ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯ

5 ನೇ ಪೋಷಣ ಪಾಕ್ಷಿಕ (ಪೋಷನ್ ಪಖವಾಡ) ಕಾರ್ಯಕ್ರಮಗಳು ನಾಳೆಯಿಂದ ಪ್ರಾರಂಭವಾಗುತ್ತವೆ 


ವಿಷಯ: "ಎಲ್ಲರಿಗೂ ಪೌಷ್ಟಿಕತೆ: ಆರೋಗ್ಯಕರ ಭಾರತದ ಕಡೆಗೆ ಒಟ್ಟಾಗಿ" 

ಅಪೌಷ್ಟಿಕತೆಯನ್ನು ಪರಿಹರಿಸಲು ಅಮೂಲ್ಯ ಪೌಷ್ಟಿಕಾಂಶವಿರುವ ಎಲ್ಲಾ ಧಾನ್ಯಗಳ ತಾಯಿಯಾದ 'ಸಿರಿಧಾನ್ಯ(ಶ್ರೀ ಅನ್ನ)'ವನ್ನು ಜನಪ್ರಿಯಗೊಳಿಸುವುದು ಪೋಷಣ ಪಾಕ್ಷಿಕದ ಲಕ್ಷ್ಯವಾಗಿದೆ. 

ಪೋಷಣ ಪಾಕ್ಷಿಕ ಅವಧಿಯಲ್ಲಿ ಮಾರ್ಚ್ 20 ರಿಂದ ಏಪ್ರಿಲ್ 3 , 2023 ರವರೆಗೆ ಸಿರಿಧಾನ್ಯ(ಶ್ರೀ ಅನ್ನ)ಗಳ ಪ್ರಚಾರ ಮತ್ತು ಜನಪ್ರಿಯತೆಗೊಳಿಸುವುದು, ಸ್ವಸ್ಥ ಬಾಲಕ ಸ್ಪರ್ಧೆ ಏರ್ಪಡಿಸುವುದು ಮತ್ತು ಸಕ್ಷಮ್ ಅಂಗನವಾಡಿಗಳನ್ನು ಜನಪ್ರಿಯಗೊಳಿಸುವುದು  ಮುಂತಾದ ವಿವಿಧ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗಿದೆ  

ಪೋಷಣ ಪಾಕ್ಷಿಕ ಸಂದರ್ಭದಲ್ಲಿ ಜನ್ ಆಂದೋಲನ ಮತ್ತು ಜನ್ ಭಾಗಿಧಾರಿ ಮೂಲಕ ಪೌಷ್ಟಿಕಾಂಶದ ಮಹತ್ವದ ಬಗ್ಗೆ ಅರಿವು ಮೂಡಿಸುವ ಮತ್ತು ಆರೋಗ್ಯಕರ ಆಹಾರ ಪದ್ಧತಿಯನ್ನು ಉತ್ತೇಜಿಸುವ ಗುರಿಯನ್ನು ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯವು ಹೊಂದಿದೆ.

Posted On: 19 MAR 2023 9:16AM by PIB Bengaluru

ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯವು ರಾಷ್ಟ್ರವ್ಯಾಪಿ ವಿವಿಧ ಚಟುವಟಿಕೆಗಳೊಂದಿಗೆ 20ನೇ ಮಾರ್ಚ್ ನಿಂದ 3ನೇ ಏಪ್ರಿಲ್ 2023 ರವರೆಗೆ ಐದನೇ ಪೋಷಣ ಪಾಕ್ಷಿಕ (ಪಖವಾಡ)ವನ್ನು ಆಚರಿಸಲಿದೆ. ಜನ ಆಂದೋಲನ ಮತ್ತು ಜನ್ ಭಾಗಿಧಾರಿ(ಸಾರ್ವಜನಿಕ ಭಾಗವಹಿಸುವಿಕೆ) ಮೂಲಕ ಪೋಷಣೆಯ ಮಹತ್ವದ ಬಗ್ಗೆ ಅರಿವು ಮೂಡಿಸಲು ಮತ್ತು ಆರೋಗ್ಯಕರ ಆಹಾರ ಪದ್ಧತಿಯನ್ನು ಉತ್ತೇಜಿಸಲು ಈ ವರ್ಷದ ಪೋಷಣ ಪಾಕ್ಷಿಕ ಗುರಿ ಹೊಂದಿದೆ.

8ನೇ ಮಾರ್ಚ್ 2018 ರಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಪ್ರಾರಂಭಿಸಿದ ಪೋಷಣ ಅಭಿಯಾನವು ಜನರ ಸಹಭಾಗಿತ್ವವನ್ನು ಖಾತ್ರಿಪಡಿಸುವಲ್ಲಿ ಮತ್ತು ಪೌಷ್ಠಿಕಾಂಶದ ಕುರಿತು ಚರ್ಚೆಗಳನ್ನು ಮುಂಚೂಣಿಗೆ ತರುವಲ್ಲಿ ಪ್ರಮುಖ ಪಾತ್ರ ವಹಿಸಿದೆ. ಪೌಷ್ಟಿಕಾಂಶದ ಫಲಿತಾಂಶಗಳನ್ನು ಸಮಗ್ರ ರೀತಿಯಲ್ಲಿ ಸುಧಾರಿಸುವ ಉದ್ದೇಶದಿಂದ ಪೋಶಣ ಅಭಿಯಾನವನ್ನು ಪ್ರಾರಂಭಿಸಲಾಯಿತು. ಅಪೌಷ್ಟಿಕತೆ(ಕುಪೋಶನ್)-ಮುಕ್ತ ಭಾರತದ ಸಂಕಲ್ಪದಲ್ಲಿ ಅಪೇಕ್ಷಿತ ಗುರಿಗಳನ್ನು ಸಾಧಿಸಲು ವೈಯಕ್ತಿಕ ಮತ್ತು ಸಮುದಾಯ ಮಟ್ಟದಲ್ಲಿ ವರ್ತನೆಯ ಬದಲಾವಣೆಯು ಪ್ರಮುಖ ಅಂಶವಾಗಿದೆ, ಇದನ್ನು ಈ ಪೋಷಣ ಪಾಕ್ಷಿಕ ಮಾಡಲಿದೆ.

ಪ್ರತಿ ವರ್ಷ ಮಾರ್ಚ್ ತಿಂಗಳಲ್ಲಿ 15 ದಿನಗಳ ಕಾಲ ಪೋಶಣ ಪಾಕ್ಷಿಕವನ್ನು ಆಚರಿಸಲಾಗುತ್ತದೆ. ಅದೇ ರೀತಿ, ದೇಶದಾದ್ಯಂತ ಸೆಪ್ಟೆಂಬರ್ ತಿಂಗಳನ್ನು ರಾಷ್ಟ್ರೀಯ ಪೋಷಣ ಮಾಸ (ಮಾಹೆ/ತಿಂಗಳು) ಎಂದು ಆಚರಿಸಲಾಗುತ್ತದೆ. ಇಲ್ಲಿಯವರೆಗೆ ಆಚರಿಸಲಾದ ಪೋಷಣ ಮಾಸ ಮತ್ತು ಪಾಕ್ಷಿಕ ಆಚರಣೆಗಳ ಕಾರ್ಯ ಚಟುವಟಿಕೆಗಳು ಎಲ್ಲಾ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳು, ಮುಂಚೂಣಿಯ ಕಾರ್ಯಕರ್ತರು, ಸಚಿವಾಲಯಗಳು ಮತ್ತು ಸಾರ್ವಜನಿಕರಿಂದ ಸಮರ್ಪಕ ಭಾಗವಹಿಸುವಿಕೆ ಮತ್ತು ಉತ್ಸಾಹಕ್ಕೆ ಸಾಕ್ಷಿಯಾಗಿದೆ. ಕಳೆದ ಪೋಷಣ ಪಾಕ್ಷಿಕ 2022 ರ ಸಂದರ್ಭದಲ್ಲಿ ದೇಶಾದ್ಯಂತ ಸುಮಾರು 2.96 ಕೋಟಿ ಚಟುವಟಿಕೆಗಳನ್ನು ನಡೆಸಲಾಗಿದೆ. 

ಈ ವರ್ಷದ ಪೋಷಣ ಪಾಕ್ಷಿಕ 2023 ರ ವಿಷಯ "ಎಲ್ಲರಿಗೂ ಪೋಷಣೆ: ಒಟ್ಟಿಗೆ ಆರೋಗ್ಯಕರ ಭಾರತದ ಕಡೆಗೆ" ಎಂದಾಗಿದೆ. 2023 ವರ್ಷವನ್ನು ಅಂತರರಾಷ್ಟ್ರೀಯ ಸಿರಿಧಾನ್ಯ ವರ್ಷವೆಂದು ಘೋಷಿಸಿದ ಕಾರಣ, ಅಪೌಷ್ಟಿಕತೆಯನ್ನು ಪರಿಹರಿಸಲು ಅಮೂಲ್ಯವಾದ ಸಂಪತ್ತಾಗಿ ಎಲ್ಲಾ ಧಾನ್ಯಗಳ ತಾಯಿ ಎಂದೇ ಗುರುತಿಸಲಾದ ಸಿರಿಧಾನ್ಯ('ಶ್ರೀ ಅನ್ನ')ಗಳನ್ನು ಜನಪ್ರಿಯಗೊಳಿಸುವ ನಿಟ್ಟಿನಲ್ಲಿ ಈ ವರ್ಷದ ಪೋಷಣ ಪಾಕ್ಷಿಕದ ಚಟುವಟಿಕೆಗಳು ಕೇಂದ್ರೀಕರಿಸಲಾಗಿದೆ.

ಪೋಷಣ ಪಾಕ್ಷಿಕದ ಸಂದರ್ಭದಲ್ಲಿ ಚಟುವಟಿಕೆಗಳು ಈ ಕೆಳಗಿನ ಪ್ರಮುಖ ವಿಷಯಗಳ ಮೇಲೆ ಕೇಂದ್ರೀಕರಿಸುತ್ತವೆ:

1. ಪೂರಕ ಪೋಷಣಾ ಕಾರ್ಯವ್ಯವಸ್ಥೆ, ಮನೆ-ಮನೆ ಭೇಟಿಗಳು, ಮಿತಾಹಾರ ಪದ್ಧತಿ(ಡಯಟ್) ಮತ್ತು ಸಮಾಲೋಚನಾ ಶಿಬಿರಗಳು, ಇತ್ಯಾದಿಗಳೊಂದಿಗೆ ಸಿರಿಧಾನ್ಯ('ಶ್ರೀ ಅನ್ನ')-ಆಧಾರಿತ ಆಹಾರಗಳನ್ನು ದೈನಂದಿನ ಆಹಾರಪದ್ಧತಿಯಲ್ಲಿ ಸೇರಿಸಿಕೊಳ್ಳುವ ಚಟುವಟಿಕೆ ಮತ್ತು ಸಂಘಟನೆಗಳ ಮೂಲಕ ಪೌಷ್ಟಿಕಾಂಶ- ಯೋಗಕ್ಷೇಮಕ್ಕಾಗಿ ಸಿರಿಧಾನ್ಯ('ಶ್ರೀ ಅನ್ನ')ಗಳ ಪ್ರಚಾರ ಮತ್ತು ಜನಪ್ರಿಯಗೊಳಿಸುವುದು.

2. ಸ್ವಸ್ಥ ಬಾಲಕ ಸ್ಪರ್ಧೆ ಕಾರ್ಯಕ್ರಮ: ಉತ್ತಮ ಪೋಷಣೆ, ಉತ್ತಮ ಆರೋಗ್ಯ ಮತ್ತು ಯೋಗಕ್ಷೇಮ ನಿಟ್ಟಿನಲ್ಲಿ ಸ್ಪರ್ಧೆ ಹಾಗೂ ಆರೋಗ್ಯಕರ ಮನೋಭಾವವನ್ನು ಹುಟ್ಟುಹಾಕುವ ಮೂಲಕ ವ್ಯಾಖ್ಯಾನಿಸಲಾದ ಉತ್ತಮ ಮಾನದಂಡಗಳ ಚೌಕಟ್ಟುಗಳ ಪ್ರಕಾರ 'ಸ್ವಸ್ಥ ಬಾಲಕ' ಅಥವಾ “ಆರೋಗ್ಯಕರ ಮಗು”ವನ್ನು ಕಾರ್ಯಕ್ರಮ ಏರ್ಪಡಿಸಿ ಮತ್ತು ಗುರುತಿಸುವುದು

3. ಸಕ್ಷಮ್ ಅಂಗನವಾಡಿಗಳನ್ನು ಜನಪ್ರಿಯಗೊಳಿಸುವುದು: ಸಕ್ಷಮ್ ಅಂಗನವಾಡಿಗಳನ್ನು ಸುಧಾರಿತ ಪೌಷ್ಠಿಕಾಂಶ ವಿತರಣೆ ಮತ್ತು ಬಾಲ್ಯದ ಆರೈಕೆ ಹಾಗೂ ಶಿಕ್ಷಣದ ಕೇಂದ್ರಗಳಾಗಿ ಉನ್ನತೀಕರಿಸಿದ ಮೂಲಸೌಕರ್ಯ ಮತ್ತು ಸೌಲಭ್ಯಗಳೊಂದಿಗೆ ಪೋಷಣ ಕುರಿತು ಜಾಗೃತಿ ಹೆಚ್ಚಿಸಲು ಮತ್ತು ಜನಪ್ರಿಯಗೊಳಿಸಲು ವಿವಿಧ ಅಭಿಯಾನಗಳನ್ನು ಆಯೋಜಿಸುವುದು.

ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯವು ಪೋಷಣ ಪಾಕ್ಷಿಕ ಸಂದರ್ಭದಲ್ಲಿ ವಿವಿಧ ಚಟುವಟಿಕೆಗಳನ್ನು ದೇಶದಾದ್ಯಂತ ಸಂಘಟಿಸುತ್ತಿದೆ. ರಾಜ್ಯ/ಕೇಂದ್ರಾಡಳಿತ ಪ್ರದೇಶದಲ್ಲಿ, ಆಯಾ ಪ್ರದೇಶಗಳ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ/ ಸಮಾಜ ಕಲ್ಯಾಣ ಇಲಾಖೆಗಳು ಪೋಷಣ ಪಾಕ್ಷಿಕವನ್ನು ಸಂಘಟಿಸುತ್ತವೆ.

**



(Release ID: 1908555) Visitor Counter : 241