇಶನವು ಮೀನುಗಾರರು ಎದುರಿಸುತ್ತಿರುವ ಸಮಸ್ಯೆಗಳನ್ನು ಹೇಳಿಕೊಳ್ಳಲು ನೆರವಾಯಿತು ಮತ್ತು ಇದು ಮೀನುಗಾರಿಕೆ ಅಭಿವೃದ್ಧಿಗೆ ಸಹಾಯ ಮಾಡುತ್ತದೆ. ಮೀನುಗಾರರು ಮತ್ತು ಮೀನು ಕೃಷಿಕರು ದೋಣಿಗಳಿಗೆ ಡೀಸೆಲ್ ಮತ್ತು ಸೀಮೆಎಣ್ಣೆ ಪೂರೈಕೆ, ಮೀನುಗಾರಿಕೆ ಸಂಬಂಧಿತ ಚಟುವಟಿಕೆಗಳಿಗೆ ಸಹಾಯಧನ ಅಥವಾ ಇಂಜಿನ್ ದೋಣಿಗಳು, ಮೀನುಗಾರಿಕೆ ಮಾಡದ ಮತ್ತು ಸಾಮಾಜಿಕ ಭದ್ರತೆಯ ಅಗತ್ಯವಿರುವ ಹಿರಿಯ ಮೀನುಗಾರರಿಗೆ ಬೆಂಬಲ, ಕರ್ನಾಟಕದ ಕರಾವಳಿ ಪ್ರದೇಶಗಳಲ್ಲಿ ಮೀನುಗಾರಿಕೆ ಕೈಗಾರಿಕಾ ವಲಯವನ್ನು ಅಭಿವೃದ್ಧಿಪಡಿಸಲು ಅಗತ್ಯವಿರುವ ಬೆಂಬಲ ಮುಂತಾದ ಸಮಸ್ಯೆಗಳನ್ನು ಪ್ರಸ್ತಾಪಿಸಿದರು. ಮುಂದಿನ ದಿನಗಳಲ್ಲಿ ಸಾಗರ ಪರಿಕ್ರಮದಂತಹ ಕಾರ್ಯಕ್ರಮಗಳ ಆಯೋಜನೆ ಹಾಗೂ ಸಮುದ್ರ ಆಂಬ್ಯುಲೆನ್ಸ್ ಲಭ್ಯತೆಗೆ ಮನವಿ ಮಾಡಿದರು. ಮೀನುಗಾರರು, ಮೀನು ಕೃಷಿಕರಿಗೆ ಗುರುತಿನ ಪ್ರಮಾಣ ಪತ್ರ ಲಭ್ಯವಿಲ್ಲದಿರುವಿಕೆ ಇತ್ಯಾದಿ ಸಮಸ್ಯೆಗಳ ಬಗ್ಗೆ ಫಲಾನುಭವಿಗಳು ಗಮನ ಸೆಳೆದರು. ಅಲ್ಲದೆ, ಅಂತಾರಾಜ್ಯ ಸಮನ್ವಯ ಸಮಿತಿ ರಚನೆಯ ಬಗ್ಗೆಯೂ ಚರ್ಚಿಸಿದರು.
ಕೇಂದ್ರ ಮೀನುಗಾರಿಕೆ, ಪಶುಸಂಗೋಪನೆ ಮತ್ತು ಹೈನುಗಾರಿಕೆ ಸಚಿವರಾದ ಶ್ರೀ ಪರಶೋತ್ತಮ್ ರೂಪಾಳಾ ಅವರು ಸಂವಾದಾತ್ಮಕ ಅಧಿವೇಶನವು ಮೀನುಗಾರರಿಗೆ, ಮೀನು ಕೃಷಿಕರಿಗೆ ತಮ್ಮ ವಾಸ್ತವ ಸ್ಥಿತಿಗತಿ ಮತ್ತು ಅನುಭವಗಳನ್ನು ಹಂಚಿಕೊಳ್ಳಲು ಮತ್ತು ಅವರು ಎದುರಿಸುತ್ತಿರುವ ಸಮಸ್ಯೆಗಳನ್ನು ಹೇಳಿಕೊಳ್ಳಲು ಸಹಾಯ ಮಾಡಿದೆ ಎಂದು ಸಂತಸ ವ್ಯಕ್ತಪಡಿಸಿದರು. ಮೀನುಗಾರಿಕಾ ವಲಯದ ಅಭಿವೃದ್ಧಿಯಲ್ಲಿ ಸುಧಾರಣೆಗಾಗಿ ಕೆಲಸ ಮಾಡಲಾಗುವುದು ಮತ್ತು ಫಲಾನುಭವಿಗಳು, ಮೀನು ಕೃಷಿಕರು ಮತ್ತು ಮೀನುಗಾರರಿಗೆ ಪ್ರಧಾನ ಮಂತ್ರಿ ಮತ್ಸ್ಯ ಸಂಪದ ಯೋಜನೆ ಮತ್ತು ಕೆಸಿಸಿಯಂತಹ ಯೋಜನೆಗಳ ಅನುಷ್ಠಾನದ ಮೂಲಕ ಮೀನುಗಾರಿಕೆಯ ಮೌಲ್ಯ ಸರಪಳಿಯಲ್ಲಿನ ನಿರ್ಣಾಯಕ ಅಂತರವನ್ನು ನಿವಾರಿಸುವ ಬಗ್ಗೆ ಸಚಿವರು ವಿವರವಾಗಿ ಮಾತನಾಡಿದರು.

ಮಲ್ಪೆ, ಬಂದರಿನಲ್ಲಿ ನಡೆದ ಸಭೆಯಲ್ಲಿ ಸುಮಾರು 4000 ಮೀನುಗಾರರು, ಮೀನು ಕೃಷಿಕರು ಮತ್ತು ಇತರ ಗಣ್ಯರು ಭಾಗವಹಿಸಿದ್ದರು. ಕೇಂದ್ರ ಮೀನುಗಾರಿಕೆ, ಪಶುಸಂಗೋಪನೆ ಮತ್ತು ಹೈನುಗಾರಿಕೆ ಸಚಿವರಾದ ಶ್ರೀ ಪರಶೋತ್ತಮ್ ರೂಪಾಳ ಅವರನ್ನು ಮೀನುಗಾರ ಪುರುಷರು ಮತ್ತು ಮಹಿಳೆಯರು ಸ್ವಾಗತಿಸಿದರು.

ಸಾಗರ ಪರಿಕ್ರಮ ಹಂತ (I, II, III, IV) ಕುರಿತು ಮೀನುಗಾರಿಕೆ ಜಂಟಿ ಕಾರ್ಯದರ್ಶಿ ಡಾ. ಜೆ. ಬಾಲಾಜಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರಧಾನ ಮಂತ್ರಿ ಮತ್ಸ್ಯ ಸಂಪದ ಯೋಜನೆ (ಪಿಎಂಎಂಎಸ್ವೈ), ಮೀನುಗಾರಿಕೆ ಮತ್ತು ಜಲಕೃಷಿ ಮೂಲಸೌಕರ್ಯ ಅಭಿವೃದ್ಧಿ ನಿಧಿ (ಎಫ್ಐಡಿಎಫ್) ಯಂತಹ ವಿವಿಧ ಯೋಜನೆಗಳ ಮೂಲಕ ಆರ್ಥಿಕ ಉನ್ನತಿಗೆ ಸಂಬಂಧಿಸಿದ ಹಲವು ಪ್ರಮುಖ ವಿಷಯಗಳನ್ನು ಅವರು ಚರ್ಚಿಸಿದರು. ಇದಲ್ಲದೆ, ಸೂಕ್ತ ಸಮುದ್ರ ಮೀನುಗಾರಿಕೆ ನಿಯಮಗಳು, ಸರಿಯಾದ ನೈರ್ಮಲ್ಯ ಮತ್ತು ಸಮುದ್ರ ಮೀನು ಇಳಿದಾಣಗಳಲ್ಲಿ ನೈರ್ಮಲ್ಯದ ನಿರ್ವಹಣೆಯಲ್ಲಿ ಕರ್ನಾಟಕವು ದೇಶದ ಸಮುದ್ರ ಮೀನುಗಾರಿಕೆಗೆ ಉತ್ತಮ ಸಾಮರ್ಥ್ಯವನ್ನು ಹೊಂದಿದೆ ಎಂದು ಅವರು ಹೇಳಿದರು. ಮೀನುಗಾರಿಕಾ ವಲಯದ ಅಭಿವೃದ್ಧಿಯನ್ನು ಹೆಚ್ಚಿಸಲು ತಮ್ಮ ಸಲಹೆಯನ್ನು ಹಂಚಿಕೊಂಡಿದ್ದಕ್ಕಾಗಿ ಮೀನುಗಾರರು, ಮೀನು ಕೃಷಿಕರು, ಫಲಾನುಭವಿಗಳು, ಕರಾವಳಿ ಕಾವಲು ಪಡೆಯ ಅಧಿಕಾರಿಗಳಿಗೆ ಧನ್ಯವಾದ ಅರ್ಪಿಸಿದರು. ಸಾಗರ ಪರಿಕ್ರಮ 4 ನೇ ಹಂತವು ಗುಜರಾತ್ನಿಂದ ಪಶ್ಚಿಮ ಬಂಗಾಳದವರೆಗೆ ಕರಾವಳಿ ಪ್ರದೇಶಗಳನ್ನು ಒಳಗೊಂಡಿದೆ ಎಂದು ಅವರು ಹೇಳಿದರು.
ಕರಾವಳಿ ಕಾವಲು ಪಡೆಯ ಡೆಪ್ಯುಟಿ ಇನ್ಸ್ಪೆಕ್ಟರ್ ಜನರಲ್ ಶ್ರೀ ಪ್ರವೀಣ್ ಕುಮಾರ್ ಮಿಶ್ರಾ ಅವರು ಆಂತರಿಕವಾಗಿ ಮತ್ತು ಬಾಹ್ಯವಾಗಿ ಹಡಗುಗಳ ರಕ್ಷಣೆಗಾಗಿ ಕಡಲ ಭದ್ರತೆಯ ಉದ್ದೇಶಗಳ ಬಗ್ಗೆ ಮಾತನಾಡಿದರು.

ಈ ಸಂದರ್ಭದಲ್ಲಿ, ಪ್ರಧಾನ ಮಂತ್ರಿ ಮತ್ಸ್ಯ ಸಂಪದ ಯೋಜನೆ, ಕೆಸಿಸಿ ಮತ್ತು ರಾಜ್ಯ ಯೋಜನೆಗೆ ಸಂಬಂಧಿಸಿದ ಪ್ರಮಾಣಪತ್ರಗಳು / ಮಂಜೂರಾತಿಗಳನ್ನು ಪ್ರಗತಿಪರ ಮೀನುಗಾರರಿಗೆ, ವಿಶೇಷವಾಗಿ ಕರಾವಳಿ ಮೀನುಗಾರರು, ಮೀನು ಕೃಷಿಕರು ಮತ್ತು ಯುವ ಮೀನುಗಾರಿಕಾ ಉದ್ಯಮಿಗಳಿಗೆ ನೀಡಲಾಯಿತು. ಪಿ ಎಂ ಎಸ್ ಎಸ್ ವೈ ಯೋಜನೆ, ರಾಜ್ಯ ಯೋಜನೆಗಳು, ಇ- ಶ್ರಮ್, ಎಫ್ ಐ ಡಿ ಎಫ್, ಕೆಸಿಸಿ ಇತ್ಯಾದಿ ಯೋಜನೆಗಳ ವ್ಯಾಪಕ ಪ್ರಚಾರಕ್ಕಾಗಿ ಮುದ್ರಣ ಮಾಧ್ಯಮ, ಎಲೆಕ್ಟ್ರಾನಿಕ್ ಮಾಧ್ಯಮ, ವೀಡಿಯೊಗಳು, ಜಿಂಗಲ್ಸ್ ಮೂಲಕ ಡಿಜಿಟಲ್ ಪ್ರಚಾರದ ಮೂಲಕ ಜನಪ್ರಿಯಗೊಳಿಸಲಾಗಿದೆ. ಈ ಕೆಳಗಿನವರು ಫಲಾನುಭವಿಗಳಾಗಿದ್ದಾರೆ. i) ಶರದ್ ಚಂದ್ರ ಕೆಸಿಸಿ ಯ ಫಲಾನುಭವಿ, ಶ್ರೀ ಶ್ರೀಮತಿ ಶಾರದಾ ಮತ್ತು ಶ್ರೀ ಕೃಷ್ಣ ಸಬ್ಸಿಡಿಯ ಫಲಾನುಭವಿಗಳು iii) ಶ್ರೀ ಧ್ಯಾನಾನಂದ ಸಾಲಿಯಾನ್ ಅವರು 40 ಲಕ್ಷ ರೂ ಸಬ್ಸಿಡಿ ಮೊತ್ತದೊಂದಿಗೆ ಹಿಮಗಡ್ಡೆ ಘಟಕ ಮತ್ತು ಕೋಲ್ಡ್ ಸ್ಟೋರೇಜ್ ನಿರ್ಮಾಣಕ್ಕೆ ಮಂಜೂರಾತಿ ಪ್ರಮಾಣಪತ್ರವನ್ನು ಪಡೆದರು.

ಪ್ರಧಾನ ಮಂತ್ರಿ ಮತ್ಸ್ಯ ಸಂಪದ ಯೋಜನೆ ಯೋಜನೆ, ನೀಲಿ ಕ್ರಾಂತಿಯ ಇತರ ಬಹು ಆಯಾಮದ ಚಟುವಟಿಕೆಗಳು, ಮೀನುಗಾರಿಕೆ ಉತ್ಪಾದನೆ ಮತ್ತು ಉತ್ಪಾದಕತೆಯನ್ನು (ಒಳನಾಡು ಮತ್ತು ಸಮುದ್ರ) ಹೆಚ್ಚಿಸಲು ಗಮನವನ್ನು ಕೇಂದ್ರೀಕರಿಸಿದ ಮೂಲ ಸೌಕರ್ಯ ಭಿವೃದ್ಧಿ, ಮಾರುಕಟ್ಟೆ, ರಫ್ತು ಮತ್ತು ಸಾಂಸ್ಥಿಕ ವ್ಯವಸ್ಥೆಗಳು ಸೇರಿದಂತೆ ಅದರ ಸಂಬಂಧಿತ ಚಟುವಟಿಕೆಗಳ ಬಗ್ಗೆ ಕೇಂದ್ರ ಮೀನುಗಾರಿಕೆ, ಪಶುಸಂಗೋಪನೆ ಮತ್ತು ಹೈನುಗಾರಿಕೆ ಸಚಿವ ಶ್ರೀ ಪರ್ಶೋತ್ತಮ್ ರೂಪಾಳ ಮಾತನಾಡಿದರು. ಅವರು ಮೀನುಗಾರರಿಗೆ, ಮೀನು ಕೃಷಿಕರಿಗೆ ತಮ್ಮ ಅನುಭವವನ್ನು ಹಂಚಿಕೊಂಡಿದ್ದಕ್ಕಾಗಿ ಮತ್ತು ಮೀನುಗಾರಿಕಾ ಕ್ಷೇತ್ರದ ಅಭಿವೃದ್ಧಿಯನ್ನು ಹೆಚ್ಚಿಸಲು ಕಾರ್ಯವಿಧಾನಗಳನ್ನು ಸೂಚಿಸಿದ್ದಕ್ಕಾಗಿ ಮತ್ತು ಸಾಗರ್ ಪರಿಕ್ರಮ ಹಂತ IV ಅನ್ನು ಸುಗಮಗೊಳಿಸಿದ್ದಕ್ಕಾಗಿ ಕರ್ನಾಟಕ ಸರ್ಕಾರದ ಅಧಿಕಾರಿಗಳಿಗೆ ಧನ್ಯವಾದ ಅರ್ಪಿಸಿದರು. ಸಮುದ್ರ ಆಂಬ್ಯುಲೆನ್ಸ್ ಅನ್ನು ಪರಿಚಯಿಸುವುದು ನಮ್ಮ ಮೀನುಗಾರರಿಗೆ ಉತ್ತಮ ಸಹಾಯವಾಗಲಿದೆ ಮತ್ತು ನಮ್ಮ ಮೀನುಗಾರಿಕೆ ಕ್ಷೇತ್ರವನ್ನು ಪ್ರಾಥಮಿಕ ವಲಯವೆಂದು ಪರಿಗಣಿಸಬಹುದು ಎಂದು ಅವರು ಹೇಳಿದರು. ಇದಲ್ಲದೆ, ಮೀನು ಕೃಷಿಕರಿಗೆ ಮತ್ತು ಸಂಬಂಧಿತ ಚಟುವಟಿಕೆಗಳು ಮುಂದೆ ಬಂದು ಕೆಸಿಸಿಯ ಪ್ರಯೋಜನಗಳನ್ನು ಬಳಸಿಕೊಲ್ಳುವಂತೆ ಅವರು ಮನವಿ ಮಾಡಿದರು. ಪಿಎಂಎಂಎಸ್ವೈ, ಕೆಸಿಸಿಯಂತಹ ಯೋಜನೆಗಳ ಬಗ್ಗೆ ಅರಿವು ಮೂಡಿಸಲು ಸ್ವಯಂಸೇವಕರು ಸಹಾಯ ಮಾಡುವಂತೆ ಅವರು ವಿನಂತಿಸಿದರು, ಇದರಿಂದಾಗಿ ಫಲಾನುಭವಿಗಳು ಇದರ ಪ್ರಯೋಜನವನ್ನು ಪಡೆಯಬಹುದು ಎಂದು ಅವರು ಹೇಳಿದರು.

ಎರಡನೇ ದಿನದ ಕಾರ್ಯಕ್ರಮವು ಉಡುಪಿಯ ಮಲ್ಪೆ ಯು ಎಸ್ ಸಿ ಎಲ್ ಗೆ ಭೇಟಿ ನೀಡುವುದರೊಂದಿಗೆ ಮುಂದುವರೆಯಿತು, ಇದು ಪಿಎಂಎಂಎಸ್ವೈ ಅಡಿಯಲ್ಲಿ ಧನಸಹಾಯವನ್ನು ಹೊಂದಿರುವ ಮೀನುಗಾರರಿಗೆ ಹಡಗುಗಳನ್ನು ತಯಾರಿಸುವ ಹಡಗುಕಟ್ಟೆಯಾಗಿದೆ. ಶ್ರೀ ಪರಷೋತ್ತಮ್ ರೂಪಾಳ ಅವರು ಹೊಸ ಕಟ್ಟಡ ಪ್ರದೇಶಕ್ಕೆ ಭೇಟಿ ನೀಡಿದರು ಮತ್ತು ಪ್ರಧಾನ ಮಂತ್ರಿ ಮತ್ಸ್ಯ ಸಂಪದ ಯೋಜನೆ ದೋಣಿಗಳ ಪರಿಸ್ಥಿತಿಗಳು, ಪಿಎಂಎಂಎಸ್ವೈ ನಿಧಿಯಡಿಯಲ್ಲಿ ದೋಣಿ ತಯಾರಿಕೆ ಮತ್ತು ನಿರ್ಮಾಣ, ಡೀಪ್ ಸೀ ಪರ್ಸ್ ಸೀನರ್, ಸಿದ್ಧಪಡಿಸಿದ ಮೀನುಗಾರಿಕಾ ದೋಣಿ, ಯು ಎಸ್ ಸಿ ಎಲ್ ನಲ್ಲಿ ನಿರ್ಮಿಸಲಾಗುತ್ತಿರುವ ಎಸ್ ಟಿ ಡಿ ಎಸ್ ಟಗ್ ಅನ್ನು ವೀಕ್ಷಿಸಿದರು. ಹೈಡ್ರಾಲಿಕ್ ಮೀನುಗಾರಿಕೆ ಸಿದ್ಧತೆಗಳು ನಡೆಯುತ್ತಿರುವ ಬಗ್ಗೆ ಮತ್ತು ಶೀಘ್ರದಲ್ಲೇ ಅವುಗಳು ಪ್ರಾರಂಭವಾಗಲಿದೆ ಎಂದು ಯು ಎಸ್ ಸಿ ಎಲ್ ಅಧಿಕಾರಿಗಳು ಮಾಹಿತಿ ನೀಡಿದರು. ಅದರ ನಂತರ, ಸಚಿವರು ಯು ಎಸ್ ಸಿ ಎಲ್ ಅಧಿಕಾರಿಗಳು ಉಪಕ್ರಮಗಳು ಮತ್ತು ಪಿಎಂಎಂಎಸ್ವೈ ಚಟುವಟಿಕೆಗಳ ಕುರಿತು ಸಿದ್ಧಪಡಿಸಲಾದ ಪ್ರಸ್ತುತಿಯನ್ನು ಪರಿಶೀಲಿಸಿದರು. ಯು ಎಸ್ ಸಿ ಎಲ್ ಅಧಿಕಾರಿಗಳು ಕೈಗೊಂಡ ಉಪಕ್ರಮಗಳು ಮತ್ತು ಪಿಎಂಎಂಎಸ್ವೈ ಯೋಜನೆಯ ಚಟುವಟಿಕೆಗಳ ಬಗ್ಗೆ ಶ್ರೀ ಪರಷೋತ್ತಮ್ ರೂಪಾಳ ಅವರು ಸಂತೋಷ ವ್ಯಕ್ತಪಡಿಸಿದರು.

ಪಿಎಂಎಂಎಸ್ವೈ ಯೋಜನೆಯ ಚಟುವಟಿಕೆಗಳನ್ನು ಕೈಗೊಳ್ಳುವುದರಿಂದ ಭಾರತದ ಮೀನುಗಾರಿಕಾ ಕ್ಷೇತ್ರದ ಮೇಲೆ ಗಮನಾರ್ಹ ಪರಿಣಾಮ ಬೀರುತ್ತದೆ ಎಂದು ಸಚಿವರು ಹೇಳಿದರು.. ಮೀನುಗಾರಿಕೆ ಮತ್ತು ಜಲಚರಗಳ ಆಧುನಿಕ ಮತ್ತು ವೈಜ್ಞಾನಿಕ ವಿಧಾನಗಳನ್ನು ಅಳವಡಿಸಿಕೊಳ್ಳುವ ಮೂಲಕ ಮೀನಿನ ಉತ್ಪಾದನೆ ಮತ್ತು ಉತ್ಪಾದಕತೆಯನ್ನು ಹೆಚ್ಚಿಸುವ ಗುರಿಯನ್ನು ಹೊಂದಿದೆ. ಇದು ಮೀನುಗಾರರು ಮತ್ತು ಮೀನು ಕೃಷಿಕರ ಆದಾಯವನ್ನು ಹೆಚ್ಚಿಸುವುದಲ್ಲದೆ ಮಾರುಕಟ್ಟೆಯಲ್ಲಿ ಮೀನಿನ ಲಭ್ಯತೆಯನ್ನು ಹೆಚ್ಚಿಸುತ್ತದೆ, ಇದು ಆಹಾರ ಭದ್ರತೆ ಮತ್ತು ಪೋಷಣೆಯ ಮೇಲೆ ಸಕಾರಾತ್ಮಕ ಪರಿಣಾಮ ಬೀರುತ್ತದೆ. ಇದಲ್ಲದೆ, ಪಿಎಂಎಂಎಸ್ವೈ ಯೋಜನೆಯು ದೇಶದ ಆರ್ಥಿಕ ಬೆಳವಣಿಗೆ ಮತ್ತು ಅಭಿವೃದ್ಧಿಗೆ ಕೊಡುಗೆ ಸೇರಿದಂತೆ ಮೀನು ಉತ್ಪಾದನೆ ಮತ್ತು ಸಂಸ್ಕರಣೆಯಲ್ಲಿ ಮೀನುಗಾರಿಕೆ ವಲಯದಲ್ಲಿ ಉದ್ಯೋಗಾವಕಾಶಗಳನ್ನು ಸೃಷ್ಟಿಸುವ ನಿರೀಕ್ಷೆಯಿದೆ ಎಂದು ಸಚಿವರು ಹೇಳಿದರು.
ನಂತರ, ಸಚಿವ ಶ್ರೀ ಪರಶೋತ್ತಮ್ ರೂಪಾಳ ಅವರು ಉಚ್ಚಿಲ ಗ್ರಾಮದಲ್ಲಿ ಮೀನುಗಾರರು, ಮೀನು ಕೃಷಿಕರು, ಫಲಾನುಭವಿಗಳೊಂದಿಗೆ ಅವರ ಜೀವನೋಪಾಯ, ಮೀನುಗಾರಿಕೆಯಿಂದ ಆಹಾರ ಭದ್ರತೆ ಕುರಿತು ಸಂವಾದ ನಡೆಸಿದರು, ಅಲ್ಲಿ ಮೀನುಗಾರರು ಬಂದರಿನಲ್ಲಿ ಅವರು ಎದುರಿಸುತ್ತಿರುವ ತೊಂದರೆಗಳ ಬಗ್ಗೆ ತಿಳಿಸಿದರು.
ಕಾರ್ಯಕ್ರಮವು ಉತ್ತಮ ಯಶಸ್ಸನ್ನು ಕಂಡಿತು, ವಿವಿಧ ಸ್ಥಳಗಳಿಂದ 10,500 ಕ್ಕೂ ಹೆಚ್ಚು ಜನರು ಭೌತಿಕವಾಗಿ ಕಾರ್ಯಕ್ರಮದಲ್ಲಿ ಭಾಗವಹಿಸಿದರು ಮತ್ತು ಕಾರ್ಯಕ್ರಮವನ್ನು ಯುಟ್ಯೂಬ್ ಮತ್ತು ಫೇಸ್ಬುಕ್ನಂತಹ ವಿವಿಧ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ನೇರ ಪ್ರಸಾರ ಮಾಡಲಾಯಿತು. ಇದನ್ನು ಸುಮಾರು 20,000 ಜನರು ವೀಕ್ಷಿಸಿದರು.

ಸಾಗರ ಪರಿಕ್ರಮದ ಪ್ರಯಾಣವು ರಾಷ್ಟ್ರದ ಆಹಾರ ಭದ್ರತೆಗಾಗಿ ಸಮುದ್ರ ಮೀನುಗಾರಿಕೆ ಸಂಪನ್ಮೂಲಗಳ ಬಳಕೆ ಮತ್ತು ಕರಾವಳಿ ಮೀನುಗಾರ ಸಮುದಾಯಗಳ ಜೀವನೋಪಾಯ ಮತ್ತು ಸಮುದ್ರ ಪರಿಸರ ವ್ಯವಸ್ಥೆಗಳ ರಕ್ಷಣೆ, ಮೀನುಗಾರ ಸಮುದಾಯಗಳ ನಿರೀಕ್ಷೆ ಮತ್ತು ಅಭಿವೃದ್ದಿಗಳ ನಡುವಿನ ಅಂತರವನ್ನು ಪರಿಹರಿಸುವತ್ತ ಹಾಗೂ ಸುಸ್ಥಿರ ಸಮತೋಲನವನ್ನು ಅಭಿವೃದ್ಧಿಪಡಿಸುವತ್ತ ಗಮನಹರಿಸಿದೆ. ಮುಂಬರುವ ಹಂತಗಳಲ್ಲಿ ಪರಿಸರ ವ್ಯವಸ್ಥೆಯ ವಿಧಾನದ ಮೂಲಕ ಸುಸ್ಥಿರ ಮತ್ತು ಜವಾಬ್ದಾರಿಯುತ ಅಭಿವೃದ್ಧಿಯನ್ನು ಖಚಿತಪಡಿಸಿಕೊಳ್ಳಲು ಮೀನುಗಾರಿಕಾ ಗ್ರಾಮಗಳ ಅಭಿವೃದ್ಧಿ, ಉನ್ನತೀಕರಣ ಮತ್ತು ಮೀನುಗಾರಿಕೆ ಬಂದರುಗಳು ಮತ್ತು ಇಳಿದಾಣ ಕೇಂದ್ರಗಳಂತಹ ಮೂಲಸೌಕರ್ಯಗಳ ಸೃಷ್ಟಿಗೆ ಗಮನ ನೀಡಿದೆ.
*****
(रिलीज़ आईडी: 1908607)
आगंतुक पटल : 230