ಸಹಕಾರ ಸಚಿವಾಲಯ
azadi ka amrit mahotsav

ಗುಜರಾತ್ ನ ಜುನಾಗಢದ ಕೃಷಿ ಶಿಬಿರದಲ್ಲಿಂದು ಜಿಲ್ಲಾ ಬ್ಯಾಂಕ್ ಪ್ರಧಾನ ಕಚೇರಿಗೆ ಶಂಕುಸ್ಥಾಪನೆ ನೆರವೇರಿಸಿ, ಎಪಿಎಂಸಿ ಕಿಸಾನ್ ಭವನ ಉದ್ಘಾಟಿಸಿದ ಕೇಂದ್ರ ಗೃಹ ಮತ್ತು ಸಹಕಾರ ಸಚಿವ ಶ್ರೀ ಅಮಿತ್ ಶಾ 


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಡೀ ದೇಶದಲ್ಲಿ ನೈಸರ್ಗಿಕ ಕೃಷಿಯನ್ನು ಉತ್ತೇಜಿಸುವ ಅಭಿಯಾನವನ್ನು ಪ್ರಾರಂಭಿಸಿದ್ದು, ಇಂದು ಲಕ್ಷಾಂತರ ರೈತರು ನೈಸರ್ಗಿಕ ಕೃಷಿಯನ್ನು ಅಳವಡಿಸಿಕೊಳ್ಳುತ್ತಿದ್ದಾರೆ ಮತ್ತು ಅದರ ಪ್ರಯೋಜನಗಳನ್ನು ಪಡೆಯುತ್ತಿದ್ದಾರೆ

ದೇಶದಲ್ಲಿ ಸಹಕಾರಿ ವ್ಯವಸ್ಥೆಯನ್ನು ಬಲಪಡಿಸುವ ಮೂಲಕ, ಭಾರತ ಸರ್ಕಾರದ ಎಲ್ಲಾ ಯೋಜನೆಗಳು ಎಲ್ಲರಿಗೂ ಸುಲಭವಾಗಿ ತಲುಪುತ್ತಿವೆ

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಇತ್ತೀಚೆಗೆ ನಡೆದ ಕೇಂದ್ರ ಸಚಿವ ಸಂಪುಟ ಸಭೆ ಮೂರು ರಾಷ್ಟ್ರಮಟ್ಟದ ಬಹು ರಾಜ್ಯ ಸಹಕಾರ ಸಂಘಗಳನ್ನು ಸ್ಥಾಪಿಸುವ ಮಹತ್ವದ ನಿರ್ಧಾರ ಕೈಗೊಂಡಿದೆ

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ನೇತೃತ್ವದ ಸರ್ಕಾರ ರಚಿಸಿರುವ ಬಹು ರಾಜ್ಯ ಸಹಕಾರಿ ರಫ್ತು ಸೊಸೈಟಿಯ ಮೂಲಕ ದೇಶದ ಯಾವುದೇ ಗ್ರಾಮದ ರೈತರು ತಮ್ಮ ಉತ್ಪನ್ನಗಳನ್ನು ವಿಶ್ವ ಮಾರುಕಟ್ಟೆಯಲ್ಲಿ ಸುಲಭವಾಗಿ ಮಾರಾಟ ಮಾಡಬಹುದು ಮತ್ತು ತಮ್ಮ ಉತ್ಪನ್ನಗಳಿಗೆ ನ್ಯಾಯಯುತ ಬೆಲೆ ಪಡೆಯಬಹುದು

ನೈಸರ್ಗಿಕ ಕೃಷಿಯು ಭೂಮಿಯ ಸಂರಕ್ಷಣೆಗೆ ಇರುವ ಏಕೈಕ ಮಾರ್ಗವಾಗಿದ್ದು, ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ನೇತೃತ್ವದಲ್ಲಿ ಸರ್ಕಾರವು ಅದನ್ನು ಉತ್ತೇಜಿಸಲು ನಿರಂತರವಾಗಿ ಶ್ರಮಿಸುತ್ತಿದೆ.

Posted On: 19 MAR 2023 5:11PM by PIB Bengaluru

ಕೇಂದ್ರ ಗೃಹ ಮತ್ತು ಸಹಕಾರ ಸಚಿವ ಶ್ರೀ ಅಮಿತ್ ಶಾ ಅವರು  ಇಂದು ಗುಜರಾತ್ ನ ಜುನಾಗಢದ ಕೃಷಿ ಶಿಬಿರದಲ್ಲಿ ಜಿಲ್ಲಾ ಬ್ಯಾಂಕ್ ಪ್ರಧಾನ ಕಚೇರಿಗೆ ಶಂಕುಸ್ಥಾಪನೆ ನೆರವೇರಿಸಿದರು ಮತ್ತು ಎಪಿಎಂಸಿ ಕಿಸಾನ್ ಭವನ ಉದ್ಘಾಟಿಸಿದರು.

https://static.pib.gov.in/WriteReadData/userfiles/image/image0016LQS.jpg

 

ತಮ್ಮ ಭಾಷಣದಲ್ಲಿ ಶ್ರೀ ಅಮಿತ್ ಶಾ ಅವರು, ಅನೇಕ ತೊಡಕುಗಳ ನಂತರ, ಜುನಾಗಢ್ ಜಿಲ್ಲಾ ಸಹಕಾರಿ ಬ್ಯಾಂಕಿನ ಪ್ರಸ್ತುತ ರೂಪದಲ್ಲಿ ಹೊರಹೊಮ್ಮಿದೆ ಎಂದು ಹೇಳಿದರು. ನೈಸರ್ಗಿಕ ಕೃಷಿಯಲ್ಲಿ ತೊಡಗಿರುವ ರೈತರು ತಮ್ಮ ಉತ್ಪನ್ನಗಳಿಗೆ ಉತ್ತಮ ಬೆಲೆ ಪಡೆಯುತ್ತಾರೆ ಎಂದು ಅವರು ಹೇಳಿದರು. ಸ್ವಾತಂತ್ರ್ಯದ ನಂತರ, ಪ್ರತ್ಯೇಕ ಸಹಕಾರ ಸಚಿವಾಲಯದ ಬೇಡಿಕೆಯನ್ನು ನಿರಂತರವಾಗಿ ಮುಂದಿಡಲಾಗಿತ್ತು, ದೇಶದ ಸಹಕಾರಿ ಕ್ಷೇತ್ರಕ್ಕೆ ಸಂಬಂಧಿಸಿದ ಜನರ ಈ ಬೇಡಿಕೆಯನ್ನು ಈಡೇರಿಸಲು, ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಸಹಕಾರ ಸಚಿವಾಲಯವನ್ನು ರಚಿಸಿದ್ದಾರೆ ಎಂದು ಶ್ರೀ ಶಾ ಹೇಳಿದರು.

 https://static.pib.gov.in/WriteReadData/userfiles/image/image00238KD.jpg

 

ಸಹಕಾರ ಸಚಿವಾಲಯದ ರಚನೆಯ ನಂತರ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಸಹಕಾರಿ ಸಂಸ್ಥೆಗಳನ್ನು ಮುನ್ನಡೆಸಲು ಹಲವು ಪ್ರಮುಖ ನಿರ್ಧಾರಗಳನ್ನು ಕೈಗೊಂಡಿದ್ದಾರೆ ಎಂದು ಕೇಂದ್ರ ಸಹಕಾರ ಸಚಿವರು ಹೇಳಿದರು. ಡಿಎಪಿ ಮತ್ತು ಯೂರಿಯಾದ ನಿರಂತರ ಬಳಕೆಯು ಮುಂದಿನ 25 ವರ್ಷಗಳಲ್ಲಿ ಭೂಮಿಯನ್ನು ಕಾಂಕ್ರೀಟ್ ನಂತೆ ಮಾಡುವುದರಿಂದ ಮುಂಬರುವ ದಿನಗಳಲ್ಲಿ ಭೂಮಿ ತಾಯಿ ಸೇವೆ ಮಾಡಲು ನೈಸರ್ಗಿಕ ಕೃಷಿಯೊಂದೇ ಏಕೈಕ ಪರ್ಯಾಯವಾಗಿದೆ ಎಂದು ಅವರು ಹೇಳಿದರು. ಡಿಎಪಿ ಮತ್ತು ಯೂರಿಯಾ ಎರೆಹುಳು ಮತ್ತು ಧನಾತ್ಮಕ ಬ್ಯಾಕ್ಟೀರಿಯಾಗಳನ್ನು ಕೊಲ್ಲುತ್ತದೆ ಹಾಗೂ ಹೊಲಗಳಲ್ಲಿ ಬ್ಯಾಕ್ಟೀರಿಯಾವನ್ನು ಹೊಂದಿರುವುದು ಯಾವುದೇ ಪಳೆಯುಳಿಕೆ ಮತ್ತು ಕೀಟಗಳ ಸಮಸ್ಯೆಗಳನ್ನು ತರುವುದಿಲ್ಲ ಮತ್ತು ಯಾವುದೇ ರೀತಿಯ ಕೀಟನಾಶಕವನ್ನು ಸಿಂಪಡಿಸುವ ಅಗತ್ಯವಿರುವುದಿಲ್ಲ ಎಂದು ಅವರು ಹೇಳಿದರು. ನಮ್ಮ ಪೂರ್ವಜರು ಕೃಷಿಯ ಅರಿವು ಹೊಂದಿದ್ದರು, ಆದರೆ ನಾವು ಯೂರಿಯಾವನ್ನು ಸೇರಿಸುವುದರಿಂದ, ಬೆಳೆ  ಬೆಳೆಯುತ್ತದೆ ಅಂದುಕೊಂಡೆವು, ಇದರ ಪರಿಣಾಮವಾಗಿ, ನಮ್ಮ ಭೂಮಿ ಮಲಿನಗೊಳ್ಳುತ್ತದೆ ಎಂದು ಅವರು ಹೇಳಿದರು. ಈಗ ಲಕ್ಷಾಂತರ ರೈತರು ನೈಸರ್ಗಿಕ ಕೃಷಿಯನ್ನು ಅಳವಡಿಸಿಕೊಳ್ಳುತ್ತಿದ್ದಾರೆ ಮತ್ತು ಅದರ ಪ್ರಯೋಜನಗಳನ್ನು ಪಡೆಯುತ್ತಿದ್ದಾರೆ ಎಂದು ಅವರು ಹೇಳಿದರು. ನೈಸರ್ಗಿಕ ಕೃಷಿ ಮಾಡುವುದರಿಂದ ಇಳುವರಿ ಹೆಚ್ಚಾಗುತ್ತದೆ, ಮಳೆ ನೀರು ಕೊಯ್ಲು ಆಗುತ್ತದೆ, ಕೀಟನಾಶಕಗಳನ್ನು ಬಳಸಲಾಗುವುದಿಲ್ಲ ಮತ್ತು ಇಳುವರಿಯೂ ಹೆಚ್ಚಾಗುತ್ತದೆ, ಇದು ಮಾರುಕಟ್ಟೆಯಲ್ಲಿ ಉತ್ತಮ ಬೆಲೆಯನ್ನು ತರುತ್ತದೆ ಎಂದು ಅವರು ಹೇಳಿದರು. ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಡೀ ದೇಶದಲ್ಲಿ ನೈಸರ್ಗಿಕ ಕೃಷಿಯನ್ನು ಉತ್ತೇಜಿಸುವ ಅಭಿಯಾನವನ್ನು ಪ್ರಾರಂಭಿಸಿದ್ದಾರೆ ಎಂದು ಶ್ರೀ ಶಾ ಹೇಳಿದರು.

https://static.pib.gov.in/WriteReadData/userfiles/image/image0037S3K.jpg

 

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಇತ್ತೀಚೆಗೆ ನಡೆದ ಕೇಂದ್ರ ಸಚಿವ ಸಂಪುಟ ಸಭೆ ಮಹತ್ವದ ನಿರ್ಧಾರ ಕೈಗೊಂಡಿದ್ದು, ಮೂರು ರಾಷ್ಟ್ರಮಟ್ಟದ ಬಹು ರಾಜ್ಯ ಸಹಕಾರ ಸಂಘಗಳನ್ನು ಸ್ಥಾಪಿಸಿದೆ ಎಂದು ಶ್ರೀ ಅಮಿತ್ ಶಾ ಹೇಳಿದರು. ಈ ಮೂರೂ ಸೊಸೈಟಿಗಳ ಪೈಕಿ ಎರಡು ಗುಜರಾತ್ ನ ರೈತರಿಗೆ ಬಹಳ ಉಪಯುಕ್ತವಾಗಿವೆ ಎಂದರು. ಈ ಸೊಸೈಟಿಗಳಲ್ಲಿ ಒಂದರ ಅಡಿಯಲ್ಲಿ, ಸಾವಯವ ಕೃಷಿ ಮಾಡುವ ಎಲ್ಲಾ ರೈತರ ಉತ್ಪನ್ನಗಳನ್ನು ಅಮುಲ್ ನ ಪೇಟೆಂಟ್ ಅಡಿಯಲ್ಲಿ ತೆಗೆದುಕೊಳ್ಳಲಾಗುವುದು ಮತ್ತು ಅದರ ಲಾಭವನ್ನು ನೇರವಾಗಿ ರೈತರ ಬ್ಯಾಂಕ್ ಖಾತೆಗೆ ವರ್ಗಾಯಿಸಲಾಗುವುದು. ಈ ವ್ಯವಸ್ಥೆಯ ಸಂಪೂರ್ಣ ಅನುಷ್ಠಾನದ ನಂತರ, ಯೂರಿಯಾ ಮತ್ತು ಡಿಎಪಿ ಬಳಕೆಯಿಂದ ನಮ್ಮ ಭೂಮಿಯನ್ನು ಮತ್ತು ಅವುಗಳ ಬಳಕೆಯಿಂದ ಉಂಟಾಗುವ ಕ್ಯಾನ್ಸರ್ ನಂತಹ ರೋಗಗಳಿಂದ ನಮ್ಮ ದೇಹವನ್ನು ಉಳಿಸಲು ನಮಗೆ ಸಾಧ್ಯವಾಗುತ್ತದೆ ಎಂದು ಶ್ರೀ ಶಾ ಹೇಳಿದರು. ಇದರಿಂದ ನೀರಿನ ಮಟ್ಟ ಹೆಚ್ಚಾಗುತ್ತದೆ ಮತ್ತು ಪರಿಸರವನ್ನು ಸಹ ಉಳಿಸಲಾಗುತ್ತದೆ ಎಂದರು. ಕಾರ್ಯಕ್ರಮದಲ್ಲಿ ಹಾಜರಿರುವ ಎಲ್ಲಾ ರೈತರು ಸಾವಯವ ಕೃಷಿ ಮಾಡುತ್ತಿರುವ ರೈತರನ್ನು ಭೇಟಿ ಮಾಡಿ ಅದನ್ನು ಅಳವಡಿಸಿಕೊಳ್ಳುವಂತೆ ಅವರು ಒತ್ತಾಯಿಸಿದರು.

 https://static.pib.gov.in/WriteReadData/userfiles/image/image004SSWZ.jpg

 
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ನೇತೃತ್ವದ ಸರ್ಕಾರವು ಕೃಷಿ ಉತ್ಪನ್ನಗಳ ರಫ್ತಿಗಾಗಿ ಸಹಕಾರಿ ಸೊಸೈಟಿಯನ್ನು ಸಹ ಒದಗಿಸಿದೆ ಎಂದು ಕೇಂದ್ರ ಗೃಹ ಮತ್ತು ಸಹಕಾರ ಸಚಿವರು ಹೇಳಿದರು. ಬಹು-ರಾಜ್ಯ ಸಹಕಾರಿ ರಫ್ತು ಸೊಸೈಟಿಯು ದೇಶದ ಯಾವುದೇ ರೈತನ ಉತ್ಪನ್ನವನ್ನು ರಫ್ತು ಮಾಡಲು ರಫ್ತು ಕೇಂದ್ರವಾಗಿ ಕಾರ್ಯನಿರ್ವಹಿಸುತ್ತದೆ ಮತ್ತು ಅದರ ಲಾಭವು ನೇರವಾಗಿ ರೈತರ ಬ್ಯಾಂಕ್ ಖಾತೆಗೆ ತಲುಪುತ್ತದೆ. ಈ ವ್ಯವಸ್ಥೆಯ ಅನುಷ್ಠಾನದಿಂದ, ರೈತರ ಸಮೃದ್ಧಿ ಹೆಚ್ಚಾಗುತ್ತದೆ ಎಂದು ಅವರು ಹೇಳಿದರು. ದೇಶದ ಪ್ರತಿ ಪಂಚಾಯಿತಿಯಲ್ಲಿ ಒಂದು ಸಹಕಾರ ಸಂಘವನ್ನು ರಚಿಸಲು ನಿರ್ಧರಿಸಲಾಗಿದೆ ಎಂದು ಶ್ರೀ ಶಾ ಹೇಳಿದರು. ಸಹಕಾರಿ, ಹೈನುಗಾರಿಕೆ ಮತ್ತು ಮೀನುಗಾರಿಕಾ ಉತ್ಪಾದನಾ ಸೊಸೈಟಿಯನ್ನು ಒಂದು ರೀತಿಯ ಸೊಸೈಟಿಯಾಗಿ ನೋಂದಾಯಿಸಲಾಗಿದೆ ಎಂದು ಖಚಿತಪಡಿಸಿಕೊಳ್ಳಲು ವ್ಯವಸ್ಥೆ ಮಾಡಲಾಗಿದೆ ಎಂದು ಅವರು ಹೇಳಿದರು.

 https://static.pib.gov.in/WriteReadData/userfiles/image/image005O0OM.jpg

 
ಸಹಕಾರಿ ಸಂಘಗಳ ಮೂಲಕ ರೈತರು ಅನೇಕ ಪ್ರಯೋಜನಗಳನ್ನು ಪಡೆಯಬಹುದು ಎಂದು ಶ್ರೀ ಅಮಿತ್ ಶಾ ಹೇಳಿದರು. ಬಲವಾದ ಸಹಕಾರಿ ಸ್ವರೂಪದಿಂದಾಗಿ ಭಾರತ ಸರ್ಕಾರದ ಎಲ್ಲಾ ಯೋಜನೆಗಳು ಎಲ್ಲರಿಗೂ ತಲುಪಲು ಪ್ರಾರಂಭಿಸುತ್ತಿವೆ ಎಂದು ಅವರು ಹೇಳಿದರು. ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ನೇತೃತ್ವದ ಸರ್ಕಾರವು ದೇಶದ ರೈತರ ಆದಾಯವನ್ನು ದುಪ್ಪಟ್ಟುಗೊಳಿಸುವ ಸಂಕಲ್ಪ ಮಾಡಿರುವುದಷ್ಟೇ ಅಲ್ಲದೆ, ಮುಂದಿನ 10 ವರ್ಷಗಳಲ್ಲಿ ಅದನ್ನು ಹಲವು ಪಟ್ಟು ಹೆಚ್ಚಿಸಲು ಬದ್ಧವಾಗಿದೆ ಎಂದರು. ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಕೃಷಿ ವಲಯದಲ್ಲಿ ಕಿಸಾನ್ ಕ್ರೆಡಿಟ್ ಕಾರ್ಡ್, ಎಫ್.ಪಿಒ, ಕೃಷಿ ಸಿಂಚಾಯಿ ಯೋಜನೆ, ಕನಿಷ್ಠ ಬೆಂಬಲ ಬೆಲೆಯಲ್ಲಿ ಗರಿಷ್ಠ ಖರೀದಿಯಂತಹ ಹೊಸ ಉಪಕ್ರಮಗಳನ್ನು ಕೈಗೊಂಡಿದ್ದಾರೆ ಎಂದು ಶ್ರೀ ಶಾ ಹೇಳಿದರು. ಸರ್ಕಾರವು ಹೊಸ ಸಹಕಾರ ಸಚಿವಾಲಯದ ಮೂಲಕ ದೇಶದ ರೈತರನ್ನು ಸಮೃದ್ಧಗೊಳಿಸಿದೆ ಎಂದರು.

****


(Release ID: 1908603) Visitor Counter : 174