ನೀತಿ ಆಯೋಗ
azadi ka amrit mahotsav

​​​​​​​ಭಾರತ – ಆಸ್ಟ್ರೇಲಿಯಾ ನಡುವೆ ನಾವೀನ್ಯತೆ ಹೆಚ್ಚಿಸುವ ರಾಷ್ಟ್ರೀಯ ಸವಾಲುಗಳು ಮತ್ತು ಹಂಚಿಕೆಯ ಆದ್ಯತಾ ವಲಯಗಳಲ್ಲಿ ಕಾರ್ಯನಿರ್ವಹಣೆಗೆ ಒತ್ತು


ಅಟಲ್ ನಾವೀನ್ಯತೆಯ ಅಭಿಯಾನ ಮತ್ತು ಸಿಎಸ್ಐಆರ್ ಒ ನಿಂದ ಎಐ-ಐಟಿಸಿ ಕಾರ್ಯಕ್ರಮ ಮುನ್ನಡೆಸಲು ಕ್ರಮ

Posted On: 11 MAR 2023 11:50AM by PIB Bengaluru

ನೀತಿ ಆಯೋಗದ ಅಟಲ್ ನಾವೀನ್ಯತೆ ಅಭಿಯಾನ [ಎಐಎಂ] ಮತ್ತು ಆಸ್ಟ್ರೇಲಿಯಾದ ರಾಷ್ಟ್ರೀಯ ವೈಜ್ಞಾನಿಕ ಸಂಸ್ಥೆಯಡಿ ಕಾರ್ಯನಿರ್ವಹಿಸುವ ಕಾಮನ್ ವೆಲ್ತ್ ವೈಜ್ಞಾನಿಕ ಮತ್ತು ಕೈಗಾರಿಕಾ ಸಂಶೋಧನಾ ಸಂಘಟನೆ [ಸಿಎಸ್ಐಆರ್ ಒ] ರಾಷ್ಟ್ರೀಯ ಸವಾಲುಗಳು ಮತ್ತು ಎರಡೂ ದೇಶಗಳ ಹಂಚಿಕೆಯ ಆದ್ಯತಾ ಕ್ಷೇತ್ರಗಳಲ್ಲಿ ನಾವೀನ್ಯತಾ ಚಟುವಟಿಕೆಗಳನ್ನು ಕೈಗೊಳ್ಳಲು ಮತ್ತು ಜಂಟಿ ಸಹಕಾರವನ್ನು ಉತ್ತೇಜಿಸುವ ಉದ್ದೇಶದ ಪತ್ರಕ್ಕೆ ಉಭಯ ದೇಶಗಳು ಸಹಿ ಹಾಕಿ ಕೈಜೊಡಿಸಿದೆ.  

ನವದೆಹಲಿಯಲ್ಲಿ 2023 ರ ಮಾರ್ಚ್ 10 ರಂದು ಆಸ್ಟ್ರೇಲಿಯಾ ಪ್ರಧಾನಿ ಶ್ರೀ ಆಂಟನಿ ಅಲ್ಬನೀಸ್ ಅವರು ಭಾರತದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿದ ನಂತರ ಈ ಪತ್ರಕ್ಕೆ ಅಂಕಿತ ಹಾಕಲಾಗಿದೆ. ಪ್ರಧಾನಮಂತ್ರಿಗಳ ನಡುವಿನ ಸಭೆಯು ಪರಸ್ಪರ ಆಸಕ್ತಿ ಕ್ಷೇತ್ರಗಳನ್ನು ವ್ಯಾಪಿಸಿಕೊಂಡಿದೆ ಮತ್ತು ನಾವೀನ್ಯತೆಯ ಪ್ರಧಾನ ಅಂಶವಾಗಿ ಪ್ರಮುಖ ಕ್ಷೇತ್ರಗಳ ವಲಯಗಳಲ್ಲಿ ದ್ವಿಪಕ್ಷೀಯವಾಗಿ ತೊಡಗಿಕೊಳ್ಳುವ ಮಾರ್ಗಗಳನ್ನು ಅನ್ವೇಷಿಸುವ ಕುರಿತು ತೀರ್ಮಾನಿಸಲಾಗಿದೆ.  

ಎಐಎಂ ಮತ್ತು ಸಿಎಸ್ಐಆರ್ ಒ ನಡುವಿನ ಉದ್ದೇಶಿತ ಪತ್ರ ಪರಸ್ಪರ ಆಸಕ್ತಿ ಮತ್ತು ಕಾರ್ಯತಂತ್ರದ ಆದ್ಯತಾ ವಲಯಗಳಲ್ಲಿ ಹೆಚ್ಚಿನ ಸಹಯೋಗಕ್ಕೆ ಕರೆ ನೀಡುತ್ತವೆ ಮತ್ತು ಹೆಚ್ಚಿನ ಕಾರ್ಯಕ್ರಮದ ನಿರ್ದಿಷ್ಟ ಮಧ್ಯಸ್ಥಿಕೆಗಳ ಸಹಕಾರದ ಅಭಿವೃದ್ಧಿಗೆ ಅನುಕೂಲವಾಗುವಂತೆ ಸಾಮಾನ್ಯ ಚೌಕಟ್ಟಿನಲ್ಲಿ ಕಾರ್ಯನಿರ್ವಹಿಸಲಿವೆ.

ಭಾರತ – ಆಸ್ಟ್ರೇಲಿಯಾ ನಡುವೆ ದ್ವಿಪಕ್ಷೀಯ ವಲಯದಲ್ಲಿ ಪ್ರಮುಖವಾಗಿ ನಾವೀನ್ಯತೆ ಮತ್ತು ತಂತ್ರಜ್ಞಾನ ಸವಾಲುಗಳು [ಎಐ-ಐಟಿಸಿ] ನವೋದ್ಯಮಗಳನ್ನು ಬೆಂಬಲಿಸುವ ಮೂಲಕ ಹಂಚಿಕೆಯ ಪರಿಸರ ಮತ್ತು ಆರ್ಥಿಕ ಸವಾಲುಗಳನ್ನು ಎದುರಿಸಲು, ಭಾರತ – ಆಸ್ಟ್ರೇಲಿಯಾದ ನಾವೀನ್ಯತೆ ಪರಿಸರ ವ್ಯವಸ್ಥೆಗಳನ್ನು ಒಟ್ಟುಗೂಡಿಸುವ ಕಾರ್ಯಕ್ರಮ ರೂಪಿಸಲಾಗಿದೆ. ಎಂ ಎಸ್ಎಂಈ ಗಳು ತಮ್ಮ ವಾಣಿಜ್ಯೀಕರಣದ ಮಾರ್ಗಗಳಲ್ಲಿ ಮತ್ತು ಆರ್ಥಿಕತೆ ವೃದ್ಧಿಸುವ, ಆಹಾರ ವ್ಯವಸ್ಥೆ ಮತ್ತು ಇಂಧನ ಪರಿರ್ತನೆ, ಇತ್ಯಾದಿ ವಲಗಳಲ್ಲಿ ನಾವೀನ್ಯತೆಯ ಪರಿಹಾರಗಳನ್ನು ಇದು ಮಾರುಕಟ್ಟೆ ತರಲಿದೆ. ಕಾರ್ಯಕ್ರಮ ಎರಡೂ ದೇಶಗಳ ನಾವೀನ್ಯತೆಯ ಪರಿಸರ ವ್ಯವಸ್ಥೆಯ ಪೂರಕ ಸಾಮರ್ಥ್ಯಗಳು ಮತ್ತು ಸಂಪನ್ಮೂಲಗಳನ್ನು ನಿಯಂತ್ರಣಕ್ಕೆ ತರಲಿದೆ.  

ಭಾರತ – ಆಸ್ಟ್ರೇಲಿಯಾ ವೃತ್ತಾಕಾರದ ಆರ್ಥಿಕತೆಗಾಗಿ ನಡೆದ ಹ್ಯಾಕಥಾನ್ 2021 ರ ಯಶಸ್ಸಿನ ಮೇಲೆ ಎಐ-ಐಟಿಸಿಯನ್ನು ನಿರ್ಮಿಸುತ್ತಿದ್ದು, ಇದಕ್ಕೆ ವಿಶ್ವ ವಿದ್ಯಾಲಯಗಳ ವಿದ್ಯಾರ್ಥಿಗಳು, ನವೋದ್ಯಮಗಳು ಮತ್ತು ಭಾರತ – ಆಸ್ಟ್ರೇಲಿಯಾದ ಎಂಎಸ್ಎಂಇಗಳಲ್ಲಿ ವೃತ್ತಾಕಾರದ ಆಹಾರ ವ್ಯವಸ್ಥೆಯ ಮೌಲ್ಯ ಸರಪಳಿಯಲ್ಲಿ ನಾವೀನ್ಯತೆಯ ತಂತ್ರಜ್ಞಾನ ಆಧಾರಿತ ಪರಿಹಾರಗಳನ್ನು ಕೈಗೊಳ್ಳಲು ಅವಕಾಶವಿದೆ.

ನೀತಿ ಆಯೋಗದ ಎಐಎಂ ನ ಅಭಿಯಾನ ನಿರ್ದೇಶಕ ಡಾ. ಚಿಂತನ್ ವೈಷ್ಣವ್ ಮಾತನಾಡಿ, “ಸಿಎಸ್ಐಆರ್ ಒ, ಜೊತೆ ಸಹಭಾಗಿತ್ವದಡಿ ನಾವೀನ್ಯತೆಯನ್ನು ಪೋಷಿಸಲು ಮತ್ತು ಭಾರತ – ಆಸ್ಟ್ರೇಲಿಯಾ ನಡುವೆ ನಾವೀನ್ಯತೆ ಮತ್ತು ತಂತ್ರಜ್ಞಾನ ಆಧಾರಿತ ಸವಾಲುಗಳನ್ನು ಎದುರಿಸುವ ವಲಯದಲ್ಲಿ ಸಹಭಾಗಿತ್ವ ಹೊಂದಲು ಪುಳಕಿತರಾಗಿದ್ದೇವೆ” ಎಂದರು. “ನವೋದ್ಯಮಗಳನ್ನು ಒಳಗೊಂಡ ಪರಿಸರ ವ್ಯವಸ್ಥೆ, ಎಸ್ಎಂಇಗಳು, ವ್ಯಾಪಾರ ಇನ್ಕ್ಯುಬೇಟರ್ ಗಳು ಮತ್ತು ವೇಗವರ್ಧಕಗಳು, ವಿಸಿಗಳು ಮತ್ತು ಕೈಗಾರಿಕಾ ವಲಯದ ವಿವಿಧ ಹಂತಗಳಲ್ಲಿ ಭಾರತ – ಆಸ್ಟ್ರೇಲಿಯಾ ನಡುವೆ  ಸಹಭಾಗಿತ್ವ ಹೊಂದಲು ಎಐ-ಐಟಿಸಿ ನಿರ್ದಿಷ್ಟವಾದ ಕಾರ್ಯಕ್ರಮವಾಗಿದೆ. ಇದು ವಿಜ್ಞಾನ ಮತ್ತು ತಂತ್ರಜ್ಞಾನ ಕಾರ್ಯಕ್ರಮಗಳೊಂದಿಗೆ ಸಿಎಸ್ಐಆರ್ ಒ ನಲ್ಲಿ ಅಪಾರ ಅನುಭವವನ್ನು ಒದಗಿಸುವ ಕ್ಷೇತ್ರದ ಜ್ಞಾನ ಹಂಚಿಕೆಯಲ್ಲಿ ಹೊಸ ದಿಗಂತವನ್ನು ತೆರೆಯಲಿದೆ” ಎಂದು ಹೇಳಿದರು.

ಸಿಎಸ್ಐಆರ್ ಒ ಬೆಳವಣಿಗೆ ವಿಭಾಗದ ಕಾರ್ಯಕಾರಿ ನಿರ್ದೇಶಕ ಶ್ರೀ ಜೋನಾಥನ್ ಲಾ ಮಾತನಾಡಿ “ಎಐಎಂ ನೊಂದಿಗೆ ಸಹಭಾಗಿತ್ವ ಹೊಂದಲು ಸಿಎಸ್ಐಆರ್ ಒ ರೋಮಾಂಚನಗೊಂಡಿದೆ ಮತ್ತು ಪರಸ್ಪರ ಹಂಚಿಕೆಯ ಜಾಗತಿಕ ಸವಾಲುಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸಲಿದೆ. ಎಐಎಂ ವಿಶ್ವದರ್ಜೆಯ ಆವಿಷ್ಕಾರಗಳು ಮತ್ತು ಉದ್ಯಮಿಗಳನ್ನು ಉತ್ತೇಜಿಸುವ ಹಾಗೂ ಪೋಷಿಸುವ ಪ್ರಭಾವಶಾಲಿ ದಾಖಲೆ ಹೊಂದಿದೆ. ನೈಜ ಜಗತ್ತಿನ ಸಾಮಾಜಿಕ, ಆರ್ಥಿಕ ಮತ್ತು ಪರಿಸರದ ಮೇಲೆ ಪ್ರಭಾವ ಬೀರುವ ವೈಜ್ಞಾನಿಕ ಪ್ರಗತಿಯನ್ನು ರಚಿಸಲು ನಮ್ಮ ಸಾಮರ್ಥ್ಯ ಮತ್ತು ಪರಿಣಿತಿಯನ್ನು ಸಂಯೋಜಿಸಲು ನಾವು ಎದುರು ನೋಡುತ್ತಿದ್ದೇವೆ” ಎಂದು ಹೇಳಿದರು.  

ಎಐಎಂ ಮತ್ತು ಸಿಎಸ್ಐಆರ್ ಒ ಪ್ರಸ್ತುತ ಎಐ-ಐಟಿಸಿ ಕಾರ್ಯಕ್ರಮದ ವಿನ್ಯಾಸ ಮತ್ತು ಅಭಿವೃದ‍್ದಿ ವಲಯದಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಎಐ-ಐಟಿಸಿಯಲ್ಲಿ ಸುಸ್ಥಿರ, ನಾವೀನ್ಯತೆಯ, ಪರಿಣಾಮಕಾರಿ ಮತ್ತು ಭಾರತ – ಆಸ್ಟ್ರೇಲಿಯಾ ನಡುವೆ ಕಾರ್ಯತಂತ್ರದ ಹಿತಾಸಕ್ತಿಗಳೊಂದಿಗೆ ಹೊಂದಾಣಿಕೆಯಿಂದ ಕಾರ್ಯನಿರ್ವಹಿಸಲಿದೆ. ಈ ಕಾರ್ಯಕ್ರಮ 2023 ರ ಜುಲೈನಲ್ಲಿ ಅಧಿಕೃತವಾಗಿ ಉದ್ಘಾಟನೆಯಾಗುವ ನಿರೀಕ್ಷೆಯಿದೆ.  

****


(Release ID: 1905949) Visitor Counter : 132