ಯುವಜನ ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯ

​​​​​​​ಜಾಗತಿಕ ಶಿಕ್ಷಣ ಸುಧಾರಣೆಗಳ ಕುರಿತು ವೈ20 ಸಮಾಲೋಚನಾ ಸಭೆಯಲ್ಲಿ ಚರ್ಚೆ


​​​​​​​ಜೀವನ ಕೌಶಲ್ಯಗಳು, ಸಮಗ್ರ ಶಿಕ್ಷಣ, ಕಠಿಣ ಮತ್ತು ಮೃದು ಕೌಶಲ್ಯಗಳನ್ನು ನೀಡುವ ಸಾಂಸ್ಥಿಕ ಸಾಮರ್ಥ್ಯ, ವಿದ್ಯಾರ್ಥಿ-ಚಾಲಿತ ಶಿಕ್ಷಣ ನೀತಿಯ ಮೇಲೆ ಕೇಂದ್ರೀಕರಿಸುವ ಅಗತ್ಯತೆಗಳು ವೈ20 ಸಭೆಯ ಮುಖ್ಯಾಂಶಗಳಾಗಿವೆ

Posted On: 11 MAR 2023 5:35PM by PIB Bengaluru

ಪುಣೆ, 11 ಮಾರ್ಚ್  2023

21 ನೇ ಶತಮಾನದ ಕ್ರಿಯಾತ್ಮಕ ಪ್ರಪಂಚದ ಈ ಸಂದರ್ಭದಲ್ಲಿ ನಮಗೆ ಅಗತ್ಯವಿರುವ ಶಿಕ್ಷಣ ಸುಧಾರಣೆಗಳು ಯಾವುವು? ಈ ಪ್ರಶ್ನೆಗೆ ಉತ್ತರವನ್ನು ಹುಡುಕುವ ನಿಟ್ಟಿನಲ್ಲಿ ಚರ್ಚಿಸಲು  ಭಾರತ ಸರ್ಕಾರದ ಯುವ ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯದ ಸಹಯೋಗದೊಂದಿಗೆ ಇಂದು ಪುಣೆಯ ಸಿಂಬಯೊಸಿಸ್ ಇಂಟರ್ನ್ಯಾಷನಲ್ ಯೂನಿವರ್ಸಿಟಿಯಲ್ಲಿ ನಡೆಯುತ್ತಿರುವ ನಾಲ್ಕನೇ ವೈ20 ಸಮಾಲೋಚನಾ ಸಭೆಯಲ್ಲಿ ತಜ್ಞರು ಮತ್ತು ಚಿಂತಕರನ್ನು ಒಟ್ಟುಗೂಡಿದರು.

ಯುನೆಸ್ಕೋ ಇರಾಕ್‌ನ ಕಾರ್ಯಕ್ರಮ ನಿರ್ವಾಹಕರಾದ ಶ್ರೀ ಸೈಮನ್ ಕುವಾನಿ ಕಿರ್ ಕುವಾನಿ, ಎಜುಕೇಶನ್ ಫಾರ್ ಪೀಸ್ ಅವರು ಹೆಚ್ಚು ಸಂವಾದಾತ್ಮಕ ಮತ್ತು ಮನೋರಂಜನಾತ್ಮಕ ಶಿಕ್ಷಣದ ಪ್ರಾಮುಖ್ಯತೆಯನ್ನು ಒತ್ತಿಹೇಳಿದರು, ಅದರಲ್ಲಿ ತಮ್ಮ ಬಗ್ಗೆ ಯೋಚಿಸುವ ಸಾಮರ್ಥ್ಯ ಮತ್ತು ಭವಿಷ್ಯದಲ್ಲಿ ಹೇಗೆ ಮುನ್ನಡೆಸುವುದು ಮುಂತಾದ ಜೀವನ ಕೌಶಲ್ಯಗಳು ಸೇರಿವೆ. ಶಿಕ್ಷಣದ ಚೌಕಟ್ಟು ಸಾಂಸ್ಕೃತಿಕವಾಗಿ ಆಧಾರಿತವಾಗಿರಬೇಕು, ಅಲ್ಲಿ ಸಂಸ್ಕೃತಿಗೆ ಧಕ್ಕೆಯಾಗುವುದಿಲ್ಲ, ಅದು ವಿದ್ಯಾರ್ಥಿಗಳನ್ನು ಅವರ ಹಿನ್ನೆಲೆಯ ಜೊತೆಯಲ್ಲಿ ಬೇರೂರಿಸುತ್ತದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

ಅರ್ಜೆಂಟೀನಾದ ಯಂಗ್ ಎಜುಕೇಶನ್ ಅಡ್ವೊಕೇಟ್ ಶ್ರೀಮತಿ ಸೋಫಿಯಾ ಬರ್ಮುಡೆಜ್ ಅವರು ಶಿಕ್ಷಣದ ಸಮಗ್ರ ವಿಧಾನದ ಬಗ್ಗೆ ಮಾತನಾಡಿದರು, ಅದರಲ್ಲಿ ವ್ಯಕ್ತಿ ತನ್ನ ಉದ್ಯೋಗಗಳನ್ನು ಹುಡುಕುವುದಕ್ಕಿಂತ ಹೆಚ್ಚಾಗಿ ತನ್ನ ಬೋಧನೆಯ ಉದ್ದೇಶದ ಮೇಲೆ ಹೆಚ್ಚು ಗಮನಹರಿಸುತ್ತಾನೆ. ವೈವಿಧ್ಯಮಯ ಹಿನ್ನೆಲೆಯ ವಿದ್ಯಾರ್ಥಿಗಳಿಗೆ ಅನುಗುಣವಾಗಿ ವಿಶೇಷವಾದ ಸೂಚನೆಯ ಅಗತ್ಯವನ್ನು ಬಯಸುತ್ತಾನೆ. ಆ ರೀತಿಯ ನೀತಿಗಳು ಅವರ ಅಭಿವೃದ್ಧಿಗೆ ಅವಿಭಾಜ್ಯವಾಗಿರುವುದರಿಂದ ಶಿಕ್ಷಣ ನೀತಿಯನ್ನು ರೂಪಿಸುವಲ್ಲಿ ನಾಯಕರು ವಿದ್ಯಾರ್ಥಿಗಳನ್ನು ಸೇರಿಸಿಕೊಳ್ಳಬೇಕು. ಶಿಕ್ಷಣವು ಒಂದು ಅವ್ಯಕ್ತ ಮೂಕ ಬಿಕ್ಕಟ್ಟಾಗಿದೆ. ಸುಧಾರಣಾ ಕ್ರಮಗಳನ್ನು ತಕ್ಷಣವೇ ತೆಗೆದುಕೊಳ್ಳದಿದ್ದರೆ ಮುಂದಿನ ಐದು ವರ್ಷಗಳಲ್ಲಿ ಇದರ ಪರಿಣಾಮವನ್ನು ಅನುಭವಿಸಬಹುದು ಎಂದು ಅವರು ವಿವರಿಸಿದರು

ಯುನೆಸ್ಕೋ ಅರ್ಜೆಂಟೀನಾದ ಎಸ್.ಡಿ.ಜಿ4ಯೂತ್‌ ನೆಟ್ವರ್ಕ್‌ ಇದರ ಶ್ರೀ ಉಲಿಸೆಸ್‌ ಬ್ರೆಂಗಿ ಅವರು ಶಿಕ್ಷಣ ಪಠ್ಯಕ್ರಮದಲ್ಲಿ ಕಠಿಣ ಮತ್ತು ಮೃದು ಕೌಶಲ್ಯಗಳ ಪ್ರಾಮುಖ್ಯತೆಯನ್ನು ಒತ್ತಿಹೇಳಿದರು. ಮೂಲಸೌಕರ್ಯ ಮತ್ತು ಹಣಕಾಸಿನ ಅವಶ್ಯಕತೆಗಳ ಕೊರತೆಯಿಂದಾಗಿ ಪ್ರಪಂಚದಾದ್ಯಂತದ ಸಂಸ್ಥೆಗಳು ನವೀಕೃತ ಕಠಿಣ ಕೌಶಲ್ಯಗಳನ್ನು ಒದಗಿಸಲು ಹೆಣಗಾಡುತ್ತಿವೆ, ಆದರೆ ಅದರ ಜೊತೆಗೆ ಮೃದು ಕೌಶಲ್ಯಗಳು ಬಹುತೇಕ ಅಸ್ತಿತ್ವದಲ್ಲಿಲ್ಲ ಎಂಬಂತಾಗಿವೆ. ಪ್ರಾಚೀನ ಕಾಲದಲ್ಲಿ ಅಸ್ತಿತ್ವದಲ್ಲಿದ್ದ ಶಿಕ್ಷಣ ಚೌಕಟ್ಟುಗಳು, ಸಾಂಪ್ರದಾಯಿಕ ಬೋಧನಾ ವಿಧಾನಗಳು ಮತ್ತು ಪ್ರಸ್ತುತ ಶಿಕ್ಷಣ ವ್ಯವಸ್ಥೆಯಲ್ಲಿ ಕೆಲಸ ಮಾಡಲು ಸಹಾಯದ ಅಗತ್ಯವಿರುವ ಮುಂಬರುವ ಪೀಳಿಗೆಯ ವಿದ್ಯಾರ್ಥಿಗಳ ನಡುವಿನ ದೊಡ್ಡ ಅಂತರವನ್ನು ಅವರು ವಿವರಿಸಿದರು.  

ಪುಣೆಯ ಪ್ರಾದೇಶಿಕ ಪಾಸ್‌ಪೋರ್ಟ್ ಅಧಿಕಾರಿ ಡಾ. ಅರ್ಜುನ್ ಡಿಯೋರ್, ಐ. ಎಫ್ .ಎಸ್., ಅವರು ಮಾತನಾಡುತ್ತಾ, ಭಾರತದಲ್ಲಿ "ಬ್ರೈನ್ ಡ್ರೈನ್" ಮತ್ತು ಯುವ ಭಾರತೀಯ ಜನಸಂಖ್ಯೆಯು ಉನ್ನತ ವ್ಯಾಸಂಗಕ್ಕಾಗಿ ವಿದೇಶಗಳಿಗೆ ಹೇಗೆ ವಲಸೆ ಹೋಗುತ್ತಿದ್ದಾರೆ ಎಂಬ ಮುಖ್ಯ ಸಮಸ್ಯೆಯನ್ನು ಪ್ರಸ್ತಾಪಿಸಿದರು. ಈ ಸಮಸ್ಯೆಯನ್ನು ಪರಿಹರಿಸುವ ನಿಟ್ಟಿನಲ್ಲಿ ಭಾರತ ಸರ್ಕಾರವು ಕೈಗೊಳ್ಳುತ್ತಿರುವ ವಿವಿಧ ಉಪಕ್ರಮಗಳ ಕುರಿತು ಅವರು ಮಾತನಾಡಿದರು. ಯುವಜನರಿಗೆ ಗುಣಮಟ್ಟದ ಶಿಕ್ಷಣ ನೀಡಲು ವಿದೇಶಿ ಸಂಸ್ಥೆಗಳ ಕಚೇರಿಗಳು, ಭೌತಿಕ ಕ್ಯಾಂಪಸ್‌ಗಳು ಮತ್ತು ಅಂತರರಾಷ್ಟ್ರೀಯ ಪ್ರಾಧ್ಯಾಪಕರ ಸಹಯೋಗದಂತಹ ಉಪಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ ಎಂದು ಅವರು ಮಾಹಿತಿ ನೀಡಿದರು.

ವೈವಿಧ್ಯಮಯ ಹಿನ್ನೆಲೆಯ ವಿದ್ಯಾರ್ಥಿಗಳಿಗೆ ಉತ್ತಮ ಸಹಯೋಗದ ಕುರಿತು ವಿವರಿಸುತ್ತಾ, ಶ್ರೀ ಉಲಿಸೆಸ್ ಬ್ರೆಂಗಿ ಅವರು ವೈವಿಧ್ಯಮಯ ಹಿನ್ನೆಲೆಯ ವಿದ್ಯಾರ್ಥಿಗಳು ತಮ್ಮಷ್ಟಕ್ಕೇ ಯೋಚಿಸುವ ಮತ್ತು ಅವರ ಸಮಸ್ಯೆಗಳ ಕುರಿತು ಶಿಕ್ಷಣತಜ್ಞರು ಮಾತನಾಡಲು ಅವರನ್ನು ಪ್ರೇರೇಪಿಸುವಂತಹ ತರಗತಿಗಳನ್ನು ರಚಿಸಬೇಕು ಎಂದು ಸೂಚಿಸಿದರು. ಸೈಮನ್ ಕುವಾನಿ ಕಿರ್ ಕುವಾನಿಯವರು ಶಾಲೆಗಳಲ್ಲಿ ಪರಸ್ಪರ ಸಹಕಾರದ "ಬಡ್ಡಿ ಸಿಸ್ಟಮ್" ಅನ್ನು ರಚಿಸಲು ಸಲಹೆ ನೀಡಿದರು, ಅಲ್ಲಿ ವಿದ್ಯಾರ್ಥಿಗಳು ಶೈಕ್ಷಣಿಕರೊಂದಿಗೆ ಪರಸ್ಪರ ಸಹಾಯ ಮಾಡಬಹುದು ಮತ್ತು ಸಾಮೂಹಿಕ ಬೆಳವಣಿಗೆಯನ್ನು ವೇಗಗೊಳಿಸಬಹುದು ಎಂಬ ಅಭಿಪ್ರಾಯ ಸೂಚಿಸಿದರು.  .

ಸಾಂಪ್ರದಾಯಿಕ ಶಾಲೆಗಳಿಗೆ ಸಮಾನಾಂತರವಾಗಿ ನಡೆಯುತ್ತಿರುವ ದೊಡ್ಡ ಶಿಕ್ಷಣ ಸಂಸ್ಥೆಗಳ ಬೆಳವಣಿಗೆಯ ಕುರಿತು ಮಾತನಾಡುತ್ತಾ, ಡಾ. ಅರ್ಜುನ್ ಡಿಯೋರ್ ಅವರು ದೈತ್ಯ ಶಿಕ್ಷಣ ಸಂಸ್ಥೆಗಳ ಬೆಳವಣಿಗೆಗೆ ದಾರಿ ಮಾಡಿಕೊಡುವ ಶಿಕ್ಷಣ ವ್ಯವಸ್ಥೆ ಮತ್ತು ವಿದ್ಯಾರ್ಥಿಗಳು, ಹಾಗೂ ಪೋಷಕರಲ್ಲಿ ಬೆಳೆಯುತ್ತಿರುವ ಭೀತಿ, ತಪ್ಪಿಸಿಕೊಳ್ಳುವ ಭಯ ಮತ್ತು ಆರಂಭಿಕ ಶೈಕ್ಷಣಿಕ ಶ್ರೇಷ್ಠತೆಯ ಒತ್ತಡವನ್ನು ವಿವರಿಸಿದರು. ಭಾಷೆಯ ಒಳಗೊಳ್ಳುವಿಕೆಯ ಕೊರತೆಯು ಪ್ರತಿ ವಿದ್ಯಾರ್ಥಿಯ ಅಗತ್ಯಗಳನ್ನು ಪೂರೈಸಲು ಶಾಲೆಗಳಿಗೆ ಅಡ್ಡಿಯಾಗುತ್ತದೆ ಎಂದು ಅವರು ಹೇಳಿದರು.

ಪ್ರಮುಖ ಅಂಶಗಳು

1. ಶಿಕ್ಷಣದ ಕಡೆಗೆ ಸಮಗ್ರ ವಿಧಾನ ಅಳವಡಿಸುವುದಕ್ಕೆ ಿನ್ನೂ ಹೆಚ್ಚು ಒತ್ತು

2. ಶಿಕ್ಷಣ ವ್ಯವಸ್ಥೆಯಲ್ಲಿ ಧನಸಹಾಯ ಮತ್ತು ಹೂಡಿಕೆಯಲ್ಲಿ ಹೆಚ್ಚಳ

3. ಮೃದು ಕೌಶಲ್ಯ ಮತ್ತು ವೃತ್ತಿಪರ ತರಬೇತಿಯ ಮೇಲೆ ಕೇಂದ್ರೀಕರಿಸಿ ಶಿಕ್ಷಣ ವ್ಯವಸ್ಥೆ

ಈ ಅಧಿವೇಶನವನ್ನು ಯು.ಎಸ್. ಎ. ಫುಲ್‌ಬ್ರೈಟ್ ವಿದ್ವಾಂಸರಾದ ಶ್ರೀಮತಿ ಲಿನ್ಸಿಡ್ಸಿ ವೈಟ್‌ಹೆಡ್ ಅವರು ನಿರ್ವಹಣೆ ಮಾಡಿದರು.

ಯುವ ಪ್ರತಿನಿಧಿಗಳು, ಸ್ಪರ್ಧೆಗಳಲ್ಲಿ ವಿಜೇತರು, ಆಹ್ವಾನಿತರು ಮತ್ತು ಭಾರತ ಮತ್ತು ಜಿ20 ದೇಶಗಳ ವಿದ್ಯಾರ್ಥಿಗಳು ಈ ಸಮಾಲೋಚನಾ ಸಭೆಯಲ್ಲಿ ಪ್ರೇಕ್ಷಕರಾಗಿ ಭಾಗವಹಿಸಿದ್ದರು.

   

ವೈ20 ಸಭೆಯು ಎಲ್ಲಾ ಜಿ20 ಸದಸ್ಯ ರಾಷ್ಟ್ರಗಳ ಯುವಕರು ಪರಸ್ಪರ ಸಂವಾದ ನಡೆಸಲು ಸಾಧ್ಯವಾಗುವ ಅಧಿಕೃತ ಸಮಾಲೋಚನಾ ವೇದಿಕೆಯಾಗಿದೆ. ನಾಲ್ಕನೇ ವೈ20 ಸಮಾಲೋಚನಾ ಸಭೆಯ ವಿಷಯವು 'ಶಾಂತಿ ನಿರ್ಮಾಣ ಮತ್ತು ಸಮನ್ವಯ: ಯುದ್ಧವಿಲ್ಲದ ಯುಗಕ್ಕೆ ನಾಂದಿ ಹಾಡುವುದು- ವಸುಧೈವ ಕುಟುಂಬಕಂ ತತ್ವಶಾಸ್ತ್ರ' ಆಗಿದೆ. ಹವಾಮಾನ ಬದಲಾವಣೆ ಸಮಾಲೋಚನೆಯ ಆರು ಉಪ ವಿಷಯಗಳಲ್ಲಿ ಇದೂ ಕೂಡಾ  ಒಂದಾಗಿದೆ.



(Release ID: 1906143) Visitor Counter : 111